ಮಗನ ಮದುವೆಗೆ ಪ್ರತಿಕೃತಿ ಗೊಂಬೆಯಾಗಿ ಆಶೀರ್ವದಿಸಲು ಬಂದ ಅಮ್ಮ!

Published : Feb 10, 2025, 04:17 PM ISTUpdated : Feb 10, 2025, 05:55 PM IST
ಮಗನ ಮದುವೆಗೆ ಪ್ರತಿಕೃತಿ ಗೊಂಬೆಯಾಗಿ ಆಶೀರ್ವದಿಸಲು ಬಂದ ಅಮ್ಮ!

ಸಾರಾಂಶ

ತಾಯಿಯನ್ನು ಕಳೆದುಕೊಂಡ ಯುವಕನ ಮದುವೆಯಲ್ಲಿ ಸ್ನೇಹಿತರು ತಾಯಿಯ ಪ್ರತಿಕೃತಿಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಉಡುಗೊರೆಯನ್ನು ಕಂಡು ಮದುಮಗ ಮತ್ತು ಕುಟುಂಬಸ್ಥರು ಮಾಡಿದ್ದೇನು. ವಿಡಿಯೋ ವೈರಲ್!

ಬೆಂಗಳೂರು (ಫೆ.10): ತಾಯಿ ಕಳೆದುಕೊಂಡ ಯುವಕನಿಗೆ ಆತ ಮದುವೆಯಾಗುವ ದಿನ ಆತನ ಸ್ನೇಹಿತರು ತಾಯಿಯ ಪ್ರತಿಕೃತಿಯನ್ನು ಗಿಫ್ಟ್‌ ರೂಪದಲ್ಲಿ ಕೊಟ್ಟಿದ್ದಾರೆ. ಆಗ ಮದುಮಗ ಮತ್ತು ಆತನ ಸಂಬಂಧಿಕರ ರಿಯಾಕ್ಷನ್ ಹೇಗಿತ್ತು ಎಂಬುದನ್ನು ನೋಡಿ.. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ..

ಸಾಮಾನ್ಯವಾಗಿ ಮದುವೆ ಎಂದಾಕ್ಷಣ ಹಿಂದೂ ಸಂಪ್ರದಾಯದ ಎಲ್ಲ ಭಾರತೀಯರಿಗೆ ಒಂದು ಮರೆಯಲಾಗದ ಕ್ಷಣವಾಗಿರುತ್ತದೆ. ಇದಕ್ಕೆ ಎಲ್ಲ ಬಂಧು ಬಳಗವನ್ನೂ ಕರೆದು ಅದ್ಧೂರಿಯಾಗಿ ಮದುವೆ ಮಾಡಿಕೊಳ್ಳಲಾಗುತ್ತದೆ. ಆದರೆ, ಇಲ್ಲೊಬ್ಬ ಯುವಕ ಕೆಲವು ದಿನಗಳ ಹಿಂದೆ ಅಮ್ಮನನ್ನು ಕಳೆದುಕೊಂಡಿದ್ದು, ಆತ ಒಂದು ವರ್ಷದೊಳಗೆ ಮದುವೆ ಮಾಡಿಕೊಳ್ಳಬೇಕಿರುತ್ತದೆ. ಹೀಗೆ ಮದುವೆ ಮಾಡಿಕೊಳ್ಳುತ್ತಿದ್ದ ವೇದಿಕೆಯ ಮೇಲೆ ಆತನ ಸ್ನೇಹಿತರು ಅಮ್ಮನ ಕೊರಗು ಬರಬಾರದೆಂದು ಆ ಮದುಮಗನ ಅಮ್ಮನ ಪ್ರತಿಕೃತಿಯನ್ನು ರಚಿಸಿಕೊಂಡು ಬಂದು ಗಿಫ್ಟ್ ಆಗಿ ನಿಲ್ಲಿಸುತ್ತಾರೆ. ಆಗ ಮದುಮಗನ ರಿಯಾಕ್ಷನ್ ಹೇಗಿತ್ತು ನೀವೇ ನೋಡಿ..

ಅಮ್ಮ ಎಂಬ ಪದ ಎಲ್ಲರ ಮನಸ್ಸಿಗೂ ಥಟ್ಟನೇ ನಾಟುವಂತಹ ಪದವಾಗಿದೆ. ಅಮ್ಮ ಎಂದಾಕ್ಷಣ ಎಂತಹ ಕ್ರೂರಿಯೂ ಒಂದು ಕ್ಷಣ ಮಗುವಾಗಿಬಿಡುತ್ತಾನೆ. ಭೂಮಿಯ ಮೇಲಿನ ದೇವರು ಅಮ್ಮ ಎಂದು ಹೇಳುತ್ತಾರೆ. ಆದರೆ, ಅಮ್ಮ ಅಕಾಲವಾಗಿ ದೂರವಾದರೆ ಮಕ್ಕಳು ಅವರಿಲ್ಲದ ಕೊರಗು ಎಷ್ಟು ಅನುಭವಿಸುತ್ತಾರೆ ಎಂಬುದನ್ನು ಪದಗಳಲ್ಲಿ ಬರೆಯಲು ಅಸಾಧ್ಯ. ಇಲ್ಲೊಬ್ಬ ಯುವಕ ತನ್ನ ಅಮ್ಮ ಸತ್ತಹೋದ ನಂತರ ಅಮ್ಮನ ಕೊರಗಿನಲ್ಲಿಯೇ ಜೀವನ ಮಾಡುತ್ತಿರುತ್ತಾನೆ. ಆತನ ಸ್ನೇಹಿತರು ಕೂಡ ಇವನ ಅಮ್ಮನ ಪ್ರೀತಿ ನೋಡಿ ತುಂಬಾ ಭಾವುಕರಾಗಿರುತ್ತಾರೆ. ಹೇಗಾದರೂ ಮಾಡಿ ತಮ್ಮ ಸ್ನೇಹಿತನಿಗೆ ಅಮ್ಮನ ನೆನಪು ಕಾಡುವುದನ್ನು ದೂರ ಮಾಡಬೇಕು ಎಂದು ನಿರ್ಧರಿಸುತ್ತಾರೆ. ನಂತರ ಆತನ ಮದುವೆಗೆ ತಾಯಿಯ 5 ಅಡಿ ಎತ್ತರದ ಪ್ರತಿಕೃತಿಯೊಂದನ್ನು ತಂದು ಗಿಫ್ಟ್‌ ಆಗಿ ಕೊಟ್ಟಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ 6x3 ಅಡಿ ಹೆಣ ಹೂಳುವಷ್ಟು ಜಾಗದ ರೂಮಿಗೆ ₹25,000 ಬಾಡಿಗೆ! ವಿಡಿಯೋ ವೈರಲ್

ಮದುವೆ ವೇದಿಕೆಯಲ್ಲಿ ನಿಂತಿದ್ದ ಮದುಮಗನಿಗೆ ಗಿಫ್ಟ್ ನೀಡಲು ಬಂದಾಗ ಮೇಲೆ ಕವರ್ ಮಾಡಿದ್ದ ಹೊದಿಕೆಯನ್ನು ತೆರೆದಿದ್ದಾರೆ. ಇದನ್ನು ನೋಡಿದ ನಂತರ ವರನ ಚಿಕ್ಕಮ್ಮ ಒಮ್ಮೆಲೇ ಜೋರಾಗಿ ಅಳಲು ಶುರುಮಾಡಿದ್ದಾರೆ. ನಂತರ ಪಕ್ಕದಲ್ಲಿಯೇ ಗಿಫ್ಟ್ ಏನೆಂದು ನೋಡುತ್ತಿದ್ದ ಮದುಮಗ ಮತ್ತು ಆತನ ಅಣ್ಣ ಎಲ್ಲರೂ ಈ ಪ್ರತಿಕೃತಿ ಫೋಟೋ ತಬ್ಬಿಕೊಂಡು ಕಣ್ಣೀರಿಟ್ಟಿದ್ದಾರೆ. ಆತನ ಚಿಕ್ಕಮ್ಮ ಫೋಟೋವನ್ನು ಎಳೆದು ತಬ್ಬಿ ಹಿಡಿದು ಮುತ್ತು ಕೊಟ್ಟಿದ್ದಾರೆ. ಇದಾದ ನಂತರ ಮದುಮಗ ಮುಂದೆ ಬಂದು ಈ ಫೋಟೋವನ್ನು ತಬ್ಬಿ ಹಿಡಿದು ಕೆಲಹೊತ್ತು ಕಣ್ಣೀರು ಹಾಕಿದ್ದಾನೆ. ಇದನ್ನು ನೋಡಿದ ಮದುವೆಗೆ ಬಂದಿದ್ದ ಜನರು ಕೂಡ ಕೆಲಹೊತ್ತು ಭಾವುಕರಾಗಿದ್ದಾರೆ.

ಈ ವಿಡಿಯೋವನ್ನು ವಿಜಯ್ ಮತ್ತು ಮಾಸ್ ಫೋಟೋಗ್ರಫಿ ಎಂಬ ಇನ್‌ಸ್ಟಾಗ್ರಾಮ್ ಐಡಿಯಿಂದ ಕಳೆದ 5 ದಿನಗಳ ಹಿಂದೆ ಪೋಸ್ಟ್ ಮಾಡಲಾಗಿದೆ. ಈ ಮದುವೆ ತಮಿಳು ಮೂಲದ ಕುಟುಂಬದವರದ್ದಾಗಿದ್ದು, ಫೆ.2ರಂದು ನಡೆದಿದೆ. ಈ ವಿಡಿಯೋಗೆ ಸುಮಾರು 4.90 ಲಕ್ಷ ಲೈಕ್ಸ್‌ಗಳು ಬಂದಿವೆ. ಈ ವಿಡಿಯೀವನ್ನು ಮಿಲಿಯನ್‌ಗಟ್ಟಲೆ ಜನರು ವೀಕ್ಷಣೆ ಮಾಡಿದ್ದಾರೆ. ಇದಕ್ಕೆ ಬಹುತೇಕರು ಕಾಮೆಂಟ್‌ಗಳನ್ನು ಮಾಡಿದ್ದಾರೆ. ಅದರಲ್ಲಿ ಒಬ್ಬರು 'ನನ್ನ ಹೆತ್ತವರು ಜೀವಂತವಾಗಿದ್ದಾಗ ಅವರನ್ನು ನೋಡಿಕೊಳ್ಳಲು ನನಗೆ ಸಾಧ್ಯವಾಗಲಿಲ್ಲ. ಆದರೆ ನಾನು ಚಿಕ್ಕವನಿದ್ದಾಗ ಆ ಕ್ಷಣವನ್ನು ಕಳೆದುಕೊಂಡೆ ಮತ್ತು ಅವರು ಸತ್ತ ನಂತರ ಅವರ ಬಗ್ಗೆ ಚಿಂತೆ ಮಾಡುತ್ತಿದ್ದೆ. ಆ ರೀತಿ ಇಬ್ಬರನ್ನೂ ನೋಡಿಕೊಳ್ಳುವುದು ಎಷ್ಟು ಕಷ್ಟ ಎಂದು ನನಗೆ ತಿಳಿದಿದೆ ಎಂದು ಹೇಳಿದ್ದಾರೆ. ಇನ್ನೊಬ್ಬರು 'ಅಮ್ಮನೇ ದೇವರು.. ಮಗುವನ್ನು ಹೊಟ್ಟೆಯಲ್ಲಿ ಹೊತ್ತ ತಾಯಿ ಕಲ್ಲಿನಲ್ಲಿ ಕೆತ್ತಿದ ಪ್ರತಿಮೆಗಿಂತ ಉತ್ತಮ... ಎಂದು ಕಾಮೆಂಟ್ ಮತ್ತಿದ್ದಾರೆ.

ಇದನ್ನೂ ಓದಿ: 2 ವರ್ಷಗಳಿಂದ ರೆಫ್ರಿಜರೇಟರ್‌ನಲ್ಲಿದ್ದ ಸಾಂಬರ್‌ ತಿಂದ ಮಹಿಳೆ, ಕಾರಣ ಕೇಳಿ ಕಣ್ಣೀರು ಹಾಕಿದ ಸೋಷಿಯಲ್ ಮೀಡಿಯಾ!

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ: ಸಮಂತಾ ಬಾಳಲ್ಲಿ ನಿಜವಾಯ್ತು, ಆದ್ರೆ ರಶ್ಮಿಕಾ ಲೈಫಲ್ಲಿ ಸುಳ್ಳಾಗಲಿ ಅಂತಿರೋ ಫ್ಯಾನ್ಸ್!
ಪುರುಷರ ಕೊರತೆ: ಈ ದೇಶದಲ್ಲಿ ಗಂಡನ ಬಾಡಿಗೆಗೆ ಪಡೆಯುತ್ತಾರೆ ಹೆಣ್ಣು ಮಕ್ಕಳು