ಆಗೀಗೊಮ್ಮೆ ಪೋರ್ನ್ ನೋಡೋದು ತಪ್ಪಲ್ಲ ಅಂತ ಸೆಕ್ಸ್ ಥೆರಪಿಸ್ಟ್‌ಗಳೇ ಹೇಳ್ತಾರೆ. ಆದರೆ ಪದೇ ಪದೆ ಪೋರ್ನ್ ಸೈಟ್‌ಗೆ ವಿಸಿಟ್ ಕೊಡೋದು, ರಾತ್ರಿ ಹಗಲು ಅದನ್ನೇ ಯೋಚನೆ ಮಾಡೋದು ಪೋರ್ನ್ ಅಡಿಕ್ಷನ್‌ನ ಸೂಚನೆ.
ಸಂಗಾತಿ ಬಳಿ ಇಲ್ಲದವರು, ಸಂಗಾತಿಯಿದ್ದರೂ ಮಿಲನದ ರುಚಿ ಹೆಚ್ಚಿಸಿಕೊಳ್ಳಲು ಬಯಸುವವರು, ಸೆಕ್ಸ್ ಲೈಫ್‌ನ್ನು ಇನ್ನಷ್ಟು ಸ್ಪೈಸಿ ಆಗಿಸಿಕೊಳ್ಳಬೇಕು ಅಂತ ಬಯಸುವವರು ಆಗೀಗೊಮ್ಮೆ ಪೋರ್ನ್ ಸೈಟ್ ವಿಸಿಟ್ ಮಾಡೋದು ಸಹಜ. ಇದೇನೂ ತಪ್ಪಲ್ಲ ಅಂತಾರೆ ಸೆಕ್ಸ್ ಥೆರಪಿಸ್ಟ್‌ಗಳು. ಇದರಿಂದ ಸಹಜ ಆರೋಗ್ಯಕರ ಲೈಂಗಿಕ ಜೀವನ ಲಭ್ಯವಾಗುತ್ತೆ. ಆದರೆ ಇದು ಅತಿಯಾಗಬಾರದು.
ಪದೇ ಪದೇ ಪೋರ್ನ್ ಸೈಟ್ ಮನೋಡೋದು. ಕಚೇರಿಯಲ್ಲಿದ್ದಾಗ್ಲೂ ಅದನ್ನು ನೋಡಬೇಕು ಅನಿಸೋದು, ಅದನ್ನೇ ನೋಡ್ತಾ ನೋಡ್ತಾ ಸಂಗಾತಿಯ ಜೊತೆಗಿನ ಸರಸವೂ ಬೇಡ ಅನಿಸೋದು ಮುಂತಾದವೆಲ್ಲ ಪೋರ್ನ್ ಅಡಿಕ್ಷನ್‌ನ ಲಕ್ಷಣಗಳು, ಇದರಿಂದ ಹೊರ ಬರದಿದ್ದರೆ ಅಪಾಯ ಕಟ್ಟಿಟ್ಟದ್ದು. ಅದರಿಂದ ಪಾರಾಗೋಕೆ ದಾರಿಗಳು ಹಲವು.
ಸನ್ನಿ ಲಿಯೋನ್ ದಾಂಪತ್ಯ ಜೀವನದಲ್ಲಿ ಸಿಕ್ಕಾಪಟ್ಟೆ ಹ್ಯಾಪಿ ಆಗಿರೋಕೆ ಕಾರಣಾನೇ ಇದು!
ಸಮಯದ ಗಡುವು ಹಾಕಿಕೊಳ್ಳಿ
ಪೋರ್ನ್ ನೋಡಲು ನಿರ್ದಿಷ್ಟ ಸಮಯ ಮೀಸಲಿಡಿ. ವಾರದಲ್ಲಿ ಅರ್ಧ ಗಂಟೆ, ವಾರದಲ್ಲಿ ಎರಡು ದಿನ ಅರ್ಧ ಗಂಟೆ- ಹೀಗೆ. ಪ್ರತಿ ದಿನ ಪೋರ್ನ್ ನೋಡೋದು ಸ್ವಲ್ಪ ಹೆಚ್ಚೇ. ಹಾಗೇ ಒಂದು ಸಮಯವನ್ನೂ ಗೊತ್ತು ಮಾಡಿಕೊಳ್ಳಿ. ಉದಾಹರಣೆಗೆ- ರಾತ್ರಿ ಹತ್ತು ಗಂಟೆಗೆ. ಅದನ್ನು ಮೀರಬೇಡಿ.
ಸಂಗಾತಿಯ ಜೊತೆಗೆ ಸವಿಯಿರಿ
ಸಂಗಾತಿಯ ಜೊತೆಗೆ ಪೋರ್ನ್ ನೋಡೋಡು ಒಳ್ಳೆಯದು. ಅದು ನಿಮ್ಮ ಸೆಕ್ಸ್ ಜೀವನವನ್ನು ಇನ್ನಷ್ಟು ರಸಮಯ ಆಗಿಸುತ್ತದೆ. ಒಂದು ವೇಳೆ ನೀವು ಅದರತ್ತಲೇ ಹೆಚ್ಚು ಆಕರ್ಷಿತ ಆಗುತ್ತಿದ್ದೀರಿ ಎಂದು ಅನಿಸಿದರೆ, ಸಂಗಾತಿ ಎಚ್ಚರಿಸಲೂ ಬಹುದು.
ಕಚೇರಿಯಲ್ಲಿ ನೋಡಬೇಡಿ
ಕಚೇರಿ ಇರುವುದು ಕಚೇರಿ ಕೆಲಸಕ್ಕಾಗಿಯೇ ಹೊರತು ನಿಮ್ಮ ವೈಯಕ್ತಿಕ ಸಂಗತಿಗಳಿಗಾಗಿ ಅಲ್ಲ. ಅದನ್ನು ನೋಡುವುದು ಸಹೋದ್ಯೋಗಿಗಳಿಗೆ ಗೊತ್ತಾದರೆ ನೀವು ಚೀಪ್ ಅನಿಸಿಕೊಳ್ಳುತ್ತೀರಿ. ಇತರರ ಜೊತೆಗಿನ ಸಂಬಂಧದ ಮೇಲೂ ಅದು ಕರಾಳ ನೆರಳು ಚೆಲ್ಲಬಹುದು. ಅವಾಯ್ಡ್ ಮಾಡಿ.
ಹಸ್ತಮೈಥುನ ಮಾಡಿದ್ರೆ ಏನ್ ಪ್ರಾಬ್ಲಂ?
ಬೇರೆ ಹವ್ಯಾಸ ಬೆಳೆಸಿಕೊಳ್ಳಿ
ಇರ ಆರೋಗ್ಯಕರ ಹವ್ಯಾಸಗಳನ್ನು ರೂಢಿಸಿಕೊಂಡಾಗ ಪೋರ್ನ್ ಅನ್ನು ಸ್ವಲ್ಪ ಮಟ್ಟಿಗೆ ಅವಾಯ್ಡ್ ಮಾಡಬಹುದು. ಉದಾಹರಣೆಗೆ- ಮನಸ್ಸಿಗೆ ಮುದ ಕೊಡುವ ಸಂಗೀತ ಕೇಳುವುದು, ಸಾಹಿತ್ಯ ಕೃತಿಗಳನ್ನು ಓದುವುದು, ಗೆಳೆಯ/ಗೆಳತಿಯರೊಡನೆ ಚಾಟ್ ಮಾಡುವುದು ಇತ್ಯಾದಿ.
ಕೆರಿಯರ್ ಬೆಳೆಸಿಕೊಳ್ಳಿ
ನೀವು ಪೋರ್ನ್ ನೋಡುವ ಹೊತ್ತು ಎಷ್ಟು, ಅದರಿಂದ ಉಪಯೋಗ ಏನಾದರೂ ಇದೆಯಾ, ಅಥವಾ ನಷ್ಟವೇ ಹೆಚ್ಚಾ, ಆ ಹೊತ್ತಿನಲ್ಲಿ ಬೇರೇನಾದರೂ ಫ್ರೀಲಾನ್ಸ್ ಕೆಲಸ ಅಥವಾ ವರ್ಕ್ ಫ್ರಮ್ ಹೋಮ್ ಮಾಡಿದರೆ ಹೆಚ್ಚು ಹಣಕಾಸು ಗಳಿಸಬಹುದಾ? ಈ ಸಾಧ್ಯತೆಗಳನು ಅನ್ವೇಷಿಸಿ. ನಷ್ಟ ಆಗುವಂಥದ್ದನ್ನು ಕೈಬಿಡಿ, ಲಾಭವಾಗುವಂಥದ್ದನ್ನು ರೂಢಿಸಿಕೊಳ್ಳಿ.
ವಾಕಿಂಗ್, ಜಾಗಿಂಗ್
ಪ್ರತಿದಿನ ಮುಂಜಾನೆ ಮತ್ತು ಸಂಜೆ ಪಾರ್ಕ್‌ಗೆ ಹತ್ತು ರೌಂಡ್ ಹಾಕುವುದು, ಜಾಗ್ ಮಾಡುವುದು, ಜಿಮ್‌ಗೆ ಹೋಗಿ ವರ್ಕೌಟ್ ಮಾಡುವುದು ಮುಂತಾದ ದೈಹಿಕ ಚಟುವಟಿಕೆಗಳಿಂದ ದೇಹ ಚುರುಕಾಗುತ್ತದೆ, ಆರೋಗ್ಯಕರ ದೇಹದಲ್ಲಿ ಆರೋಗ್ಯಕರ ಮನಸ್ಸು. ಇದರಿಂದ ಪೋರ್ನ್ ನೋಡುವ ಪ್ರಮಾಣ ಇಳಿಯುತ್ತದೆ.
ಏಕಾಂಗಿಯಾಗಿ ಇರಬೇಡಿ
ಪೋರ್ನ್ ನೋಡಬೇಕೆಂಬ ಹಂಬಲ ಹೆಚ್ಚಾಗಿ ಕಾಡುವುದು ಒಂಟಿಯಾಗಿ ಇರುವಾಗ. ಗುಂಪಿನಲ್ಲಿದ್ದಾಗ, ಗೆಳೆಯರೊಡನೆ ಇರುವಾಗ, ಮನೆಯಲ್ಲಿ ಬಂಧುಗಳೊಡನೆ ಬೆರೆತಿರುವಾಗ ಇದು ಕಾಡುವುದಿಲ್ಲ. ಇಂಥ ಏಕಾಂಗಿತನದ ಸಂದರ್ಭಗಳನ್ನು ತಪ್ಪಿಸಿಕೊಳ್ಳಿ.
ಬದಲಾಗುತ್ತಿದೆ ಆಕರ್ಷಣೆಯ ಟ್ರೆಂಡ್, ಹೆಚ್ಚುತ್ತಿರುವ ಸೆಪಿಯೋಸೆಕ್ಷುಯಲ್ ವರ್ಗ!
ಸಂಗಾತಿ ಜೊತೆಗೆ ರೊಮ್ಯಾನ್ಸ್
ನಿಜಜೀವನದಲ್ಲಿ ಸಾಕಷ್ಟು ರೊಮ್ಯಾನ್ಸ್ ಹಾಗೂ ಸೆಕ್ಸ್ ಇದ್ದಾಗ, ವರ್ಚುವಲ್ ಜಗತ್ತಿನ ಸೆಕ್ಸ್ ಬೇಕು ಅನಿಸುವುದಿಲ್ಲ. ನಿಮ್ಮ ಸಂಗಾತಿಯ ಜೊತೆಗಿನ ಪ್ರೀತಿ ಪ್ರೇಮ ಪ್ರಣಯದ ಸಮಯವನ್ನು ಅಧಿಕಗೊಳಿಸಿಕೊಳ್ಳಿ. ಇದರಿಂದ ನಿಮ್ಮ ಬಾಂಧವ್ಯವೂ ಮಧುರವಾಗುತ್ತದೆ, ನಿಮ್ಮ ಮನೆಯ ಹಾಗೂ ಕಚೇರಿಯ ಪ್ರೊಡೆಕ್ಟಿವಿಟಿಯೂ ಹೆಚ್ಚಾಗುತ್ತದೆ. ಪೋರ್ನ್ ನೋಡಬೇಕು ಅನ್ನಿಸುವುದೇ ಇಲ್ಲ.