ಇಂದಿನಿಂದ ಶುರುವಾಗಿದೆ Valentines Week : ಹೂ ಕೊಡುವುದರಿಂದ ಹಿಡಿದು ಹೂ ಮುತ್ತಿನ ತನಕ..

By Suvarna News  |  First Published Feb 7, 2022, 2:57 PM IST

ಪ್ರೀತಿ ಹಂಚಿಕೊಳ್ಳಲು ದಿನ, ವಾರ, ತಿಥಿ ಬೇಕಾಗಿಲ್ಲ ನಿಜ. ಆದ್ರೆ ಸಮಯದ ಜೊತೆ ಓಡ್ತಿರುವ ಜನರಿಗೆ ಅಲ್ಪಸ್ವಲ್ಪ ಪ್ರೀತಿ ಹಂಚಲು ಟೈಂ ಸಿಗ್ತಿಲ್ಲ. ಅಂತವರು ಪುರುಸೊತ್ತು ಮಾಡ್ಕೊಂಡು ಈ ವಾರವನ್ನು ಎಂಜಾಯ್ ಮಾಡಿ. 
 


ಫೆಬ್ರವರಿ(February )ತಿಂಗಳು ಪ್ರೇಮಿ(Lover)ಗಳಿಗೆ ಬಹಳ ವಿಶೇಷವಾಗಿರುತ್ತದೆ. ಫೆಬ್ರವರಿಯನ್ನು ಪ್ರೀತಿಯ ತಿಂಗಳು ಎಂದು ಕರೆಯಲಾಗುತ್ತದೆ. ಫೆಬ್ರವರಿಯಲ್ಲಿ ಒಂದೊಂದು ದಿನವನ್ನು ಒಂದೊಂದು ಹೆಸರಿನಲ್ಲಿ ಆಚರಿಸಲಾಗುತ್ತದೆ.  ಈ ತಿಂಗಳು ಪ್ರೇಮ ಪರೀಕ್ಷೆಗೆ ಅನೇಕರು ಮುಂದಾಗ್ತಾರೆ. ಕೆಲವರು ತೇರ್ಗಡೆ ಹೊಂದಿದ್ರೆ ಮತ್ತೆ ಕೆಲವರು ಫೇಲಾಗ್ತಾರೆ. ಇನ್ನು ಈಗಾಗಲೇ ಪ್ರೇಮ ಪರೀಕ್ಷೆ ಗೆದ್ದಿರುವವರು ಆ ಹಳೆಯ ದಿನವನ್ನು ಮೆಲುಕು ಹಾಕ್ತಾ, ಹಬ್ಬದಂತೆ ಈ ತಿಂಗಳನ್ನು ಸಂಭ್ರಮಿಸುತ್ತಾರೆ. ಫೆಬ್ರವರಿ 14ರಂದು ಪ್ರೇಮಿಗಳ ದಿನ ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ ಅದಕ್ಕೂ ಮೊದಲು ಅನೇಕ ವಿಶೇಷ ದಿನಗಳ ಆಚರಣೆ ನಡೆಯುತ್ತದೆ. 

ರೋಸ್ ಡೇ (Rose Day): ಪ್ರೇಮಿಗಳ ವಾರ ಫೆಬ್ರವರಿ 7 ರಿಂದ ಪ್ರಾರಂಭವಾಗುತ್ತದೆ. ಮೊದಲ ದಿನ ರೋಸ್ ಡೇ. ಫೆಬ್ರವರಿ 7ರಂದು ರೋಸ್ ಡೇ ಆಚರಿಸಲಾಗುತ್ತದೆ. ಪ್ರೀತಿ ಪಾತ್ರರಿಗೆ ಗುಲಾಬಿ ಹೂ ನೀಡಿ ಪ್ರೀತಿಯನ್ನು ವ್ಯಕ್ತಪಡಿಸಲಾಗುತ್ತದೆ. ಗುಲಾಬಿಗಳ ಬಣ್ಣಗಳು ನಿಮ್ಮ ಭಾವನೆಗಳನ್ನು ಪ್ರತಿಬಿಂಬಿಸುತ್ತವೆ. ಬೇರೆ ಬೇರೆ ಬಣ್ಣದ ಗುಲಾಬಿಗೆ ಬೇರೆ ಬೇರೆ ಅರ್ಥವಿದೆ.   

Tap to resize

Latest Videos

undefined

ಪ್ರಪೋಸ್ ಡೇ (Propose Day):  ಪ್ರೇಮಿಗಳ ವಾರದ ಎರಡನೇ ದಿನ ಪ್ರಪೋಸ್ ಡೇ. ಫೆಬ್ರವರಿ 8ರಂದು ಆಚರಿಸಲಾಗುತ್ತದೆ. ಈ ದಿನ, ಪ್ರೇಮಿಗಳು  ಪ್ರೇಮ ನಿವೇದನ ಮಾಡಿಕೊಳ್ತಾರೆ.  ಈಗಾಗಲೇ ಪ್ರೀತಿಯಲ್ಲಿ ಬಿದ್ದವರು ಕೂಡ ತಾವೆಷ್ಟು ಪ್ರೀತಿಸುತ್ತಿದ್ದೇವೆಂಬುದನ್ನು ಹೇಳಲು ಇದು ಒಳ್ಳೆಯ ಸಮಯ.

ಚಾಕೊಲೇಟ್ ದಿನ  (Chocolate Day): ಮೂರನೇ ದಿನ ಚಾಕೊಲೇಟ್ ದಿನ. ಫೆಬ್ರವರಿ 9. ಪ್ರೀತಿಯಿದ್ದಲ್ಲಿ ಚಾಕೊಲೇಟ್ ಇರಲೇಬೇಕು. ಪರಸ್ಪರ ಪ್ರೇಮಿಗಳು ಚಾಕೊಲೇಟ್ ವಿನಿಮಯ ಮಾಡಿಕೊಂಡು ತಮ್ಮ ಪ್ರೇಮಕ್ಕೆ ಸಿಹಿ ತುಂಬುತ್ತಾರೆ.  

ಟೆಡ್ಡಿ ಡೇ (Teddy Day): ಹೃದಯವು ಟೆಡ್ಡಿಯಂತೆ ಸೂಕ್ಷ್ಮವಾಗಿರುತ್ತದೆ. ಪ್ರತಿಯೊಬ್ಬರ ಮನಸ್ಸಿನಲ್ಲೂ ಮಗುವೊಂದು ಅಡಗಿರುತ್ತದೆ. ಆದ್ದರಿಂದ, ಪ್ರೇಮಿಗಳ ವಾರದ ಒಂದು ದಿನವನ್ನು ಟೆಡ್ಡಿ ಡೇ ಎಂದು ಆಚರಿಸಲಾಗುತ್ತದೆ. ಈ ದಿನ, ದಂಪತಿ ಪರಸ್ಪರ ಟೆಡ್ಡಿಯನ್ನು ಉಡುಗೊರೆಯಾಗಿ ನೀಡುತ್ತಾರೆ.  

ಪ್ರಾಮಿಸ್ ಡೇ(Promise Day) :  ಫೆಬ್ರವರಿ 11ನ್ನು ಪ್ರಾಮಿಸ್ ಡೇಯಾಗಿ ಆಚರಣೆ ಮಾಡಲಾಗುತ್ತದೆ. ಪ್ರೀತಿಯಲ್ಲಿ ಭರವಸೆ ಬಹಳ ಮುಖ್ಯ. ಪರಸ್ಪರ ಕೆಲವು ಭರವಸೆಗಳನ್ನು ನೀಡುವ ಅಗತ್ಯವಿರುತ್ತದೆ. ಪ್ರೇಮಿಗಳ ವಾರದ ಐದನೇ ದಿನದಂದು ಅಂದರೆ ಫೆಬ್ರವರಿ 11 ರಂದು, ದಂಪತಿ ವಿಶೇಷವಾಗಿ ಪ್ರಾಮಿಸ್ ಡೇ ಆಚರಿಸುತ್ತಾರೆ. ಸಂಗಾತಿಗೆ ನಿನ್ನ ಜೊತೆ ಸದಾ ನಾನಿರುತ್ತೇನೆಂದು ಭರವಸೆ ನೀಡಲಾಗುತ್ತದೆ.   

Valentines Day: ಸ್ಪೆಷಲ್ ಆಗಿ ರೆಡಿಯಾಗೋದು ಹೇಗೆ ?

ಹಗ್ ಡೇ (Hug Day):  ಪ್ರೇಮಿಗಳ ವಾರದ ಆರನೇ ದಿನದಂದು ಅಪ್ಪುಗೆಯ ದಿನವನ್ನು ಆಚರಿಸಲಾಗುತ್ತದೆ. ಈ ದಿನದಂದು ಪ್ರೇಮಿಗಳು ಪರಸ್ಪರ ಅಪ್ಪಿಕೊಳ್ಳುವ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ಅಪ್ಪುಗೆಯಲ್ಲಿ ಸಾಕಷ್ಟು ಶಕ್ತಿಯಿದೆ. ಒಂದು ಅಪ್ಪಿಗೆ ದೊಡ್ಡ ನೋವನ್ನು ಮರೆಸಬಲ್ಲದು. ಫೆಬ್ರವರಿ 12ರಂದು ಹಗ್ ಡೇಯಾಗಿ ಆಚರಣೆ ಮಾಡಲಾಗುತ್ತದೆ. 

ಕಿಸ್ ಡೇ (Kiss Day):  ಪ್ರೀತಿಯನ್ನು ವ್ಯಕ್ತಪಡಿಸುವಾಗ ಮತ್ತು ಪ್ರೀತಿಯನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಾಗದಿದ್ದಾಗ ಪ್ರೀತಿಯ ಮುತ್ತಿನ ಮೂಲಕ ಬಹಳಷ್ಟು ಹೇಳಬಹುದು. ಅದಕ್ಕಾಗಿಯೇ ಫೆಬ್ರವರಿ 13 ರಂದು ಕಿಸ್ ದಿನವನ್ನು ಆಚರಿಸಲಾಗುತ್ತದೆ. ಮುತ್ತು ಕೇವಲ ಪ್ರೀತಿಯ ಸಂಕೇತ ಮಾತ್ರವಲ್ಲ. ಅದಕ್ಕೆ ನೋವು ಮರೆಸುವ ಶಕ್ತಿಯಿದೆ. 

Valentine's day: ಪ್ರೇಮಿ ಇಲ್ಲವೇ? ಗೆಳೆಯರ ಜೊತೆಗೇ ಆಚರಿಸಿ!

ಪ್ರೇಮಿಗಳ ದಿನ (Valentines Day)  : ವ್ಯಾಲೆಂಟೈನ್ಸ್ ಡೇ ವಾರದ ಕೊನೆಯ ದಿನವಾಗಿದೆ. ಈ ಎಂಟು ದಿನಗಳ ಪ್ರೇಮ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಪ್ರೇಮಿಗಳಿಗೆ ಫೆಬ್ರವರಿ 14 ಫಲಿತಾಂಶದ ದಿನವಾಗಿದೆ. ಅನೇಕರು ಇದೇ ದಿನ ಪ್ರೇಮ ನಿವೇದನೆ ಮಾಡಿ ತಮ್ಮ ಅದೃಷ್ಟ ಪರೀಕ್ಷೆ ಮಾಡ್ತಾರೆ. ಪ್ರೀತಿ ಸಿಕ್ಕರೆ ಸಂಭ್ರಮಿಸುತ್ತಾರೆ. 

click me!