ಕಾರಿನೊಳಗೆ ತಲೆ ಹಾಕಿ ಮಹಿಳೆಗೆ ಕುಕ್ಕಲು ಶುರು ಮಾಡಿದ ಉಷ್ಟ್ರ ಪಕ್ಷಿ: ವಿಡಿಯೋ ವೈರಲ್

Published : Jun 17, 2022, 10:53 AM IST
ಕಾರಿನೊಳಗೆ ತಲೆ ಹಾಕಿ ಮಹಿಳೆಗೆ ಕುಕ್ಕಲು ಶುರು ಮಾಡಿದ ಉಷ್ಟ್ರ ಪಕ್ಷಿ: ವಿಡಿಯೋ ವೈರಲ್

ಸಾರಾಂಶ

ಉಷ್ಟ್ರಪಕ್ಷಿಯೊಂದು ಸಫಾರಿಗೆ ಬಂದ ಮಹಿಳೆಯೊಂದಿಗೆ ಆಹಾರಕ್ಕಾಗಿ ಕಿತ್ತಾಡಿದೆ. ಕಾರಿನೊಳಗೆ ಮಹಿಳೆ ಕುಳಿತಿದ್ದರೆ ಈ ಉಷ್ಟ್ರಪಕ್ಷಿ ಕಾರಿನೊಳಗೆ ತನ್ನ ತಲೆಯನ್ನು ತೂರಿಸಿ ಮಹಿಳೆಯ ಕೈಯಲ್ಲಿದ್ದ ಆಹಾರಕ್ಕೆ ಹೊಂಚು ಹಾಕಿದೆ. 

ಮಿಸ್ಸಿಸ್ಸಿಪ್ಪಿ: ಪ್ರಾಣಿ ಪಕ್ಷಿಗಳು ಮನುಷ್ಯನಿಗಿಂತ ವಿಭಿನ್ನವಾದ ಪ್ರಬೇಧಗಳಾಗಿದ್ದರೂ ಅವುಗಳು ಕೂಡ ಕೆಲವೊಮ್ಮೆ ಮನುಷ್ಯನ ಸಾಂಗತ್ಯ ಬಯಸುತ್ತವೆ. ಸಾಮಾಜಿಕ ಜಾಲತಾಣಗಳಲ್ಲಿ ಮನುಷ್ಯ ಹಾಗೂ ಪ್ರಾಣಿ ಪಕ್ಷಿಗಳ ಮಧುರ ಸಾಂಗತ್ಯವನ್ನು ಸಾಬೀತುಪಡಿಸುವ ಹಲವು ವಿಡಿಯೋಗಳನ್ನು ನಾವು ಈಗಾಗಲೇ ನೋಡಿದ್ದೇವೆ. ಹಾಗೆಯೇ ಮಾನವ ಹಾಗೂ ಪ್ರಾಣಿಗಳ ನಡುವಿನ ಸಂಘರ್ಷ ಇತ್ತೀಚೆಗೆ ಹೆಚ್ಚಾಗಿದೆ. ಕಾಡಂಚಿನ ಗ್ರಾಮಗಳಲ್ಲಿ ಪ್ರಾಣಿಗಳು ಹಾಗೂ ಮನುಷ್ಯರ ಮಧ್ಯೆ ಸಮರ ಸಾಮಾನ್ಯ ಎನಿಸಿದೆ. ಆಹಾರ ಅರಸಿ ಕಾಡಂಚಿನ ಗ್ರಾಮಕ್ಕೆ ಬರುವ ಹುಲಿ ಚಿರತೆ ಮುಂತಾದ ವನ್ಯಜೀವಿಗಳು ಸಾಕು ಪ್ರಾಣಿಗಳಾದ ಕೋಳಿ, ನಾಯಿ, ದನಗಳ ಮೇಲೆ ದಾಳಿ ಮಾಡಿ ಹೊತ್ತೊಯ್ಯುತ್ತವೆ. ಮತ್ತೊಂದೆಡೆ ಗಜ ಪಡೆ ದಾಂಗುಡಿ ಇಟ್ಟರೆ ಇಡೀ ಬೆಳೆಯೇ ನಾಶವಾಗುತ್ತದೆ. ಇಲ್ಲೊಂದು ಉಷ್ಟ್ರಪಕ್ಷಿ ಸಫಾರಿಗೆ ಬಂದ ಮಹಿಳೆಯೊಂದಿಗೆ ಆಹಾರಕ್ಕಾಗಿ ಕಿತ್ತಾಡಿದೆ. ಕಾರಿನೊಳಗೆ ಮಹಿಳೆ ಕುಳಿತಿದ್ದರೆ ಈ ಉಷ್ಟ್ರಪಕ್ಷಿ ಕಾರಿನೊಳಗೆ ತನ್ನ ತಲೆಯನ್ನು ತೂರಿಸಿ ಮಹಿಳೆಯ ಕೈಯಲ್ಲಿದ್ದ ಆಹಾರಕ್ಕೆ ಹೊಂಚು ಹಾಕಿದೆ. 

ಕಾರಿನ ತೆರೆದ ಕಿಟಕಿಯ ಮೂಲಕ ಉಷ್ಟ್ರಪಕ್ಷಿ ಒಮ್ಮೆಗೆ ತಲೆ ತೂರಿಸಿದ್ದು ನೋಡಿ ಮಹಿಳೆ ಗಾಬರಿಯಿಂದ ಕಿರುಚಿಕೊಂಡಿದ್ದಾಳೆ. ಅಮೆರಿಕಾದ ಮಿಸ್ಸಿಸ್ಸಿಪ್ಪಿಯಲ್ಲಿರುವ ಸಫಾರಿ ಪಾರ್ಕ್‌ನಲ್ಲಿ ಈ ಘಟನೆ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಮಿಸ್ಸಿಸ್ಸಿಪ್ಪಿಯಲ್ಲಿರುವ ಸಫಾರಿ ಪಾರ್ಕ್‌ಗೆ ಮಹಿಳೆಯೊಬ್ಬಳು ತನ್ನ ಸ್ನೇಹಿತನೊಂದಿಗೆ ಭೇಟಿ ನೀಡಿದಾಗ ಈ ಘಟನೆ  ನಡೆದಿದೆ. ಆಹಾರವನ್ನು ಹುಡುಕುತ್ತಿದ್ದ ಆಸ್ಟ್ರಿಚ್ ಕಾರಿನ ಕಿಟಕಿಯ ಮೂಲಕ ತನ್ನ ತಲೆಯನ್ನು ತೂರಿದೆ ಮತ್ತು ಇದರಿಂದ ಕೆಲ ಕಾಲ ಭಯಗೊಂಡ ಆಕೆ ನಂತರ ಸಹಜತೆಗೆ ಬಂದಿದ್ದಾರೆ. ಈ ಘಟನೆಯ ವಿಡಿಯೋವನ್ನು ರೆಕಾರ್ಡ್ ಮಾಡಿ ಆನ್‌ಲೈನ್‌ನಲ್ಲಿ ಹಂಚಿಕೊಳ್ಳಲಾಗಿದೆ.

ಈ ಹಕ್ಕಿಗೂ ಅದೆಂಥಾ ಜವಾಬ್ದಾರಿ: ತನ್ನ ಹೆಣ್ಣಿಗೆ ಆಹಾರ ತಂದು ತಿನ್ನಿಸುವ ಗಂಡು ಹಾರ್ನ್‌ಬಿಲ್‌

22 ವರ್ಷದ ಕ್ಲೋಯ್ ಬೆನ್‌ಹ್ಯಾಮ್ (Chloe Benham) , ಮಿಸ್ಸಿಸ್ಸಿಪ್ಪಿಯ ( Mississippi) ಕೊಮೊದಲ್ಲಿರುವ ಸಫಾರಿ ವೈಲ್ಡ್ ಅನಿಮಲ್ ಪಾರ್ಕ್‌ಗೆ (Wild Animal Park) ತನ್ನ ಸ್ನೇಹಿತ ಸ್ಟೀಫನ್ ಮಲೋನ್ (Stephen Malon) ಜೊತೆ ಭೇಟಿ ನೀಡಿದ್ದಳು. ಈ ವೇಳೆ ಅವಳ ಕೈಯಲ್ಲಿ ಜೋಳದ ಚೀಲವಿತ್ತು. ಜೊತೆಗೆ ಅವಳಿದ್ದ ಕಾರಿನ ಕಿಟಕಿಯು ವಿಶಾಲವಾಗಿ ತೆರೆದಿತ್ತು. ಈ ವೇಳೆ ಅಲ್ಲಿದ್ದ ಆಸ್ಟ್ರಿಚ್  (ostrich) ನೇರವಾಗಿ ಕಾರಿನ ಒಳಗೆ ತಲೆ ಹಾಕಿ ಆಕೆಯ ಕೈಯಲ್ಲಿದ್ದ ಆಹಾರದ ಚೀಲಕ್ಕೆ ತಲೆ ತೂರಿಸಿದೆ. ಇದು ಕ್ಲೋಯ್‌ನನ್ನು ಕೆಲ ಕಾಲ ವಿಚಲಿತಗೊಳಿಸಿತು. ಆಕೆ ಗಾಬರಿಗೊಂಡು ಜೋರಾಗಿ ಕಿರುಚುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

 

ನಂತರ ಈ ಪಕ್ಷಿಗಳು ಏನು ಮಾಡುವುದಿಲ್ಲ ಎಂದು ತಿಳಿದಾಗ ಶಾಂತಳಾದ ಆಕೆ ನಗಲು ಶುರು ಮಾಡಿದಳು. ನಾನು ಬಹುಶಃ ನನ್ನ ಜೀವನದಲ್ಲಿ ಎಂದಿಗೂ ಕಷ್ಟಪಟ್ಟು ನಕ್ಕಿದ್ದೇನೆ. ಅನಿಮಲ್ ಪಾರ್ಕ್ ಮೈದಾನದಲ್ಲಿ ಒಂದು ಟನ್ ಆಸ್ಟ್ರಿಚ್‌ಗಳು ಇದ್ದವು. ಆದ್ದರಿಂದ ನಾವು ನಂತರ ಅವುಗಳನ್ನು ಎದುರಿಸಿದ್ದೇವೆ. ಅವು ಕಾರಿನಲ್ಲಿ ತಲೆಯನ್ನು ಮತ್ತೊಮ್ಮೆ ತೂರಿಸುವ ಮೊದಲು ನಾನು ನನ್ನ ಕಿಟಕಿಯನ್ನು ಮುಚ್ಚುತ್ತೇನೆ. ಅಲ್ಲದೇ  ಸಾಯುವ ಮೊದಲು ಆಸ್ಟ್ರಿಚ್‌ಗಳ ಭಯವನ್ನು ಹೋಗಲಾಡಿಸಲು ನಾನು ನಿಜವಾಗಿಯೂ ಇಷ್ಟಪಡುತ್ತೇನೆ ಎಂದು ಕ್ಲೋಯ್  ಈ ಘಟನೆ ಬಗ್ಗೆ ಹೇಳಿದ್ದಾರೆ. 

ಟಿಕೆಟ್ ಇಲ್ಲದೆ ಬಸ್‌ನಲ್ಲಿ ಪ್ರಯಾಣಿಸಿದ ಪಕ್ಷಿಗಳು, ಅಮಾನತುಗೊಂಡ ಕೆಸ್ಸಾರ್ಟಿಸಿ ಕಂಡಕ್ಟರ್!
 

ಕ್ಲೋಯ್ ತಾನು ಹುಟ್ಟಿ ಬೆಳೆದಿದ್ದು ಸಾಕು ಪ್ರಾಣಿಗಳ ಜೊತೆ ಜೊತೆ, ಅವುಗಳ ಜೊತೆ ಆಕಗೆ ಉತ್ತಮ ಒಡನಾಟವಿದೆ. ಆದರೆ ಅವುಗಳನ್ನು ನೋಡಿ ಹೆದರುತ್ತಾಳೆ ಎಂದು ನಾನು ಭಾವಿಸಿರಲಿಲ್ಲ ಎಂದು ಕ್ಲೋಯ್ ಸ್ನೇಹಿತ ಸ್ಟೀಫನ್ ಹೇಳಿದ್ದಾರೆ. 
 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಳಗೆದ್ದು .. ನಾಚುತ್ತಲೇ ಮಲಗುವ ಕೋಣೆಯ ರಹಸ್ಯ ಬಹಿರಂಗಪಡಿಸಿದ ಪಿಗ್ಗಿ
ಫೋಟೋ ಹಂಚಿಕೊಂಡು 'ಡಾರ್ಲಿಂಗ್‌..' ಎಂದು ಬರೆದ ಸಾರಾ ತೆಂಡುಲ್ಕರ್‌