ಶಾಪಿಂಗ್ ಮಾಡಲು ಹಣ ಕೊಡದ್ದಕ್ಕೆ ಸಿಟ್ಟು, ಪ್ರಿಯಕರನನ್ನು ಕರೆಸಿ ಗಂಡನಿಗೆ ಹೊಡೆಸಿದ ಹೆಂಡ್ತಿ!

By Vinutha Perla  |  First Published Mar 4, 2023, 9:30 AM IST

ಶಾಪಿಂಗ್ ಅಂದ್ರೆ ಹೆಣ್ಮಕ್ಕಳಿಗೆ ಅದೆಷ್ಟು ಕ್ರೇಜ್ ಅಂತ ಎಲ್ಲರಿಗೂ ಗೊತ್ತಿರೋ ವಿಷ್ಯ. ಶಾಪಿಂಗ್‌ ಮಾಡಿಲ್ಲಾಂದ್ರೆ ಅದೇನೋ ಅಸಹನೆ, ಬೇಜಾರು ಕಾಡುತ್ತೆ. ಗಂಡ ಶಾಪಿಂಗ್‌ಗೆ ದುಡ್ಡು ಕೊಟ್ಟಿಲ್ಲಾಂದ್ರೆ ಹೆಂಡತಿಯರಿಗೆ ಬೇಜಾರು ಕೂಡಾ ಆಗುತ್ತೆ. ಆದ್ರೆ ಇಲ್ಲೊಬ್ಬ ಹೆಂಡ್ತಿ ಗಂಡ ಶಾಪಿಂಗ್‌ಗೆ ದುಡ್ಡು ಕೇಳಿದಾಗ ಕೊಟ್ಟಿಲ್ಲಾಂತ ಅದೆಂಥಾ ಅವಾಂತರ ಮಾಡ್ಕೊಂಡಿದ್ದಾಳೆ ನೋಡಿ.


ಮಧ್ಯಪ್ರದೇಶ: ದಾಂಪತ್ಯ ಅಂದ್ರೇನೆ ಹಾಗೇನೆ. ಅಲ್ಲಿ ಎಲ್ಲವೂ ಸರಿಯಿರುವುದಿಲ್ಲ. ಎಲ್ಲವನ್ನೂ ಸರಿಮಾಡಿಕೊಳ್ಳುತ್ತಾ ಹೋಗಬೇಕಷ್ಟೇ, ವೈವಾಹಿಕ ಸಂಬಂಧದಲ್ಲಿ ಸಣ್ಣಪುಟ್ಟ ವಿಚಾರಕ್ಕೆ ಜಗಳವಾಗೋದು ಸಾಮಾನ್ಯ. ಕೆಲವು ಗಂಟೆಗಳ ಈ ಸಿಟ್ಟು ಒಂದೆರಡು ದಿನದಲ್ಲಿ ದೂರವಾಗಿಬಿಡುತ್ತದೆ. ಮನೆಯ ಜವಾಬ್ದಾರಿ, ಕೆಲಸ, ಮಕ್ಕಳ ಕೇರ್ ಹೀಗೆ ಹಲವು ವಿಚಾರಕ್ಕೆ ಸಂಬಂಧಿಸಿದಂತೆ ಮಕ್ಕಳ ನಡುವೆ ಜಗಳ ನಡೆಯುತ್ತದೆ. ಆದ್ರೆ ಇಲ್ಲೊಂದೆಡೆ ಶಾಪಿಂಗ್‌ ವಿಚಾರಕ್ಕೆ ಗಂಡ-ಹೆಂಡ್ತಿ ಮಧ್ಯೆ ಜಗಳವಾಗಿದ್ದು, ವಿಚಾರ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.

ಶಾಪಿಂಗ್ ಅಂದ್ರೆ ಹೆಣ್ಮಕ್ಕಳಿಗೆ ಅದೆಷ್ಟು ಕ್ರೇಜ್ ಅಂತ ಎಲ್ಲರಿಗೂ ಗೊತ್ತಿರೋ ವಿಷ್ಯ. ಶಾಪಿಂಗ್‌ ಮಾಡಿಲ್ಲಾಂದ್ರೆ ಅದೇನೋ ಅಸಹನೆ, ಬೇಜಾರು ಕಾಡುತ್ತೆ. ಗಂಡ (Husband) ಶಾಪಿಂಗ್‌ಗೆ ದುಡ್ಡು ಕೊಟ್ಟಿಲ್ಲಾಂದ್ರೆ ಹೆಂಡತಿಯರಿಗೆ (Wife) ಬೇಜಾರು ಕೂಡಾ ಆಗುತ್ತೆ. ಆದ್ರೆ ಇಲ್ಲೊಬ್ಬ ಹೆಂಡ್ತಿ ಗಂಡ ಶಾಪಿಂಗ್‌ಗೆ ದುಡ್ಡು ಕೇಳಿದಾಗ ಕೊಟ್ಟಿಲ್ಲಾಂತ ಅದೆಂಥಾ ಅವಾಂತರ ಮಾಡ್ಕೊಂಡಿದ್ದಾಳೆ ನೋಡಿ. ಹೌದು, ಪತಿ ಶಾಪಿಂಗ್​ಗೆ ಹಣ ಕೊಟ್ಟಿಲ್ಲ ಅಂತ ಪತ್ನಿಯೊಬ್ಬಳು ತನ್ನ ಪ್ರಿಯಕರನನ್ನು (Lover) ಕರೆಸಿ ಗಂಡನಿಗೇ ಹೊಡೆಸಿದ ಪ್ರಕರಣ ಜಬಲ್‌ಪುರದಲ್ಲಿ ನಡೆದಿದೆ. ಹೌದು, ಅಚ್ಚರಿ ಅನಿಸಿದರೂ ಇದು ನಿಜ.

Tap to resize

Latest Videos

ವೃದ್ಧಾಶ್ರಮದಲ್ಲಿ ಅರಳಿದ ಪ್ರೀತಿ: 70ರ ಹರೆಯದ 'ಚಿರ ಯುವತಿ' ಮದುವೆಯಾದ 75 ವರ್ಷದ 'ಚಿರ ಯುವಕ'

ಗಂಡ ಶಾಪಿಂಗ್​ಗೆ ಹಣ ಕೊಟ್ಟಿಲ್ಲ ಅಂತ ಲವರ್​ನ ಕರೆಸಿ ಹೊಡೆಸಿದ ಹೆಂಡತಿ
ಇಲ್ಲಿನ ವಿಜಯನಗರ ಪ್ರದೇಶದಲ್ಲಿ ವಾಸಿಸುತ್ತಿರುವ ದಂಪತಿಯ (Couple) ಮಧ್ಯ ಜಗಳ ನಡೆದಿದ್ದು, ಗಾಯಗೊಂಡಿರುವ ಪತಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಶುಭಂ ಗಿರನಿಯನ್ ಗಾಯಗೊಂಡಿರುವ ಪತಿ. ಈತನ ಪತ್ನಿ ಕಾಜಲ್ ಹಾಗೂ ಈಕೆಯ ಪ್ರಿಯಕರ ರಿಂಕು ಝರಿಯಾ ಆರೋಪಿಗಳು. ಘಟನೆ ಬಳಿಕ ಗಾಯಾಳು ಪೊಲೀಸರಿಗೆ ದೂರು (Complaint) ನೀಡಿದ್ದು, ಪೊಲೀಸರು ಈ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ.

ಪೊಲೀಸರಿಗೆ ದೂರು ನೀಡಿರುವ ಶುಭಂ, ರಿಂಕು ಎಂಬಾತನ ಜತೆ ನನ್ನ ಪತ್ನಿ ಅಕ್ರಮವಾಗಿ ವಾಸಿಸುತ್ತಿದ್ದಾಳೆ. ನಾನು ಇಂದು ಕೆಲಸದಿಂದ ಮನೆಗೆ ಬರುವಾಗ ನನ್ನನ್ನು ಅಡ್ಡಗಟ್ಟಿದ್ದ ಪತ್ನಿ, ಶಾಪಿಂಗ್​ಗಾಗಿ 5 ಸಾವಿರ ರೂ. ಕೇಳಿದಳು. ಹಣ ಕೊಡಲು ನಾನು ನಿರಾಕರಿಸಿದಾಗ ಆಕೆ ರಿಂಕುವನ್ನು ಕರೆಸಿಕೊಂಡು ನನಗೆ ಹೊಡೆಸಿದ್ದಾಳೆ. ಆತ ತನ್ನ ಗೆಳೆಯರೊಂದಿಗೆ ಬಂದಿದ್ದು, ಬೇಸ್​ಬಾಲ್ ಬ್ಯಾಟ್​ ಮತ್ತು ಸ್ಟಿಕ್​ಗಳಿಂದ ಹಲ್ಲೆ ನಡೆಸಿದ್ದಾನೆ. ಪತ್ನಿಯೂ ನನಗೆ ಹೊಡೆದಿದ್ದಾಳೆ ಎಂದು ತಿಳಿಸಿದ್ದಾನೆ.

ಅಕ್ರಮ ಸಂಬಂಧವಿಲ್ಲ ಸಾಬೀತುಪಡಿಸಲು ಕಾದ ಕಬ್ಬಿಣ ಹಿಡಿಯುವ ಅಗ್ನಿಪರೀಕ್ಷೆ!

ಮೊದಲ ರಾತ್ರಿಯ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ವರ
 ಸೋಷಿಯಲ್ ಮೀಡಿಯಾಗಳ ಹಾವಳಿಯಿಂದ ಇತ್ತೀಚಿಗೆ ಎಲ್ಲರ ಜೀವನವೂ (Life) ಮುಕ್ತ ಮುಕ್ತ ಎಂಬಂತಾಗಿಬಿಟ್ಟಿದೆ. ಜೀವನದಲ್ಲಿ ನಡೆಯುವ ಎಲ್ಲಾ ಘಟನಾವಳಿಗಳು ಯಾವುದೇ ಮುಚ್ಚುಮರೆಯಿಲ್ಲದೆ ಸುಲಭವಾಗಿ ಇನ್ನೊಬ್ಬರಿಗೆ ತಿಳಿದುಬಿಡುತ್ತದೆ. ಸಾಮಾಜಿಕ ಜಾಲತಾಣ ಜಮಾನದಲ್ಲಿ ಇಂತಹ ಪ್ರಕರಣಗಳು ಸಾಮಾನ್ಯವಾಗಿಬಿಟ್ಟಿವೆ. ಇನ್ನೊಬ್ಬರಿಂದ ಖಾಸಗೀತನಕ್ಕೆ ಧಕ್ಕೆಯಾಗುವುದು ಬೇರೆ ವಿಚಾರ. ಆದ್ರೆ ತಮ್ಮ ಖಾಸಗಿತನಕ್ಕೆ ತಾವೇ ಧಕ್ಕೆ ತಂದುಕೊಳ್ಳುವುದೆಂದರೆ ? ಇಲ್ಲೊಬ್ಬ ವರ ಹಾಗೆಯೇ ಮಾಡಿದ್ದಾನೆ.

ಮದುವೆಯೆಂಬ ಅದ್ಬುತ ಕ್ಷಣವನ್ನು ನೆನಪಿಡಲು ವಿವಾಹ ಸಮಾರಂಭದ ವಿಡಿಯೋ ಹಾಗೂ ಫೋಟೋಗಳನ್ನು ತೆಗೆಯುವುದು ಮೊದಲಿನಿಂದಲೂ ರೂಢಿಯಲ್ಲಿದೆ. ಈ ವಿಡಿಯೋ ಹಾಗೂ ಫೋಟೋಗಳನ್ನು ಈಗಿನ ಕಾಲಮಾನಕ್ಕೆ ತಕ್ಕಂತೆ ರೆಕಾರ್ಡ್ ಮಾಡಿಸಿ, ಎಡಿಟ್ ಮಾಡಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವುದು ಸಾಮಾನ್ಯವಾಗಿದೆ. ವಿಚಿತ್ರ ಅಂದರೆ ಇಲ್ಲೊಬ್ಬ ವರನು ಮೊದಲ ರಾತ್ರಿಯ ವಿಡಿಯೊವನ್ನು ರೆಕಾರ್ಡ್ ಮಾಡಿದ್ದಾನೆ. ಆಂಧ್ರಪ್ರದೇಶದ ಡಾ.ಬಿ.ಆರ್.ಅಂಬೇಡ್ಕರ್ ಕೋಣಸೀಮೆ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಮದುವೆಯ ನಂತರ ಮೊದಲ ರಾತ್ರಿಗೆ ಸಜ್ಜಾಗಿದ್ದ ವರನೊಬ್ಬ ತನ್ನ ಪತ್ನಿಯ ಜೊತೆ ಇರುವಾಗ ಅಶ್ಲೀಲ ವಿಡಿಯೋಗಳನ್ನು ರೆಕಾರ್ಡ್ ಮಾಡಿದ್ದಾನೆ. ಮಾತ್ರವಲ್ಲ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾನೆ.

click me!