
ಪತಿ ಮತ್ತು ಪತ್ನಿ ಸಂಬಂಧ ವಿಶೇಷವಾದದ್ದು. ಇಬ್ಬರ ಮಧ್ಯೆ ಆಳವಾದ ಬಂಧವಿರುತ್ತದೆ. ಮದುವೆ ನಂತ್ರ ಇಬ್ಬರು ಒಂದಾಗಿ ಜೀವನ ನಡೆಸಿದ್ರೆ ಮಾತ್ರ ಜೀವನ ಸುಖಮಯವಾಗಿರಲು ಸಾಧ್ಯ. ಬದುಕು ಸುಂದರವಾಗಿರಬೇಕೆಂದು ಎಲ್ಲರೂ ಬಯಸ್ತಾರೆ. ಆದ್ರೆ ಕೆಲವೊಮ್ಮೆ ಸಂಗಾತಿಯ ನಡವಳಿಕೆ ಚೆನ್ನಾಗಿರೋದಿಲ್ಲ. ಬಹುತೇಕ ಪುರುಷರು ಪತ್ನಿಯನ್ನು ಪ್ರೀತಿಸ್ತಾರೆ. ಆದ್ರೆ ಅದನ್ನು ಪತ್ನಿ ಎದುರು ತೋರ್ಪಡಿಸುವುದಿಲ್ಲ. ಪ್ರತಿಯೊಬ್ಬರಿಗೂ ಕೋಪ ಬರುವುದು ಸಾಮಾನ್ಯ. ಆದ್ರೆ ಕೆಲವರ ಕೋಪ ಅತಿಯಾಗಿರುತ್ತದೆ. ಮಾತು ಮಾತಿಗೆ ಕೋಪ ವ್ಯಕ್ತಪಡಿಸುವ ಜನರಿದ್ದಾರೆ. ಬೇರೆಯವರ ಮುಂದೆ ನಗ್ತಾ ಮಾತನಾಡುವ ಪತಿ, ಪತ್ನಿ ಜೊತೆಗಿದ್ದಾಗ ಸಿಡಿಮಿಡಿ ಎನ್ನುತ್ತಿರುತ್ತಾನೆ. ಸಣ್ಣ ವಿಷ್ಯಕ್ಕೂ ಪತಿಗೆ ಕೋಪ ಬರುತ್ತದೆ. ಪತಿ ಎಲ್ಲ ವಿಷ್ಯಕ್ಕೆ ಕೋಪ ಮಾಡಿಕೊಂಡ್ರೆ ವೈವಾಹಿಕ ಜೀವನ ಕಷ್ಟವಾಗುತ್ತದೆ. ಪತಿ ಜೊತೆ ಹೇಗೆ ಇರಬೇಕೆಂಬ ಗೊಂದಲ ಪತ್ನಿಗೆ ಶುರುವಾಗುತ್ತದೆ. ಆಕೆ ಆತನಿಂದ ದೂರವಾಗಲು ಬಯಸ್ತಾಳೆ. ವಿಷಯಗಳನ್ನು ಮುಚ್ಚಿಡುತ್ತಾಳೆ. ಹಾಗೆ ಆತ ಹತ್ತಿರಬಂದ್ರೆ ಒಂದು ರೀತಿ ಭಯಕ್ಕೊಳಗಾಗ್ತಾಳೆ. ಕೋಪಗೊಂಡ ಪತಿಯ ಮುಂದೆ ಏನ ಮಾಡ್ಬೇಕೆಂಬುದು ಆಕೆಗೆ ತಿಳಿಯೋದಿಲ್ಲ. ಕೋಪಗೊಂಡ ಗಂಡನನ್ನು ಸಮಾಧಾನಪಡಿಸಿ, ವೈವಾಹಿಕ ಜೀವನವನ್ನು ಸಂತೋಷವಾಗಿಡೋದು ಹೇಗೆ ಎಂಬುದನ್ನು ನಾವಿಂದು ಹೇಳ್ತೇವೆ.
ಸಂಗಾತಿ (Spouse) ಯ ಕೋಪ (Anger) ವನ್ನು ಶಾಂತ (Quiet) ಗೊಳಿಸುವ ಮಾರ್ಗ :
ಇದನ್ನೂ ಓದಿ: RELATIONSHIPನಲ್ಲಿ ಹೆಚ್ಚಾಗ್ತಿದೆ 'ಪಾಕೆಟಿಂಗ್', ನಿಮ್ ಪಾರ್ಟ್‌ನರ್ ಹೀಗೆ ಮಾಡ್ತಿದ್ದಾರಾ ?
ಪತಿ ಕೋಪಗೊಂಡಾಗ ನೀವು ಶಾಂತವಾಗಿರಿ : ಎರಡೂ ಕೈ ತಟ್ಟಿದ್ರೆ ಮಾತ್ರ ಚಪ್ಪಾಳೆ. ಹಾಗೆ ಎರಡೂ ಕಡೆಯಿಂದ ಕ್ರಿಯೆ – ಪ್ರತಿಕ್ರಿಯೆ ಬಂದಾಗ ಮಾತ್ರ ಗಲಾಟೆ ಜೋರಾಗುತ್ತದೆ. ಪತಿ ಕೋಪದಲ್ಲಿ ಕೂಗಾಡುತ್ತಿದ್ದರೆ ಪತ್ನಿ ಕೂಡ ತಾನೇನು ಕಮ್ಮಿ ಎನ್ನುವಂತೆ ವರ್ತಿಸ್ತಾಳೆ. ಆತನಿಗೆ ಸಮನಾಗಿ ನಿಂತು ವಾದ ಮಾಡ್ತಾಳೆ. ಮೊದಲೇ ಕೋಪದಲ್ಲಿ ಕೆಂಡವಾಗಿರುವ ಪತಿಗೆ ಪತ್ನಿಯ ಈ ವರ್ತನೆ ಮತ್ತಷ್ಟು ಸಿಟ್ಟು ತರಿಸಬಹುದು. ಸುಮ್ಮನಿರುವುದು ಅಂದ್ರೆ ಸೋತಿದ್ದೇವೆ ಎಂದರ್ಥವಲ್ಲ. ಹಾಗಾಗಿ ಪತ್ನಿಯಾದವಳು ಕೋಪಗೊಂಡ ಪತಿಯ ಮಾತಿಗೆ ಶಾಂತವಾಗಿ ಪ್ರತಿಕ್ರಿಯೆ ನೀಡಬೇಕು. ಪತ್ನಿ ಸುಮ್ಮನಾದ್ರೆ ಗಲಾಟೆ ಹೆಚ್ಚಾಗೋದಿಲ್ಲ. ಪತ್ನಿ ಕೂಡ ಕೋಪದಲ್ಲಿ ಮಾತನಾಡಿದ್ರೆ ಸಮಸ್ಯೆ ಡಬಲ್ ಆಗುತ್ತದೆ.
ಮೊದಲು ಕಾರಣ ತಿಳಿದುಕೊಳ್ಳಿ : ಪತಿ ಮಾತು ಮಾತಿಗೂ ಕೋಪ ಮಾಡಿಕೊಳ್ಳುತ್ತಿದ್ದರೆ ಅವನ ಕೋಪವನ್ನು ಗಂಭೀರವಾಗಿ ಪರಿಗಣಿಸಿ. ಅವರ ಕೋಪಕ್ಕೆ ಕಾರಣವೇನು ಎಂಬುದನ್ನು ತಿಳಿದುಕೊಳ್ಳಲು ಪ್ರಯತ್ನಿಸಿ. ಸಮಸ್ಯೆ ಬಗೆಹರಿಸಬೇಕೆಂದ್ರೆ ಸಮಸ್ಯೆ ಏನು ಎಂಬುದು ತಿಳಿಯಬೇಕು. ಪತಿ ಆಗಾಗ ಕೋಪಗೊಳ್ಳಲು ಕಾರಣವೇನು ಎಂಬುದನ್ನು ನೀವು ತಿಳಿದ್ರೆ ಅದನ್ನು ಬಗೆಹರಿಸಬಹುದು. ಪತಿಯ ಕೋಪ ತಣಿಸುವ ವಿಧಾನ ಕಂಡು ಹಿಡಿಯಬಹುದು. ಮನೆ, ಕೆಲಸ ಅಥವಾ ಪತ್ನಿಯ ಯಾವುದೋ ವರ್ತನೆ ಪತಿಯ ಕೋಪಕ್ಕೆ ಕಾರಣವಾಗಿರಬಹುದು.
ಉಪಾಯದಿಂದ ಅಪಾಯ ದೂರ ಮಾಡಿ : ಮೊದಲೇ ಹೇಳಿದಂತೆ ಸಮಸ್ಯೆ ತಿಳಿದ್ರೆ ಸಾಲುವುದಿಲ್ಲ. ಆ ಸಮಸ್ಯೆ ದೂರಮಾಡಲು ಶೀಘ್ರ ಪರಿಹಾರ ಕಂಡುಕೊಳ್ಳಬೇಕು. ಕೆಲವೇ ದಿನಗಳಲ್ಲಿ ಅಥವಾ ಕೆಲವೇ ಕ್ಷಣದಲ್ಲಿ ಪತಿ ಕೋಪ ಕಡಿಮೆಯಾಗಲು ಯಾವ ಉಪಾಯವಿದೆ ಎಂಬುದನ್ನು ನೀವು ಪತ್ತೆ ಮಾಡಬೇಕು.
ಇದನ್ನೂ ಓದಿ: ಬೆಡ್‌ರೂಮ್‌ನಲ್ಲಿ ಈ ರೂಲ್ಸ್ ಫಾಲೋ ಮಾಡದಿದ್ರೆ ಮ್ಯಾರೀಡ್ ಲೈಫ್ ಏನೇನೂ ಚೆನ್ನಾಗಿರಲ್ಲ !
ಕುಟುಂಬಸ್ಥರ ನೆರವು : ಪತಿ ತುಂಬಾ ಕೋಪಗೊಂಡರೆ ಮತ್ತು ಕೋಪದಿಂದ ತನ್ನ ಮೇಲೆನಿಯಂತ್ರಣ ಕಳೆದುಕೊಳ್ಳುತ್ತಿದ್ದರೆ ಆತನನ್ನು ಸಂಭಾಳಿಸಲು ನೀವು ಬೇರೆಯವರ ಸಹಾಯವನ್ನು ಪಡೆಯಬಹುದು. ಮಕ್ಕಳಿದ್ದರೆ ಅವರ ಮೂಲಕ ಪತಿಯ ಕೋಪವನ್ನು ಶಮನಗೊಳಿಸಲು ಪ್ರಯತ್ನಿಸಬಹುದು. ಪ್ರತಿಯೊಬ್ಬ ಪೋಷಕರೂ ಮಕ್ಕಳನ್ನು ಪ್ರೀತಿಸುತ್ತಾರೆ. ಹಾಗಾಗಿ ನಿಮ್ಮ ಮುಂದೆ ಪತಿ ವ್ಯಕ್ತಪಡಿಸುವ ಕೋಪವನ್ನು ಮಕ್ಕಳ ಅಥವಾ ಮನೆಯ ಹಿರಿಯರ ಮುಂದೆ ತೋರಿಸಲಾಗುವುದಿಲ್ಲ. ಆದ್ದರಿಂದ ಅವರನ್ನು ಸಮಾಧಾನಪಡಿಸಲು ಮಕ್ಕಳು ಅಥವಾ ಹಿರಿಯರ ಸಹಾಯ ಪಡೆಯಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.