ಗಡ್ಡ ಬಿಟ್ಟ ಹುಡುಗರಿಗೆ ಈ ಗ್ರಾಮದಲ್ಲಿ ಹುಡುಗಿ ಕೊಡಲ್ಲ, ಕ್ಲೀನ್ ಶೇವ್ ಮಾಡಿದ್ರೆ ಮಾತ್ರ ಮದ್ವೆ !

By Suvarna NewsFirst Published Jun 17, 2022, 12:05 PM IST
Highlights

ಇಂದಿನ ಯುವ ಪೀಳಿಗೆಯಲ್ಲಿ ಗಡ್ಡ (Beard)  ಬಿಡುವ ಹವ್ಯಾಸ ವ್ಯಾಪಕವಾಗಿ ಹೆಚ್ಚಾಗತೊಡಗಿದೆ. ಸೆಲಿಬ್ರಿಟಿಗಳು ಹಾಗೂ ಇತರರನ್ನು ನೋಡಿ ಯುವಕರು ತಮ್ಮ ಗಡ್ಡವನ್ನು ಬೆಳೆಸುತ್ತಿದ್ದಾರೆ. ಹುಡುಗರು ಗಡ್ಡ ಬಿಡೋದು ಸ್ಟೈಲಿಶ್ಟ್ (Stylist) ಅಂತಾನೇ ಪರಿಗಣಿಸಲಾಗಿದೆ. ಆದ್ರೆ ರಾಜಸ್ಥಾನದ ಒಂದೂರಲ್ಲಿ ಗಡ್ಡ ಬಿಟ್ಟ ಹುಡುಗರಿಗೆ (Boys) ಹುಡುಗಿಯನ್ನೇ ಕೊಡಲ್ವಂತೆ.

ಗಡ್ಡ (Beard)ದ ಹುಡುಗ (Boy), ಹುಡುಗಿ (Girl)ಯರನ್ನು ಸೆಳೆಯುತ್ತಾನೆ. ಇದ್ರಲ್ಲಿ ಅತಿಶಯೋಕ್ತಿಯಿಲ್ಲ. ಬಹುತೇಕ ಹುಡುಗಿಯರಿಗೆ ಗಡ್ಡ ಬಿಟ್ಟ ಹುಡುಗ ಇಷ್ಟವಾಗ್ತಾನೆ. ಇದನ್ನು ತಿಳಿದುಕೊಂಡೇ ಹುಡುಗಿಯರನ್ನು ಸೆಳೆಯಲು ಹುಡುಗರು ಸ್ಟೈಲಿಶ್ಟ್ ಆಗಿ ಗಡ್ಡ ಬಿಟ್ಕೋತಾರೆ..
 ಅನೇಕರು ತಮ್ಮ ನೆಚ್ಚಿನ ಸ್ಟಾರ್ ಇಲ್ಲವೆ ಕ್ರಿಕೆಟ್ ಆಟಗಾರ, ಸೆಲೆಬ್ರಿಟಿ (Celebrity )ಗಡ್ಡ ಬಿಟ್ಟಿದ್ದಾರೆ ಎಂಬ ಕಾರಣಕ್ಕೆ ತಾವೂ ಶೇವ್ (shaving )ಮಾಡೋದನ್ನು ಬಿಟ್ಟು ಬಿಡ್ತಾರೆ. ಮಾರುಕಟ್ಟೆಯಲ್ಲಿ ಕಪ್ಪಾದ, ಉದ್ದದ ಗಡ್ಡ ಬೆಳೆಯಲು ಸಾಕಷ್ಟು ಸೌಂದರ್ಯವರ್ಧಕಗಳು ಲಭ್ಯವಿವೆ. ಸೌಂದರ್ಯದ ವಿಷ್ಯ ಬಂದಾಗ ಹುಡುಗ್ರು ಲಾಸ್ಟ್ ಬೆಂಚ್‌ನಲ್ಲಿರುತ್ತಾರೆ. ಬೆರಳೆಣಿಕೆಯಷ್ಟು ಹುಡುಗರು ಮಾತ್ರ ಇದ್ರಲ್ಲಿ ಆಸಕ್ತಿ ತೋರುತ್ತಾರೆ. ಆದ್ರೆ ಹೆಚ್ಚಿನ ಹುಡುಗರು ಗಡ್ಡ ಪ್ರೀತಿಯನ್ನು ಮಾತ್ರ ಬಿಡೋದಿಲ್ಲ.

ಎಲ್ಲರ ಮುಂದೆ ಸುಂದರವಾಗಿ ಕಾಣ್ಬೇಕು, ಒಂದಿಷ್ಟು ಹುಡುಗಿಯರು ತಿರುಗಿ, ತಿರುಗಿ ನೋಡ್ಬೇಕೆಂದ್ರೆ ಗಡ್ಡದ ಸೌಂದರ್ಯಕ್ಕೆ ಹುಡುಗರು ಇಂಪಾರ್ಟೆನ್ಸ್ ನೀಡ್ಲೇಬೇಕು. ಹುಡುಗಿಯರಿಗೆ ಮೇಕಪ್ ಹೇಗೆ ಮುಖ್ಯವೋ, ಹುಡುಗರಿಗೆ ಗಡ್ಡ ತುಂಬಾ ಒಳ್ಳೇದು ಅನ್ನೋದು ಅಲಿಖಿತ ನಿಯಮ. ಆದ್ರೆ ರಾಜಸ್ಥಾನ ಈ ಊರಲ್ಲಿ ಮಾತ್ರ ಗಡ್ಡ ಬಿಟ್ಟ ಹುಡುಗರಿಗೆ ಮದ್ವೆಯಾಗೋಕೆ ಹುಡುಗಿಯನ್ನು ಕೊಡಲ್ಲ. ಕ್ಲೀನ್ ಶೇವ್ ಮಾಡಿದ್ರೆ ಮಾತ್ರ ಹುಡುಗಿ ಕೇಳೋಕೆ ಮನೆಗೆ ಬರ್ಬೋದು. ಅರೆ ಇದೆಂಥಾ ವಿಚಿತ್ರ ನಿಯಮ, ಇಂಥಾ ಕಟ್ಟುಪಾಡು ಯಾಕೆ ? ವಿವರವಾಗಿ ತಿಳಿಯೋಣ.

ಗಡ್ಡ ಬಿಟ್ಟಿರೋರೇ ಗಮನಿಸಿ ! ಬೇಸಿಗೆಗೆ ಈ ವಿಧಾನ ಸೂಪರ್!

ಮದುವೆ (Marriage) ಹಿಂದಿನಿಂದಲೂ ಸಾಂಪ್ರದಾಯಿಕವಾಗಿ ನಡೆದುಕೊಂಡು ಬಂದಿರುವ ಪದ್ಧತಿ. ಆದರೆ ಇತ್ತೀಚಿನ ವರ್ಷಗಳಲ್ಲಿ ಮದ್ವೆಗೆ ಆಧುನಿಕತೆ ತಂದು ಬೇಕಾಬಿಟ್ಟಿ ಸಮಾರಂಭಗಳನ್ನು ನಡೆಸುತ್ತಾರೆ. ವಿಚಿತ್ರವಾಗಿ ವರ್ತಿಸುತ್ತಾರೆ. ಇದು ಅದೆಷ್ಟೋ ಹಿರಿಯರಲ್ಲಿ ಅಸಮಾಧಾನಕ್ಕೂ ಕಾರಣವಾಗಿದೆ. ಈ ಊರಿನ ಜನರು ಊರಿನ ಗಲಾಟೆ ಮದುವೆಗಳಿಂದ ಬೇಸತ್ತಿದ್ದರು. ಮದ್ವೆ ಹೆಸರಲ್ಲಿ ಹುಡುಗ-ಹುಡುಗಿಯರ ಹುಚ್ಚಾಟಗಳನ್ನು ನೋಡಿ ಹೈರಾಣಾಗಿದ್ದರು. ಅದಕ್ಕೆ ಇಂಥಾ ನಿರ್ಧಾರ ತೆಗೆದುಕೊಂಡಿದ್ದಾರಂತೆ.

ರಾಜಸ್ಥಾನದ (Rajasthan) ಸಮುದಾಯವೊಂದು ಗಡ್ಡ ಬಿಟ್ಟ ಯುವಕರನ್ನು ಮದುವೆಯಾಗಲು ಬಿಡುವುದಿಲ್ಲ ಎಂದು ನಿರ್ಧರಿಸಿದೆ. ರಾಜ್ಯದ ಪಾಲಿ ಜಿಲ್ಲೆಯ 19 ಗ್ರಾಮಗಳ ಕುಮಾವತ್ ಸಮುದಾಯವು ಅಂಗೀಕರಿಸಿದ ನಿರ್ಣಯದಲ್ಲಿ ಕ್ಲೀನ್ ಶೇವ್ ಹೊಂದಿರುವ ಯುವಕರಿಗೆ ಮಾತ್ರ ಮದುವೆಯಾಗಲು ಅವಕಾಶವಿದೆ ಎಂದು ಹೇಳಿದೆ. ಫ್ಯಾಷನ್ ಪರವಾಗಿಲ್ಲ ಆದರೆ ವರನಿಗೆ (Groom) ಫ್ಯಾಷನ್ ಹೆಸರಲ್ಲಿ ಗಡ್ಡ ಬೇಡ ಮದುವೆ ಸಂಸ್ಕಾರ ಮತ್ತು ಇದರಲ್ಲಿ ವರನನ್ನು ರಾಜನಂತೆ ಕಾಣಲಾಗುತ್ತದೆ ಹಾಗಾಗಿ ಕ್ಲೀನ್ ಶೇವ್ ಮಾಡಿಕೊಳ್ಳಬೇಕು ಎಂದು ನಿರ್ಣಯದಲ್ಲಿ ತಿಳಿಸಲಾಗಿದೆ. ಇದರೊಂದಿಗೆ 19 ಗ್ರಾಮಗಳ ಪಂಚಾಯಿತಿಯು ಮದುವೆಯ ವೆಚ್ಚವನ್ನು ಕಡಿತಗೊಳಿಸಲು ಮತ್ತು ಅವುಗಳನ್ನು ಸರಳಗೊಳಿಸಲು ಹಲವು ನಿಯಮಗಳನ್ನು ಮಾಡಿದ್ದಾರೆ.

Beard Washing Mistakes: ಹುಡ್ಗೀರ್ನ ಮೆಚ್ಸೋಕೆ ಗಡ್ಡ ಬಿಟ್ರೆ ಸಾಲಲ್ಲ, ಅದನ್ನು ಕ್ಲೀನಾಗೂ ಇಟ್ಕೋಬೇಕು!

ಬಂಡೋಲಿ ಡಿಜೆ ಡ್ಯಾನ್ಸ್‌ಗೆ ಪಂಚಾಯತ್ ಆಕ್ಷೇಪ ವ್ಯಕ್ತಪಡಿಸಿ ನಿಷೇಧಿಸಿದೆ. ಮಾತ್ರವಲ್ಲ ಮದುವೆ ಸಮಾರಂಭಗಳಲ್ಲೂ ಅಫೀಮು ನಿಷೇಧಿಸಲಾಗಿದೆ. ಫ್ಯಾಷನ್ ಹೆಸರಿನಲ್ಲಿ ಥೀಮ್ ಆಧಾರಿತ ಹಳದಿ ಸಮಾರಂಭಗಳನ್ನು ಆಯೋಜಿಸಲು ಜನರು ಬಟ್ಟೆ ಮತ್ತು ಅಲಂಕಾರಕ್ಕಾಗಿ ದುಡ್ಡು ಖರ್ಚು ಮಾಡಿದರೆ, ಅವರಿಗೆ ದಂಡ ವಿಧಿಸಲಾಗುತ್ತದೆ. ಪಾಲಿನಲ್ಲಿ ವಾಸಿಸುವ ಜನರು ಮಾತ್ರವಲ್ಲದೆ ಜಿಲ್ಲೆಯಿಂದ ಬಂದವರು ಸಹ ನಿಯಮಗಳನ್ನು ಅನುಸರಿಸಬೇಕು. ಕುಮಾವತ್ ಸಮುದಾಯದ 19 ಹಳ್ಳಿಗಳಿಂದ ಸುಮಾರು 20,000 ಜನರು ಗುಜರಾತ್, ಮಹಾರಾಷ್ಟ್ರ ಮತ್ತು ದಕ್ಷಿಣ ರಾಜ್ಯಗಳ ವಿವಿಧ ನಗರಗಳಿಗೆ ವಲಸೆ ಹೋಗಿದ್ದಾರೆ. ಅವರು ವಾಸಿಸುವ ನಗರಗಳಲ್ಲಿ ಆಚರಣೆಗಳನ್ನು ಮಾಡಿದರೂ ಅವರು ನಿಯಮಗಳನ್ನು ಅನುಸರಿಸಬೇಕಾಗುತ್ತದೆ ಎಂದು ತಿಳಿಸಲಾಗಿದೆ.

click me!