ನ್ಯೂನತೆಗಳ ಮೀರಿದ ಅಂಧನ ಸ್ವಾಭಿಮಾನದ ಬದುಕಿಗೆ ಜೊತೆಯಾದ ಗೆಳೆಯ ವೀಡಿಯೋ ಸಖತ್ ವೈರಲ್

Published : Feb 10, 2025, 06:57 PM IST
ನ್ಯೂನತೆಗಳ ಮೀರಿದ ಅಂಧನ ಸ್ವಾಭಿಮಾನದ ಬದುಕಿಗೆ ಜೊತೆಯಾದ ಗೆಳೆಯ ವೀಡಿಯೋ ಸಖತ್ ವೈರಲ್

ಸಾರಾಂಶ

ಕಣ್ಣಿಲ್ಲದ ಯುವಕನೊಬ್ಬ ಗೆಳೆಯನ ಸಹಾಯದಿಂದ ಹಣ್ಣುಗಳನ್ನು ಲಾರಿಗೆ ಲೋಡ್ ಮಾಡುವ ಮೂಲಕ ಸ್ವಾವಲಂಬಿ ಜೀವನ ನಡೆಸುತ್ತಿರುವ ವೀಡಿಯೋ ವೈರಲ್ ಆಗಿದೆ. ಈ ಯುವಕನ ದುಡಿಮೆಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಕುಣಿಯಲು ಬಾರದವ ನೆಲ ಡೊಂಕು ಎಂದು ಹೇಳುವಂತೆ ನಮ್ಮಲನೇಕರು ಕೈ ಕಾಲು  ಸರಿ ಇದ್ದರೂ  ದುಡಿಮೆ ಮಾಡಲೊಪ್ಪದೇ ಯಾರಾದೋ ಜೀವ ತಿಂದು ಬದುಕುತ್ತಾರೆ. ಮನೆಯಲ್ಲಿರುವವರಿಗೆ ಕಿರುಕುಳ ನೀಡುತ್ತಾ, ಮನೆ ಮಂದಿ ದುಡಿದ ಕಾಸನ್ನು ದರ್ಪದಿಂದ ದಬ್ಬಾಯಿಸಿ ವಸೂಲಿ ಮಾಡಿ ದರ್ಬಾರ್ ನಡೆಸುತ್ತಿರುತ್ತಾರೆ.  ಇಂತಹ ಅನೇಕರು ನಮ್ಮ ನಡುವೆ ಇರುವುದನ್ನು ನೀವು ನೋಡಿರಬಹುದು. ಅಥವಾ ಈ ಅನುಭವ ನಿಮಗೂ ಆಗಿರಬಹುದು. ಆದರೆ ಎರಡೂ ಕಣ್ಣುಗಳಿಲ್ಲದ ಕುರುಡನೋರ್ವ ಗೆಳೆಯನೋರ್ವನ ಸಣ್ಣ ನೆರವಿನಿಂದ ಸ್ವಾವಲಂಬಿ ಜೀವನ ನಡೆಸುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ವೀಡಿಯೋ ಕೈ ಕಾಲು ಸರಿ ಇದ್ದು, ಕೆಲಸ ಮಾಡದೇ ಸೋಮಾರಿಗಳಾಗಿ ಓಡಾಡುವ 'ಅನ್ನ ದಂಡ ಭೂಮಿಗೆ ಭಾರ' ಎಂಬಂತೆ ಬದುಕುವ ಈಗಿನ ಕೆಲ ಯುವ ಸಮೂಹದ ಕಣ್ಣು ತೆರೆಸುವಂತಿದೆ.

ಅಂದಹಾಗೆ ಲಾಸ್ಟ್ ಒಪಿನಿಯನ್ಸ್ ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ ಈ ವೀಡಿಯೋ ವೈರಲ್ ಆಗಿದೆ. ವೀಡಿಯೋದಲ್ಲಿ ಕಣ್ಣು ಕಾಣಿಸದ ಅಂಧ ಯುವಕನೋರ್ವ ತನ್ನ ಗೆಳೆಯನ ಸಹಾಯದಿಂದ ಹಣ್ಣುಗಳ ರಾಶಿಯನ್ನು ಲಾರಿಗೆ ಲೋಡ್ ಮಾಡುವ ಕೆಲಸ ಮಾಡುತ್ತಿದ್ದಾನೆ. ಕಣ್ಣು ಕಾಣಿಸದೇ ಇದ್ದರೂ ಬುಟ್ಟಿಗೆ ಹಣ್ಣನ್ನು ತಾನೇ ತುಂಬಿಸುವ ಈ ಅಂಧ ಯುವಕ ಅದೇ ಕೆಲಸ ಮಾಡುವ ತನ್ನ ಗೆಳೆಯನ ಹೆಗಲು ಹಿಡಿದು ಸಾಗುತ್ತಾನೆ. ಹೀಗೆ ಸ್ನೇಹಿತರಿಬ್ಬರು ಸೇರಿ ಹಣ್ಣುಗಳ ರಾಶಿಯನ್ನು ಗೂಡ್ಸ್ ಲಾರಿಯೊಂದಕ್ಕೆ ಲೋಡ್ ಮಾಡುತ್ತಿರುವ ದೃಶ್ಯ ಇದಾಗಿದೆ. ಕಣ್ಣಿಲ್ಲದಿದ್ದರೂ ವ್ಯರ್ಥ ಜೀವನ ನಡೆಸದೇ ಈ ಯುವಕ ತನ್ನ ಹೊಟ್ಟೆಯನ್ನು ತಾನೇ ದುಡಿದ ಹಣದಿಂದ ತುಂಬಿಸಿಕೊಳ್ಳುತ್ತಾ ಸ್ವಾಭಿಮಾನದ ಬದುಕನ್ನು ನಡೆಸುತ್ತಿದ್ದಾನೆ. ಈ ವೀಡಿಯೋ ನೋಡಿದ ಅನೇಕರು ಈತನ ದುಡಿಮೆಗೆ ಜೊತೆಯಾಗಿ ಸಹಕರಿಸಿದ ಆತನ ಗೆಳೆಯನಿಗೂ ಧನ್ಯವಾದ ಹೇಳಿದ್ದಾರೆ.

ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದು, ಅನೇಕರು ಅಂಧ ಯುವಕನ ಸ್ವಾಭಿಮಾನದ ಬದುಕಿಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.  ವೀಡಿಯೋ ಶೇರ್ ಮಾಡಿದವರು 'ನೀವು ನಿಮ್ಮ ಜೀವನವೇ ಕಷ್ಟ ಎಂದು ಭಾವಿಸುತ್ತಿದ್ದರೆ ಈ ವೀಡಿಯೋ ನೋಡಿ, ಕಣ್ಣು ಕಾಣಿಸದ ಯುವಕನೋರ್ವ ದುಡ್ಡು ಗಳಿಸಲು ಕಷ್ಟಪಟ್ಟು ದುಡಿಯುತ್ತಿದ್ದಾನೆ ಎಂದು ಬರೆದುಕೊಂಡಿದ್ದಾರೆ.  ಕಣ್ಣಿಲ್ಲದ ಈತ ಭಿಕ್ಷೆಯನ್ನೂ ಬೇಡಬಹುದಿತ್ತು. ಆದರೆ ಈ ಯುವಕ ಹಂಗಿನ ಜೀವನ ಬಿಟ್ಟು ಸ್ವಾಭಿಮಾನದಿಂದ ಬದುಕುತ್ತಿರುವುದು ಶ್ಲಾಘನೀಯ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಹಾಗೆಯೇ ಅನೇಕರು ಈತನನ್ನು ಶ್ಲಾಘಿಸಿದ್ದು, ದೇವರಿಗೆ ಭೂಮಿಗೆ ಬರಲಾಗದಿದ್ದಾಗ ದೇವರು ಆತನ ಪಾಲಿಗೆ ಗೆಳೆಯನನ್ನು ಕಳುಹಿಸಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಇಲ್ಲಿ ಆತ ಧೃಡನಿಶ್ಚಯ ಹಾಗೂ ಆತನ ಮೇಲೆ ಗೆಳೆಯನಿಗಿರುವ ಪ್ರೀತಿ ಎದ್ದು ಕಾಣುತ್ತಿದೆ. ಅಲ್ಲದೇ ಇವರಿಬ್ಬರಿಗೂ ಕೆಲಸ ನೀಡಿದ ಗುತ್ತಿಗೆದಾರನಿಗೂ ಧನ್ಯವಾದ ಹೇಳಬೇಕು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

ಸಣ್ಣಪುಟ್ಟ ಕಾರಣಗಳಿಗೆ ಸಾವಿನ ದಾರಿ ಹಿಡಿಯುವ, ಎಲ್ಲದಕ್ಕೂ ಕುಂಟು ನೆಪ ಹೇಳುತ್ತಾ ವಿಧಿಯನ್ನು ಹಳಿಯುತ್ತಾ ಕೂರುವ ಅನೇಕರಿಗೆ ಈ ಯುವಕ ನಿಜವಾಗಿಯೂ ಮಾದರಿಯಾಗಿದ್ದಾನೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ಕಾಮೆಂಟ್ ಮಾಡಿ... 

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಈ ಸುಂದರ ದೇಶದಲ್ಲಿ ಬಾಡಿಗೆಗೆ ಸಿಗ್ತಾನೆ ಗಂಡ, ಗಂಟೆಗೆ ಇಷ್ಟಿದೆ ಸಂಬಳ!
ಮದುವೆ ಮುಂದೂಡಿಕೆ ಆದ 12 ದಿನಗಳ ಬಳಿಕ ಸೋಶಿಯಲ್‌ ಮೀಡಿಯಾದಲ್ಲಿ ಮೊದಲ ಪೋಸ್ಟ್‌ ಮಾಡಿದ ಸ್ಮೃತಿ, ಕೈಯಲ್ಲಿದ್ದ ರಿಂಗ್‌ ಮಾಯ!