ಸನ್ನಿ ಲಿಯೋನ್ ಬಗ್ಗೆ ನಿಮಗೆ ಗೊತ್ತೇ ಇದೆ. ನೀಲಿ ಚಿತ್ರಗಳ ರಾಣಿಯಾಗಿದ್ದರೂ ಈಕೆ ಬಾಲಿವುಡ್‌ನಲ್ಲಿ ಈಗಹೊಸದೇ ಬದುಕು ಕಂಡುಕೊಂಡಿದ್ದಾಳೆ. ಸನ್ನಿ ಮತ್ತು ಡೇನಿಯಲ್ ವೆಬರ್ ಅವರಿಬ್ಬರದು ಎಂಟು ವರ್ಷಗಳಿಂದ ಹ್ಯಾಪ್ಪಿ ದಾಂಪತ್ಯ. ಇವರ ಸುಖೀ ದಾಂಪತ್ಯದ ರಹಸ್ಯವೇನು ನಿಮಗೆ ಗೊತ್ತಾ?
ಸನ್ನಿ ಲಿಯೋನ್ ಮತ್ತು ಡೇನಿಯಲ್ ವೆಬರ್ ಇವರಿಬ್ಬರದು ಬಹು ದಿನಗಳ ಪ್ರೇಮ. ಅವರಿಬ್ಬರೂ ಮದುವೆಯಾಗುವ ಮುನ್ನ ಹವು ವರ್ಷಗಳ ಕಾಲ ಜತೆಯಾಗಿಯೂ ಇದ್ದವರು. ತಮ್ಮಿಬ್ಬರ ಗೆಳೆತನ, ಪ್ರೇಮ, ದಾಂಪತ್ಯದ ಬಗ್ಗೆ ಸನ್ನಿಯೇ ಮುಕ್ತವಾಗಿ ಹೇಳಿಕೊಂಡಿದ್ದಾರೆ. ಸನಿ ಲಿಯೋನ್ ನಿಮಗೇ ಗೊತ್ತಿದ್ದಂತೆ ನೀಲಿ ಚಿತ್ರಗಳಲ್ಲಿ ನಟಿಸುತ್ತಿದ್ದಾಕೆ. ಹಲವು ಪುರುಷರ ಜೊತೆ ದೇಹ ಹಂಚಿಕೊಳ್ಳುವುದು ಈ ಇಂಡಸ್ಟ್ರಿಯಲ್ಲಿ ಅನಿವಾರ್ಯ. ಅದನ್ನೂ ನೂರಾರು ಕ್ಯಾಮೆರಾಗಳ ಮುಂದೆಯೇ ಮಾಡಬೇಕು. ಇದರಿಂದ ಕಾಮದ ಬಗ್ಗೆ ಯಾವುದೇ ಮಧುರ ಭಾವನೆಗಳು ಇದ್ದರೂ ಅದು ನಾಶವಾಗಿ ಹೋಗುವುದು ಖಚಿತ ಎಂದು ನೀವಂದುಕೊಂಡಿದ್ದರೆ, ಉಹೂಂ!
ಬೆತ್ತಲಾಗಿ ದ್ರಾಕ್ಷಿ ಹಿಡಿದ ಸನ್ನಿ; ಸೆಕ್ಸಿ ಸೆನ್ಸೇಷನಲ್ ವಿಡಿಯೋ ವೈರಲ್!
ಸನ್ನಿ ಹೇಳುವಂತೆ, ಇಬ್ಬರಲ್ಲಿ ಮೊದಲು ಪ್ರಪೋಸ್ ಮಾಡಿದವನು ಡೇನಿಯಲ್ಲೇ ಅಂತೆ. ಆ ಹೊತ್ತಿಗೆ ಸನ್ನಿ ಪೋರ್ನ್ ಫಿಲಂಗಳಲ್ಲಿ ನಟಿಸುವಾಕೆ ಎಂಬುದು ಡೇನಿಯಲ್‌ಗೆ ತಿಳಿದಿತ್ತು. ಆದರೂ ಸನ್ನಿಯ ಬೆನ್ನ್ನುಬಿಡದೆ ಆಕೆಗೆ ಗಿಫ್ಟ್ ಕೊಡುತ್ತ, ಕರೆ ಮಾಡುತ್ತ ಒಲಿಸಿಕೊಂಡೇಬಿಟ್ಟ. ಆತ ತನ್ನನ್ನು ತಿರಸ್ಕರಿಸಲಿ ಎಂದೇ ಫಸ್ಟ್ ಡೇಟಿಂಗ್‌ಗೆ ಆಕೆ ತಡವಾಗಿ ಹೋಗಿದ್ದಳಂತೆ. ಡೇನಿಯಲ್‌ದು ಅಮೆರಿಕದ ಶ್ರೀಮಂತ ಮನೆತನ. ಉದ್ಯಮಿ, ನಟ, ಗಿಟಾರಿಸ್ಟ್. ಈತನ ಗೆಳೆತನ ಸನ್ನಿಯ ಬಾಳಿನಲ್ಲಿ ಹೂ ಅರಳಿದಂತೆ ಸಹಜವಾಗಿ ಆಯಿತು. ಮದುವೆ ಪ್ರಸ್ತಾಪ ಇಟ್ಟವನೂ ಡೇನಿಯಲ್. ಅದನ್ನೂ ಸನ್ನಿ ಸ್ವೀಕರಿಸಿದಳು.
ಹಾಗಿದ್ದರೆ ಅವರ ಮಧ್ಯೆ ಪೋರ್ನ್ ಚಿತ್ರಗಳ ಬಗ್ಗೆ ಚರ್ಚೆಯಾಗಲೇ ಇಲ್ಲವೇ? ಸಾಕಷ್ಟು ಆಗಿದೆ. ಇನ್ ಪ್ಯಾಕ್ಟ್, ಸನ್ನಿಯ ಬ್ಯುಸಿನಸ್ ಮ್ಯಾನೇಜರ್ ಡೇನಿಯಲ್‌ನೇ. ಅವರಿಬ್ಬರೂ ಅದನ್ನೊಂದು ವೃತ್ತಿಯಾಗಿ ಸ್ವೀಕರಿಸಿದರು. ಆದರೆ ಸನ್ನಿ ಇತರ ಪುರುಷರ ಜತೆಗೆ ದೇಃ ಹಂಚಿಕೊಳ್ಳುವುದು ಡೇನಿಯಲ್‌ನನ್ನು ಕಾಡುತ್ತಲೇ ಇತ್ತು. ಬೇರೆ ಕಂಪನಿಗಳ ಪೋರ್ನ್ ಫಿಲಂಗಳಲ್ಲಿ ನಿರ್ದೇಶಕರು, ಮಾಲಿಕರು ಹೇಳಿದ ನಟರ ಜೊತೆ ಆಕೆ ನಟಿಸಬೇಕಾಗುತ್ತಿತ್ತು. ಇದನ್ನು ಹಾಗಲಾಡಿಸುವುದಕ್ಕಾಗಿಯೇ ಡೇನಿಯಲ್ ಹೊಸ ಕಂಪನಿ ಶುರು ಮಾಡಿ, ಅದರಿಂದಲೇ ಸನ್ನಿಯ ಪೋರ್ನ್ ಫಿಲಂ ತಯಾರು ಮಾಡಲು ಶುರು ಮಾಡಿದ. ಇದರಿಂದ ಸನ್ನಿ ಹಾಗೂ ಡೇನಿಯಲ್ ತಮ್ಮ ಆಯ್ಕೆಯ ನಟರನ್ನೇ ಫಿಲಂಗಳನ್ನು ಹಾಕಿಕೊಳ್ಳಲು ಸಾಧ್ಯವಾಯಿತು.
ದೀಪಾವಳಿಗೆ ಸನ್ನಿ ಲಿಯೋನ್ ಕಡೆಯಿಂದ ಬಂಪರ್ ಆಫರ್ !ಮಿಸ್ ಮಾಡ್ಲೇಬೇಡಿ!
‘‘ಪ್ರೀತಿ, ಸಮಯ ಕೊಡುವಿಕೆ, ರಾಜಿ ಮಾಡಿಕೊಳ್ಳುವಿಕೆ ಇವೆಲ್ಲ ದಾಂಪತ್ಯದ ಮಾಧುರ‍್ಯ ಉಳಿಯುವುದಕ್ಕೆ ತುಂಬಾ ಮುಖ್ಯ’’ ಅಂತ ಸನ್ನಿ ಹೇಳುತ್ತಾಳೆ. ತನ್ನ ಪತಿ ‘ಅರ್ಥ ಮಾಡಿಕೊಳ್ಳುವವ, ತನ್ನ ಬಗ್ಗೆ ಅಭದ್ರತಾ ಭಾವನೆ ಇಲ್ಲದವನು’ ಎಂದು ಆಕೆ ಹೇಳುತ್ತಾಳೆ. ಮದುವೆಯ ನಂತರ, ಬಾಲಿವುಡ್‌ನಲ್ಲಿ ಅಷ್ಟೊಂದು ಸುಂದರಾಂಗ ನಟರ ಜೊತೆ ಸನ್ನಿ ಒಡನಾಡುವುದು, ಫ್ಲರ್ಟ್ ಮಾಡುವುದು ಇದ್ದದ್ದೇ. ಇದರಿಂದ ಆತನಿಗೆ ಜೆಲಸ್ ಆಗುವುದಿಲ್ಲವೇ. ಅದೂ ಇಲ್ಲವಂತೆ. ಅಂದರೆ ಸನ್ನಿ ತನಗೆ ಬೇಕಾದಂಥ ಗಂಡನನ್ನೇ ಪಡೆದಿದ್ದಾಳೆ ಎಂದಾಯಿತು. ಅವರಿಬ್ಬರು ಜಗಳವಾಡಿದ ಉದಾಹರಣೆ ಕೂಡ ಇಲ್ಲ.
ಮಾನಸಿಕ ಬಾಂಧವ್ಯವೇ ಮುಖ್ಯ
ಸುಖೀ ದಾಂಪತ್ಯಕ್ಕೆ ದೈಹಿಕ ಬಾಂಧವ್ಯವೂ ಬೇಕು; ಆದರೆ ಅದಕ್ಕಿಂತಲೂ ಮಾನಸಿಕ ಬಾಂಧವ್ಯ ಹೆಚ್ಚು ಮುಖ್ಯ ಅನ್ನುವುದನ್ನು ಸನ್ನಿ ಒತ್ತಿ ಹೇಳುತ್ತಾಳೆ. ತಾನು ಇತರ ಪುರುಷರ ಜೊತೆ ದೇಹ ಹಂಚಿಕೊಳ್ಳುವುದು ವೃತ್ತಿಯ ಅಗತ್ಯಕ್ಕಾಗಿ ಎಂಬುದನ್ನು ಡೇನಿಯಲ್ ಅರ್ಥ ಮಾಡಿಕೊಂಡಿದ್ದಾನೆ ಎಂಬುದು ಆಕೆಯ ಇಂಗಿತ. ಬಾಲಿವುಡ್‌ನಲ್ಲಿ ಜಿಸ್ಮ್, ರಾಗಿಣಿ ಎಂಎಂಎಸ್ ಮುಂತಾದ ಹಲವು ಚಿತ್ರಗಳ ನಟಿಯಾಗಿ ನೆಲೆ ಕಂಡುಕೊಳ್ಳುತ್ತಿರುವ ಸನ್ನಿಗೆ ಈಗ ಪೋರ್ನ್ ಇಂಡಸ್ಟ್ರಿಯಲ್ಲಿ ದುಡಿಯುವ ಅಗತ್ಯ ಕೂಡ ಇಲ್ಲ.