
ಪ್ರಶ್ನೆ: ನನಗೆ ಮದುವೆಯಾಗಿ ಐದು ವರ್ಷಗಳಾಗಿವೆ. ವಾರಕ್ಕೆ ಕನಿಷ್ಠ ಮೂರು ಬಾರಿಯಾದರೂ ಮಿಲನ ಮಹೋತ್ಸವ ನಡೆಸುತ್ತೇವೆ. ಇಬ್ಬರೂ ಉದ್ಯೋಗಿಗಳು. ಬೆಂಗಳೂರಿನಲ್ಲಿ ಸಾಲ ಮಾಡಿ ಕಟ್ಟಿಸಿದ ಸ್ವಂತ ಮನೆಯಿದೆ. ಮಕ್ಕಳಿನ್ನೂ ಇಲ್ಲ. ಲಾಕ್‌ಡೌನ್ ಆರಂಭವಾದ ಬಳಿಕ ಇಬ್ಬರಿಗೂ ವರ್ಕ್ ಫ್ರಂ ಹೋಮ್ ದೊರೆತಿದೆ. ಆರಂಭದಲ್ಲಿ, ಇಬ್ಬರೂ ಮನೆಯಲ್ಲೇ ಇರುತ್ತೇವಲ್ಲಾ ಚೆನ್ನಾಗಿರುತ್ತೆ ಎಂದುಕೊಂಡೆವು. ಬರಬರುತ್ತಾ ಸೆಕ್ಸ್ ಬೋರಾಗತೊಡಗಿದೆ. ಬೋರ್ ಎಂಬುದಕ್ಕಿಂತಲೂ, ಸೆಕ್ಸ್‌ನಲ್ಲಿ ತೊಡಗಿರುವಾಗ ಉದ್ಯೋಗದ ವಿಷಯಗಳು ತಲೆಯಲ್ಲಿ ಬರುತ್ತವೆ. ಕಚೇರಿ ಕೆಲಸದಲ್ಲಿ ಕೆಲಸದಲ್ಲಿ ಉಂಟಾಗುವ ಕಿರಿಕಿರಿಗಳು, ಕೆಲಸ ಹೋದರೇನು ಗತಿ ಎಂಬ ಭಯಗಳು ಕಾಡುತ್ತಿವೆ. ಇದರಿಂದಾಗಿ ನೆಮ್ಮದಿಯಿಂಧ ಸುಖ ಅನುಭವಿಸಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಏನು ಕಾರಣವಿರಬಹುದು ಮತ್ತು ಇದರಿಂದ ಪಾರಾಗುವುದು ಹೇಗೆ?
ಉತ್ತರ: ಇದು ಲಾಕ್‌ಡೌನ್ ಸಂದರ್ಭದಲ್ಲಿ ಬಹುತೇಕ ಮಂದಿಯನ್ನು ಕಾಡುತ್ತಿರುವ ಸಮಸ್ಯೆಯೇ ಆಗಿದೆ. ಸಾಲ ಮಾಡಿ ಮನೆ ಕಟ್ಟಿಸಿರುತ್ತೀರಿ. ಇಬ್ಬರೂ ದುಡಿಯುತ್ತೀರಿ. ದುಡಿದದ್ದರಲ್ಲಿ ಅರ್ಧ ಭಾಗ ವೇತನ ಸಾಲ ಮರಳಿ ಕಟ್ಟುವುದಕ್ಕೆ ವಿನಿಯೋಗವಾಗುತ್ತದೆ. ಅಕಸ್ಮಾತ್ ಕೆಲಸ ಹೋದರೆ ಏನು ಗತಿ? ಈ ಚಿಂತೆ ಎಲ್ಲರನ್ನೂ ಒಂದಲ್ಲ ಒಂದು ಸಂದರ್ಭದಲ್ಲಿ ಕಾಡಿಯೇ ಕಾಡುತ್ತದೆ. ಲಾಕ್‌ಡೌನ್‌ನಂಥ ಸಂಕಷ್ಟದ ಕಾಲದಲ್ಲಂತೂ ಇಂಥ ಚಿಂತೆಗಳದೇ ಹಾವಳಿ. ಏನಾದರೂ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಕಂಡರೂ ಇದು ಕೋವಿಡ್ ಇರಬಹುದಾ ಅಥವಾ ಕ್ಯಾನ್ಸರ್ ಇರಬಹುದಾ ಅಂತ ಚಿಂತಿಸುವವರೂ ಇದ್ದಾರೆ. ಅದಕ್ಕೂ ಇದಕ್ಕೂ ಏನೂ ವ್ಯತ್ಯಾಸವಿಲ್ಲ. ಎರಡೂ ಸಂದರ್ಭದಲ್ಲೂ ನಾವು ಭವಿಷ್ಯದಲ್ಲಿ ಜೀವಿಸುತ್ತ, ಭವಿಷ್ಯದ ಸಂಕಷ್ಟಗಳನ್ನು ಈಗಲೇ ಮೈಮೇಲೆ ಎಳೆದುಕೊಂಡು ಚಿಂತಿಸುತ್ತ ವರ್ತಮಾನವನ್ನು ಮರೆತು ಬದುಕುತ್ತಿರುತ್ತೇವೆ.
ರೇಪ್ ಚಾಟ್: ಹುಡುಗೀರೂ ಹೀಗೆ ಮಾಡ್ತಾರಾ!
ಇದು ಸರಿಯಲ್ಲ ಎಂಬುದು ನಿಮಗೆ ಈಗಾಗಲೇ ಗೊತ್ತಾಗಿದೆ. ಗುಡ್. ಈಗ ಇದರಿಂದ ನೀವು ಹೊರಬರಬೇಕಿದೆ. ಅಷ್ಟೇ ಸರಳ. ಮೊದಲಿಗೆ ನೀವಿಬ್ಬರೂ ಕುಳಿತುಕೊಂಡು ನಿಮ್ಮ ಸ್ಕಿಲ್‌ಗಳ ಪಟ್ಟಿ ಮಾಡಿ. ಈ ಕಂಪನಿಯ ಕೆಲಸ ಹೋದರೆ ಬೇರೆ ಎಲ್ಲಿ ಕೆಲಸ ಸಿಗಬಹುದು, ಅಥವಾ ಫ್ರೀಲಾನ್ಸ್ ಆಗಿ ಮಾಡಲು ಸಾಧ್ಯವಿದೆಯಾ, ಎಷ್ಟು ದುಡಿಯಬಹುದು, ಮನೆ ಸಾಲಕ್ಕೆ ಕಂತು ಕಟ್ಟಲು ಎಷ್ಟು ಹಣ ಬೇಕು, ಅಷ್ಟು ಹಣವನ್ನು ದುಡಿಯಲು ಏನು ಮಾಡಬೇಕು, ಮನೆ ಸಾಲ ಕಂತು ಪಾವತಿ ಮುಂದೂಡಲು ಏನಾದರೂ ಆಪ್ಷನ್ ಇದೆಯಾ, ಅದನ್ನು ಬಳಸಿಕೊಳ್ಳಬೇಕಾ, ತೀರಾ ಸಂಕಷ್ಟ ಬಂದರೆ ಮನೆ ಮಾರಿ ಬದುಕು ಮಾಡಲು ಸಾಧ್ಯವಿದೆಯಲ್ಲವೇ- ಇದನ್ನೆಲ್ಲ ಯೋಚಿಸಿ ದೃಢವಾದ ಒಂದೆರಡು ನಿರ್ಧಾರಗಳಿಗೆ ಬನ್ನಿ. ಯೋಜನೆ ತಯಾರಿಸಿ. ಅಂದರೆ ನಿಮ್ಮ ಯೋಜನೆ, ತೀರಾ ಕಷ್ಟದಲ್ಲಿ ನೀವು ಪಾರಾಗಲು ದಾರಿ ಮಾಡಿಟ್ಟಂತಿರಬೇಕು. ಇಷ್ಟು ಮಾಡಿದ ಮೇಲೆ, ಬಳಿಕ ಮತ್ತೆ ಎಂದೆಂದೂ ಆ ಬಗ್ಗೆ ಯೋಚಿಸಬೇಡಿ. ದಿನನಿತ್ಯ ನೂರೆಂಟು ಕಚೇರಿ ಸಮಸ್ಯೆಗಳು ಇದ್ದೇ ಇರುತ್ತವೆ. ಅವು ಬರುತ್ತವೆ, ಹೋಗುತ್ತವೆ. ಸ್ಕಿಲ್‌ಗಳಿದ್ದವರು ಅವುಗಳನ್ನು ನಿಭಾಯಿಸುತ್ತಾರೆ.
#FeelFree: ಅವಳಿಗೆ ಹಲವು ಸಲ ಕ್ಲೈಮ್ಯಾಕ್ಸ್, ನಾನೇನು ಮಾಡಲಿ?
ಇನ್ನು ಸೆಕ್ಸ್ ಬದುಕಿನಲ್ಲಿ ಸುಖ ಪಡೆಯುವುದು ಹೇಗೆ ಎಂಬ ಬಗ್ಗೆ. ಇದಕ್ಕೆ ಮೊದಲಾಗಿ ನೀವು ಮಾಡಬೇಕಾದ್ದು, ಯಾವ ಚಿಂತೆಯೂ ಇಲ್ಲದೆ ಮುಕ್ತ ಮನಸ್ಸಿನಿಂದ ನೀವು ಬೆಡ್‌ರೂಂ ಪ್ರವೇಶಿಸಬೇಕು. ಬೆಡ್‌ರೂಮಿನ ಬಾಗಿಲಲ್ಲೇ ಹೊರಗಿನ ಎಲ್ಲ ಚಿಂತೆಗಳನ್ನೂ ಚಪ್ಪಲಿ ಬಿಟ್ಟಂತೆ ಬಿಟ್ಟುಬಿಡಿ. ಅಂಥದೊಂದು ನಿರ್ಧಾರ ನಿಮ್ಮ ಮನದಲ್ಲಿ ಮೂಡುತ್ತಲೇ ನೀವು ಹಗುರಾಗುತ್ತೀರಿ. ಮನಸ್ಸು ಪ್ರಶಾಂತವಾಗುತ್ತದೆ. ಸಂಗಾತಿಯ ಜೊತೆ ಮುಕ್ತವಾಗಿ ಮಾತನಾಡಿ. ನಿಮ್ಮ ಆಸೆಗಳನ್ನು ಹಂಚಿಕೊಳ್ಳಿ. ನಿಮ್ಮ ಲೈಂಗಿಕ ಆದ್ಯತೆ- ಆಸೆಗಳನ್ನು ಅವರೊಡನೆ ಚರ್ಚಿಸಿ. ಇದು ನಿಮ್ಮಿಬ್ಬರ ದೇಹ- ಮನಸ್ಸುಗಳು ಸೆಕ್ಸ್‌ಗೆ ತೊಡಗಲು ಸಹಕಾರಿಯಾಗುತ್ತದೆ. ಬೆಡ್‌ರೂಮಿನಲ್ಲಿ ಒಳ್ಳೆಯ ಪ್ರಚೋದಕ ಸಂಗೀತ ಇರಲಿ. ಮನಸ್ಸನ್ನು ಅರಳಿಸುವ, ಉದ್ದೀಪಿಸುವ, ವರ್ಣಚಿತ್ರಗಳು ಗೋಡೆಯ ಮೇಲಿರಲಿ. ಮಲಗುವ ಸ್ವಲ್ಪ ಹೊತ್ತಿಗೆ ಮುಂಚೆ ಶೃಂಗಾರ ಪ್ರಚೋದಕ ಸಾಹಿತ್ಯ ಓದಿ ಅಥವಾ ಸಿನಿಮಾ ನೋಡಿ. ಆಗಾಗ ಲಘುವಾದ ಪೋರ್ನ್ ನೋಡಿದರೂ ತಪ್ಪೇನಿಲ್ಲ. ಸಂಗಾತಿಯಲ್ಲಿ ಏನಾದರೂ ದುಗುಡ ವಿಷಾದಗಳು ಕಂಡುಬಂದರೆ ಹಾಸ್ಯಪ್ರಜ್ಞೆಯ ಮೂಲಕ ಅದನ್ನು ನಿವಾರಿಸಿಕೊಳ್ಳಿ.
ಮನಸ್ಸು ಪ್ರಶಾಂತವಾಗಿದ್ದರೆ ಸುಖದ ಸಮೃದ್ಧಿ ನಿಮ್ಮದಾಗುತ್ತದೆ.
ಸೆಕ್ಸ್‌ನಿಂದ ಹೆಚ್ಚು ಕಾಲ ದೂರವಿದ್ದರೆ ಏನಾಗುತ್ತದೆ?
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.