ಏನ್ ಕಾಲ ಬಂತಪ್ಪಾ..ಒಂದಷ್ಟು ಮಂದಿ ಹುಡುಗರು (Boys), ಹುಡುಗಿಯರು ಮದ್ವೆಯಾಗೋಕೆ ಜೋಡಿ ಸಿಗ್ತಿಲ್ಲ ಅಂತ ಒದ್ದಾಡ್ತಿದ್ರೆ ಇನ್ನು ಕೆಲ ಮಂದಿ ವಸ್ತು (Things)ಗಳನ್ನೇ ಮದ್ವೆಯಾಗೋಕೆ ಹೊರಟಿದ್ದಾರೆ. ಹೌದು ಇಲ್ಲೊಬ್ಬ ವ್ಯಕ್ತಿ ಹುಡುಗೀರೆಲ್ಲಾ (Girls) ಬೆನ್ನು ಬಿದ್ರು ನಾನು ಮಾತ್ರ ಕಾರನ್ನೇ ಮದ್ವೆ (Marriage)ಯಾಗ್ತೀನಿ ಅಂತ ಹಠ ಹಿಡಿದು ಕೂತಿದ್ದಾನೆ.
ಸಮಾಜ (Society)ದಲ್ಲಿ ಹಿಂದಿನಿಂದಲೂ ಗಂಡು-ಹೆಣ್ಣು (Men-women) ಮದುವೆಯಾಗೋದು ರೂಢಿಯಲ್ಲಿದೆ. ಆದ್ರೆ ಇತ್ತೀಚಿಗೆ ಜನ್ರು ಹುಡುಗ-ಹುಡುಗಾನೂ, ಹುಡುಗಿ-ಹುಡುಗಿಯೂ ಮದ್ವೆಯಾಗ್ತಾರೆ. ಅಷ್ಟೇ ಅಲ್ಲ, ರೋಬೋಟ್ (Robot), ಕನಸಿನಲ್ಲಿ ಬರುವ ಹುಡುಗಿ ಈಗ ವಿಚಿತ್ರ ಭ್ರಮೆಗಳ ಜೊತೆಯೂ ಜನರು ಸಂಬಂಧ (Relationship) ಬೆಳೆಸಿಕೊಳ್ಳುತ್ತಾರೆ. ಇಲ್ಲಾಗಿದ್ದು ಇದೇ. ಇಲ್ಲೊಬ್ಬಾತ ಎಲ್ಲಾ ಬಿಟ್ಟು ನಾನು ಕಾರನ್ನೇ (Car) ಮದುವೆಯಾಗ್ತೀನಿ ಅಂತ ಹಠ ಹಿಡಿದು ಕೂತಿದ್ದಾನೆ. ಅರೆ, ಇದೇನಪ್ಪಾ ವಿಚಿತ್ರ ಅನ್ಬೇಡಿ. ಇಲ್ಲಿದೆ ಸಂಪೂರ್ಣ ಮಾಹಿತಿ.
ಹೆಣ್ಣು ಗಂಡು ಮದುವೆಯಾಗುವುದು ಹಾಗಿರಲಿ, ಹೆಣ್ಣು ಹೆಣ್ಣನ್ನೇ ಮದುವೆಯಾಗುವುದು, ಗಂಡು ಗಂಡನ್ನೇ ಮದುವೆಯಾಗುವುದು ಅಚ್ಚರಿಯ ವಿಷಯವಾಗಿ ಉಳಿದಿಲ್ಲ. ಮಾತ್ರವಲ್ಲ ಇದು ಜನಸಾಮಾನ್ಯರ ನಡುವೆಯೀಗ ಅಚ್ಚರಿಯ ವಿಷಯವಾಗಿಯೂ ಉಳಿದಿಲ್ಲ. ಇದೆಲ್ಲವನ್ನೂ ಬಿಟ್ಟು ರೋಬೋಟ್, ಕಂಪ್ಯೂಟರೈಸ್ಡ್ ವರ್ಷನ್ ವ್ಯಕ್ತಿ, ಹೋಲೋಗ್ರಾಮ್ (ವ್ಯಕ್ತಿಯ ಕಾಲ್ಪನಿಕ ರೂಪ)ನ್ನೂ ಮದುವೆಯಾದವರೂ ಇದ್ದಾರೆ. ಆದ್ರೆ ವಸ್ತುಗಳನ್ನು ಮದುವೆಯಾಗೋದು ಅಂದ್ರೆ ಅದೆಂಥಾ ವಿಚಿತ್ರ ಅಲ್ವಾ ?
ಹುಡುಗರು ಯಾರೂ ಇಷ್ಟವಾಗ್ತಿಲ್ವಂತೆ ! ವಿಮಾನಾನೇ ಬಾಯ್‌ಫ್ರೆಂಡ್, ಅದನ್ನೇ ಮದ್ವೆಯಾಗ್ತೀನಿ ಅಂತಾಳೆ !
ನೀವು ತಮಿಳಿನ ಎಂದಿರನ್ ಚಿತ್ರವನ್ನು ನೋಡಿದ್ದೀರಾ. ಸಂಪೂರ್ಣವಾಗಿ ರೊಬೋಟ್‌ಗಳನ್ನು ಆಧರಿಸಿ ನಿರ್ಮಿಸಿದ ಚಿತ್ರವಿದು. ರೊಬೋಟ್‌ನ್ನು ತಯಾರಿಸುವ ವಿಜ್ಞಾನಿ ಅದನ್ನು ಅಡ್ವಾನ್ಸ್‌ಡ್ ಆಗಿ ಮಾಡಲು ಅದಕ್ಕೆ ಭಾವನೆಗಳನ್ನು ಸಹ ಅಳವಡಿಸುತ್ತಾನೆ. ಆದರೆ ಕೊನೆಗೆ ಆ ರೊಬೋಟ್ ವಿಜ್ಞಾನಿಯ ಪ್ರೇಯಸಿಯ ಮೇಲೆಯೆ ಭಾವನೆ ಬೆಳೆಸಿಕೊಳ್ಳುತ್ತದೆ. ರೊಬೋಟ್‌ಗೂ ಭಾವನೆ ಬಂದಾರೆ ಏನಾಗುತ್ತದೆ ಎಂಬುದು ನಂತರದ ಕಥಾಹಂದರ. ಇಲ್ಲೂ ಅಂಥದ್ದೇ ಒಂದು ಘಟನೆ ನಡೆದಿದೆ. ಆದರೆ ಸ್ಪಲ್ಪ ವ್ಯತ್ಯಾಸವಿದೆ. ಇಲ್ಲಿ ವ್ಯಕ್ತಿಯೊಬ್ಬ ತನ್ನ ಕಾರನ್ನೇ ಮದುವೆಯಾಗಲು ಬಯಸುತ್ತಿದ್ದಾನೆ.
ತಾನು ಮೊದಲ ನೋಟದಲ್ಲೇ ಕಾರನ್ನು ಪ್ರೀತಿಸುತ್ತಿದ್ದು, ಅದರೊಂದಿಗೆ ನಿಕಟವಾದ ಸಂಬಂಧವನ್ನು ಹೊಂದಿದ್ದಾನೆ. ನಾನೇನಾದ್ರೂ ಮದ್ವೆಯಾದ್ರೆ ಕಾರನ್ನು ಮಾತ್ರ ಅಂತ ಹಠ ಹಿಡಿದು ಕುಳಿತಿದ್ದಾನೆ. ನಥಾನಿಯಲ್ ಎಂಬವರು ತಮ್ಮ ಚೇಸ್ ಎಂಬ ಅಡ್ಡ ಹೆಸರಿನ 1998ರ ಚೇವಿ ಮಾಂಟೆ ಕಾರ್ಲೊ ಅವರೊಂದಿಗೆ ಸಂಬಂಧ ಹೊಂದಿದ್ದಾರೆ. USನ ಅರ್ಕಾನ್ಸಾಸ್‌ನ ನಥಾನಿಯಲ್, 2005 ರಲ್ಲಿ ಕಾರ್ ಡೀಲರ್‌ಶಿಪ್‌ನಲ್ಲಿ ಚೇಸ್‌ನನ್ನು ನೋಡಿದರು. ಅಲ್ಲಿಂದ ಆವರು ಕಾರನ್ನು ಪ್ರೀತಿಸಲು ಆರಂಭಿಸಿದರು. ಕಾಲ ಕ್ರಮೇಣ ಅವರ ಜೊತೆ ಗಂಭೀರ ಸಂಬಂಧವನ್ನು ಹೊಂದಲು ಚಿಂತಿಸಿದರು ಎಂದು ತಿಳಿದುಬಂದಿದೆ.
Weddingಗೂ ಮುನ್ನ ಮಾಡಿದ ಒಪ್ಪಂದವೀಗ ತಂದಿದೆ ತಲೆನೋವು!
ನಾನು ನನ್ನ ಕಾರಿನೊಂದಿಗೆ ಗಂಭೀರ ಸಂಬಂಧದಲ್ಲಿದ್ದೇನೆ. ಇದು ಮೊದಲ ನೋಟದಲ್ಲೇ ಉಂಟಾದ ಪ್ರೀತಿಯಾಗಿತ್ತು. ಕಾರಿನ ದೇಹ ಮತ್ತು ಆಂತರಿಕ ಮತ್ತು ಎಲ್ಲವೂ ಒಟ್ಟಿಗೆ ಸರಿಹೊಂದುವಂತೆ ತೋರುತ್ತಿದೆ. ನಾನು ಕಾರಿನ ಜೊತೆ ತಕ್ಷಣದ ಸಂಪರ್ಕವನ್ನು ಅನುಭವಿಸಿದೆ ಎಂದು ನಥಾನಿಯಲ್ ಹೇಳುತ್ತಾರೆ. ನಾನು ಯಾಕೆ ಹಾಗೆ ಭಾವಿಸುತ್ತೇನೆ ಎಂದು ನನಗೆ ತಿಳಿದಿಲ್ಲ, ಆದರೆ ನಾನು ಚೇಸ್ ಅನ್ನು ಸಂಪೂರ್ಣವಾಗಿ ಪ್ರೀತಿಸುತ್ತೇನೆ ಎಂದು ನನಗೆ ತಿಳಿದಿದೆ. ನಾವು ಯಾವಾಗಲೂ ಒಟ್ಟಿಗೆ ಒಳ್ಳೆಯ ಸಮಯವನ್ನು ಹೊಂದಿದ್ದೇವೆ. ಹೀಗಾಗಿ ಜೀವನಪರ್ಯಂತೆ ಜೊತೆಯಾಗಿ ಇರಲು ಬಯಸುತ್ತೇವೆ ಎನ್ನುತ್ತಾರೆ. ನಥಾನಿಯಲ್ ತಮ್ಮ ಕಾರಿನೊಂದಿಗೆ ಟೆಲಿಪಥಿಕ್ ಮೂಲಕ ಸಂವಹನ ನಡೆಸುತ್ತಾರಂತೆ.
ನಥಾನಿಯಲ್‌ಗೆ ಕಾರುಗಳಲ್ಲಿ ಆಸಕ್ತಿಯು ಹದಿಹರೆಯದವನಾಗಿದ್ದಾಗ ಪ್ರಾರಂಭವಾಯಿತಂತೆ. ಆದರೆ ಅದರ ಬಗ್ಗೆ ಹೆಚ್ಚು ಯೋಚಿಸಲು ಹೋಗಲ್ಲಿಲ್ಲ. ಕಾಲ ಕ್ರಮೇಣ ಹಲವಾರು ಹುಡುಗಿಯರು ಗರ್ಲ್‌ಫ್ರೆಂಡ್ ಆದರು. ಆದರೆ ಕಾರಿನ ಜೊತೆಗಿದ್ದ ಒಡನಾಟ ನನಗೆ ಯಾರೊಂದಿಗೂ ಉಂಟಾಗಲ್ಲಿಲ್ಲ ಎಂದು ನಥಾನಿಯಲ್ ಹೇಳುತ್ತಾರೆ. ಚೇಸ್‌ಗೆ ಏನಾದರೂ ಸಂಭವಿಸಿದರೆ ನನ್ನ ಹೃದಯವು ನಿಲ್ಲುತ್ತದೆ ಎಂದು ಅವರು ಹೇಳಿದರು. ಅವರು ಚೇಸ್ ಅವರೊಂದಿಗಿನ ಸಂಬಂಧವನ್ನು ರಹಸ್ಯವಾಗಿಟ್ಟಿದ್ದರು. ಆದರೆ 2012ರಲ್ಲಿ ಈ ಕುರಿತು ಸಾಕ್ಷ್ಯಚಿತ್ರ ಹೊರಬಂದಾಗ ಅವರ ಕುಟುಂಬ ಮತ್ತು ಸ್ನೇಹಿತರಿಗೆ ತಿಳಿಸಿದರು.