ಮನುಷ್ಯನ ಭಾವನೆಗಳ ಒಳಂತರವನ್ನು ಅರಿತ 'ಅವಳು'!

Suvarna News   | Asianet News
Published : Feb 13, 2022, 01:23 PM IST
ಮನುಷ್ಯನ ಭಾವನೆಗಳ ಒಳಂತರವನ್ನು ಅರಿತ 'ಅವಳು'!

ಸಾರಾಂಶ

ಕಲೆ ಎಲ್ಲರಿಗೂ ಒಲಿಯುವಂತದಲ್ಲ, ಗುಣವಂತಿಕೆ ಸಜ್ಜನರಿಗೆ ಮಾತ್ರ ಕಲೆ ಒಲಿಯುತ್ತದೆ ಎಂಬುದು ಹಿರಿಯರ ಮಾತು.ಇದು ನಿಜ ಎಂಬಂತೆ ಅನೇಕ ಕಲಾವಿದರು ನಮ್ಮ ಸುತ್ತ ಮುತ್ತ ಎಲೆಮರೆ ಕಾಯಿಯಂತೆ ಇದ್ದಾರೆ,ಇಂತಹ ಕಲಾವಿದರಲ್ಲಿ ಯುವ ಸಂಗೀತ ನಿರ್ದೇಶಕ ಆತ್ಮಿಕ್ ಕೂಡ ಒಬ್ಬರು.  

ಸುಕನ್ಯಾ ಎನ್. ಆರ್
ಆಳ್ವಾಸ್ ಕಾಲೇಜು ಮೂಡುಬಿದಿರೆ

ಇವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ,ಬಂಟ್ವಾಳ ತಾಲೂಕಿನ ವಿಟ್ಲ ಗ್ರಾಮದವರು. ಗುಣಪಾಲ ರೈ ಮತ್ತು ಮಮತ ರೈ ದಂಪತಿಯ ಪುತ್ರ. ಇವರು ಬಿಕಾಂ ಶಿಕ್ಷಣವನ್ನು ಮಂಗಳೂರಿನ ಎಸ್ ಡಿ ಎಂ ಸಂಸ್ಥೆಯಲ್ಲಿ ಕಲಿತು,ಎಂ ಬಿ ಎ ಶಿಕ್ಷಣವನ್ನು ನಿಟ್ಟೆ ಯೂನಿವರ್ಸಿಟಿ ಕಾರ್ಕಳದಲ್ಲಿ  ಪೂರೈಸಿದರು.

ಚಿಕ್ಕ ವಯಸ್ಸಿನಿಂದಲೇ ಸಂಗೀತ ಕ್ಷೇತ್ರದಲ್ಲಿ ಸಾಧಿಸಬೇಕೆಂಬ ಛಲದ ಜೊತೆಗಿನ ಆಸಕ್ತಿ, ಎಲ್ಲದಕ್ಕೂ ಮೀರಿದ ಪ್ರಯತ್ನ ಸಂಗೀತ ನಿರ್ದೇಶಕನಾಗುವಂತೆ ಹುರಿದುಂಬಿಸಿದೆ. ಸಂಗೀತ ಪದದ ರಸವನ್ನು ಸವಿಯುತ್ತಾ, ಮುಂದೊಂದು ದಿನ 
ತನ್ನದೇ ನಿರ್ದೇಶನದಲ್ಲಿ ಹಾಡು ಮೂಡಿ ಬರುವಂತೆ ಪ್ರಯತ್ನದ ಬೆನ್ನುಬಿಡದೆ ಸಾಗುತ್ತಾರೆ.

ಪ್ರಯತ್ನದ ಹಾದಿಯಲ್ಲಿ ಪಯಣ: 

ಶಿಕ್ಷಣದ ನಂತರ ಮ್ಯೂಸಿಕ್ ಸ್ಕೂಲ್ ನಲ್ಲಿ ಮ್ಯೂಸಿಕ್ ಡೈರೆಕ್ಷನ್ ಕೋರ್ಸ್ ಗೆ ಸೇರಿಕೊಳ್ಳುತ್ತಾರೆ ಮ್ಯೂಸಿಕ್ ಕಲಿಯಲೇಬೇಕು ಎಂಬ ಆಸಕ್ತಿ,ಆದರೆ ಸರಿಯಾದ ಅವಕಾಶಕ್ಕಾಗಿ ನಿರಂತರ ಪ್ರಯತ್ನ, ಪ್ರಯತ್ನದ ಜೊತೆ ಭರವಸೆ ನಂಬಿಕೆ ಎಂಬ ಆಸರೆಯಲ್ಲಿ ಮುನ್ನುಗುತ್ತಾರೆ. ಮ್ಯೂಸಿಕ್ ಡೈರೆಕ್ಷನ್ ಕೋರ್ಸ್ ಮಾಡುವುದರ ಜೊತೆಗೆ ಗಗನ್ ಬಡೇರಿಯಾ ಅವರ ಆಡಿಯೋ ಕ್ರಾಫ್ಟ್ ಸ್ಟುಡಿಯೋದಲ್ಲಿ ವೀಕೆಂಡ್ ಸಂದರ್ಭದಲ್ಲಿ ಕೆಲಸ ನಿರ್ವಹಿಸಿಕೊಂಡು ಸಾಗುತ್ತಾರೆ.

ದಿವ್ಯಾಂಗ ಮಕ್ಕಳನ್ನು ದತ್ತು ಪಡೆದ By Two Love ನಟಿ ಶ್ರೀಲೀಲಾ!

ಆಸಕ್ತಿಯ ಬೆಳಕು 

ಮ್ಯೂಸಿಕ್ ಡೈರೆಕ್ಟರ್ ಆಗಬೇಕೆಂಬ ಕನಸ್ಸು ಕಂಡಂತಹ ಆತ್ಮಿಕ್ ಎಡಬಿಡದೆ  ಸದಾ ಪ್ರಯತ್ನದ ಹಾದಿಯಲ್ಲಿ ನಡೆಯುತ್ತಾ,ಒಂದು ದಿನ ಯೋಚನೆ ಮಾಡುತ್ತಿರುವಾಗ ನಮ್ಮ ಭಾರತದಲ್ಲಿ ವಿವಿಧ ಸಂಗೀತ ರಸವನ್ನೂಳಗೊಂಡ  ಭಾವಗಳು  ಸಂಗೀತ ಪ್ರಿಯರ ಕಿವಿ ಇಂಪಾಗಿಸುತ್ತ ಮನಸ್ಸಿನ ನೆಮ್ಮದಿಗೆ ಔಷಧಿಯಾಗಿದೆ. ಡಿಜೆಗಳಂತಹ  ಮ್ಯೂಸಿಕ್  ಇವತ್ತಿನ ಟ್ರೆಂಡ್ ಆಗಿದೆ. ನಾನು ಜನರಿಗೆ ಕೊಡಬೇಕಾದ ಹಾಡು ಕೇಳುಗರ ಭಾವನೆಗಳಿಗೆ  ಸರಿದೋಗುವಂತಹ ವಿಭಿನ್ನ ಆಲೋಚನೆ ಮಾಡಿ ' ಅವಳು ' ಎಂಬ ಹೆಸರಿನ ಹಾಡಿಗೆ ಜೀವ ತುಂಬಿದ್ದಾರೆ. ಸಂಗೀತ ಪ್ರಿಯರ ಅಭಿರುಚಿಗನುಗುಣವಾಗಿ ಹಾಡು ಮೂಡಿಬಂದಿದೆ ಎಂಬುವುದು ನನಗೆ ಸಂತೋಷ ತಂದಿದೆ ಎಂದು ಹೇಳುತ್ತಾರೆ.

ಭಾವನೆಗೆ ಸ್ಪಂದಿಸುವ ಅವಳು:

ಈ ಹಾಡು ಸಾರುವ ಸಂದೇಶ ನವನವೀನ. ಪ್ರೀತಿಯ ವಿಘಟನೆ ನಂತರ ತಾನು ಅನುಭವಿಸಿದ ನೋವನ್ನು ಮರೆಯಲು ಪ್ರಯತ್ನಿಸುತ್ತಿರುವ ಮತ್ತು ತಾನು ಪ್ರೀತಿಸಿದ ಹುಡುಗಿ ಇಲ್ಲದ ಜಗತ್ತಿನಲ್ಲಿ ಬದುಕಲು ಪ್ರಯತ್ನಿಸುವ ವ್ಯಕ್ತಿಯ ಕಥೆಯನ್ನೊಳಗೊಂಡ ಅಪರೂಪದ ಹಾಡು.

'ರಾಣಾ' ಚಿತ್ರದಲ್ಲಿ ಐಟಂ ಹಾಡಿದ ಹೆಜ್ಜೆ ಹಾಕಿದ ನಟಿ Samyuktha Hegde!

ಪ್ರಯತ್ನಕ್ಕೆ ತಕ್ಕ ಪ್ರತಿಫಲ:

ಜನವರಿ 14 ರಂದು ಎಲ್ಲ ಪ್ಲಾಟ್ ಫಾರ್ಮ್ ಗಳಲ್ಲಿ ಯುಟ್ಯೂಬ್ ನಲ್ಲಿ ರಿಲಿಕಲ್ ಆನಿಮೇಷನ್  ವೀಡಿಯೋದೊಂದಿಗೆ ಬಿಡುಗಡೆಯಾಗಿದೆ. ಇವಳು ಹಾಡಿಗೆ ಮನಸೋತ ಪ್ರೇಕ್ಷಕರ ಪ್ರಶಂಸೆಯ ಮಾತು ಇನ್ನಷ್ಟು ಆಸಕ್ತಿಯನ್ನು ಹೆಚ್ಚುವಂತೆ ಮಾಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅವಳು ಹಾಡು ಕೇಳಿಬರುತ್ತಿದ್ದು ಅನೇಕ ಕನ್ನಡದ ಸಂಗೀತ ನಿರ್ದೇಶಕರು ಮೆಚ್ಚುಗೆಯ ಮಾತುಗಳನ್ನು ವ್ಯಕ್ತಪಡಿಸಿದ್ದಾರೆ. ಈ ಆಲ್ಬಮ್ ಸಾಂಗ್ ಆತ್ಮಿಕ್ ರೈ ನಿರ್ದೇಶನದ,ಯತಿರಾಜ್ ಉಪ್ಪೂರು ರವರ ಕಂಠಸಿರಿಯಲ್ಲಿ ಮೂಡಿಬಂದಿದೆ.

ಮನದ ಮಾತು: 

ಎಲ್ಲ ಪ್ಲಾಟ್ ಫಾರ್ಮ್ ಗಳಲ್ಲಿ ಅವಳು ಸಾಂಗ್ ಸದ್ದು ಮಾಡುತ್ತಿರುವುದು ನನಗೆ ತುಂಬಾ ಸಂತಸ ತಂದಿದೆ, ಮುಂದಿನ ದಿನಗಳಲ್ಲಿ ಯುವ ಜನರ ಮನಸ್ಥಿತಿಗೆ ತಕ್ಕಂತೆ ವಿಭಿನ್ನ ರೀತಿಯ ಮೂಲಕ ಮ್ಯೂಸಿಕ್ ಕೊಟ್ಟು ಸಂಗೀತ ಪ್ರಿಯರ  ಭಾವಭಿರುಚಿಗೆ ಸರಿ ಹೊಂದುವ ಎರಡು ಮ್ಯೂಸಿಕ್ ಸಾಂಗ್ ತಯಾರಾಗುತ್ತಿದ್ದು, ಜೂನ್ ತಿಂಗಳಿನಲ್ಲಿ ಬಿಡುಗಡೆಯಾಗಲಿದೆ.

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಳಗೆದ್ದು .. ನಾಚುತ್ತಲೇ ಮಲಗುವ ಕೋಣೆಯ ರಹಸ್ಯ ಬಹಿರಂಗಪಡಿಸಿದ ಪಿಗ್ಗಿ
ಫೋಟೋ ಹಂಚಿಕೊಂಡು 'ಡಾರ್ಲಿಂಗ್‌..' ಎಂದು ಬರೆದ ಸಾರಾ ತೆಂಡುಲ್ಕರ್‌