ದಿಲ್ಲಿಯ ಕಾಲೇಜು ಹುಡುಗರ ಬಾಯ್ಸ್ ಲಾಕರ್ ರೂಮ್ ಎಂಬ ಚಾಟ್ ಗ್ರೂಪ್‌ನಲ್ಲಿ ಸಹಪಾಠಿ ಹುಡುಗಿಯನ್ನ ರೇಪ್ ಮಾಡುವುದು ಹೇಗೆ ಎಂಬ ಚಾಟ್ ನಡೆಯಿತು. ಅದು ಒಬ್ಬಾಕೆ ಹುಡುಗಿಯಿಂದಲೇ ಬಹಿರಂಗವಾಯಿತು. ಪ್ರಕರಣ ದೊಡ್ಡದಾಗಿ ಸುದ್ದಿಯಾಯಿತು. ಪ್ರಕರಣದ ಇಂಚಿಂಚೂ ಬೆದಕಿ ನೋಡಿದ ಪೊಲೀಸರಿಗೆ ಸಿಕ್ಕಿಬಿದ್ದವಳು ಒಬ್ಬ ಹುಡುಗಿಯೇ. ಈಕೆಯೇ ಸಿದ್ಧಾರ್ಥ ಎಂಬ ಹೆಸರಿನಲ್ಲಿ ಫೇಕ್ ಐಡಿ ಕ್ರಿಯೇಟ್ ಮಾಡಿಕೊಂಡು ಈ ಬಾಯ್ಸ್ ಲಾಕರ್ ರೂಮಿನೊಳಗೆ ನುಗ್ಗಿದ್ದಳು.
ದಿಲ್ಲಿಯ ಕಾಲೇಜು ಹುಡುಗರ ಬಾಯ್ಸ್ ಲಾಕರ್ ರೂಮ್ ಎಂಬ ಚಾಟ್ ಗ್ರೂಪ್‌ನಲ್ಲಿ ಸಹಪಾಠಿ ಹುಡುಗಿಯನ್ನ ರೇಪ್ ಮಾಡುವುದು ಹೇಗೆ ಎಂಬ ಚಾಟ್ ನಡೆಯಿತು. ಅದು ಒಬ್ಬಾಕೆ ಹುಡುಗಿಯಿಂದಲೇ ಬಹಿರಂಗವಾಯಿತು. ಪ್ರಕರಣ ದೊಡ್ಡದಾಗಿ ಸುದ್ದಿಯಾಯಿತು. ಪ್ರಕರಣದ ಇಂಚಿಂಚೂ ಬೆದಕಿ ನೋಡಿದ ಪೊಲೀಸರಿಗೆ ಸಿಕ್ಕಿಬಿದ್ದವಳು ಒಬ್ಬ ಹುಡುಗಿಯೇ. ಈಕೆಯೇ ಸಿದ್ಧಾರ್ಥ ಎಂಬ ಹೆಸರಿನಲ್ಲಿ ಫೇಕ್ ಐಡಿ ಕ್ರಿಯೇಟ್ ಮಾಡಿಕೊಂಡು ಈ ಬಾಯ್ಸ್ ಲಾಕರ್ ರೂಮಿನೊಳಗೆ ನುಗ್ಗಿದ್ದಳು. ತಾನೇ ಸೆಕ್ಸ್ ಚಾಟ್ ಆರಂಭಿಸಿ ಹುಡುಗರನ್ನು ಪ್ರಚೋದಿಸಿದ್ದಳು. ಅಸಲಿ ಹುಡುಗಿಯ ಫೋಟೋ ಹಾಕಿ, ಈಕೆಯನ್ನು ರೇಪ್ ಮಾಡೋಣವೇ ಎಂದು ಹುಡುಗರನ್ನು ಪ್ರಚೋದಿಸಿ ಚಾಟ್ ಮಾಡಿದ್ದಳು ಎಂಬುದು ಗೊತ್ತಾಗಿದೆ. ಹುಡುಗಿಯ ಈ ಸ್ವಭಾವ ಈಗ ಪೊಲೀಸರ ಹಾಗೂ ಮನಶ್ಶಾಸ್ತ್ರಜ್ಞರ ಕುತೂಹಲಕ್ಕೆ ವಸ್ತುವಾಗಿದೆ.
ಹುಡುಗಿಯರು ಹೀಗೇಕೆ ಮಾಡುತ್ತಾರೆ ಎಂಬುದಕ್ಕಿಂತಲೂ ಹುಡುಗಿಯರೂ ಹೀಗೆಲ್ಲಾ ಮಾಡುತ್ತಾರಾ ಎಂಬ ಕುತೂಹಲವೇ ಹೆಚ್ಚಾಗಿದೆ, ಇಂಥ ಸ್ವಭಾವ ಹುಡುಗರಲ್ಲಿ ಕಂಡು ಬರುವುದು ಅಸಂಭವ ಏನಲ್ಲ. ಯಾಕೆಂದರೆ ಹುಡುಗರು, ಹುಡುಗಿಯರಿಗಿಂತಲೂ ಹೆಚ್ಚಾಗಿ ಮತ್ತು ಮುಕ್ತವಾಗಿ ಸೆಕ್ಸ್ ವಿಚಾರಗಳಿಗೆ ಬಹುಬೇಗನೆ ತೆರೆದುಕೊಳ್ಳುತ್ತಾರೆ ಮತ್ತು ಸ್ಪಂದಿಸುತ್ತಾರೆ. ಇವರನ್ನು ದಾರಿ ತಪ್ಪಿಸುವವರೂ ಬಹಳ, ದಾರಿ ತಪ್ಪುವ ಹುಡುಗರೂ ಬಹಳ. ಆದರೆ ಹುಡುಗಿಯರಲ್ಲಿ, ಇಂಥ ಭಾವನೆಗಳು ಮೂಡುವುದೂ ವಿರಳ; ಮನಸ್ಸಿನೊಳಗೇ ಇಂಥ ಭಾವನೆಗಳು ಮೂಡಿದರೂ ಅದನ್ನು ಎಕ್ಸ್‌ಪ್ರೆಸ್ ಮಾಡುವುದು ಸುಲಭವಲ್ಲ.
#BoisLockerRoom ಅಡ್ಮಿನ್ ಸೆರೆ, ಅಷ್ಟಕ್ಕೂ ಆ ಪೇಜಲ್ಲಿ ಆಗಿದ್ದೇನು?
undefined
ಬಹುಶಃ ಈ ಹುಡುಗಿಯಲ್ಲಿ ಹುಡುಗರ ಹಾರ್ಮೋನ್‌ಗಳು ಹೆಚ್ಚು ಇರಬಹುದು ಎಂದು ಕೆಲವು ತಜ್ಞರು ತರ್ಕಿಸಿದ್ದಾರೆ. ಸಾಮಾನ್ಯವಾಗಿ ಹದಿಹರೆಯದಲ್ಲಿ ಹೆಣ್ಣುಮಕ್ಕಳಲ್ಲಿ ಈಸ್ಟ್ರೋಜೆನ್ ಹಾಗೂ ಗಂಡುಮಕ್ಕಳಲ್ಲಿ ಟೆಸ್ಟೋಸ್ಟೆರಾನ್ ಹೆಚ್ಚು ಸ್ರಾವ ಆಗುತ್ತವೆ. ಗಂಡು ಮತ್ತು ಹೆಣ್ನಿನ ಸ್ವರೂಪ ಗುಣಲಕ್ಷಣಗಳನ್ನು ಇವು ನಿರ್ಧರಿಸುತ್ತವೆ. ಕೆಲವೊಮ್ಮೆ ಗಂಡುಮಕ್ಕಳಲ್ಲಿ ಈಸ್ಟ್ರೋಜೆನ್ ಹಾಗೂ ಹೆಣ್ಣುಮಕ್ಕಳಲ್ಲಿ ಟೆಸ್ಟೋಸ್ಟಿರಾನ್ ಸ್ರಾವ ಅಲ್ಪ ಪ್ರಮಾಣದಲ್ಲಿ ಅಥವಾ ಹೆಚ್ಚು ಪ್ರಮಾಣದಲ್ಲಿ ಉಂಟಾಗಬಹುದು. ಆಗ ಹುಡುಗರಲ್ಲಿ ಹೆಣ್ಣು ಲಕ್ಷಣಗಳು, ಹುಡುಗಿಯರಲ್ಲಿ ಗಂಡು ಲಕ್ಷಣಗಳು ಕಾಣಿಸಬಹುದು. ಇದು ಸ್ವಭಾವದಲ್ಲೂ ಸ್ವಲ್ಪ ಬದಲಾವಣೆ ತರಬಹುದು. ಆದರೆ ಇದರಿಂದ ರೇಪ್ ಚಾಟ್‌ನಂಥ ಭಾವನೆಗಳು ಮೂಡುತ್ತವೆ ಎಂಬುದನ್ನು ಒಪ್ಪುವುದು ಕಷ್ಟ.
ಕೆಲವು ವ್ಯಕ್ತಿಗಳಲ್ಲಿ ಹಿಂಸಾರತಿ ಅಥವಾ ಸ್ಯಾಡಿಸಂ ಎಂಬ ಪ್ರವೃತ್ತಿ ಇಣುಕುಹಾಕುತ್ತದೆ. ಅಂದರೆ ಇವರ ಲೈಂಗಿಕ ಪ್ರವೃತ್ತಿ ಹಿಂಸಾತ್ಮಕವಾದುದು. ಲೈಂಗಿಕ ಕ್ರಿಯೆಯ ವೇಳೆ ಸಂಗಾತಿಗೆ ಹಿಂಸೆ ಕೊಡುವ ಮೂಲಕ ಇವರು ಆನಂದ ಪಡೆಯುತ್ತಾರೆ. ಕೆಲವೊಮ್ಮೆ ತಮ್ಮ ದೇಹಕ್ಕೇ ಹಿಂಸೆ ಕೊಡುವ ಮೂಲಕ, ತಮ್ಮ ದೇಹದ ರಕ್ತವನ್ನೇ ನೋಡಿ ಲೈಂಗಿಕ ಸುಖದ ಉತ್ತುಂಗ ತಲುಪುತ್ತಾರೆ. ಇದೊಂದು ಬಗೆಯ ವಿಕೃತಿ. ಇಂಥವರು ಸಂಗಾತಿಯನ್ನು ರೇಪ್ ಮಾಡಿದ ಅನುಭವದಿಂಧ ಸುಖ ಪಡೆಯುತ್ತಾರೆ. ಅಥವಾ ತಮ್ಮನ್ನೇ ತಮ್ಮ ಸಂಗಾತಿ ರೇಪ್ ಮಾಡುವಂತೆ ಮಾಡಿ, ಅದರಿಂದ ಸುಖ ಪಡೆಯುತ್ತಾರೆ. ಬಹುಶಃ ಈ ಹುಡುಗಿಯಲ್ಲಿ ಈ ಗುಣ ಇರಬಹುದು ಎಂದು ತರ್ಕಿಸಲಾಗಿದೆ. ಈ ಹುಡುಗರು ತನ್ನನ್ನು ರೇಪ್ ಮಾಡಿದಂತೆ ಊಹಿಸಿಕೊಂಡು ಈಕೆ ಸುಖ ಪಡೆಯುತ್ತಿದ್ದಿರಬಹುದು.
ಅವರ ಗ್ರೂಪ್ ಚಾಟ್ ಗುರಿ ಹುಡುಗಿಯರ ಗ್ಯಾಂಗ್ ರೇಪ್...
ಕೆಲವೊಮ್ಮೆ ಕೆಲವು ಹುಡುಗಿಯರು, ಬೇರೊಬ್ಬ ಹುಡುಗನ ಡ್ರೆಸ್ ಧರಿಸುವುದರಲ್ಲಿ ಸುಖ ಪಡುತ್ತಾರೆ. ಹಾಗೇ ಕೆಲವು ಹುಡುಗರು ಕೂಡ, ಬೇರೊಬ್ಬ ಹುಡುಗಿ ಧರಿಸಿ ಬಿಟ್ಟ ಬಟ್ಟೆಯನ್ನು ಉಟ್ಟುಕೊಂಡು ಸುಖಾನುಭವ ಹೊಂದಬಹುದು. ಇದೆಲ್ಲವೂ ಲೈಂಗಿಕ ಪ್ರವೃತ್ತಿಯ ವಿವಿಧ ರೂಪಗಳು. ಲೈಂಗಿಕ ವಿಜ್ಞಾನದ ದೃಷ್ಟಿಯಿಂದ ನೋಡಿದಾಗ ಇವೆಲ್ಲವೂ ಮಹಾ ತಪ್ಪೇನಲ್ಲ. ಆದರೆ ಅದರಿಂದ ಸುತ್ತಮುತ್ತಲಿನ ಸಮಾಜಕ್ಕೆ ಇರಿಸುಮುರಿಸು ಉಂಟಾದಾಗ ಮಾತ್ರ ಸಮಸ್ಯೆ ತಲೆದೋರುತ್ತದೆ. ಬಹುಶಃ ಈಕೆ ಹುಡುಗರ ಡ್ರೆಸ್‌ನಲ್ಲಿ, ಅವರ ಪ್ರವೃತ್ತಿಯಲ್ಲಿ ತನ್ನನ್ನು ಕಲ್ಪಿಸಿಕೊಂಡು ಸುಖ ಅನುಭವಿಸುತ್ತಿದ್ದಳು ಅನಿಸುತ್ತದೆ.
#BoisLockersRoom ನೈಜ ಕಥೆಯೇ ಬೇರೆ, ಎಲ್ಲವೂ ಹುಡುಗಿಯದ್ದೇ ಕರಾಮತ್ತು! ...
ಅದೇನೇ ಇದ್ದರೂ ಈಕೆಯ ಮನಸ್ಥಿತಿ ಅಧ್ಯಯನಕ್ಕಂತೂ ಯೋಗ್ಯವಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಎಲ್ಲೋ ಹತ್ತುಸಾವಿರಕ್ಕೆ ಒಬ್ಬ ಹುಡುಗಿಯಲ್ಲಿ ಇಂಥ ಪ್ರವೃತ್ತಿ ಕಂಡುಬರುತ್ತದಂತೆ.