ಥೈಲ್ಯಾಂಡ್: ಶ್ವಾನವೊಂದು ಮಣ್ಣಿನತ್ತ ನೋಡುತ್ತಾ ಜೋರಾಗಿ ಬೊಗಳಲು ಶುರು ಮಾಡಿತ್ತು. ಇದನ್ನು ನೋಡಿದ ಶ್ವಾನದ ಮಾಲೀಕ ನಾಯಿ ಬೊಗಳುತ್ತಿದ್ದ ಕಡೆ ಹೋಗಿ ನೋಡಿದಾಗ ಆತನಿಗೆ ಅಚ್ಚರಿ ಕಾದಿತ್ತು. ಆಗ ತಾನೇ ಹುಟ್ಟಿದಂತಿದ್ದ ಮಗುವಿನ ಪುಟ್ಟದಾದ ಪಾದಗಳು ಮಣ್ಣಿನ ಹೊರಗೆ ಕಾಣಿಸಿದ್ದವು. ಕೂಡಲೇ ಮಣ್ಣನ್ನು ಮೇಲೆ ತೆಗದು ನೋಡಿದಾಗ ಅಲ್ಲಿ ಮಗುವಿತ್ತು. ಕೂಡಲೇ ಶ್ವಾನದ ಮಾಲೀಕ ಮಗವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದು ಪ್ರಸ್ತುತ ಮಗು ಆರೋಗ್ಯವಾಗಿದೆ.
ಶ್ವಾನ ಪಿಂಗ್ ಪಾಂಗ್ ಎಂದಿನಂತೆ ತನ್ನ ಮಾಲೀಕನೊಂದಿಗೆ ವಾಕಿಂಗ್ ಬಂದಿತ್ತು. ಈ ವೇಳೆ ರಸ್ತೆ ಪೊದೆಯೊಂದರ ಸಮೀಪ ನೋಡಿ ಅದು ಬೊಗಳಲು ಶುರು ಮಾಡಿದ್ದಲ್ಲದೇ ಒಂದೇ ಸಮನೆ ಮಣ್ಣನ್ನು ಕಾಲಿನಿಂದ ಕೆರೆಯಲು ಶುರು ಮಾಡಿತ್ತು. ಇದು ಪಿಂಗ್‌ಪಾಂಗ್‌ನ ಸಹಜ ಅಥವಾ ದೈನಂದಿನ ವರ್ತನೆಯಾಗಿರಲಿಲ್ಲ. ಇದರಿಂದ ಅಚ್ಚರಿಗೊಂಡ ಮಾಲೀಕ ಶ್ವಾನ ಈ ರೀತಿ ವರ್ತಿಸುತ್ತಿದ್ದಲ್ಲಿಗೆ ಬಂದು ನೋಡಿದಾಗ ಪುಟ್ಟ ಮಗುವಿನ ಪಾದಗಳು ಅಲ್ಲಿ ಕಾಣಿಸಿಕೊಂಡವು.
Mandya; ಖಾಯಿಲೆ ಎಂದು ಮಗುವನ್ನು ಚರ್ಚ್‌ನಲ್ಲಿ ಬಿಟ್ಟು ಪೋಷಕರು ಪರಾರಿ!
ಆದರೆ ಇಲ್ಲಿ ಮಗುವನ್ನು ತಂದು ಸಮಾಧಿ ಮಾಡಿದವರು ಯಾರೂ ಎಂಬ ಕುತೂಹಲದ ಬೆನ್ನು ಹತ್ತಿ ವಿಚಾರಣೆ ನಡೆಸಿದಾಗ ಬಡ ಕುಟುಂಬವೊಂದಕ್ಕೆ ಸೇರಿದ 15 ವರ್ಷದ ಬಾಲೆಯೊಬ್ಬಳು ಗರ್ಭಿಣಿಯಾಗಿದ್ದು, ಮಗುವನ್ನು ಹುಟ್ಟುವ ಮೊದಲೇ ಗರ್ಭಪಾತ ಮಾಡಿಸುವ ಬಗ್ಗೆಯಾಗಲಿ ಈ ಬಗ್ಗೆ ಆಕೆಗೆ ಸರಿಯಾದ ಮಾರ್ಗದರ್ಶನವಿಲ್ಲದ ಪರಿಣಾಮ ಆಕೆ ಮಗುವಿಗೆ ಜನ್ಮ ನೀಡಿದ್ದಾಳೆ. ಮಗು ಹೆತ್ತ ಬಳಿಕ ಆಕೆ ಸಮಾಜ ಹಾಗೂ ಕುಟುಂಬಕ್ಕೆ ಹೆದರಿ ಜೀವಂತವಾಗಿಯೇ ಮಗುವನ್ನು ತಂದು ಮಣ್ಣಿನಡಿ ಸಮಾಧಿ ಮಾಡಿದ್ದಾಳೆ. ಆದರೆ ಶ್ವಾನದ ಚಾಣಾಕ್ಷತನದಿಂದಾಗಿ ಈ ಮಗು ಬದುಕುಳಿದಿದೆ.
ಪಿಂಗ್ ಪಾಂಗ್ (Ping Pong) ಮಗುವಿರುವ ಬಗ್ಗೆ ಸುಳಿವು ನೀಡುತ್ತಿದ್ದಂತೆ ಶ್ವಾನದ ಮಾಲೀಕ ತ್ವರಿತವಾಗಿ ಕಾರ್ಯ ನಿರ್ವಹಿಸಲು ಶುರು ಮಾಡಿ ಕೂಡಲೇ ಮಗುವನ್ನು ಮಣ್ಣಿನಿಂದ ಹೊರ ತೆಗೆದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಮಗು ಯಾವುದೇ ತೊಂದರೆ ಇಲ್ಲದೇ ಆರೋಗ್ಯವಾಗಿತ್ತು. ಇದಾದ ಬಳಿಕ ಬಾಲಕಿಯನ್ನು ಪೊಲೀಸರು ವಿಚಾರಿಸಿದಾಗ ಆಕೆ ಕಣ್ಣೀರಿಡುತ್ತಾ ತನ್ನ ಪೋಷಕರು ನನ್ನನ್ನು ತಿರಸ್ಕರಿಸುವರೆಂಬ ಭಯದಿಂದ ಈ ಕೃತ್ಯವೆಸಗಿದ್ದಾಗಿ ಹೇಳಿದ್ದಾಳೆ. ಆದಾಗ್ಯೂ ಆಕೆಯನ್ನು ಹತ್ಯೆಗೆ ಯತ್ನಿಸಿದ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ.
2 ಕಿಮೀ ನಡೆದು ಮಾಲೀಕನಿಗೆ ಊಟ ತಲುಪಿಸುವ ಶ್ವಾನ: ವಿಡಿಯೋ ವೈರಲ್
ಇನ್ನು ಸ್ವಾರಸ್ಯಕರ ಸಂಗತಿ ಎಂದರೆ ಹೀಗೆ ಮಗುವನ್ನು ಪತ್ತೆ ಮಾಡಿದ ಶ್ವಾನ ಒಂದು ದಿವ್ಯಾಂಗ ನಾಯಿ ಕೇವಲ ಮೂರು ಕಾಲುಗಳನ್ನು ಹೊಂದಿರುವ ಈ ಪಿಂಗ್ ಪಾಂಗ್ ಹೊಂದಿದ್ದಾನೆ. ಈ ಶ್ವಾನ ಮರಿ ಇದ್ದಾಗ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಹಿಂಭಾಗದ ಒಂದು ಕಾಲನ್ನು ಕಳೆದುಕೊಂಡಿದ್ದ. ಆದರೆ ಈಗ ಶ್ವಾನದ ಈ ಸಾಹಸ ಥೈಲ್ಯಾಂಡ್‌ನ ಪುಟ್ಟ ಹಳ್ಳಿಯ ಟಾಕ್ ಆಫ್ ದ ಟೌನ್ ಆಗಿದ್ದು, ಎಲ್ಲರೂ ಶ್ವಾನವನ್ನು ಹೀರೋ ರೀತಿ ಕಾಣುತ್ತಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.