
ಮದುವೆಯ ಮೊದಲ ವರ್ಷ ಎಲ್ಲವೂ ಹೊಸದಾಗಿರುತ್ತದೆ. ಹುಟ್ಟು ಹಬ್ಬವಿರಬಹುದು ಇಲ್ಲ ಸಂಕ್ರಾಂತಿ, ದೀಪಾವಳಿ, ಗಣೇಶ ಚತುರ್ಥಿ. ಕರ್ವಾ ಚೌತ್ ಯಾವುದೇ ಇರಬಹುದು, ಎಲ್ಲ ಹಬ್ಬವನ್ನು ನವಜೋಡಿ ಸಡಗರದಿಂದ ಆಚರಿಸುತ್ತದೆ. ಹೋಳಿ ಹಬ್ಬ ಕೂಡ ನವದಂಪತಿಗೆ ವಿಶೇಷವಾಗಿರುತ್ತದೆ. ಬಣ್ಣ ಬಣ್ಣದ ನೀರಿನ್ನು ಮೈಗೆ ಎರಚಿಕೊಳ್ಳುವ ಮೂಲಕ ಹಬ್ಬವನ್ನು ಎಂಜಾಯ್ ಮಾಡ್ತಾರೆ. ಪರಸ್ಪರ ಹಬ್ಬದ ಸವಿಯನ್ನು ಸವಿಯುತ್ತಾರೆ. ಬಣ್ಣದ ಜೊತೆ ಪರಸ್ಪರ ಅರಿಯುವ ಪ್ರಯತ್ನ ನಡೆಸುತ್ತಾರೆ.
ಈ ಬಾರಿ ನಿಮಗೂ ಮದುವೆಯ ಮೊದಲ ಹೋಳಿ (Holi) ಯಾಗಿದ್ರೆ ಅದಕ್ಕೊಂದಿಷ್ಟು ವಿಶೇಷ ಪ್ಲಾನ್ ಮಾಡಿ. ಮದುವೆ ನಂತ್ರದ ಮೊದಲ ಹೋಳಿ ಯಾವಾಗ್ಲೂ ಅವಿಸ್ಮರಣೀಯವಾಗಿರಬೇಕು. ಅದ್ರ ಬಗ್ಗೆ ನಿಮಗೂ ಉತ್ಸಾಹವಿರಬಹುದು. ಆದ್ರೆ ಏನು ಮಾಡ್ಬೇಕು ಎಂಬುದು ತೋಚದೆ ಇರಬಹುದು. ಹೋಳಿ ರಂಗನ್ನು ಮತ್ತಷ್ಟು ರಂಗೇರಿಸಲು ಏನು ಮಾಡ್ಬೇಕು ಎನ್ನುವ ಬಗ್ಗೆ ನವಜೋಡಿಗೆ ನಾವೊಂದಿಷ್ಟು ಮಾಹಿತಿ ನೀಡ್ತೇವೆ.
Holi Festival : ಬಣ್ಣದಾಟದ ಜೊತೆ ಮಕ್ಕಳ ಬಾಳೂ ಹಸನಾಗಲಿ
ಸಂಗಾತಿಗೆ ಇಷ್ಟವಾಗುವ ಬ್ರೇಕ್ ಫಾಸ್ಟ್ (Break Fast) : ಹೋಳಿಯ ಬೆಳಿಗ್ಗೆ ವಿಶೇಷವಾಗಿದ್ರೆ ಮಾತ್ರ ದಿನಪೂರ್ತಿ ಸಂತೋಷ ತುಂಬಿರಲು ಸಾಧ್ಯ. ನೀವು ಹೋಳಿಯನ್ನು ಸಂಭ್ರಮಿಸಬೇಕೆಂದ್ರೆ ಸಂಗಾತಿಯನ್ನು ಮೊದಲು ಖುಷಿ (Happiness) ಗೊಳಿಸಿ. ಬೆಳಿಗ್ಗೆ ಅವರ ಇಷ್ಟದ ತಿಂಡಿಯನ್ನು ಬ್ರೇಕ್ ಫಾಸ್ಟ್ ಗೆ ಸಿದ್ಧಪಡಿಸಿ. ನಗುಮುಖದಿಂದ ಅವರನ್ನು ವೆಲ್ ಕಂ ಮಾಡುವ ಮೂಲಕ ಉಪಹಾರ ಬಿಡಿಸಿ. ಅದ್ರ ಜೊತೆ ಒಂದು ನೋಟ್ ಇರಲಿ. ಅದ್ರಲ್ಲಿ ನಿಮ್ಮ ಪ್ರೀತಿಯನ್ನು ತುಂಬಲು ಮರೆಯಬೇಡಿ.
ಹೋಳಿ ಪಾರ್ಟಿ ಆಯೋಜನೆ ಮಾಡಿ : ಇಬ್ಬರಿದ್ರೆ ಹೋಳಿ ಹೆಚ್ಚು ಖುಷಿ ನೀಡೋದಿಲ್ಲ. ಹೋಳಿ ಯಾವಾಗ್ಲೂ ಜನರಿಂದ ಕೂಡಿದ ಹಬ್ಬ. ನಿಮಗೆ ದೊಡ್ಡ ಪಾರ್ಟಿ ಆಯೋಜನೆ ಮಾಡಲು ಸಾಧ್ಯವಾಗದೆ ಹೋದ್ರೆ ಚಿಂತೆಯಿಲ್ಲ. ಸಣ್ಣದಾಗಿ ಪಾರ್ಟಿ ಮಾಡಿ. ನಿಮ್ಮ ಸಂಬಂಧಿಕರು, ಸ್ನೇಹಿತರ ಜೊತೆ ಸೇರಿ. ಸಂಗಾತಿಯ ಆಪ್ತರನ್ನು ನೀವು ಇನ್ವೈಟ್ ಮಾಡಬಹುದು. ಮನೆ ಮುಂದೆ ಅಥವಾ ಟೆರೆಸ್ ನಲ್ಲಿ ನೀವು ಹೋಳಿ ಆಚರಿಸಬಹುದು. ಬಣ್ಣದ ಜೊತೆ ಹೂವಿದ್ದರೆ ಹೋಳಿ ಸಂಭ್ರಮ ಇಮ್ಮಡಿಕೊಳ್ಳುತ್ತದೆ.
ಬನಾರಸ್ ನಲ್ಲಿ ಬಣ್ಣಗಳ ಬದಲು ಚಿತಾ ಭಸ್ಮದಿಂದ ಆಚರಿಸ್ತಾರಂತೆ ಹೋಳಿ ಹಬ್ಬ
ಹೋಳಿ ಸಂಭ್ರಮದಲ್ಲಿ ಡಾನ್ಸ್ ಇರಲಿ : ಇದು ನಿಮ್ಮಿಬ್ಬರಿಗೆ ಮೊದಲ ಹೋಳಿಯಾಗಿದ್ರೆ ಡಾನ್ಸ್ ಮಿಸ್ ಮಾಡೋಕೆ ಆಗುತ್ತಾ? ಸಾಂಪ್ರದಾಯಿಕ ಸಿಹಿ ತಿಂಡಿ, ಪಾನೀಯಗಳ ಜೊತೆ ಡಾನ್ಸ್ ಮಾಡಿ. ನೀವು ಪಾರ್ಟಿ ಆಯೋಜಿಸುವ ಸ್ಥಳದಲ್ಲಿ ತಿಂಡಿ ಹಾಗೂ ಪಾನಿಯಗಳನ್ನು ಇಟ್ಟುಕೊಳ್ಳಬಹುದು. ಕಾಕ್‌ಟೈಲ್ ಅಥವಾ ಮಾಕ್‌ಟೈಲ್‌ನೊಂದಿಗೆ ನೀವು ಡಾನ್ಸ್ ಖುಷಿ ಪಡೆಯಬಹುದು. ಇಡೀ ದಿನ ಹೋಳಿ ಆಚರಿಸುವ ಪ್ಲಾನ್ ಇದ್ರೆ ಆಹಾರ ಸ್ವಲ್ಪ ಜಾಸ್ತಿ ಬೇಕು. ಆರೋಗ್ಯ ಹಾಳು ಮಾಡುವ ಆಹಾರ ಸೇವನೆ ಮಾಡಿದರೆ ಮಧ್ಯದಲ್ಲಿಯೇ ನಿಮಗೆ ಸುಸ್ತಾಗಬಹುದು. ಹಾಗಾಗಿ ಆರೋಗ್ಯಕರ ಆಹಾರ ಜೊತೆಗಿರಲಿ. ನೀವು ಸ್ನೇಹಿತರ ಜೊತೆ ಫನ್ ಗೇಮ್ ಗಳನ್ನು ಕೂಡ ಆಡಬಹುದು.
ಮ್ಯಾಚಿಂಗ್ ಡ್ರೆಸ್ : ಈಗಿನ ದಿನಗಳಲ್ಲಿ ಇದು ಫ್ಯಾಷನ್ ಆಗಿದೆ. ತಂದೆ- ಮಗ, ತಾಯಿ – ಮಗಳು, ಪತಿ –ಪತ್ನಿ ಮ್ಯಾಚಿಂಗ್ ಬಟ್ಟೆ ಧರಿಸೋದು ಈಗ ಕಾಮನ್ ಆಗಿದೆ. ಹೋಳಿ ಸಂದರ್ಭದಲ್ಲಿ ನೀವು ಕೂಡ ಸ್ಪೇಷಲ್ ಡಿಸೈನ್ ಮಾಡಿಸಿಕೊಂಡು ಮ್ಯಾಚಿಂಗ್ ಟ್ರೆಸ್ ಧರಿಸಬಹುದು. ಇದು ನಿಮ್ಮಿಬ್ಬರನ್ನು ಎಲ್ಲರ ಮಧ್ಯೆ ಸ್ಪೇಷಲ್ ಆಗಿಸುವ ಜೊತೆಗೆ ವಿಶೇಷ ಖುಷಿಯನ್ನು ನೀಡುತ್ತದೆ.
ಗಿಫ್ಟ್ ಹಾಗೂ ಸರ್ಪ್ರೈಸ್ ಪ್ಲಾನ್ : ಹೋಳಿ ಸಮಯದಲ್ಲೂ ಗಿಫ್ಟ್ ನೀಡುವ ಪದ್ಧತಿಯಿದೆ. ನೀವು ಕೂಡ ಹೋಳಿ ಸಂದರ್ಭದಲ್ಲಿ ಸಂಗಾತಿಗೆ ಸ್ಪೇಷಲ್ ಗಿಫ್ಟ್ ನೀಡ್ಬಹುದು. ಅಲ್ಲದೆ ಅವರಿಗೆ ಗೊತ್ತಿಲ್ಲದೆ ಸರ್ಪ್ರೈಸ್ ಪ್ಲಾನ್ ಮಾಡಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.