ಕೋಳಿಯೊಂದು ತಾಯಿ ಪ್ರೀತಿ ತೋರಿಸುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ತಾಯಿ ಪ್ರೀತಿಗೆ ಮಿತಿ ಇರುವುದಿಲ್ಲ. ಆದಾಗ್ಯೂ ತನ್ನ ಮಕ್ಕಳಂತೆ ಬೇರೆಯವರ ಮಕ್ಕಳನ್ನು ಅಷ್ಟೇ ಚೆನ್ನಾಗಿ ನೋಡಿಕೊಳ್ಳುವವರು ಸಿಗುವುದು ವಿರಳ. ಆದರೆ ಇಲ್ಲೊಂದು ಕೋಳಿ ಬಿರುಗಾಳಿಯಿಂದ ಕಂಗೆಟ್ಟ ಎರಡು ಬೆಕ್ಕಿನ ಮರಿಗಳಿಗೆ ತನ್ನ ರೆಕ್ಕೆ ಪುಕ್ಕಗಳ ಅಡಿ ಆಶ್ರಯ ನೀಡುತ್ತಿದೆ. ಪ್ರಾಣಿ ಪಕ್ಷಿಗಳು ಪರಸ್ಪರ ಪ್ರೀತಿ ತೋರುವ ಹಲವು ವಿಡಿಯೋಗಳನ್ನು ನಾವು ಈಗಾಗಲೇ ನೋಡಿದ್ದೇವೆ. ಹಾಗೆಯೇ ಈಗ ವೈರಲ್ ಆಗಿರುವ ಫೋಟೋವೊಂದರಲ್ಲಿ ಬಿರುಗಾಳಿಯಿಂದ ಬೆಚ್ಚಿದ ಬೆಕ್ಕು ಮರಿಗಳಿಗೆ ಬೆಳೆದ ಹೇಂಟೆ ಕೋಳಿಯೊಂದು ತನ್ನ ಮರಿಗಳಿಗೆ ಹೇಗೆ ಆಶ್ರಯ ನೀಡುವುದೋ ಹಾಗೆ ಆಶ್ರಯ ನೀಡಿದೆ.
ನೀವು ಹಳ್ಳಿಗಳಲ್ಲಿ ಕೋಳಿಗಳನ್ನು ಸಾಕುತ್ತಿದ್ದರೆ ಕೋಳಿಗಳು ತಾಯಿ ಕೋಳಿ ತನ್ನ ಮರಿಗಳನ್ನು ಅಪಾಯದಿಂದ ಕಾಪಾಡುವುದನ್ನು ನೋಡಿರಬಹುದು. ಸಾಮಾನ್ಯವಾಗಿ ಪುಟ್ಟ ಕೋಳಿ ಮರಿಗಳನ್ನು ಹದ್ದುಗಳು ಕಾಗೆಗಳು ಅದರ ತಾಯಿಯ ಕಣ್ಣು ತಪ್ಪಿಸಿ ಹೊತ್ತೊಯ್ಯಲು ನೋಡುತ್ತವೆ. ಈ ವೇಳೆ ಅಪಾಯದ ಅರಿವನ್ನು ಮೊದಲೇ ಗ್ರಹಿಸುವ ತಾಯಿ ಕೋಳಿ ಧ್ವನಿಯ ಮೂಲಕವೇ ತನ್ನೆಲ್ಲಾ ಮರಿಗಳನ್ನು ಒಟ್ಟು ಸೇರಿಸುತ್ತದೆ. ಅಷ್ಟೇ ಅಲ್ಲದೇ ಅವುಗಳನ್ನು ತನ್ನ ರೆಕ್ಕೆಗಳಡಿ ಬಚ್ಚಿಡಲು ಪ್ರಯತ್ನಿಸುತ್ತದೆ. ಅದೇ ರೀತಿ ಇಲ್ಲಿ ತಾಯಿ ಕೋಳಿಯೊಂದು ಬೆಕ್ಕಿನ ಮರಿಗಳಿಗೆ ಆಶ್ರಯ ನೀಡಿದೆ.
A hen taking care of frightened kittens during a storm.. 😊 pic.twitter.com/f6osykKBnk
— Buitengebieden (@buitengebieden)When in trouble, having mother over is vital. As You see, being mother of the same kind is not necessary. Having kind mother is enough... https://t.co/Ns8DgYJKFJ
— MINIMICROECONOMICS (@AccuracyDollars)
ಈ ಫೋಟೋಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಪ್ರಾಣಿಗಳಿಂದ ಮನುಷ್ಯರು ಕಲಿಯಬೇಕಾಗಿದ್ದು, ತುಂಬಾ ಇದೆ ಎಂದು ಕಾಮೆಂಟ್ ಮಾಡಿದ್ದಾರೆ. ಈ ಹಿಂದೆಯೂ ಪ್ರಾಣಿಗಳು ಜಾತಿ ಭೇದಗಳನ್ನು ಮರೆತು ಪರಸ್ಪರ ಪ್ರೀತಿ ತೋರುವ ವಿಡಿಯೋವೊಂದು ವೈರಲ್ ಆಗಿತ್ತು. ಶ್ವಾನವೊಂದು ತನ್ನದು ಮತ್ತೊಬ್ಬರದು ಎಂಬ ಬೇಧವಿಲ್ಲದೇ ತನ್ನ ಮರಿಗಳ ಜೊತೆಯಲ್ಲೇ ಒಂದು ಬೆಕ್ಕಿನ ಮರಿಗೂ ಹಾಲುಡಿಸುತ್ತಿರುವ ವಿಡಿಯೋ ಕೆಲ ದಿನಗಳ ಹಿಂದೆ ವೈರಲ್ ಆಗಿತ್ತು. ಇದು ತಾನು ತನ್ನದು ಎಂದು ಕಿತ್ತಾಡುವ ಮನುಷ್ಯರಿಗೆ ನಮ್ಮನ್ನು ನೋಡಿ ಬುದ್ಧಿ ಕಲಿಯಿರಿ ಎಂದು ಹೇಳುವಂತಿತ್ತು. ಸಾಮಾಜಿಕ ಜಾಲತಾಣವಾದ ರೆಡ್ಡಿಟ್‌ನಲ್ಲಿ ಈ ವಿಡಿಯೋ ಪೋಸ್ಟ್ ಆಗಿದ್ದು, ಸಾವಿರಾರು ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ.
ನಾಯಿಯೊಂದಿಗೆ ಬೆಕ್ಕಿನ ಚೆಲ್ಲಾಟ... ನಿದ್ರಿಸಲು ಬಿಡದೇ ಕಾಟ.. ಮುದ್ದಾದ ವಿಡಿಯೋ ವೈರಲ್
ಒಳ್ಳೆ ತಾಯಿ, ತನ್ನ ಮರಿಗಳೊಂದಿಗೆ ಹಸಿದ ಬೆಕ್ಕಿನ ಮರಿಗೂ ಆಹಾರ ನೀಡುತ್ತಿದೆ ಎಂದು ಬರೆದು ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. ಈ ವಿಡಿಯೋದಲ್ಲಿ ನಾಯಿಯೊಂದು ಮನೆ ಮುಂದಿನ ಖಾಲಿ ಜಾಗದಲ್ಲಿ ಮಲಗಿಕೊಂಡಿದ್ದು, ಅದರ ಎರಡು ಮರಿಗಳು ತಾಯಿಯ ಹಾಲನ್ನು ಕುಡಿಯುತ್ತಿರುತ್ತವೆ. ಕೆಲವೇ ಕ್ಷಣಗಳಲ್ಲಿ,ಬೆಕ್ಕೊಂದು ಅಲ್ಲಿಗೆ ಬಂದು ನಾಯಿಯನ್ನೊಮ್ಮೆ ದಿಟ್ಟಿಸಿ ನೋಡಿ ನಾಯಿ ಮರಿಗಳೊಂದಿಗೆ ಸೇರಿಕೊಂಡು ಅದೂ ಕೂಡ ತಾಯಿಯ ಹಾಲನ್ನು ಕುಡಿಯಲು ಶುರು ಮಾಡುತ್ತದೆ.
ಸಿಂಕ್‌ನ್ನೇ ಬಾತ್‌ಟಬ್ ಆಗಿಸಿಕೊಂಡ ಸ್ಮಾರ್ಟ್ ಬೆಕ್ಕು: ನಲ್ಲಿ ತಿರುಗಿಸಿ ಸ್ನಾನ... ವಿಡಿಯೋ
ಈ ವಿಡಿಯೋವನ್ನು ಲಕ್ಷಾಂತರ ಜನ ವೀಕ್ಷಿಸಿದ್ದಾರೆ. ನೂರಾರು ಜನ ಕಾಮೆಂಟ್ ಮಾಡಿದ್ದಾರೆ. ಬೆಕ್ಕಿನ ಮರಿ ನಾಯಿಯನ್ನು ಒಂದು ಕ್ಷಣ ಹೇಗೆ ನೋಡುತ್ತದೆಂದರೆ, ನಾನು ಹಾಲು ಕುಡಿಯುವೆ ನೀನು ಏನು ಅಂದುಕೊಳ್ಳಬೇಡ ಎಂದು ಹೇಳುವಂತಿದೆ ಎಂದು ಒಬ್ಬರು ನೋಡುಗರು ಕಾಮೆಂಟ್ ಮಾಡಿದ್ದಾರೆ.