ವಿಶ್ವದಲ್ಲಿ ಅತೀ ಹೆಚ್ಚು ಅಕ್ರಮ ಸಂಬಂಧದ ದೇಶ ಇದು, ಇಲ್ಲಿ ಮದುವೆ ಹೆಸರಿಗೆ ಮಾತ್ರ

Published : Feb 10, 2025, 04:07 PM IST
ವಿಶ್ವದಲ್ಲಿ ಅತೀ ಹೆಚ್ಚು ಅಕ್ರಮ ಸಂಬಂಧದ ದೇಶ ಇದು, ಇಲ್ಲಿ ಮದುವೆ ಹೆಸರಿಗೆ ಮಾತ್ರ

ಸಾರಾಂಶ

ಹೆಸರಿಗೊಂದು ಮದುವೆ, ಆದರೆ ಈ ದೇಶದಲ್ಲಿ ಅಕ್ರಮ ಸಂಬಂಧಗಳೇ ಹೆಚ್ಚು. ಹಾಗಾದರೆ ಯಾವ ದೇಶದಲ್ಲಿ ಅಕ್ರಮ ಸಂಬಂಧ ಹೆಚ್ಚು? ಅಂಕಿ ಅಂಶ ಏನು ಹೇಳುತ್ತಿದೆ.

ಡೇಟಿಂಗ್, ಲೀವ್ ಇನ್ ರಿಲೇಶನ್‌ಶಿಪ್ ಸೇರಿದಂತೆ ಹಲವು ಮಾಡರ್ನ್ ಸಂಬಂಧಗಳೇ ಹೆಚ್ಚು ಸದ್ದು ಮಾಡುತ್ತಿರುವ ಈ ದುನಿಯಾದಲ್ಲಿ ಮದುವೆ, ಸಂಸಾರ ಇದೀಗ ಅತ್ಯಂತ ಸವಾಲಿನ ಘಟ್ಟವಾಗಿ ಮಾರ್ಪಡುತ್ತಿದೆ. ಆನ್‌ಲೈನ್ ಡೇಟಿಂಗ್ ಇದೀಗ ಹೆಚ್ಚಾಗುತ್ತಿದೆ. ಮದುವೆ ಬಳಿಕ ಡಿವೋರ್ಸ್ ಕೂಡ ಹೆಚ್ಚು. ಇತ್ತೀಚೆಗೆ ಅಕ್ರಮ ಸಂಬಂಧ ಪ್ರಕರಣಗಳ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಇದೀಗ ವಿಶೇಷ ವರದಿಯೊಂದು ಹೊರಬಿದ್ದಿದೆ. ವಿಶ್ವದಲ್ಲಿ ಅತೀ ಹಚ್ಚು ಅಕ್ರಮ ಸಂಬಂಧ ಹೊಂದಿರುವ ದೇಶ ಯಾವುದು ಅನ್ನೋದು ಬಹಿರಂಗವಾಗಿದೆ. ಈ ವರದಿ ಪ್ರಕಾರ ಥಾಯ್ಲೆಂಡ್ ಜಗತ್ತಿನ ಅತೀ ಹೆಚ್ಚು ಅಕ್ರಮ ಸಂಬಂಧ ಹೊಂದಿರುವ ದೇಶವಾಗಿದೆ.

ಪಾಪ್ಯುಲೇಶನ್ ರಿವ್ಯೂವ್ ನಡೆಸಿದೆ ಅಧ್ಯಯನ ವರದಿಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಥಾಯ್ಲೆಂಡ್‌ನಲ್ಲಿ ಶೇಕಡಾ 51 ರಷ್ಟು ಮಂದಿ ಅಕ್ರಮ ಸಂಬಂಧ ಹೊಂದಿದ್ದಾರೆ ಎನ್ನುತ್ತಿದೆ ವರದಿ. ಪ್ರವಾಸಿ ತಾಣದ ಮೂಲಕ ವಿಶ್ವದಲ್ಲಿ ಪ್ರಸಿದ್ಧಿಯಾಗಿರುವ ಥಾಯ್ಲೆಂಡ್ ಇದೀಗ ಅಕ್ರಮ ಸಂಬಂಧದಲ್ಲೂ ಸುದ್ದಿಯಾಗಿದೆ. ಥಾಯ್ಲೆಂಡ್‌ನಲ್ಲಿ ಮದುವೆ ಹೆಸರಿಗೆ ಮಾತ್ರ ಅನ್ನುವಂತಾಗಿದೆ. ಮದುವೆ ಬಳಿಕ ಅಕ್ರಮ ಸಂಬಂಧಗಳೇ ಹೆಚ್ಚಾಗುತ್ತಿದೆ ಎಂದು ವರದಿ ಅಂಕಿ ಅಂಶಗಳು ಹೇಳುತ್ತಿದೆ.

ಒಂದು ಮದುವೆ, ಅನೇಕರ ಜೊತೆ ಸಂಬಂಧ! ಭಾರತದಲ್ಲಿ ಹೆಚ್ಚಾಗ್ತಿದೆ ಓಪನ್ ಮ್ಯಾರೇಜ್ ಟ್ರೆಂಡ್

ಥಾಯ್ಲೆಂಡ್ ವಿಶೇಷ ಸಂಪ್ರದಾಯಗಳನ್ನು ಹೊಂದಿದೆ. ಯುವ ಸಮೂಹ ಕಿಕ್ ಸಂಸ್ಕೃತಿಯನ್ನು ಅನುಸರಿಸುತ್ತದೆ. ವಿಶೇಷವಾಗಿ ಥಾಯ್ಲೆಂಡ್‌ನಲ್ಲಿ ಮಿಯಾ ನೊಯಿ( ಅಪ್ರಾಪ್ತ ಪತ್ನಿ) ಅನ್ನೋ ಪರಿಕಲ್ಪನೆ ಇದೆ. ಆದರೆ ಇದ್ಯಾವುದು ಅಕ್ರಮ ಸಂಬಂಧಕ್ಕೆ ಪುಷ್ಠಿ ನೀಡುವ ಸಂಪ್ರದಾಯಗಳಲ್ಲ. ಥಾಯ್ಲೆಂಡ್ ಪ್ರವಾಸಿ ಸಂಸ್ಕೃತಿ ಈ ಅಕ್ರಮ ಸಂಬಂಧವನ್ನು ಹೆಚ್ಚಿಸುವಂತೆ ಪ್ರಚೋದನೆ ನೀಡಿರುವ ಸಾಧ್ಯತೆ ಇದೆ ಅನ್ನೋ ಮಾತುಗಳು ಕೇಳಿಬಂದಿದೆ.  

ಅಕ್ರಮ ಸಂಬಂಧದಲ್ಲಿ ಥಾಯ್ಲೆಂಡ್ ಮೊದಲ ಸ್ಥಾನದಲ್ಲಿದ್ದರೆ, ಎರಡನೇ ಸ್ಥಾನದಲ್ಲಿ ಡೆನ್ಮಾರ್ಕ್ ಕುಳಿತುಕೊಂಡಿದೆ. ಡೆನ್ಮಾರ್ಕ್‌ನಲ್ಲಿ ಶೇಕಡಾ 46ರಷ್ಟು ಮಂದಿ ಅಕ್ರಮ ಸಂಬಂಧ ಹೊಂದಿದೆ ಎಂದು ವರದಿ ಹೇಳುತ್ತಿದೆ. ಇನ್ನು ಜರ್ಮನಿ ಶೇಕಡಾ 45ರಷ್ಟು ಅಕ್ರಮ ಸಂಬಂಧಗಳಿವೆ ಎಂದು  ಅಧ್ಯಯನ ವರದಿ ಹೇಳುತ್ತಿದೆ. ಫ್ರಾನ್ಸ್‌ನಲ್ಲಿ ಅಕ್ರಮ ಸಂಬಂಧ ಶೇಕಡಾ 43ರಷ್ಟಿದೆ ಎಂದಿದೆ.  ನಾರ್ವೆ ದೇಶದ ಜನಸಂಖ್ಯೆಯಲ್ಲಿ ಶೇಕಡಾ 41 ರಷ್ಟು ಮಂದಿ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾರೆ ಎಂದು ಹೇಳುತ್ತಿದೆ. ಬೆಲ್ಜಿಯಂ ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇಕಡಾ 40 ರಷ್ಟು ಮಂದಿ ಅಕ್ರಮ ಸಂಬಂಧಇಟ್ಟುಕೊಂಡಿದ್ದಾರೆ ಎಂದು ವರದಿ ಹೇಳುತ್ತಿದೆ. 

ಅತೀ ಹೆಚ್ಚು ಅಕ್ರಮ ಸಂಬಂಧ ಹೊಂದಿರುವ ದೇಶದ ಪಟ್ಟಿ
ಥಾಯ್ಲೆಂಡ್: ಶೇಕಡಾ 41
ಡೆನ್ಮಾರ್ಕ್: ಶೇಕಡಾ 46
ಜರ್ಮನಿ: ಶೇಕಡಾ 45
ಫ್ರಾನ್ಸ್: ಶೇಕಡಾ 43
ನಾರ್ವೆ: ಶೇಕಡಾ 41
ಬೆಲ್ಜಿಯಂ: ಶೇಕಡಾ 40

ಸಾಮಾನ್ಯವಾಗಿ ಅಕ್ರಮ ಸಂಬಂದ ಎಂದಕೂಡಲೆ ಯೂರೋಪಿಯನ್ ರಾಷ್ಟ್ರಗಳು ತಲೆಗೆ ಬರುತ್ತದೆ. ಆದರೆ ಅಕ್ರಮ ಸಂಬಂಧದಲ್ಲಿ ಏಷ್ಯನ್ ರಾಷ್ಟ್ರಗಳೇ ಮುಂದಿದೆ ಅನ್ನೋ ಸ್ಪೋಟಕ ಮಾಹಿತಿ ಅಧ್ಯಯನ ವರದಿಯಿಂದ ಬಹಿರಂಗವಾಗಿದೆ. ಭಾರತದಲ್ಲಿ ಅಕ್ರಮ ಸಂಬಂಧ ಕಡಿಮೆ ಏನೂ ಇಲ್ಲ. ಆದರೆ ಇಲ್ಲಿನ ಜನಸಂಖ್ಯೆಗೆ ಹೋಲಿಕೆ ಮಾಡಿದರೆ ಶೇಕಡಾವಾರು ಕಡಿಮೆ. ಭಾರತದ ಅತ್ಯಾಧುನಿಕ ಟ್ರೆಂಡ್‌ಗೆ ಒಗ್ಗಿ ಕೊಂಡಿದೆ. ಇಲ್ಲಿ ಲೀವ್ ಇನ್ ರಿಲೇಶನ್‌ಶಿಪ್ ಹೆಚ್ಚಾಗುತ್ತಿದೆ. ಇದರ ಜೊತೆಗೆ ಲೀವ್ ಇನ್ ರಿಲೇಶನ್‌ಶಿಪ್ ಪ್ರಕರಣಗಳು ಹೆಚ್ಚಾಗುತ್ತಿದೆ.

Chanakya Niti: ಹೆಣ್ಣೇ, ನಿನ್ನ ಗಂಡನ ಮನಸ್ಸಿನಲ್ಲೇನಿದೆ ಅಂತ ತಿಳಿದಿರಲಿ ಅಂತಾನೆ ಚಾಣಕ್ಯ!
 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Zodiac Love: ನಿಮ್ಮ ಜನ್ಮರಾಶಿಯ ಪ್ರೀತಿಯ ಭಾಷೆ ಇದು!
Karna Serial: ಆ ಒಂದು ಸತ್ಯ ತೇಜಸ್​ಗೆ ಹೇಳಲು ಬಾಯಿ ಬಿದ್ದೋಗಿತ್ತಾ? ಕರ್ಣನ ಮೇಲೆ ಕಿಡಿಕಾರ್ತಿರೋ ವೀಕ್ಷಕರು