ಮಗು ಹುಟ್ಟಿದ ಎಷ್ಟು ದಿನಗಳ ಬಳಿಕ ಸೆಕ್ಸ್‌ ಲೈಫ್‌ಗೆ ಮರಳಬಹುದು?

By Suvarna NewsFirst Published Dec 23, 2019, 3:48 PM IST
Highlights

 ನಮ್ಮಲ್ಲಿ ಲೈಂಗಿಕ ವಿಚಾರಕ್ಕೆ ಸಂಬಂಧಿಸಿ ತಿಳುವಳಿಕೆಗಿಂತ ತಪ್ಪು ತಿಳುವಳಿಕೆಯೇ ಹೆಚ್ಚು. ಇದಕ್ಕೆ ನಮ್ಮ ಸಮಾಜದ ಮಡಿವಂತಿಕೆಯೂ ಒಂದು ಕಾರಣ ಇರಬಹುದು. ಆದರೆ ಪ್ರಾಕ್ಟಿಕಲ್‌ ಆಗಿ ಇದರಿಂದ ಸಮಸ್ಯೆಯಾಗುತ್ತೆ. ಅಂಥಾ ಪ್ರಾಬ್ಲೆಂಗಳಲ್ಲೊಂದು ಮಗುವಾಗಿ ಎಷ್ಟು ದಿನಗಳ ಬಳಿಕ ಸೆಕ್ಸ್‌ ಲೈಫ್‌ಗೆ ಮರಳಬಹುದು ಅನ್ನೋದೂ ಸೇರಿದಂತೆ ಒಂದಿಷ್ಟು ಪ್ರಶ್ನೆಗಳಿವೆ. ಅದಕ್ಕೆ ಉತ್ತರ ಇಲ್ಲಿದೆ.
 

ಪ್ರಶ್ನೆ: ಪತ್ನಿ ಗರ್ಭಿಣಿ ಅಂತ ಗೊತ್ತಾದ ಮೇಲಿಂದ ಇವತ್ತಿನವರೆಗೆ ಅಂದರೆ ಮಗು ಹುಟ್ಟಿ ಮೂರು ತಿಂಗಳವರೆಗೂ ದೈಹಿಕವಾಗಿ ದೂರವೇ ಇದ್ದೀವಿ. ನಾವು ಯಾವಾಗ ಮತ್ತೆ ಹಿಂದಿನ ದಿನಗಳಿಗೆ ಮರಳಬಹುದು?

ಉತ್ತರ: ಇಂಥ ಪ್ರಶ್ನೆ ಹಲವು ದಂಪತಿಗೆ ಕಾಡೋದುಂಟು. ಗರ್ಭ ಧರಿಸಿದ ಸಂದರ್ಭ ಮಿಲನ ಕ್ರಿಯೆ ನಡೆಸೋದು ಸೇಫಾ, ಅದರಿಂದ ಒಳಗಿರುವ ಮಗುವಿಗೆ ಸಮಸ್ಯೆ ಆಗಲ್ವಾ ಅನ್ನೋದು ಮೊದಲ ಸಮಸ್ಯೆ. ವೈದ್ಯರು ಹೇಳುವಂತೆ ಸೂಕ್ಷ್ಮವಲ್ಲದ ನಾರ್ಮಲ್‌ ಗರ್ಭಧಾರಣೆಯಲ್ಲಿ ಲೈಂಗಿಕ ಕ್ರಿಯೆ ನಡೆಸೋದು ತಪ್ಪಲ್ಲ. ಆದರೂ ಆರಂಭದ ಎರಡು ತಿಂಗಳು ಲೈಂಗಿಕತೆ ಬೇಡ ಅಂತಾರೆ. ಅದು ಸೇಫ್ಟಿಯ ದೃಷ್ಟಿಯಿಂದ. ಬಹಳ ಸೂಕ್ಷ್ಮವಾಗಿರುವ ಸಮಯವದು. ಆ ಟೈಮ್‌ನಲ್ಲಿ ಸ್ವಲ್ಪ ಹೆಚ್ಚುಕಮ್ಮಿಯಾದರೂ ಅಬಾರ್ಶನ್‌ ಆಗುವ ಸಾಧ್ಯತೆ ಇರುತ್ತದೆ. ಆದರೆ ಆಮೇಲೆ ಅಂದರೆ ಮೂರು ತಿಂಗಳ ಬಳಿಕ ಬೇರೇನೂ ಸಮಸ್ಯೆ ಇಲ್ಲದೇ ಹೋದಲ್ಲಿ ಮೊದಲಿನಂತೆ ಲೈಂಗಿಕ ಕ್ರಿಯೆ ನಡೆಸಬಹುದು.

ಅಮ್ಮನ ಪಾಸಿಟಿವ್ ಯೋಚನೆಯಿಂದ ಮಗುವಿನ ಹೃದಯ ಸಮಸ್ಯೆ ದೂರವಾಯ್ತು!

ಆದರೆ ಅತಿಯಾದ ಒತ್ತಡ ಬೇಡ. ಸಾಧ್ಯವಾದಷ್ಟು ನಾಜೂಕಾಗಿ ಕಾರ್ಯ ಮುಗಿಸೋದು ಒಳ್ಳೆಯದು. ಐದು ತಿಂಗಳವರೆಗೆ ಓಕೆ. ಆದರೆ ಆಮೇಲೆ ಹೊಟ್ಟೆ ದಪ್ಪಗಾಗುತ್ತದೆ. ಆಗ ಪತ್ನಿಯ ಜೊತೆಗೆ ಮೊದಲಿನಂತೆ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಗಂಡನಿಗೆ ತುಸು ಹಿಂಜರಿಕೆಯಾಗಬಹುದು. ಬೇರೇನೂ ಸಮಸ್ಯೆ ಇಲ್ಲವಾದರೆ ಈ ಸಮಯದಲ್ಲಿ ಸೆಕ್ಸ್‌ ಮಾಡೋದರಿಂದ ಅಪಾಯ ಇಲ್ಲ. ಬದಲಾಗಿ ಹೆರಿಗೆ ಸುಲಭವಾಗುತ್ತೆ ಅನ್ನೋ ನಂಬಿಕೆ ಇದೆ. ಅದು ಸಂಪೂರ್ಣ ಸತ್ಯ ಅಲ್ಲ ಅನ್ನುವವರೂ ಇದ್ದಾರೆ.

ಕೊನೆಯ ಅವಧಿಯಲ್ಲಿ ಬೇಡ

ಇನ್ನು ಗರ್ಭಾವಧಿಯ ಕೊನೆಯ ಎರಡು ತಿಂಗಳು ಸೆಕ್ಸ್‌ ಬೇಡ ಅಂತಾರೆ ವೈದ್ಯರು. ಆದರೆ ಆ ಹೊತ್ತಿಗೆ ಹಸ್ತಮೈಥುನ ತಪ್ಪಲ್ಲ. ಬಹಳ ಗುಪ್ತವಾಗಿ ನಡೆಯುವ ಈ ಕ್ರಿಯೆ ಮಗುವಿನ ಮೇಲೆ ಪರಿಣಾಮ ಬೀರಲ್ವಾ ಅಂದರೆ, ಅದಕ್ಕೂ ಉತ್ತರ ಇದೆ. ಲೈಂಗಿಕತೆ ಅನ್ನೋದು ಜೀವಿಗಳಲ್ಲಿ ಬಹಳ ಸಹಜವಾದುದು. ಒಳಗಿರುವ ಭ್ರೂಣಕ್ಕೆ ಇದರ ಅನುಭವ ಆಗಿಯೇ ಆಗುತ್ತೆ. ಆದರೆ ಅದರಿಂದ ಸೈಡ್‌ ಎಫೆಕ್ಟ್ಗಳಿಲ್ಲ.

ಇನ್ನು ಮಗು ಹುಟ್ಟಿದ ಮೇಲೆ ನಮ್ಮ ಭಾರತೀಯ ವ್ಯವಸ್ಥೆಯಲ್ಲಿ ಒಂದು ವರ್ಷದವರೆಗೂ ಅಮ್ಮ ಮಗು ತವರಲ್ಲೇ ಇರುವ ಪದ್ಧ್ದತಿ ಕೆಲವೆಡೆ ಇದೆ. ಹೀಗಾಗಿ ಮಗು ಹುಟ್ಟಿದ ಒಂದು ವರ್ಷದವರೆಗೂ ಪತಿ ಪತ್ನಿ ಮಧ್ಯೆ ಲೈಂಗಿಕತೆ ನಡೆಯೋದೇ ಇಲ್ಲ. ಆದರೆ ವೈದ್ಯಕೀಯದ ಪ್ರಕಾರ ನಾರ್ಮಲ್‌ ಅಥವಾ ಸಿಸೇರಿಯನ್‌ ಹೆರಿಗೆಯಲ್ಲಿ ಗಾಯಗಳೆಲ್ಲ ಮಾಸಿ ಆಕೆ ಸಹಜ ಬದುಕಿಗೆ ಮರಳಿದರೆ ಲೈಂಗಿಕತೆ ನಡೆಸಬಹುದು.

ಅಬ್ಬಬ್ಬಾ! ಮಗು ಹೆರಬೇಕಂದ್ರೆ ದೇಹ ಇಷ್ಟೆಲ್ಲ ಬದಲಾಗಬೇಕು

ಸುರಕ್ಷಿತ ಲೈಂಗಿಕತೆ

ಇನ್ನೊಂದು ನಂಬಿಕೆ ನಮ್ಮಲ್ಲಿದೆ. ಮಗು ಹಾಲು ಕುಡಿಯುತ್ತಿರುವ ಅವಧಿಯಲ್ಲಿ ಮತ್ತೆ ಗರ್ಭ ಧರಿಸಲ್ಲ ಅಂತ. ಆದರೆ ಇದು ತಪ್ಪು. ಈ ಸಮಯದಲ್ಲೂ ಲೈಂಗಿಕ ಕ್ರಿಯೆ ನಡೆಸಿದರೆ ಗರ್ಭ ಧರಿಸುವ ಸಾಧ್ಯತೆ ಇದೆ. ಹಾಗಾಗಿ ಸುರಕ್ಷಿತ ಲೈಂಗಿಕತೆ ನಡೆಸೋದು ಬೆಸ್ಟ್‌. ಈ ಅವಧಿಯಲ್ಲಿ ಸೆಕ್ಸ್‌ ನಡೆಸುವಾಗ ಬಹಳ ಎಚ್ಚರಿಕೆಯಿಂದಿರೋದು ಬಹಳ ಮುಖ್ಯ. ಏಕೆಂದರೆ ಪೀರಿಯೆಡ್ಸ್‌ ರೆಗ್ಯುಲರ್‌ ಆಗಿ ಇರೋದಿಲ್ಲ. ಹಾಗಾಗಿ ಯಾವಾಗ ಗರ್ಭ ಧರಿಸಬಹುದು ಅಂತ ಹೇಳಕ್ಕಾಗಲ್ಲ. ಆದ್ದರಿಂದ ಮಗುವಾದ ಮೇಲೆ ಪೀರಿಯೆಡ್ಸ್‌ ಹಿಂದಿನಂತೆ ರೆಗ್ಯುಲರ್‌ ಆಗುವವರೆಗೂ ಗರ್ಭ ನಿರೋಧಕ, ಕಾಂಡೋಮ್‌ ಇತ್ಯಾದಿ ಬಳಸಿ ಲೈಂಗಿಕ ಕ್ರಿಯೆ ನಡೆಸೋದು ಬೆಸ್ಟ್‌.

ನೀವು ಗರ್ಭಿಣಿಯರಾದಲ್ಲಿ, ವೆಜೈನಲ್ ಡಿಸ್ಚಾರ್ಜ್ ಕುರಿತ ಈ ವಿಷಯ ತಿಳಿಯಲೇಬೇಕು!

click me!