ನೀವಿಷ್ಟ ಪಡೋರನ್ನು ಪಟಾಯಿಸಲು ಇಲ್ಲಿವೆ ಸಿಂಪಲ್ ಟಿಪ್ಸ್!

ಏಕಮುಖ ಪ್ರೀತಿಯ ರೋಮಾಂಚಕತೆ ತಿಳಿದವರಿಗೇ ಗೊತ್ತು. ಅವರನ್ನು  ಸಂಗಾತಿಯನ್ನಾಗಿಸಿಕೊಳ್ಳಬೇಕು ಎನ್ನುವ ಭಾವನೆ ತೀವ್ರವಾಗುವುದು ಸಹಜ. ಹೀಗಾಗಿ, ನಿಮ್ಮ ಪ್ರೀತಿಯನ್ನು ಅವರಿಗೆ ಗೊತ್ತು ಮಾಡಿಕೊಳ್ಳಿ. ಅದಕ್ಕಾಗಿ ಕೆಲವು ಟಿಪ್ಸ್.

Transform your one sided love in to relationship with these relationship tricks

ನಿಮಗೆ ಆತ ಅಥವಾ ಆಕೆಯ ಮೇಲೆ ಏನೋ ಮೋಹ, ಸೆಳೆತ. ಅವರು ಎದುರು ಬಂದರೆ ಏನೋ ರೋಮಾಂಚನ, ಕಿವಿ ಕೆಂಪಗಾಗುತ್ತದೆ, ಮೈನವಿರೇಳುತ್ತದೆ. ಅವರ ಮಾತುಗಳನ್ನು ಕೇಳಿದರೆ ಸುಖಾಸುಮ್ಮನೆ ಮುಖ ಅರಳುತ್ತದೆ. ಎದೆಯಲ್ಲಿ ಸಪ್ತಸ್ವರ ನುಡಿಸಿದಂತಹ ಭಾವ. ಆದರೆ, ಅವರಿಗೆ ಅದರ ಕಲ್ಪನೆಯೂ ಇರುವುದಿಲ್ಲ. ನಿಮ್ಮನ್ನು ಎಲ್ಲರಂತೆ ಸಹಜವಾಗಿ ಮಾತಾಡಿಸಿಕೊಂಡು ಸಾಗಿಬಿಡುತ್ತಾರೆ. ಅಥವಾ ಎಷ್ಟೋ ಬಾರಿ ಲೆಕ್ಕಿಸುವುದೂ ಇಲ್ಲ. ತಾವು ಇಷ್ಟಪಡುವವರು (Like) ತಮ್ಮನ್ನು ಇಷ್ಟಪಡಬೇಕು ಎಂಬ ಬಯಕೆ ಎಲ್ಲರಿಗೂ ಇರುತ್ತದೆ. ಇಷ್ಟಪಡುವವರನ್ನು ಜೀವನದ ಸಂಗಾತಿ (Companion)ಯನ್ನಾಗಿ ಮಾಡಿಕೊಳ್ಳಬೇಕೆಂಬ ಆಸೆ ಉಂಟಾಗುತ್ತದೆ. ಆದರೆ, ಅವರಿಗೆ ನಿಮ್ಮ ಈ ಗುಪ್ತ ಪ್ರೀತಿಯ ರೀತಿಯೇ ಗೊತ್ತಿರುವುದಿಲ್ಲ. ಇದನ್ನೇ ಏಕಮುಖ ಪ್ರೀತಿ (One Sided Love) ಎನ್ನುವುದು. ನಿಮ್ಮದೂ ಏಕಮುಖ ಪ್ರೀತಿಯಾ? ಹಾಗಿದ್ದರೆ ಈ ಪ್ರೀತಿಯನ್ನು ದ್ವಿಮುಖ ಮಾಡಿಕೊಳ್ಳಲು ಇಷ್ಟಪಡುತ್ತೀರಾ? ನಿಮಗೆ ಸ್ಪೆಷಲ್ ಅನಿಸುವವರು ನಿಮ್ಮನ್ನೂ ಇಷ್ಟಪಡುವಂತಾಗಲು ನಿಮ್ಮ ಪಾಡಿಗೆ ನೀವು ಸುಮ್ಮನಿದ್ದರೆ ಸಾಧ್ಯವಿಲ್ಲ. ಅಲ್ಲವೇ? ಹೀಗಾಗಿ, ಕೆಲವು ಕ್ರಮಗಳನ್ನು ಅನುಸರಿಸಿ.

•    ನಿಮ್ಮ ಇರುವಿಕೆಯನ್ನು (Presence) ಅವರಿಗೆ ಗೊತ್ತು ಮಾಡಿ!
ನೀವು ಅವರನ್ನು ಇಷ್ಟಪಡುವುದು ಬೇರೆ ವಿಚಾರ. ಮೊದಲು ನೀವೆಂಬ ನೀವು ಇದ್ದೀರಿ ಎನ್ನುವುದಾದರೂ ಅವರಿಗೆ ಗೊತ್ತಾಗಬೇಕು ಅಲ್ಲವೇ? ಎಷ್ಟೋ ಬಾರಿ ನೀವ್ಯಾರು, ಏನು ಮಾಡುತ್ತೀರಿ, ನಿಮ್ಮ ಹಿನ್ನೆಲೆ ಏನೂ ತಿಳಿದಿರುವುದಿಲ್ಲ. ಮುಖವನ್ನಷ್ಟೇ ನೋಡಿರಬಹುದು. ಹೀಗಾಗಿ, ಅವರಿಗೆ ನಿಮ್ಮನ್ನು ಪರಿಚಯ (Introduce) ಮಾಡಿಕೊಳ್ಳುವುದು ಮೊದಲ ಹಂತ. ಅವರನ್ನೂ ಪರಿಚಯವಿರುವ ನಿಮ್ಮ ಬಳಗದಲ್ಲಿ ಯಾರಾದರೂ ಇದ್ದಾರಾ ಎಂದು ನೋಡಿ. ಕಾಮನ್ ಸ್ನೇಹಿತರಿದ್ದರೆ (Common Friends) ಸಂಪರ್ಕಸೇತು ಸುಲಭವಾಗುತ್ತದೆ. ಅಕಸ್ಮಾತ್ ಇಲ್ಲವಾದರೂ ಪರವಾಗಿಲ್ಲ. ನೀವೇ ಅವರನ್ನು ನೇರವಾಗಿ ಭೇಟಿಯಾಗಿ. ಪರಿಚಯ ಮಾಡಿಕೊಳ್ಳಿ. ಅವರಿಗೆ ಅಚ್ಚರಿಯಾಗಬಹುದು. ಆದರೆ ಆಗಲಿ. ಸಾಮಾನ್ಯ ಸ್ನೇಹವಾಗಲು ಈ ಭೇಟಿ ಕಾರಣವಾಗುತ್ತದೆ. 

•    ನಿಮ್ಮ ಬಗ್ಗೆ ಸಕಾರಾತ್ಮಕ ಭಾವನೆ (Positive Feeling) ಮೂಡುವಂತೆ ಮಾಡಿ.
ನಿಮ್ಮ ವಿಭಿನ್ನ ಮುಖವನ್ನು ಉದ್ದೇಶಪೂರ್ವಕವಾಗಿ ಅವರಿಗೆ ತೋರ್ಪಡಿಸಿಕೊಳ್ಳಿ. ಅಂದರೆ, ನಿಮ್ಮ ಹವ್ಯಾಸ, ಕೆಲಸ, ಆಸಕ್ತಿ ಇತ್ಯಾದಿಗಳ ಬಗ್ಗೆ ಅವರಿಗೆ ತಿಳಿಯಪಡಿಸಿ. ಸ್ನೇಹ (Friendship) ಕುದುರಿದ ಮೇಲೆ ಅವರಿಗೆ ಏನಿಷ್ಟ ಎನ್ನುವುದನ್ನೂ ತಿಳಿದುಕೊಳ್ಳಿ. ನಿಮ್ಮನ್ನು ತೀರ ಅವಾಯ್ಡ್ ಮಾಡಿದರೆ ಸ್ನೇಹ ಕಷ್ಟವಾದೀತು. ಇಲ್ಲವಾದರೆ ಖಂಡಿತವಾಗಿ ಸಮಸ್ಯೆ ಉಂಟಾಗುವುದಿಲ್ಲ. ಇಬ್ಬರಿಗೂ ಆಸಕ್ತಿ ಇರುವ ವಿಷಯವೇನು ಎಂದು ತಿಳಿದುಕೊಳ್ಳಿ. ನೀವು ಆಸಕ್ತಿ ಮೂಡುವಂತಹ ವ್ಯಕ್ತಿತ್ವವನ್ನು ನಿಜವಾಗಿಯೂ ಹೊಂದಿದ್ದರೆ ಮಾತ್ರ ಅವರು ನಿಮ್ಮೆಡೆಗೆ ಆಕರ್ಷಿತರಾಗುತ್ತಾರೆ (Attraction) ಎನ್ನುವುದು ತಿಳಿದಿರಲಿ.

•    ನಿಮ್ಮ ಮನಸ್ಸಿನಲ್ಲಿ ಅವರಿದ್ದಾರೆ (The are in your Mind) ಎನ್ನುವುದನ್ನು ತಿಳಿಯಪಡಿಸಿ!
ಮುಜುಗರ ಬೇಡ. ಬೇಕಾದುದನ್ನು ಪಡೆಯಲು ನೀವೇ ಯತ್ನಿಸಬೇಕು. ಕೆಲವೊಮ್ಮೆ ಸ್ನೇಹವಾದರೂ ನಿಮ್ಮ ಮನಸ್ಸು ಅವರಿಗೆ ಗೊತ್ತಾಗಬೇಕು ಎಂದೇನಿಲ್ಲ. ಹೀಗಾಗಿ, ಸಂದರ್ಭ ಬಂದಾಗಲೆಲ್ಲ ಈ ಬಗ್ಗೆ ಹಿಂಟ್ (Hint) ನೀಡುತ್ತಿರಿ. ಕೃತಕ ಮಾತುಗಳಿಂದಲ್ಲ, ಕೃತಕ ವರ್ತನೆಗಳಿಂದಲ್ಲ. ನಿಜವಾಗಿ ಭಾವನೆ ವ್ಯಕ್ತವಾಗುವಂತಹ ಮಾತು, ಕೃತಿಗಳಿಂದ ನಿಮ್ಮ ಮನಸ್ಸಿನ ಬಗ್ಗೆ ಅವರಿಗೆ ಸುಳಿವು ನೀಡಬೇಕು. ಹಾಗೆಂದು ಅವರನ್ನು ಮುಜುಗರಕ್ಕೆ ಒಳಪಡಿಸಬಾರದು. ತುಂಬ ಸಹಜವಾಗಿ ಗೊತ್ತುಪಡಿಸಬೇಕು. ಈ ಹಂತದಲ್ಲಿ ಅವರೂ ವಿಚಾರಕ್ಕೆ ಬೀಳುತ್ತಾರೆ. ಆದರೂ ಅವರು ನಿಮ್ಮನ್ನು ಒಪ್ಪಿಕೊಂಡೇ ಬಿಡುತ್ತಾರೆ ಎನ್ನುವ ಗ್ಯಾರೆಂಟಿ ಇರುವುದಿಲ್ಲ. ಯಾವುದಕ್ಕೂ ಸಿದ್ಧವಾಗಿರಬೇಕು. ಅವರ ಕುರಿತ ಆಕರ್ಷಣೆ ನಿಮಗೆ ಗೀಳಾಗದಿರಲಿ. ಆರೋಗ್ಯಕರವಾದ ಅಂತರ ಹಾಗೂ ದೂರವೊಂದು ನಿಮ್ಮ ನಡುವೆ ಇರಲಿ. ಇಬ್ಬರಿಗೂ ಭಾವನೆಗಳು ಇದ್ದಾಗಲೇ ಸಂಬಂಧ ಉಂಟಾಗುತ್ತದೆ, ಇಲ್ಲವಾದರೆ ಇಲ್ಲ. ನಿಮ್ಮ ಪ್ರಯತ್ನ ನೀವು ಮಾಡಿ. ಆದರೆ, ಅವರನ್ನು ಪಡೆಯುವುದೇ ಜೀವನದ ಗುರಿಯಾಗದಿರಲಿ. 

Transform your one sided love in to relationship with these relationship tricks


 

Latest Videos
Follow Us:
Download App:
  • android
  • ios