
ಇವತ್ತಿನ ಕಾಲದಲ್ಲಿ ಎಲ್ಲರ ಕೈಯಲ್ಲೂ ಏನಿಲ್ಲದಿದ್ದರೂ ಮೊಬೈಲ್ (Mobile) ಅಂತೂ ಇರುತ್ತೆ. ಅದ್ರಲ್ಲೂ ಮೊಬೈಲ್‌ನಲ್ಲಿ ಇಂಟರ್‌ನೆಟ್ ಇದ್ರಂತೂ ಮುಗೀತು. ಮೂರು ಹೊತ್ತೂ ಮೊಬೈಲ್‌ನಲ್ಲಿ ಸ್ಕ್ರಾಲ್ ಮಾಡೋದೆ ಕೆಲ್ಸ. ಅದ್ರಲ್ಲೂ ಸೋಷಿಯಲ್ ಮೀಡಿಯಾ (Social Media)ಗಳು ಆರಂಭವಾದಾಗಿನಿಂದ ಜನ್ರು ಯಾವಾಗ್ಲೂ ಫೇಸ್‌ಬುಕ್, ಇನ್‌ಸ್ಟಾಗ್ರಾಂ, ವಾಟ್ಸಾಪ್‌ನಲ್ಲೇ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ವೀಡಿಯೋ, ಚಾಟ್ಸ್, ಫೋಟೋಸ್ ಅಪ್‌ಲೋಡ್, ಕಾಮೆಂಟ್ ಅಂತಾನೇ ಸಮಯ ಹೋಗುತ್ತೆ. ಅದಲ್ಲದೆ ಮೊಬೈಲ್‌ನಿಂದ ಆಗೋ ಅತಿ ದೊಡ್ಡ ಪ್ರಯೋಜನವೆಂದರೆ ನಮಗೆ ಗೊತ್ತಿಲ್ಲದ ಯಾವುದೇ ವಿಷ್ಯವನ್ನು ಗೂಗಲ್ (Google) ಮಾಡಿ ಸುಲಭವಾಗಿ ತಿಳ್ಕೋಬೋದು. ಬೇರೆಯವರತ್ರ ಕೇಳಿದ್ರೆ ಏನ್ ಅಂದ್ಕೊತಾರೋ ಅನ್ನೋ ಚಿಂತೆಯಿಲ್ಲ. ಅಯ್ಯೋ ಇಷ್ಟು ಚಿಕ್ಕ ವಿಷ್ಯಾನೇ ಗೊತ್ತಿಲ್ವಾ ಅಂತ ಗೂಗಲ್ ಏನೂ ಅಣಕಿಸಲ್ಲ. ಹೀಗಾಗಿ ಯಾವುದೇ ಭಯವಿಲ್ಲದೆ ಆರಾಮವಾಗಿ ಗೂಗಲ್‌ನಿಂದ ಮಾಹಿತಿ ಪಡ್ಕೊಳ್‌ಬೋದು.
ವಯಸ್ಸಿಗೆ ತಕ್ಕಂತೆ ಜನರು ಗೂಗಲ್‌ನಲ್ಲಿ ತಮಗೆ ಬೇಕಾದ್ದನ್ನು ಸರ್ಚ್ (Search0 ಮಾಡಿ ನೋಡುತ್ತಾರೆ. ಪುಟ್ಟ ಮಕ್ಕಳು ರೈಮ್ಸ್ ನೋಡಿದ್ರೆ, ಕಾಲೇಜಿಗೆ ಹೋಗೋ ಸ್ಟೂಡೆಂಟ್ಸ್ ಅಸೈನ್‌ಮೆಂಟ್, ನೋಟ್ಸ್ ಹುಡುಕಿಕೊಳ್ತಾರೆ. ಹುಡುಗೀರು ತಮ್ಮ ಹೈಟ್, ವೈಟ್‌ಗೆ ಸೂಟ್ ಆಗೋ ಟ್ರೆಂಡೀ ಡ್ರೆಸ್ ಯಾವ್ದು ಅಂತ ನೋಡ್ತಾರೆ. ವಯಸ್ಸಾದವರು ಮೊಣಕಾಲು ನೋವಿಗೆ. ಸೊಂಟ ನೋವಿಗೆ ಪರಿಹಾರವೇನು ತಿಳ್ಕೊತಾರೆ. ಆದ್ರೆ ಮದ್ವೆಯಾದ ಮಹಿಳೆಯರು ಗೂಗಲ್‌ನಲ್ಲಿ ಏನು ಹುಡುಕ್ತಾರೆ ನಿಮಗೆ ಗೊತ್ತಾ ? ಇಲ್ಲಿದೆ ಇಂಟ್ರೆಸ್ಟಿಂಗ್ ವಿಚಾರ.
Real Story: ಗಂಡನಿಗೆ ಅಡುಗೆ ಮಾಡಿ ಬಡಿಸ್ತಿಲ್ಲ, ಹಾಗಾದ್ರೆ ಆ ಹೆಣ್ಣು ಕೆಟ್ಟವಳಾ?
ಇಂದಿನ ಕಾಲದಲ್ಲಿ ಜನರು ತಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರಗಳನ್ನು ತಿಳಿಯಲು ಗೂಗಲ್‌ನ ಸಹಾಯವನ್ನು ತೆಗೆದುಕೊಳ್ಳುತ್ತಾರೆ. ಗೂಗಲ್‌ನಲ್ಲಿ ನೀವು ಸರ್ಚ್ ಮಾಡಿದ ಹಿಸ್ಟರಿ ಆಯ್ಕೆಯನ್ನು ಸೆಲೆಕ್ಟ್ ಮಾಡುವ ಮೂಲಕ ಅದನ್ನು ಡಿಲೀಟ್ ಸಹ ಮಾಡಬಹುದಾಗಿದೆ. ಹೀಗಾಗಿ ನಾವು ಸರ್ಚ್ ಮಾಡಿದ್ದು ಮತ್ಯಾರಿಗೋ ತಿಳಿಯುತ್ತೆ ಅನ್ನೋ ಭಯವೂ ಇಲ್ಲ. ಆದ್ರೆ ಗೂಗಲ್ ಡೇಟಾದಲ್ಲಿ (Data) ಸರ್ಚ್ ಹಿಸ್ಟರಿ ಹಾಗೆಯೇ ಉಳಿದಿರುತ್ತದೆ ಎಂಬುದು ನಿಮಗೆ ತಿಳಿದಿದೆಯೇ?. ಇದರಿಂದಾಗಿ ಯಾವ ಲಿಂಗ ಅಥವಾ ವಯಸ್ಸಿನ ಜನರು ಏನು ಸರ್ಚ್ ಮಾಡ್ತಾರೆ ಅನ್ನೋದನ್ನ ಗೂಗಲ್ ಡೇಟಾ ಬಹಿರಂಗಪಡಿಸಿದೆ. ಹೌದು, ಮದುವೆಯಾಗಿರುವ ಅಥವಾ ಮದುವೆಯಾಗಲಿರುವ ಮಹಿಳೆಯರು ಖಂಡಿತವಾಗಿಯೂ ಗೂಗಲ್‌ನಲ್ಲಿ ಕೆಲವು ವಿಷಯಗಳನ್ನು ಹುಡುಕುತ್ತಾರೆ ಎಂದು ಅಧ್ಯಯನ (Study)ವೊಂದು ಬಹಿರಂಗಪಡಿಸಿದೆ. ಅದೇನೆಂದು ತಿಳ್ಕೊಳ್ಳೋ ಕುತೂಹಲ ನಿಮಗೂ ಇದೆ ಅಲ್ವಾ ?
ವಿವಾಹಿತ ಮಹಿಳೆಯರು ಗೂಗಲ್‌ನಲ್ಲಿ ಏನ್ ಸರ್ಚ್ ಮಾಡ್ತಾರೆ ?
ವಿವಾಹಿತ ಮಹಿಳೆಯರು (Married Woman) ತಮ್ಮ ಪತಿಗೆ ಸಂಬಂಧಿಸಿದ ಮಾಹಿತಿಯನ್ನು ಗೂಗಲ್‌ನಲ್ಲಿ ಹುಡುಕಲು ಬಯಸುತ್ತಾರೆ ಎಂಬುದು ಅಧ್ಯಯನದಲ್ಲಿ ಬಹಿರಂಗವಾಗಿದೆ. ಮಹಿಳೆ ಪುರುಷರ ಸ್ವಭಾವ, ಇಷ್ಟಕಷ್ಟಗಳ ಬಗ್ಗೆ ಗೂಗಲ್‌ನಲ್ಲಿ ಹುಡುಕಿ ತಿಳಿದುಕೊಳ್ಳಲು ಯತ್ನಿಸುತ್ತಾಳೆ. ಗಂಡನ ಮನಸ್ಸು ಗೆಲ್ಲುವುದು ಹೇಗೆ, ಏನು ಮಾಡಿದರೆ ಗಂಡನಿಗೆ ಇಷ್ಟವಾಗುತ್ತದೆ, ಗಂಡನನ್ನು ಖುಷಿಪಡಿಸಲು ಏನು ಮಾಡಬೇಕು ಮೊದಲಾದ ವಿಚಾರಗಳನ್ನು ತಿಳಿದುಕೊಳ್ಳುತ್ತಾಳೆ. ವರದಿಯ ಪ್ರಕಾರ, ಕೆಲವು ವಿವಾಹಿತ ಮಹಿಳೆಯರು ತಮ್ಮ ಪತಿ, ತನ್ನ ಮಾತನ್ನು ಕೇಳುವ ಹಾಗೆ ಏನು ಮಾಡುವುದು, ಗುಲಾಮನನ್ನಾಗಿ ಮಾಡಿಕೊಳ್ಳುವ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ಸಹ ಹುಡುಕುತ್ತಾರಂತೆ.
Relationship : ಪತಿಗಿಂತ ಪರ ಪುರುಷರ ಮೇಲೆ ಆಸಕ್ತಿ ಹೆಚ್ಚಾಗಿದೆ ಏನ್ಮಾಡ್ಲಿ?
ಗಂಡನನ್ನು ಗುಲಾಮನನ್ನಾಗಿ ಮಾಡಿಕೊಳ್ಳುವುದು ಹೇಗೆ?. ಗಂಡನನ್ನು ಮುಷ್ಟಿಯಲ್ಲಿಟ್ಟುಕೊಳ್ಳುವುದು ಹೇಗೆ?. ಪತಿಗೆ ಯಾವುದು ಹೆಚ್ಚು ಇಷ್ಟ, ಮಗುವಾಗಲು ಯಾವ ಸಮಯ ಸರಿಯಾಗಬಹುದು, ಮಗು ಯಾವಾಗ ಬೇಕು ಎಂಬ ನಿರ್ಧಾರ ತೆಗೆದುಕೊಳ್ಳಬೇಕು. ಕುಟುಂಬ, ಇತ್ಯಾದಿ ಪ್ರಶ್ನೆಗಳನ್ನು ಮಹಿಳೆಯರು ಗೂಗಲ್‌ನಲ್ಲಿ ಹುಡುಕುತ್ತಾರೆ ಎಂಬುದು ಗೂಗಲ್ ಡೇಟಾ ಬಹಿರಂಗಪಡಿಸಿದೆ.
ಮದುವೆಯಾಗದ ಹುಡುಗಿಯರು ಗೂಗಲ್‌ನಲ್ಲಿ ಏನನ್ನು ಸರ್ಚ್ ಮಾಡ್ತಾರೆ ?
ಮದುವೆಯಾಗಲಿರುವವರೂ (Unmarried) ಗೂಗಲ್ ನಲ್ಲಿ ಹಲವು ಪ್ರಶ್ನೆಗಳನ್ನು ಕೇಳುತ್ತಾರೆ ಎಂದು ಅಧ್ಯಯನದಿಂದ ತಿಳಿದುಬಂದಿದೆ. ಮದುವೆಗೆ ಮೊದಲು, ಮಹಿಳೆಯರು ಗಂಡನ ಜೊತೆ ಹೇಗಿದ್ದರೆ ಚಂದ, ಅತ್ತೆಯೊಂದಿಗೆ ಹೇಗೆ ವರ್ತಿಸಬೇಕು, ಮನೆಯನ್ನು ನಿಭಾಯಿಸುವುದು ಹೇಗೆ ಮೊದಲಾದ ವಿಚಾರವನ್ನು ತಿಳ್ಕೋತಾರಂತೆ. ಮಾತ್ರವಲ್ಲ ಗಂಡ ಯಾವಾಗ್ಲೂ ಹಿಂದೆಯೇ ಬರುವಂತೆ ಏನ್ ಮಾಡ್ಬೇಕು, ಮತ್ತೊಬ್ಬಳ ಹಿಂದೆ ಹೋಗದಂತೆ ಗಂಡ (Husband)ನನ್ನು ಸೆರಗಿನಲ್ಲಿ ಕಟ್ಟಿಕೊಳ್ಳುವುದು ಹೇಗೆ ಮೊದಲಾದ ವಿಚಾರಗಳನ್ನು ತಿಳ್ಕೋತಾರಂತೆ.
ಇದಲ್ಲದೇ ಅತ್ತೆಯ ಮನೆಯ ಜವಾಬ್ದಾರಿಯನ್ನು ಹೇಗೆ ನಿಭಾಯಿಸಬಹುದು, ಮದುವೆಯ ನಂತರ ಯಾವ ವ್ಯಾಪಾರ ಅಥವಾ ಕೆಲಸ ಮಾಡಬಹುದು ಎಂಬುದನ್ನೂ ಮಹಿಳೆಯರು ತಿಳಿದುಕೊಳ್ಳಲು ಬಯಸುತ್ತಾರೆ. ವಿವಾಹಿತ ಮಹಿಳೆಯರು ತಿಳಿದುಕೊಳ್ಳಲು ಬಯಸುವ ಗೂಗಲ್‌ನ ಹುಡುಕಾಟ ಪಟ್ಟಿಯಲ್ಲಿ ಇಂತಹ ಪ್ರಶ್ನೆಗಳನ್ನು ಸೇರಿಸಲಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.