ಇವತ್ತಿನ ದಿನದಲ್ಲಂತೂ ಎಲ್ಲರಿಗೂ ಬಾಯ್‌ಫ್ರೆಂಡ್ (Boyfriend), ಗರ್ಲ್‌ಫ್ರೆಂಡ್ (Girlfriend) ಇದ್ದೇ ಇರ್ತಾರೆ. ಕೆಲವೊಬ್ಬರು ಮಧ್ಯದಲ್ಲೇ ಬ್ರೇಕಪ್ (Breakuo) ಮಾಡ್ಕೊಂಡ್ರೆ, ಇನ್ನು ಕೆಲವರು ಹಿರಿಯರ ಸಮ್ಮುಖದಲ್ಲಿ ಮದ್ವೆ (Wedding) ಆಗ್ತಾರೆ. ನಿಮ್ಗೂ ಬಾಯ್‌ಫ್ರೆಂಡ್, ಗರ್ಲ್‌ಫ್ರೆಂಡ್ ಇದ್ದು ಮದ್ವೆ ಯೋಚ್ನೆ ಮಾಡ್ತಿದ್ರೆ, ಸರಿಯಾದ ಸಂಗಾತಿ (Partner)ಯನ್ನು ಆಯ್ಕೆ ಮಾಡಿದ್ದೀರಾ ಅಂತ ಮೊದ್ಲು ತಿಳ್ಕೊಂಡು ಬಿಡಿ.
ದಾಂಪತ್ಯ (Married life) ಅನ್ನೋದು ಎರಡು ಹೃದಯಗಳ ಮಧುರ ಭಾಂದವ್ಯ. ದಂಪತಿಗಳ ಸಂಬಂಧವು (Relationship) ಪ್ರೀತಿ ಮತ್ತು ಅನ್ಯೋನ್ಯತೆಯ ಮೇಲೆ ಅವಲಂಬಿತವಾಗಿದೆ, ಇದು ನಿಮಗೂ ಗೊತ್ತಿರುತ್ತೆ. ಕೆಲವೊಮ್ಮೆ ಇಬ್ಬರ ನಡುವೆ ಪ್ರೀತಿ ಇರುತ್ತೆ ಆದರೆ ಹಾಸಿಗೆಯ ಮೇಲೆ ನಿಮ್ಮ ಸಂಗಾತಿಯನ್ನು ಸೆಳೆಯಲು ನಿಮಗೆ ಸಾಧ್ಯವಾಗದಿದ್ದರೆ, ಅದು ಮುರಿದುಬೀಳುವ ಹಂತವನ್ನು ಸಹ ತಲುಪಬಹುದು ಅಲ್ವಾ? ಹೀಗಾಗಿ ಗರ್ಲ್‌ಫ್ರೆಂಡ್, ಬಾಯ್‌ಫ್ರೆಂಡ್ ಸಂಬಂಧವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವ ಮೊದಲು ಕೆಲವೊಂದು ವಿಚಾರಗಳನ್ನು ತಿಳಿದುಕೊಳ್ಳಬೇಕಾದುದು ತುಂಬಾ ಮುಖ್ಯ.
ಮದುವೆಯಾಗಿ ಸಂಬಂಧದಲ್ಲಿ ಅವಾಂತರಗಳಾಗುವ ಬದಲು ಮದುವೆಯ ಮೊದಲೇ ನೀವು ಸರಿಯಾದ ಸಂಗಾತಿ (Partner)ಯನ್ನು ಆಯ್ಕೆ ಮಾಡ್ಕೊಂಡಿದ್ದೀರಾ ಎಂಬುದನ್ನು ತಿಳಿದುಕೊಳ್ಳಿ.
ನಿಮ್ಮ ಜೀವನವನ್ನು ಯಾರೊಂದಿಗಾದರೂ ಕಳೆಯಲು ನೀವು ನಿರ್ಧರಿಸಿದಾಗ, ಸಂಬಂಧವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ನೀವು ಹಲವಾರು ವಿಚಾರಗಳನ್ನು ತಿಳಿದುಕೊಂಡಿರುವುದು ಸಹ ಮುಖ್ಯವಾಗುತ್ತದೆ. ಯಾಕೆಂದರೆ ಒಟ್ಟಿಗೆ ಜೀವನ ನಡೆಸುವುದು ಹಲವು ಸಮಸ್ಯೆಗಳಿಗೂ ಕಾರಣವಾಗಬಹುದು. ಹೀಗಾಗಿ ಎಲ್ಲಾ ವಿಚಾರದಲ್ಲಿ ಅಲ್ಲವಾದರೂ ಕೆಲವೊಂದು ವಿಚಾರದಲ್ಲಿಯಾದರೂ ಹೊಂದಾಣಿಕೆಯಿದೆಯೇ ಎಂಬುದನ್ನು ಗಮನಿಸಿಕೊಳ್ಳಬೇಕು. ಸಂಗಾತಿ, ಸಂಗಾತಿಯ ಸ್ವಭಾವ ಹೇಗಿದ್ದರೆ ಅವರು ನಿಮಗೆ ಸೂಕ್ತ ಸಂಗಾತಿಯೆಂದು ಅರ್ಥೈಸಿಕೊಳ್ಳಬಹುದು. ಇಲ್ಲಿದೆ ಕೆಲವೊಂದು ಟಿಪ್ಸ್.
Mature relationship: ಒಬ್ಬರಿಗೊಬ್ಬರು ಪ್ರೀತಿಸಿದರೆ ಸಾಲದು, ಗೌರವಿಸಬೇಕು!
ಸಣ್ಣ ವಿಷಯಗಳಲ್ಲಿ ಸಂತೋಷವನ್ನು ಕಾಣುತ್ತೀರಿ
ಸಂಬಂಧದಲ್ಲಿ ಸಂಗಾತಿಗಳ ಮಧ್ಯೆ ಪರಸ್ಪರ ಪ್ರೀತಿಯಿರಬೇಕಾದುದು ಮುಖ್ಯ. ಹಲವು ಸಮಸ್ಯೆಗಳ ನಡುವೆಯೂ ಸಾಮರಸ್ಯದಿಂದ ಬದುಕಲು ಸಾಧ್ಯವಾಗಬಏಕು. ಸಣ್ಣ ಪುಟ್ಟ ವಿಷಯಗಳಲ್ಲೂ ಖುಷಿ (Happy)ಯನ್ನು ಕಂಡು ಕೊಳ್ಳಬೇಕು. ಇದು ಮನೆಗೆಲಸಗಳನ್ನು ಮಾಡುವುದು, ದಿನಸಿ ಖರೀದಿಸುವುದು, ರಾತ್ರಿಯ ಊಟಕ್ಕೆ ಏನು ಮಾಡಬೇಕೆಂದು ನಿರ್ಧರಿಸುವುದು ಮತ್ತು ಇತರ ದಿನನಿತ್ಯದ ಚಟುವಟಿಕೆಗಳನ್ನು ಒಳಗೊಂಡಿರುತ್ತದೆ.
ಜಗಳಗಳು ನಿಮ್ಮನ್ನು ಹತ್ತಿರಕ್ಕೆ ತರುತ್ತವೆ
ಜಗಳಗಳನ್ನು ತಪ್ಪಿಸಲು ಪ್ರಯತ್ನಿಸುವುದು ಸಾಮಾನ್ಯವಾಗಿದ್ದರೂ, ನಿಮ್ಮ ಕೋಪ ಅಥವಾ ಅಭಿಪ್ರಾಯವನ್ನು ವ್ಯಕ್ತಪಡಿಸಲು ಸಾಧ್ಯವಿಲ್ಲ ಎಂದು ನಿಮಗೆ ಅನಿಸುವ ಪಾಲುದಾರನು ನಿಮಗೆ ಸರಿಹೊಂದುವುದಿಲ್ಲ. ಜಗಳ ಯಾವಾಗಲೂ ಕೆಟ್ಟದ್ದಲ್ಲ. ಆದರೆ ಸಂಘರ್ಷದ ಸಮಯದಲ್ಲಿ ನಿಮ್ಮ ಭಾವನೆಗಳನ್ನು ನಿಗ್ರಹಿಸುವುದು ಅಸಮಾಧಾನಕ್ಕೆ ಕಾರಣವಾಗುತ್ತದೆ. ಅಂತಿಮವಾಗಿ, ಇದು ಭವಿಷ್ಯದಲ್ಲಿ ಹೆಚ್ಚಿನ ಹಾನಿಯನ್ನು ಉಂಟುಮಾಡುತ್ತದೆ.
ನಿಮ್ಮ ಆಸಕ್ತಿಗಳನ್ನು ಒಂದೇ ರೀತಿಯಿಲ್ಲ
ನಿಮ್ಮಿಬ್ಬರ ಇಷ್ಟ-ಕಷ್ಟ ಆಸಕ್ತಿಯೂ ಒಂದೇ ಆಗಿದ್ದರೆ ದಾಂಪತ್ಯದಲ್ಲಿ ಹೊಂದಿಕೊಂಡು ಹೋಗಲು ಸಾಧ್ಯವಾಗುತ್ತದೆ. ಆದರೆ ಹೀಗಿಲ್ಲ ಅಂದ ಮಾತ್ರಕ್ಕೆ ಸಂಗಾತಿ ಸೂಕ್ತವಾಗಿಲ್ಲ ಎಂದು ನಿರ್ಧರಿಸಬೇಕಾಗಿಲ್ಲ, ಆಸಕ್ತಿಗಳು ಬೇರೆ ಬೇರೆಯಿದ್ದರೂ ಅದೆಷ್ಟೋ ಮಂದಿ ಖುಷಿಯಿಂದ, ಅನ್ಯೋನ್ಯತೆಯಿಂದ ಜೀವನ ನಡೆಸುತ್ತಿದ್ದಾರೆ. ಇಷ್ಟ-ಕಷ್ಟಗಳನ್ನು ಅನುಸರಿಸಿಕೊಂಡು ಬಾಳಲು ತಿಳಿದಿರಬೇಕು ಅಷ್ಟೇ.
ಗಡಿ ಮೀರಿದ ಪ್ರೀತಿ: ಫೇಸ್‌ಬುಕ್ ಗೆಳೆಯನ ಭೇಟಿಗೆ ಬಾಂಗ್ಲಾದಿಂದ ಭಾರತಕ್ಕೆ ಈಜಿದ ಯುವತಿ
ಹಣಕಾಸು ನಿಮ್ಮ ಸಂಬಂಧದಲ್ಲಿ ಜಗಳಕ್ಕೆ ಕಾರಣವಾಗಬಾರದು
ಯಾವುದೇ ಸಂಬಂಧದಲ್ಲಿ ಹಣಕಾಸು (Financial) ಒಂದು ಟ್ರಿಕಿ ವಿಷಯವಾಗಿರಬಹುದು. ಮತ್ತು ನೀವು ನಿಮ್ಮ ಸಂಗಾತಿಯೊಂದಿಗೆ ಒಟ್ಟಿಗೆ ವಾಸಿಸುತ್ತಿದ್ದರೆ, ಆ ಭಾಗವನ್ನು ವಿಂಗಡಿಸುವುದು ಅತ್ಯಗತ್ಯ. ನೀವು ಒಟ್ಟಿಗೆ ವಾಸಿಸುತ್ತಿರುವಾಗ, ನೀವು ಪರಸ್ಪರರ ಖರ್ಚು ಅಭ್ಯಾಸಗಳು ಮತ್ತು ಹಣಕಾಸಿನ ಬಗ್ಗೆ ತಿಳಿದಿರಬೇಕು.ಸಂಬಂಧದಲ್ಲಿರುವ ಒಬ್ಬ ವ್ಯಕ್ತಿ ಸ್ವಲ್ಪವಾದರೂ ಹೆಚ್ಚು ಹಣ ಗಳಿಸುವುದು ಸಾಮಾನ್ಯ. ನಿಮ್ಮ ಸಂಗಾತಿ ನಿಮಗಿಂತ ಹೆಚ್ಚು ಗಳಿಸಿದರೆ, ಅದನ್ನು ನಿಮ್ಮ ಅಹಂಕಾರಕ್ಕೆ ಬೆದರಿಕೆ ಎಂದು ನೋಡಬೇಡಿ.
ಸಂಗಾತಿ ಪ್ರಾಮಾಣಿಕರಾಗಿದ್ದಾರಾ ಎಂಬುದನ್ನು ನೋಡಿಕೊಳ್ಳಿ
ಸಂಬಂಧದಲ್ಲಿ ನಂಬಿಕೆ, ಪ್ರಾಮಾಣಿಕನ ಇರಬೇಕಾದುದು ತುಂಬಾ ಮುಖ್ಯ. ಹೀಗಾಗಿ ನಿಮ್ಮ ಸಂಬಂಧದಲ್ಲಿ ಅದಿದೆಯಾ ಎಂಬುದನ್ನು ಮುಖ್ಯವಾಗಿ ನೋಡಿಕೊಳ್ಳಿ. ಪ್ರಾಮಾಣಿಕರಲ್ಲದ ವ್ಯಕ್ತಿಗಳೊಂದಿಗಿನ ಜೀವನ ಎಷ್ಟು ದಿನಗಳವರೆಗೆ ಚೆನ್ನಾಗಿರಬಹುದು ಎಂದು ನಿರ್ಧಿಷ್ಟವಾಗಿ ಹೇಳಲು ಸಾಧ್ಯವಿಲ್ಲ. ಹೀಗಾಗಿ ಸಂಬಂಧವನ್ನು ಮುಂದುವರೆಸುವ ಮೊದಲೇ ಎಂದರೆ ಮದುವೆಗೆ ಮುಂಚಿತವಾಗಿಯೇ ನಿಮ್ಮ ಸಂಗಾತಿ ಪ್ರಾಮಾಣಿಕರೇ ಎಂಬುದನ್ನು ಖಚಿತಪಡಿಸಿಕೊಳ್ಳಿ