Gender Signifier Colour: ಹುಡುಗಿಯರಿಗೆ ಪಿಂಕ್, ಹುಡುಗರಿಗೆ ನೀಲಿ ಬಣ್ಣ ಬಳಸುವುದು ಯಾಕೆ ?

Suvarna News   | Asianet News
Published : Feb 13, 2022, 09:07 PM ISTUpdated : Feb 13, 2022, 09:09 PM IST
Gender Signifier Colour: ಹುಡುಗಿಯರಿಗೆ ಪಿಂಕ್, ಹುಡುಗರಿಗೆ ನೀಲಿ ಬಣ್ಣ ಬಳಸುವುದು ಯಾಕೆ ?

ಸಾರಾಂಶ

ಸಮಾಜದಲ್ಲಿ ಹುಡುಗರು. ಹುಡುಗಿಯರೆಂಬ ತಾರತಮ್ಯ ಇಂದು ನಿನ್ನೆ ಮೊನ್ನೆಯದ್ದಲ್ಲ. ವಿದ್ಯಾಭ್ಯಾಸ (Education), ಉದ್ಯೋಗ, ಮದುವೆ ಹೀಗೆ ಎಲ್ಲಾ ವಿಷಯಗಳಲ್ಲೂ ಈ ಲಿಂಗ ಬೇಧವನ್ನು ನೋಡಬಹುದು. ಹುಡುಗ-ಹುಡುಗಿಯರಿಗೆ ನೀಲಿ (Blue) ಮತ್ತು ಪಿಂಕ್ (Pink) ಎಂಬ ಬಣ್ಣದ ಸೂಚಕವೇ ಇದೆ. ಆದರೆ, ಇದ್ಯಾಕೆ ? ಆರಂಭವಾಗಿದ್ದು ಯಾವಾಗ ?

ಸಮಾಜದಲ್ಲಿ ಪುರುಷರು, ಮಹಿಳೆಯರು ಸಮಾನರು ಎಂದು ಮಾತನಾಡುವವರೆಲ್ಲರೂ ಗಮನಿಸಿಕೊಳ್ಳಬೇಕು ಗಂಡು-ಹೆಣ್ಣು ಎಂಬ ತಾರತಮ್ಯ ಇಂದು ನಿನ್ನೆ ಆರಂಭವಾಗಿರುವುದಲ್ಲ. ಅನಾದಿ ಕಾಲದಿಂದಲೂ ಹುಡುಗರು, ಹುಡುಗಿಯರು, ಮಹಿಳೆಯರು, ಪುರುಷರು ಎಂಬ ಬೇಧ ಭಾವ ಇದ್ದೇ ಇತ್ತು. ಚಿಕ್ಕಂದಿನಲ್ಲೇ ಮಕ್ಕಳಲ್ಲಿ ಈ ತಾರತಮ್ಯ ಮಾಡಲಾಗುತ್ತದೆ. ಬಟ್ಟೆ, ಕೆಲಸ, ಜವಾಬ್ದಾರಿ ಹೀಗೆ ಹಲವು ವಿಚಾರಗಳಲ್ಲಿ ಬೇಧ ಭಾವ ಮಾಡುವುದನ್ನು ನೋಡಬಹುದು. ಅಷ್ಟೇ ಯಾಕೆ ಈ ತಾರತಮ್ಯವನ್ನು ಬಣ್ಣಗಳಿಂದ ಬೇರೆ ಗುರುತಿಸಲಾಗುತ್ತದೆ. ಹೆಣ್ಣುಮಕ್ಕಳಿಗೆ ಗುಲಾಬಿ (Pink) ಮತ್ತು ಗಂಡು ಮಕ್ಕಳಿಗೆ ನೀಲಿ (Blue) ಬಣ್ಣವನ್ನು ಸೂಚಕವಾಗಿ ಬಳಸಲಾಗುತ್ತದೆ..

ಲೈಂಗಿಕತೆಯು ಗಂಡು ಮತ್ತು ಹೆಣ್ಣಿನ ನಡುವಿನ ಜೈವಿಕ ಮತ್ತು ಶಾರೀರಿಕ ವ್ಯತ್ಯಾಸವಾಗಿದ್ದರೂ, ಲಿಂಗವು ಮಹಿಳೆಯರು ಮತ್ತು ಪುರುಷರ ಸಾಮಾಜಿಕವಾಗಿ ನಿರ್ಮಿಸಿದ ಗುಣಲಕ್ಷಣಗಳನ್ನು ಸೂಚಿಸುತ್ತದೆ. ಪುರುಷರು ಮತ್ತು ಮಹಿಳೆಯರು ಹೇಗೆ ಲಿಂಗದ ಪಾತ್ರಗಳಿಗೆ ಒಳಪಟ್ಟಿರುತ್ತಾರೆಯೋ ಹಾಗೆಯೇ, ಸೆಕ್ಸ್ (Sex)ನೊಂದಿಗೆ ಯಾವುದೇ ಸಂಬಂಧವಿಲ್ಲದ ಬಣ್ಣವು ಲಿಂಗವನ್ನು ಸೂಚಿಸುತ್ತದೆ. ಹುಡುಗರಿಗೆ ನೀಲಿ, ಹುಡುಗಿಯರಿಗೆ ಪಿಂಕ್ ಬಣ್ಣವನ್ನು ಸೂಚಕವಾಗಿ ಬಳಸಲಾಗುತ್ತದೆ. 

ಮಗಳು 13 ದಾಟುವ ಮುನ್ನ ಈ ಜೀವನಪಾಠಗಳನ್ನು ಕಲಿಸಿ

ಮೊದಲ ಬಾರಿಗೆ ಈ ಬಣ್ಣಗಳನ್ನು ಬಳಸಿ ಲಿಂಗವನ್ನು ಗುರುತಿಸುವ ಕ್ರಮ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಪ್ರಾರಂಭವಾಯಿತು. 19ನೇ ಶತಮಾನದ ಮಧ್ಯಭಾಗದ ಮೊದಲು, ಹುಡುಗರು ಮತ್ತು ಹುಡುಗಿಯರಿಗೆ ಯಾವುದೇ ಲಿಂಗ, ನಿರ್ದಿಷ್ಟ ಬಣ್ಣಗಳು ಇರಲಿಲ್ಲ. ಪಾಲಕರು ತಮ್ಮ ಮಕ್ಕಳಿಗೆ ಆರು ವರ್ಷದವರೆಗೆ ಬಿಳಿ ಬಟ್ಟೆಗಳನ್ನೇ ತೊಡಿಸುತ್ತಿದ್ದರು. ಮೇರಿಲ್ಯಾಂಡ್ ವಿಶ್ವವಿದ್ಯಾನಿಲಯದಲ್ಲಿ ಇತಿಹಾಸಕಾರರಾಗಿದ್ದ ಜೋ ಬಿ.ಪಾಲೊಟ್ಟಿ ಅವರ ಪ್ರಕಾರ, ಬಿಳಿ ಬಣ್ಣದ ಬಟ್ಟೆ ಪ್ರಾಯೋಗಿಕವಾಗಿತ್ತು. ಎಲ್ಲಿಯೂ ಲಿಂಗವನ್ನು ಸೂಚಿಸಲು ಪ್ರತ್ಯೇಕ ಬಣ್ಣದ ಬಟ್ಟೆಯನ್ನು ಧರಿಸುವ ಪದ್ಧತಿ ಇರಲ್ಲಿಲ್ಲ. 

ಆದರೆ ಹೊಸ ಒಪ್ಪಂದದ ಪ್ರಕಾರ, ಹುಡುಗರಿಗೆ, ಹುಡುಗಿಯರಿಗೆ ನೀಲಿ ಮತ್ತು ಗುಲಾಬಿ ಬಣ್ಣವನ್ನು ನಿಗದಿಪಡಿಸಲಾಯಿತು. ಆದರೆ 20ನೇ ಶತಮಾನದ ಆರಂಭದವರೆಗೂ ಎಲ್ಲಾ ಬಣ್ಣಗಳಿಗೂ, ಲಿಂಗಕ್ಕೂ ಯಾವುದೇ ಸಂಬಂಧವಿರಲ್ಲಿಲ್ಲ. ಹುಡುಗರು (Boys) ಮತ್ತು ಹುಡುಗಿಯರು (Girls) ಇಬ್ಬರೂ ಎಲ್ಲಾ ಬಣ್ಣದ ಬಟ್ಟೆಗಳನ್ನು ಧರಿಸುತ್ತಿದ್ದರು.

ಹುಡುಗರಿಗೆ ನೀಲಿ ಮತ್ತು ಹುಡುಗಿಯರಿಗೆ ಪಿಂಕ್ ಬಣ್ಣ ಎಂಬ ಕಾನ್ಸೆಪ್ಟ್ 1918ರಲ್ಲಿ ಪ್ರಾರಂಭವಾಯಿತು, ಹುಡುಗಿಯರು ಹೆಚ್ಚು ಕೋಮಲ ಮತ್ತು ಮೃದು ಸ್ವಭಾವದವರು ಎಂಬ ಕಾರಣಕ್ಕೆ ಅವರಿಗೆ ತಿಳಿಯಾದ ಪಿಂಕ್ ಬಣ್ಣ, ಹುಡುಗರು ಸ್ವಭಾತಹಃ ಸಿಡುಕಿನ ಸ್ವಭಾವದವರು ಆಗಿರುತ್ತಾರೆ ಅನ್ನೋ ಕಾರಣಕ್ಕೆ ಅವರಿಗೆ ನೀಲಿ ಬಣ್ಣವನ್ನು ನಿಗದಿಪಡಿಸಲಾಯಿತು.

ಗರ್ಭಿಣಿಗೆ ಹಿಂಗಾದರೆ ಹುಟ್ಟೋ ಮಗು ಹೆಣ್ಣೋ, ಗಂಡೋ ಎಂಬುದನ್ನು ಸೂಚಿಸುತ್ತಂತೆ!

ಹುಡುಗಿಯರಿಗೆ ಗುಲಾಬಿ ಬಣ್ಣ, ಹುಡುಗರಿಗೆ ನೀಲಿ ಬಣ್ಣ ಹೀಗೆ ಪ್ರತ್ಯೇಕ ಲಿಂಗದವರಿಗೆ ಯಾಕೆ ಪ್ರತ್ಯೇಕ ಬಣ್ಣವನ್ನು ನಿಗದಿಪಡಿಸಿದರು ಎಂಬುದು ಸ್ಪಷ್ಟವಿಲ್ಲ, ಆದರೆ ಮೇರಿಲ್ಯಾಂಡ್ ವಿಶ್ವವಿದ್ಯಾನಿಲಯದಲ್ಲಿ ಸಮಾಜಶಾಸ್ತ್ರಜ್ಞರಾದ ಫಿಲಿಪ್ ಕೊಹೆನ್ ಅವರ ಪ್ರಕಾರ, ಇದು ಮಾರ್ಕೆಟಿಂಗ್ ತಂತ್ರವೆಂದು ಹೇಳಲಾಗಿದೆ. ಬಣ್ಣಗಳನ್ನು ವಿಭಜಿಸುವುದರಿಂದ ಆಯಾ ಲಿಂಗದವರು ಖರೀದಿಸುವ ವಸ್ತುಗಳ ಬೇಡಿಕೆ ಹೆಚ್ಚುತ್ತಾ ಹೋಗುತ್ತದೆ. ಬಟ್ಟೆ (Dress), ಚಪ್ಪಲಿ, ಸೌಂದರ್ಯವರ್ಧಕಗಳು ಹೀಗೆ ಎಲ್ಲದರ ಬೇಡಿಕೆಯಲ್ಲೂ ಏರಿಕೆ ಕಂಡುಬರುತ್ತದೆ. ಉತ್ಪಾದನೆ ಅಥವಾ ಮಾಸ್ ಮಾರ್ಕೆಟಿಂಗ್ ದೃಷ್ಟಿಕೋನದಿಂದ ಈ ರೀತಿ ಮಾಡಿರಬಹುದು ಎಂದು ಅವರು ಹೇಳುತ್ತಾರೆ.

1960 ಮತ್ತು 1970ರ ದಶಕದ ಮಧ್ಯಭಾಗದಲ್ಲಿ, ಮಹಿಳಾ ವಿಮೋಚನಾ ಚಳವಳಿಯ ಭಾಗವಾಗಿದ್ದ ಅನೇಕರು ಈ ಪ್ರವೃತ್ತಿಯ ವಿರುದ್ಧ ಮಾತನಾಡಿದರು. ಸ್ಟೀರಿಯೊಟೈಪಿಕಲ್ 'ಹುಡುಗಿಯ' ಬಟ್ಟೆಗಳನ್ನು ಮಾತ್ರ ಹುಡುಗಿಯರನ್ನು ಧರಿಸುವುದು ಅವರ ಗುರಿ ಮತ್ತು ಆಕಾಂಕ್ಷೆಗಳನ್ನು ಸಾಧಿಸುವುದನ್ನು ನಿರ್ಬಂಧಿಸುತ್ತದೆ ಮತ್ತು ಯಶಸ್ಸಿನ ಹಾದಿಯನ್ನು ಮಿತಿಗೊಳಿಸುತ್ತದೆ ಎಂದು ಸದಸ್ಯರು ನಂಬಿದ್ದರು. ಪೋಷಕರಾಗಿ, ನಾವು ನಮ್ಮ ಹುಡುಗಿಯರು ಮತ್ತು ದೇಹದ ನಡುವೆ ವ್ಯತ್ಯಾಸವನ್ನು ತೋರಿಸದಿರುವುದು ಮುಖ್ಯವಾಗಿದೆ. ಅವರನ್ನು ಲಿಂಗದ ಪಾತ್ರಗಳಿಗೆ ಸೀಮಿತಗೊಳಿಸುವುದು ಅವರ ಆತ್ಮವಿಶ್ವಾಸ ಕುಂದಿಸಬಹುದು ಎಂದು ಹಲವರು ವಾದಿಸಿದರು.

ಹೀಗಾಗಿಯೇ ಇವತ್ತಿನ ಸಮಾಜದಲ್ಲಿ ಬಣ್ಣಗಳ ಆಧಾರದಲ್ಲಿ ಲಿಂಗವನ್ನು ನಿರ್ಧರಿಸುವ ವರ್ತನೆ ಕಡಿಮೆಯಾಗಿದೆ. ಪಿಂಕ್ ಹುಡುಗಿಯರ ಫೇವರಿಟ್ ಬಣ್ಣವೆಂದು ಮಾತ್ರ ಹೇಳುತ್ತಾರಷ್ಟೇ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಳಗೆದ್ದು .. ನಾಚುತ್ತಲೇ ಮಲಗುವ ಕೋಣೆಯ ರಹಸ್ಯ ಬಹಿರಂಗಪಡಿಸಿದ ಪಿಗ್ಗಿ
ಫೋಟೋ ಹಂಚಿಕೊಂಡು 'ಡಾರ್ಲಿಂಗ್‌..' ಎಂದು ಬರೆದ ಸಾರಾ ತೆಂಡುಲ್ಕರ್‌