Mature relationship: ಒಬ್ಬರಿಗೊಬ್ಬರು ಪ್ರೀತಿಸಿದರೆ ಸಾಲದು, ಗೌರವಿಸಬೇಕು!

By Suvarna News  |  First Published Jun 2, 2022, 9:39 AM IST

ಸಂಬಂಧಗಳು ತುಂಬಾ ಟ್ರಿಕಿಯಾಗಿರುತ್ತವೆ. ಜನರು ಯಾವಾಗಲೂ ನಾವು ಎಲ್ಲರಂತೆ ಅಲ್ಲ ನಮ್ಮ ಆಸೆ ಆಕಾಂಕ್ಷೆಗಳು ವಿಭಿನ್ನವಾಗಿವೆ ಎಂದು ಭಾವಿಸಿರುತ್ತಾರೆ. ಆದರೆ, ಕೊನೆಯಲ್ಲಿ, ನಾವೆಲ್ಲರೂ ಒಂದೇ ವಿಷಯವನ್ನು ಬಯಸುತ್ತೇವೆ


ಪ್ರೀತಿ ಹಾಗೂ ಸಂಬಂಧಗಳ ವಿಚಾರದಲ್ಲಿ ಜನರು ಹೆಚ್ಚು ಕಮ್ಮಿ ಒಂದೇ ರೀತಿಯ ಬಯಕೆ ಹೊಂದಿರುತ್ತಾರೆ. ಇತ್ತೀಚಿನ ಸಾಮಾಜಿಕ ಜಾಲತಾಣದ ಪೋಸ್ಟ್‌ (Post) ಒಂದರಲ್ಲಿ ಮನಶ್ಶಾಸ್ತ್ರಜ್ಞ ನಿಕೋಲ್ ಲೆಪೆರಾ ಅವರು ಸಂಬಂಧಗಳಲ್ಲಿ ಜನರು ಏನನ್ನು ಹುಡುಕುತ್ತಾರೆ ಮತ್ತು ಸಂಬಂಧವನ್ನು ಆರೋಗ್ಯಕರವಾಗಿರಿಸಲು ಹೇಗಿರಬೇಕು ಎಂಬುದರ ಬಗ್ಗೆ ತಮ್ಮ ಅಭಿಪ್ರಯವನ್ನು (Opinions) ಹಂಚಿಕೊಂಡಿದ್ದಾರೆ. ಅವರ ಪ್ರಕಾರ ವಾಸ್ತವದಲ್ಲಿ, ನಾವೆಲ್ಲರೂ ನಾವು ಭಾವಿಸಿರುವುದಕ್ಕಿಂತ ಹೆಚ್ಚು ಸಮಾನ ಮನಸ್ತಿತಿ ಮತ್ತು ಒಂದೇ ರೀತಿಯ ಭಾವನೆಗಳನ್ನು ಹೊಂದಿರುವವರು ಆಗಿದ್ದೇವೆ. ನಮ್ಮ ಅಂತರಂಗದಲ್ಲಿ ನಾವೆಲ್ಲರೂ ಒಂದೇ ವಿಷಯವನ್ನು ಬಯಸುತ್ತೇವೆ. ನಾವು ಬೇರೆಯವರು ನಮ್ಮನ್ನು ನಿಯಂತ್ರಿಸ ಬಾರದು (Controling), ಬದಲಾಗಿ ಇತರರು ನಮ್ಮನ್ನು ಪ್ರೀತಿಸಬೇಕು ಎಂದು ಬಯಸುತ್ತೇವೆ ಎಂದು ಅವರು ಹೇಳುತ್ತಾರೆ.

 ನಾವು ಸಾಮಾನ್ಯವಾಗಿ ಪ್ರೀತಿಯನ್ನು ವಹಿವಾಟಿನ ಪ್ರಕ್ರಿಯೆ ಎಂದು ಭಾವಿಸುತ್ತೇವೆ. ಆದರೆ, ಪ್ರಬುದ್ಧ (Mature) ಪ್ರೀತಿ ಹೇಗಿರುತ್ತದೆ ಎಂಬುದಕ್ಕೆ ಇಲ್ಲಿ ಕೆಲವು ಲಕ್ಷಣಗಳನ್ನು ನೀಡಲಾಗಿದೆ. ಈ ರೀತಿಯ ಗುಣಗಳು ನಿಮ್ಮ ಸಂಬಂಧದಲ್ಲಿ ಇದ್ದರೆ ಅದು ಪ್ರಬುದ್ಧ ಪ್ರೀತಿಯ ಸಂಕೇತ (Symbol) ಎಂದು ಹೇಳಬಹುದು.

  • ಪಾಲುದಾರರು (Partners): ಪ್ರಬುದ್ಧ ಸಂಬಂಧದಲ್ಲಿ, ಪಾಲುದಾರರು ಒಟ್ಟಿಗೆ ಜೀವನವನ್ನು ರಚಿಸಿಕೊಳ್ಳುತ್ತಾರೆ. ಬದಲಿಗೆ, ಅವರಲ್ಲಿ ಒಬ್ಬರು ಸದಾಕಾಲ ಇನ್ನೊಬ್ಬರನ್ನು ಪೋಷಕರಂತೆ (Parenting) ಕಾಳಜಿ ಮಾಡಿಕೊಂಡು ಇರಲಿ ಎಂದು ಭಾವಿಸುವುದಿಲ್ಲ.

    ನೀವಿಷ್ಟ ಪಡೋರನ್ನು ಪಟಾಯಿಸಲು ಇಲ್ಲಿವೆ ಸಿಂಪಲ್ ಟಿಪ್ಸ್!
     
  • ಜವಾಬ್ದಾರಿಗಳು (Responsibility): ಪ್ರತಿಯೊಬ್ಬ ವ್ಯಕ್ತಿಯೂ ತಮ್ಮದೇ ಆದ ಜವಾಬ್ದಾರಿಗಳನ್ನು ಹೊಂದಿರುತ್ತಾರೆ. ತಮ್ಮ ಸಂಗಾತಿಯ ಜವಾಬ್ದಾರಿ ಹಾಗೂ ಭಾವನೆಗಳಿಗೆ (Feelings) ಬೆಲೆ ಕೊಟ್ಟುಕೊಂಡು ತಮ್ಮ ಭಾವನೆಗಳನ್ನು ನಿಭಾಯಿಸುವ ಹೊಸ ವಿಧಾನಗಳನ್ನು ಕಲಿಯುವುದು ಮುಖ್ಯ.
  • ಸಂವಹನ (Communication): ಇಬ್ಬರ ನಡುವೆ ಸಂಬಂಧ ಗಟ್ಟಿಯಾಗಿರಲು ತಮ್ಮ ಸಂಗಾತಿಯ ಮನಸ್ಸನ್ನು ಅರ್ಥ ಮಾಡಿಕೊಳ್ಳುವ (Understanding) ಜ್ಞಾನ ಹೊಂದಿರುವುದು ಮುಖ್ಯ. ಕೆಲವೊಮ್ಮೆ ಮಾತನಾಡದೆಯೂ ವಿಷಯಗಳನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಹೊಂದಿರಬೇಕಾಗುತ್ತದೆ. ಸಂವಹನವು ಪ್ರಬುದ್ಧ ಸಂಬಂಧದ ಕೀಲಿಯಾಗಿದೆ.
  • ಪ್ರೀತಿಯನ್ನು ಉಳಿಸಿಕೊಳ್ಳಿ (Work on love): ಸಂಬಂಧವನ್ನು ಉಳಿಸಿಕೊಳ್ಳಲು ಇಬ್ಬರೂ ಕೂಡ ಸಾಕಷ್ಟು ಶ್ರಮವಹಿಸಬೇಕಾಗುತ್ತದೆ. ಇಬ್ಬರೂ ಒಟ್ಟಿಗೆ ಆಟವಾಡಲು ಸಮಯವನ್ನು ಕಳೆಯುವುದು, ಸಿಲ್ಲಿ (Silly) ಮತ್ತು ಪರಸ್ಪರ ನಗುವುದು ಸಹ ಮುಖ್ಯವಾಗಿದೆ. ಇದು ಬಾಂಧವ್ಯವನ್ನು ಹೆಚ್ಚು ಗಟ್ಟಿಗೊಳಿಸುತ್ತದೆ.
  • ಕಷ್ಟಕರವಾದ ಸಂಭಾಷಣೆಗಳು (Difficult conversation): ಕೆಲವು ಸಮಸ್ಯೆಯ ಸಂದರ್ಭದಲ್ಲಿ, ಇತರರನ್ನು ಮೆಚ್ಚಿಸುವ ಸಲುವಾಗಿ ಸುಳ್ಳು ಹೇಳುವುದು ಅಥವಾ ಮುಖ್ಯ ವಿಚಾರಗಳನ್ನು ಹೇಳದೆ ಉಳಿಯುವ ಬದಲಾಗಿ ವಿಷಯಗಳನ್ನು ನೇರವಾಗಿ (Direct) ಚರ್ಚಿಸುವುದು ಸಂಬಂಧಗಳನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ.
  • ಬೆಂಬಲ (Support): ಜೀವನವು ಒಂದು ಕಾಲ್ಪನಿಕ ಕಥೆಯಲ್ಲ ಅದು ಕೆಲವೊಮ್ಮೆ ತನ್ನದೇ ಆದ ವಿನಾಶಗಳು (Divastations) ಮತ್ತು ಆಘಾತಗಳನ್ನು ತರುತ್ತದೆ. ಅಂತಹ ಸಂದರ್ಭದಲ್ಲಿ ಒಬ್ಬರಿಗೊಬ್ಬರು ಮಾನಸಿಕ ಬೆಂಬಲ ನೀಡುವುದು ಬಹಳ ಮುಖ್ಯ.

    ದಾಂಪತ್ಯದಲ್ಲಿ ಹೀಗೆಲ್ಲಾ ಆಯ್ತು ಅಂದ್ರೆ ಡಿವೋರ್ಸ್ ಆಗೋದು ಪಕ್ಕಾ, ಹುಷಾರಾಗಿರಿ !
     
  • ಸ್ವಾತಂತ್ರ್ಯ (Freedom): ಪ್ರಬುದ್ಧ ಸಂಬಂಧದಲ್ಲಿ, ನಿಮ್ಮ ಸಂಗಾತಿಯು ಅವರ ನಿಜವಾದ ವ್ಯಕ್ತಿಯಾಗಲು ಬಿಡುವುದು ಮುಖ್ಯ. ಅವರ ಎಲ್ಲಾ ಮಾತು, ಅಭಿಪ್ರಾಯಗಳಿಗೆ ಕಡಿವಾಣ ಹಾಕಿ ನೀವು ಹೇಳಿದಂತೆಯೇ ಎಲ್ಲವೂ ನಡೆಯಬೇಕು ಎಂದು ಭಾವಿಸುವುದು ತಪ್ಪು.
  • ಕ್ಷಮಿಸಿ (Forgiving): ತಪ್ಪುಗಳು ಸಂಭವಿಸುತ್ತವೆ. ಅದನ್ನು ಬಹಳ ಸಮಯದ ತನಕ ಉಳಿಸಿಕೊಂಡು ಹೋಗುವ ಬದಲಿಗೆ, ಒಬ್ಬರನ್ನೊಬ್ಬರು ಕ್ಷಮಿಸುವುದು ಮತ್ತು ಅವರು ಇರುವ ರೀತಿಯಲ್ಲಿಯೆ ಅವರನ್ನು ಪರಸ್ಪರ ಒಪ್ಪಿಕೊಳ್ಳುವುದು ಮುಖ್ಯ.

Tap to resize

Latest Videos

ಈ ಎಲ್ಲಾ ಗುಣಲಕ್ಷಣಗಳನ್ನು ನಿಮ್ಮ ಪ್ರೀತಿಪಾತ್ರರ ಜೊತೆ ಹೊಂದಿದ್ದೀರಾ ಎಂದಾದರೆ ನೀವು ಪ್ರಬುದ್ಧ ಪ್ರೇಮಿಗಳು ಎಂದರ್ಥ.

click me!