
ಮುದ್ದು ಸಂಬಂಧಕ್ಕೆ ಮದ್ದು ಎನ್ನುತ್ತಾರೆ. ಮುದ್ದಾಡುವಿಕೆಯು ಇಬ್ಬರು ವ್ಯಕ್ತಿಗಳ ನಡುವೆ ಬಾಂಧವ್ಯ ಬೆಳೆಸಲು ಹಾಗೂ ಸಂಬಂಧ ಗಟ್ಟಿಗೊಳಿಸಲು ಸಹಾಯಕಾರಿ. ಇದು ಪ್ರಾಮಾಣಿಕ ಪ್ರೀತಿಯಿಂದ ಹಾಗೂ ತುಂಬಿದ ಹೃದಯದಿಂದ ಹೊರಹೊಮ್ಮುತ್ತದೆ. ಇದು ಪ್ರೇಮಿಗಳು, ಗಂಡ- ಹೆಂಡತಿ, ತಾಯಿ- ಮಗು, ಅಪ್ಪ- ಮಕ್ಕಳ ಮಾತ್ರ ಸೀಮಿತವಲ್ಲ. ಇದು ಇಬ್ಬರು ವ್ಯಕ್ತಿಗಳ ನಡುವಿನ ಪವಿತ್ರ ಬಂಧಕ್ಕೆ ಅಡಿಪಾಯ. ಇದರಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಅನೇಕ ಲಾಭಗಳಿವೆ. ಮುದ್ದಿನಿಂದ ಸ್ಟ್ರೆಸ್ ಆರ್ಮೋನ್ ಕಾರ್ಟಿಸೋಲ್ ಉತ್ಪತ್ತಿ ಕಡಿಮೆಯಾಗುತ್ತದೆ. ಅಂದರೆ ಒತ್ತಡ ಕಡಿಮೆಯಾಗುತ್ತದೆ. ಜೊತೆಗೆ ಆಕ್ಸಿಟೋಸಿನ್ ಬಿಡುಗಡೆಯಾಗಿ ಸಂತೋಷ ನೀಡುವುದರಿಂದ ನೆಮ್ಮದಿಯ ನಿದ್ರೆ ನಿಮ್ಮದಾಗುತ್ತದೆ. ಇದರಿಂದ ಆಗುವ ಲಾಭಗಳ ಮಾಹಿತಿ ಇಲ್ಲಿದೆ..
ಮುದ್ದಾಡುವಿಕೆ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ:
ಮುದ್ದಾಡುವಿಕೆಯಿಂದ ನಾವು ಆನಂದವನ್ನು ಪಡೆಯುತ್ತೇವೆ. ನಾವು ಸಂತೋಷವಾಗಿರುವಾಗ ದೇಹದಲ್ಲಿ ಗರಿಷ್ಠ ಮಟ್ಟದ ಸಿರೊಟೋನಿನ್ ಮತ್ತು ಆಕ್ಸಿಟೋಸಿನ್ ಹಾರ್ಮೋನ್ (Harmon) ಬಿಡುಗಡೆಯಾಗುತ್ತದೆ. ಸಿರೊಟೋನಿನ್ ಕರುಳಿನ ಆರೋಗ್ಯಕ್ಕೆ ಸಂಬಂಧಿಸಿರುವುದರಿಂದ ಕರುಳಿನ ಆರೋಗ್ಯವು ರೋಗನಿರೋಧಕ ಶಕ್ತಿಗೆ ಸಂಬಂಧಿಸಿದೆ . ಸಿರೊಟೋನಿನ್ ಬಿಡುಗಡೆಯಾದಾಗ ನಮ್ಮ ರೋಗನಿರೋಧಕ ಶಕ್ತಿಯು ಹೆಚ್ಚಾಗುತ್ತದೆ , ಇದು ಒತ್ತಡವನ್ನು (Stress) ಕಡಿಮೆ ಮಾಡಲು, ಅನಾರೋಗ್ಯದ ವಿರುದ್ಧ ಹೋರಾಡಲು, ಉರಿಯೂತವನ್ನು ಕಡಿಮೆ ಮಾಡಲು ಮತ್ತು ಆರೋಗ್ಯಕರವಾಗಿರಲು ಸಹಾಯ (help) ಮಾಡುತ್ತದೆ. ಅದಲ್ಲದೆ ಒತ್ತಡವನ್ನು ಹೆಚ್ಚಿಸುವ ಹಾರ್ಮೋನ್ ಕಡಿಮೆ ಮಾಡಿಸುತ್ತದೆ.
ಮುದ್ದಾಡುವಿಕೆ ಹೃದಯದ ರಕ್ಷಕ:
ತಬ್ಬಿಕೊಳ್ಳುವ ಅಥವಾ ಮುದ್ದಾಡುವ ಸರಳ ಕ್ರಿಯೆಯಿಂದ ಹೃದಯ (heart) ಕಾಯಿಲೆಯ ಅಪಾಯವನ್ನು ಕಡಿಮೆ ಮಾಡಿಕೊಳ್ಳಬಹುದು. ಮುದ್ದಾಡುವುದರಿಂದ ಆಕ್ಸಿಟೋಸಿನ್ ಮಟ್ಟವನ್ನು ಹೆಚ್ಚಿ ರಕ್ತದೊತ್ತಡವನ್ನು (blood pressure) ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಅದಲ್ಲದೆ ಹೃದಯ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುತ್ತದೆ. ಮುದ್ದಾಡುವಿಕೆಯಿಂದ ಹೃದಯವು ಸಂತೋಷದಿಂದ ಕೂಡಿದ್ದು, ಒತ್ತಡ ಮತ್ತು ಅನಾರೋಗ್ಯದ ಪರಿಣಾಮಗಳನ್ನು ಎದುರಿಸಲು ಕಷ್ಟಪಟ್ಟು ಕೆಲಸ ಮಾಡಬೇಕಾಗಿಲ್ಲ. ಹೀಗಾಗಿ ಆರೋಗ್ಯವಂತರಾಗಿರಲು ಇದು ಸಹಾಯಕವಾಗಿದೆ.
ಇದು ನೋವನ್ನು ನಿವಾರಿಸಲು ಸಹಕಾರಿ:
ಮುದ್ದಾಡುವಿಕೆಯಿಂದ ಕೆಲವೊಮ್ಮೆ ಮೆದುಳಿಗೆ (Mind)ತಲುಪುವ ನೋವಿನ ಸಂಕೇತಗಳನ್ನು ನಿರ್ಬಂಧಿಸುತ್ತದೆ. ದೈಹಿಕ ನೋವನ್ನು ಅನುಭವಿಸುತ್ತಿರುವಾಗ ಪ್ರೀತಿಪಾತ್ರರ ಜತೆ ಮುದ್ದಾಡುವಿಕೆಯಲ್ಲಿ (cuddling) ಭಾಗಿಯಾಗುವುದು, ಕೈಯನ್ನು ಹಿಡಿದುಕೊಳ್ಳುವುದರಿಂದ ಪರಿಣಾಮವನ್ನು ಕಂಡುಕೊಳ್ಳಬಹುದು. ಇದೊಂದು ಸಹಜ ಪ್ರತಿಕ್ರಿಯೆಯಾಗಿದ್ದು, ನೋವನ್ನು ಉತ್ತಮವಾಗಿ ಸಹಿಸಿಕೊಳ್ಳಲು ನಮಗೆ ಸಹಾಯ ಮಾಡುತ್ತದೆ.
ಸಂಗಾತಿಯನ್ನು ಪರಸ್ಪರ ಹತ್ತಿರ ತರುತ್ತದೆ:
ಮುದ್ದಾಡುವುದರಿಂದ ಸಂಗಾತಿಯನ್ನು ಹತ್ತಿರ ತರಬಹುದು. ಮುದ್ದಾಡುವಿಕೆಯು ಆಕ್ಸಿಟೋಸಿನ್ ವರ್ಧಕಕ್ಕೆ ನೇರವಾಗಿ ಸಂಬಂಧಿಸಿದೆ. ಆಕ್ಸಿಟೋಸಿನ್ ಅನ್ನು "ಪ್ರೀತಿಯ ಹಾರ್ಮೋನ್" ಎಂದು ಕರೆಯಲಾಗುತ್ತದೆ ಏಕೆಂದರೆ ಇದು ಎಲ್ಲಾ ಪ್ರೀತಿಯ (love)ವಿಷಯಗಳಿಂದ ಪ್ರಚೋದಿಸಲ್ಪಡುವ ಚುಂಬನ, ಮುದ್ದಾಡುವುದು, ಲೈಂಗಿಕತ ಅಂಶಗಳನ್ನು ಒಳಗೊಂಡಿದೆ. ಮುದ್ದಾಡುವಿಕೆಯು ನಿಮ್ಮ ಲೈಂಗಿಕ ಮತ್ತು ಸಂಬಂಧದ ತೃಪ್ತಿಯನ್ನು ಹೆಚ್ಚಿಸುತ್ತದೆ.
ಇದನ್ನೂ ಓದಿ: Relationship Tips: ದಾಂಪತ್ಯದಲ್ಲಿನ ಒತ್ತಡ ನಿವಾರಣೆಗೆ ಇಲ್ಲಿದೆ ಸಲಹೆ!
ಫೀಲ್-ಗುಡ್ ಹಾರ್ಮೋನ್ ಬಿಡುಗಡೆ ಮಾಡುತ್ತದೆ:
ಸ್ಪರ್ಶಿಸಿದಾಗ, ಮುದ್ದಾಡುವಾಗ, ತಬ್ಬಿಕೊಂಡಾಗ ಹಾಗೂ ಕೈಗಳನ್ನು ಹಿಡಿದುಕೊಂಡಾಗ ನಮ್ಮ ದೇಹದಲ್ಲಿ ಆಕ್ಸಿಟೋಸಿನ್ ಎಂಬ ಹಾರ್ಮೋನ್ ಬಿಡುಗಡೆಯಾಗುತ್ತದೆ. ಈ ಹಾರ್ಮೋನ್ ಬಿಡುಗಡೆಯಿಂದ ಫೀಲ್-ಗುಡ್ (feel good) ಎನ್ನುವ ಭಾವನೆ ಮೂಡಿ ಇತರರೊಂದಿಗೆ ಸಂಪರ್ಕ ಹೊಂದಲು ಸಹಾಯ ಮಾಡುತ್ತದೆ. ಅದಲ್ಲದೆ ಆಕ್ಸಿಟೋಸಿನ್ ಹಾರ್ಮೋನ್ ಡೋಪಮೈನ್ ಮತ್ತು ಸಿರೊಟೋನಿನ್ ಅನ್ನುವ ಅಂಶಗಳನ್ನು ಒಳಗೊಂಡಿವೆ. ಈ ಅಂಶಗಳು ದೇಹದಲ್ಲಿ ಬಿಡುಗಡೆಯಾದ ನಂತರ ನಾವು ಸಂತೋಷ, ವಿಶ್ರಾಂತಿ (Rest) ಮನಸ್ಥಿತಿಯನ್ನು ಸುಧಾರಿಸುವುದರ ಜೊತೆಗೆ ಖಿನ್ನತೆಯ ಭಾವನೆಗಳಿಂದ ದೂರವಿರಲು ಸಹಾಯಕಾರಿ.
ಇದನ್ನೂ ಓದಿ: Women Health : ಕೆಲಸದ ಒತ್ತಡದಿಂದ ಹದಗೆಡ್ತಿದೆ ಮಹಿಳೆಯರ ಲೈಂಗಿಕ ಆರೋಗ್ಯ
ಮಗುವಿನ ಆರೋಗ್ಯಕ್ಕೆ ಒಳ್ಳೆಯದು:
ಮುದ್ದಾಡುವಿಕೆಯು ಮಗುವಿನ ಆಮ್ಲಜನಕದ ಮಟ್ಟವನ್ನು ಹೆಚ್ಚಿಸುತ್ತದೆ, ಅದರ ಉಸಿರಾಟವನ್ನು ಶಾಂತಗೊಳಿಸುತ್ತದೆ ಮತ್ತು ನೋವಿನ ಸಂಕೇತಗಳನ್ನು ಸರಾಗಗೊಳಿಸುತ್ತದೆ. ಹಾಗೇ ಮೆದುಳು (mind) ಬೆಳೆಯಲು ಸಹಾಯ ಮಾಡುತ್ತದೆ ಮತ್ತು ಸೋಂಕು, ಲಘೂಷ್ಣತೆಯಂತಹ ಇತರ ಕಾಯಿಲೆಗಳನ್ನು ಕಡಿಮೆ ಮಾಡುತ್ತದೆ.ಅದಲ್ಲದೆ ಕೆಲವು ಚರ್ಮದಿಂದ ಚರ್ಮಕ್ಕೆ (skin)ಸಂಪರ್ಕ ಮಗುವಿಗೆ ಸಂತೋಷವಾಗಿರಲು ಮತ್ತು ಉತ್ತಮ ನಿದ್ರೆಗೆ ಸಹಾಯ ಮಾಡುವಲ್ಲಿ ಬಹಳ ಸಹಾಯಕವಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.