Unmarried ಜೋಡಿಗೆ ಗೊತ್ತಿರ್ಬೇಕು ಈ ಎಲ್ಲ ನಿಯಮ

By Suvarna News  |  First Published Jun 4, 2022, 11:42 AM IST

ಮದುವೆಯಾಗದ ಮುಂಚೆ ಕದ್ದು ಮುಚ್ಚಿ ಓಡಾಡುವ ಜೋಡಿಗಳ ಸಂಖ್ಯೆ ಸಾಕಷ್ಟಿದೆ. ವಿವಾಹಿತ ಜೋಡಿಗಿರುವಷ್ಟು ಸ್ವಾತಂತ್ರ ಅವರಿಗಿರೋದಿಲ್ಲ. ಕೆಲ ಪಾರ್ಕ್ ನಲ್ಲಿ ಅವಿವಾಹಿತ ಜೋಡಿಗೆ ಎಂಟ್ರಿ ಇಲ್ಲ. ನಾವೆಲ್ಲಿ ಕೂರೋದು ಎನ್ನುವ ಕಪಲ್ಸ್ ಗೆ ಇಲ್ಲೊಂದಿಷ್ಟು ಮಾಹಿತಿ ಇದೆ.
 


ಅವಿವಾಹಿತ  (Unmarried) ಜೋಡಿ (Couple) ರಸ್ತೆ ಮೇಲೆ ಕೈ ಹಿಡಿದು ಹೋಗ್ತಿದ್ದರೆ ಎಲ್ಲರ ಕಣ್ಣು ಅವರ ಮೇಲಿರುತ್ತದೆ. ರೆಸ್ಟೋರೆಂಟ್ (Restaurant), ಪಾರ್ಕ್ (Park) ,ಮಾಲ್, ಸಿನಿಮಾ ಹಾಲ್ (Cinema Hall)  ಹೀಗೆ ಅಲ್ಲಲ್ಲಿ ಜೋಡಿ ಸ್ವಚ್ಚಂದವಾಗಿ ಓಡಾಡೋದನ್ನು ನಾವು ನೋಡ್ಬಹುದು. ಅನೇಕ ಸಿನಿಮಾಗಳಲ್ಲಿ ಅವಿವಾಹಿತ ಜೋಡಿ ಅನುಭವಿಸುವ ಸಮಸ್ಯೆಯನ್ನು ತೋರಿಸಲಾಗುತ್ತದೆ. ಕೆಲ ಹೊಟೇಲ್ ಗೆ ಹೋಗಿ ಜೋಡಿ ಪೊಲೀಸ್ ಕೈಗೆ ಸಿಕ್ಕಿ ಬೀಳ್ತಾರೆ. ಪೊಲೀಸರು ಸಾಕಷ್ಟು ಪ್ರಶ್ನೆ ಕೇಳಿ ಹಿಂಸೆ ನೀಡ್ತಾರೆ. ಹೊಟೇಲ್ ಮಾತ್ರವಲ್ಲ ಪಾರ್ಕ್ ಗಳಲ್ಲಿಯೂ ಇದನ್ನು ಅನೇಕರು ಅನುಭವಿಸುತ್ತಿರುತ್ತಾರೆ. ವಿವಾಹಿತ ಜೋಡಿಗೆ ಅನೇಕ ನಿಯಮಗಳು ತಿಳಿದಿರುವುದಿಲ್ಲ. ಯಾವ ಸ್ಥಳದಲ್ಲಿ ಯಾವ ನಿಯಮವಿದೆ ಎಂಬುದು ಅವಿವಾಹಿತ ಜೋಡಿಗೆ ತಿಳಿದಿರಬೇಕು. ಆಗ ಬುದ್ಧಿವಂತಿಕೆಯಿಂದ ವರ್ತಿಸಬಹುದು. ಜೊತೆಗೆ ಆರಾಮವಾಗಿ, ಸ್ವತಂತ್ರವಾಗಿ ಓಡಾಡಬಹುದು. ನಿಮ್ಮನ್ನು ಪ್ರಶ್ನೆ ಮಾಡಿದ್ರೆ ನೀವು ಅವರಿಗೆ ಸರಿಯಾದ ಮಾಹಿತಿ ನೀಡುವ ಮೂಲಕ ಮುಜುಗರಕ್ಕೊಳಗಾಗುವುದನ್ನು ತಪ್ಪಿಸಿಕೊಳ್ಳಬಹುದು. ಇಂದು ನಾವು ಅವಿವಾಹಿತ ಜೋಡಿ ತಿಳಿಯಬೇಕಾದ ಕೆಲವು ವಿಷ್ಯಗಳ ಬಗ್ಗೆ ಹೇಳ್ತೆವೆ ಕೇಳಿ.

ಅವಿವಾಹಿತ ಜೋಡಿಗೆ ತಿಳಿದಿರಬೇಕು ಈ ಸಂಗತಿ :  

Tap to resize

Latest Videos

• ಲಿವ್ ಇನ್ ರಿಲೇಷನ್ಶಿಪ್ ಕಾನೂನು (Live In Relationship ACT) : ಇತ್ತೀಚಿನ ದಿನಗಳಲ್ಲಿ ಲಿವ್ ಇನ್ ರಿಲೇಷನ್ಶಿಪ್ ಪ್ರಸಿದ್ಧಿ ಪಡೆಯುತ್ತಿದೆ. 2013ರಲ್ಲಿ ಸುಪ್ರೀಂ ಕೋರ್ಟ್ ಇದಕ್ಕೆ ಸಂಬಂಧಿಸಿದಂತೆ ತೀರ್ಪನ್ನು ನೀಡಿತ್ತು. ವಯಸ್ಕ ಹುಡುಗ ಹಾಗೂ ಹುಡುಗಿ ಲಿವ್ ಇನ್ ನಲ್ಲಿ ಇರಬಹುದು ಎಂದಿತ್ತು. ಅಂದ್ರೆ ಹುಡುಗಿಗೆ 18 ವರ್ಷ ಹಾಗೂ ಹುಡುಗನಿಗೆ 21 ವರ್ಷಕ್ಕಿಂತ ಹೆಚ್ಚಾಗಿದ್ದರೆ ಇಬ್ಬರೂ ಲಿವ್ ಇನ್ ನಲ್ಲಿರಲು ಯಾವುದೇ ಅಡ್ಡಿಯಿಲ್ಲವೆಂದು ಕೋರ್ಟ್ ಹೇಳಿತ್ತು. ಲಿವ್ ಇನ್ ನಲ್ಲಿರುವವರು ಶಾರೀರಿಕ ಸಂಬಂಧ ಬೆಳೆಸಲು ಸ್ವತಂತ್ರವಿದೆ.

ಹೆಣ್ಮಕ್ಕಳು ಎಷ್ಟು ಮಾತನಾಡ್ತಾರಪ್ಪ ಅಂತ ದೂರು ಹೇಳ್ಬೇಡಿ, ಅದಕ್ಕೇನು ಕಾರಣ ತಿಳ್ಕೊಳ್ಳಿ

•  ಹೊಟೇಲ್ ನಲ್ಲಿರುವ ನಿಯಮ (Hotel Stay Rules) : ವಯಸ್ಕ ಹುಡುಗ – ಹುಡುಗಿ ಒಟ್ಟಿಗೆ ಹೊಟೇಲ್ ನಲ್ಲಿ ಇದ್ದರು ಎಂಬ ಸುದ್ದಿಯನ್ನು ನೀವು ಕೇಳಿರ್ತೀರಿ. ಆದ್ರೆ ಕಾನೂನಿನ ಪ್ರಕಾರ ವಯಸ್ಕ ಹುಡುಗ –ಹುಡುಗಿ ಹೊಟೇಲ್ ರೂಮಿನಲ್ಲಿ ಒಟ್ಟಿಗೆ ಇರಬಹುದು. ಇಬ್ಬರು ಒಪ್ಪಿಗೆ ಮೇಲೆ ತಂಗಬಹುದು. ಹಾಗೆಯೇ ಇಬ್ಬರೂ ದಾಖಲೆ ನೀಡಬೇಕು. ಕೆಲ ಹೊಟೇಲ್ ದಾಖಲೆ ಕೇಳುವುದಿಲ್ಲ. ಆಗ ಅದರ ನಿಯಮಗಳನ್ನು ನೀವು ಓದಿ ಸಹಿ ಹಾಕ್ಬೇಕು.

• ಸಾರ್ವಜನಿಕ ಜಾಗ (Public Place) ದಲ್ಲಿ ಕುಳಿತುಕೊಳ್ಳುವ ನಿಯಮ : ಅವಿವಾಹಿತರು ಸಾರ್ವಜನಿಕ ಸ್ಥಳದಲ್ಲಿ ಒಟ್ಟಿಗೆ ಕುಳಿತುಕೊಳ್ಳಬಹುದು. ಆದ್ರೆ ಸೆಕ್ಷನ್ 294 ಪ್ರಕಾರ, ಸಾರ್ವಜನಿಕ ಪ್ರದೇಶದಲ್ಲಿ ಅಶ್ಲೀಲ ವರ್ತನೆ ಮಾಡಿದ್ರೆ ಅವರಿಗೆ ಮೂರು ತಿಂಗಳ ಶಿಕ್ಷೆಯಾಗುತ್ತದೆ. ಹಾಗಾಗಿ ಸಾರ್ವಜನಿಕ ಪ್ರದೇಶದಲ್ಲಿ ಕುಳಿತಾಗ ಯಾವುದೇ ಅಸಭ್ಯ ವರ್ತನೆ ಮಾಡ್ಬೇಡಿ. ಹಾಗೆ ನೀವು ಸಭ್ಯವಾಗಿ ಕುಳಿತಿದ್ದರೆ ನಿಮ್ಮನ್ನು ಪ್ರಶ್ನೆ ಮಾಡಲು ಸಾಧ್ಯವಿಲ್ಲ. ಒಂದ್ವೇಳೆ ಪೊಲೀಸರು ಪ್ರಶ್ನೆ ಮಾಡಿದ್ರೆ ನೀವು ಇದನ್ನು ಹೇಳಬಹುದು.

• ಅಪಶಬ್ಧಕ್ಕೆ (Language) ನಿಯಮ : ಅಪಶಬ್ಧಗಳ ಬಳಕೆ ಸಲ್ಲದು. ಸಂಬಂಧದಲ್ಲಿರುವಾಗ ಅಪಶಬ್ಧ ಬಳಕೆಯಾದ್ರೆ ಮಹಿಳೆಯಾದವಳು ಅದನ್ನು ಕೌಟುಂಬಿಕ ದೌರ್ಜನ್ಯವೆಂದು ದೂರು ನೀಡಬಹುದು. ಹುಡುಗಿಯರು ಈ ಸಂಬಂಧ ರಕ್ಷಣೆ ನೀಡುವಂತೆ ಮನವಿ ಮಾಡಬಹುದು.

Parenting Tips : ಮಕ್ಕಳ ಮುಂದೆ ಈ ಕೆಲಸ ಮಾಡದಂತೆ ನೋಡಿಕೊಳ್ಳಿ

• ದೈಹಿಕ ಸಂಬಂಧ (Physical Relation) : ಭಾರತದ ಸಂವಿಧಾನವು 21 ನೇ ವಿಧಿಯ ಮೂಲಕ ಖಾಸಗಿತನದ ಹಕ್ಕನ್ನು ಒದಗಿಸುತ್ತದೆ. ಅಂದ್ರೆ ಖಾಸಗಿ ಜಾಗದಲ್ಲಿ ಅವಿವಾಹಿತ ಜೋಡಿ ಶಾರೀರಿಕ ಸಂಬಂಧ ಬೆಳೆಸಬಹುದು. 2017 – 2018ರಲ್ಲಿ ಸುಪ್ರೀಂ ಕೋರ್ಟ್ ಈ ಪ್ರಕರಣದಲ್ಲಿ ಮತ್ತೊಮ್ಮೆ ಸ್ಪಷ್ಟನೆ ನೀಡಿತ್ತು. 
 

click me!