ಮದ್ವೆ ಅಂದ್ರೆ ಮೋಸ ಅನ್ನೋದು ಇತ್ತೀಚಿಗೆ ಸಾಮಾನ್ಯವಾಗಿದೆ. ಸಾವಿರ ಸುಳ್ಳು ಹೇಳಿ ಒಂದು ಮದ್ವೆ ಮಾಡು ಅನ್ನೋ ಹಾಗೆ ಅದೆಷ್ಟೋ ಸುಳ್ಳು ಹೇಳಿ ಮದ್ವೆಯಾಗೋಕೆ ಮುಂದಾಗ್ತಾರೆ. ಹಾಗೆಯೇ ಇಲ್ಲೊಬ್ಬ ಒಂದಿಷ್ಟು ಸುಳ್ಳು ಹೇಳಿ ಮದ್ವೆಯಾಗೋಕೆ ಮುಂದಾಗಿದ್ದು, ಕೊನೇ ಕ್ಷಣದಲ್ಲಿ ಆತನ ಮುಖವಾಡ ಕಳಚಿಬಿದ್ದಿದೆ.
ಬಿಹಾರ: ಮೊದಲ್ಲೆಲ್ಲಾ ಮದುವೆ ಅಂದ್ರೆ ಪ್ರೀತಿ, ನಂಬಿಕೆ, ವಿಶ್ವಾಸ ಎಲ್ಲವೂ ಇರುತ್ತಿತ್ತು. ಆದ್ರೆ ಇತ್ತೀಚಿನ ವರ್ಷಗಳಲ್ಲಿ ಪ್ರೀತಿಯ ಹೆಸರಲ್ಲಿ ವಂಚನೆಯ ಪ್ರಕರಣಗಳು ಹೆಚ್ಚಾಗ್ತಿದೆ. ಆಸ್ತಿ-ಅಂತಸ್ತು ಇದೆ, ಒಳ್ಳೆಯ ಉದ್ಯೋಗ ಇದೆ ಎಂದು ನಂಬಿಸಿ ಸುಳ್ಳು ಹೇಳಿ ಮದುವೆಯಾಗುತ್ತಾರೆ. ಹಾಗೆಯೇ ಬಿಹಾರದ ಗಯಾ ಎಂಬಲ್ಲಿ ವ್ಯಕ್ತಿಯೊಬ್ಬ ಸುಳ್ಳು ಹೇಳಿ ಮದುವೆಯಾಗಲು ಹೊರಟಿದ್ದು, ಮದುವೆ ಮಂಟಪದಲ್ಲೇ ಸಿಕ್ಕಿಬಿದ್ದಿದ್ದಾನೆ. ಹುಡುಗನಿಗೆ ಈಗಾಗಲೇ ಮದುವೆಯಾಗಿದ್ದು, ಇದನ್ನು ಮುಚ್ಚಿಟ್ಟು ಮತ್ತೊಂದು ಮದುವೆಯಾಗಲು ಮುಂದಾಗಿದ್ದ. ಕೊನೇ ಕ್ಷಣದಲ್ಲಿ ವಧುವಿನ ಕಡೆಯವರಿಗೆ ವಧುವಿಗೆ ಈಗಾಗಲೇ ಮದುವೆಯಾಗಿದೆ ಎಂಬ ವಿಚಾರ ತಿಳಿದುಬಂದಿದೆ. ಹೀಗಾಗಿ ಈತನನ್ನು ಹಿಡಿದು ಚೆನ್ನಾಗಿ ಥಳಿಸಿದ್ದಾರೆ.
ಈಗಾಗ್ಲೇ ಮದ್ವೆಯಾಗಿದ್ದರೂ ಮತ್ತೊಂದು ಮದ್ವೆಯಾಗಲು ಮುಂದಾಗಿದ್ದ ವರ
ಕೊತ್ವಾಲಿ ಪೊಲೀಸ್ ಠಾಣೆಯ ಇಕ್ಬಾಲ್ ನಗರದ ನಿವಾಸಿಯಾಗಿರುವ ವ್ಯಕ್ತಿಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social media) ವೈರಲ್ ಆಗಿದೆ. ಈತ ತನ್ನ ಮೊದಲ ಹೆಂಡತಿ ಜೀವಂತವಾಗಿರುವಾಗಲೇ ಎರಡನೇ ಮದುವೆಯಾಗಲು ಯತ್ನಿಸಿದ್ದಾನೆ. ವಿಷಯ ತಿಳಿದ ಪತ್ನಿ ಹಾಗೂ ಸಂಬಂಧಿಕರು ಸ್ಥಳಕ್ಕಾಗಮಿಸಿದ್ದ ಕೂಡಲೇ ವಧುವಿನ (Bride) ಕುಟುಂಬಸ್ಥರಿಗೆ ಆತನಿಗೆ ಥಳಿಸಿದ್ದಾರೆ. ಈ ಸಂದರ್ಭದಲ್ಲಿ ಈತ ಕೂದಲು ಇರದಿದ್ದರೂ, ಅದನ್ನ ಮರೆಮಾಚಿ ವಿಗ್ ಇಟ್ಟುಕೊಂಡು ಮದುವೆ (Marriage)ಯಾಗಲು ಮುಂದಾಗಿರುವುದು ಸಹ ತಿಳಿದುಬಂದಿದೆ.
ಹನಿಮೂನ್ ಮೂಡ್‌ನಲ್ಲಿದ್ದ ಹುಡುಗ ರಾತ್ರಿ ಬೆಳಗಾಗುವಷ್ಟರಲ್ಲಿ ಅಣ್ಣನಾಗಿ ಹೋದ!
ವಿಗ್ ಇಟ್ಕೊಂಡು ಎಲ್ಲರನ್ನೂ ಯಾಮಾರಿಸಿದ್ದ
ಎರಡನೇ ಮದುವೆಯಾಗಲು ಬಂದ ವರನ (Groom) ವಿಚಾರ ತಿಳಿದ ತಕ್ಷಣ ಆಕ್ರೋಶಗೊಂಡ ವಧುವಿನ ಮನೆಯವರು ಮದುವೆಯ ವೇದಿಕೆಯಲ್ಲೇ ವರನಿಗೆ ಥಳಿಸಿದ್ದಾರೆ. ಇಷ್ಟೇ ಅಲ್ಲ ವರ ಕೂದಲಿಲ್ಲದೆ, ನಕಲಿ ಕೂದಲು ಹಾಕಿಕೊಂಡು ಮದುವೆಯಾಗಲು ಬಂದಿದ್ದ. ಕೊನೆ ಕ್ಷಣದಲ್ಲಿ ಜನರಿಗೂ ಈ ವಿಷಯ ತಿಳಿಯಿತು. ಮದುವೆಗೆ ವೇದಿಕೆಯ ಮೇಲೆ ಕುಳಿತ ವರನನ್ನು ಮೊದಲು ಜನ ಒತ್ತೆಯಾಳಾಗಿ ಇಟ್ಟುಕೊಂಡರು. ಅದರ ನಂತರ, ಒಬ್ಬ ವಯಸ್ಸಾದ ವ್ಯಕ್ತಿ ವರನನ್ನು ಹೊಡೆಯಲು ಪ್ರಾರಂಭಿಸುತ್ತಾನೆ. ನಂತರ ಅಲ್ಲಿದ್ದವರೆಲ್ಲಾರೂ ಮೋಸ ಮಾಡಿದ್ದಕ್ಕಾಗಿ ವರನ ಕೂದಲು (Hair) ಬೋಳಿಸಲು ಮುಂದಾಗುತ್ತಾರೆ. ಈ ಸಂದರ್ಭದಲ್ಲಿ ಆತ ವಿಗ್ ಇಟ್ಟುಕೊಂಡಿರುವುದು ತಿಳಿದುಬರುತ್ತದೆ.
ಕೂದಲು ಬೋಳಿಸಲು ಹೊರಟಾಗ ವರ ಪದೇ ಪದೇ ಬೇಡವೆಂದು ಹೇಳುತ್ತಾ ಕೈಯಿಂದ ತಲೆ ಮುಚ್ಚಿಕೊಳ್ಳುತ್ತಾನೆ. ಇದರ ನಂತರ ಜನರು ಅವನ ಕೂದಲನ್ನು ಎಳೆಯುತ್ತಾರೆ. ಈ ವೇಳೆ ವರನು ಧರಿಸಿದ್ದ ವಿಗ್ ಕಿತ್ತು ಕ್ಷೌರಿಕನ ಕೈಗೆ ಬಂದಿದೆ. ಕೂಡಲೇ ವಧುವಿನ (Bride) ಮನೆಯವರ ಸಿಟ್ಟು ನೆತ್ತಿಗೇರಿದ್ದು ವರನಿಗೆ ಮತ್ತೆ ಧರ್ಮದೇಟು ನೀಡಿದ್ದಾರೆ. ವರನ ಕಷ್ಟದ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಆದರೆ ದೋಭಿ ಪೊಲೀಸ್ ಠಾಣೆ ಮತ್ತು ಕೊತ್ವಾಲಿ ಪೊಲೀಸ್ ಠಾಣೆ ಇಂತಹ ಘಟನೆಗೆ ಸಂಬಂಧಿಸಿದಂತೆ ಯಾವುದೇ ದೂರು ಸ್ವೀಕರಿಸಿಲ್ಲ ಎಂದು ಹೇಳಿದ್ದಾರೆ.
ಹಾಸನದಲ್ಲಿ ಎರಡನೇ ಮದುವೆ ರಾದ್ದಾಂತ, ಆತ್ಮಹತ್ಯೆಗೂ ಮುನ್ನ ಫೋಟೋ ಆಡಿಯೋ ಕಳಿಸಿದ್ದ ಯೋಧ
ವಂಚಕ ಗಯಾ ನಗರದ ಕೊತ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಇಕ್ಬಾಲ್ ನಗರದ ನಿವಾಸಿ ಎಂದು ಹೇಳಲಾಗುತ್ತಿದೆ. ಮೊದಲ ಪತ್ನಿಯೊಂದಿಗೆ ವಾಸವಿದ್ದ ಅವರು, ಕಳೆದ ಭಾನುವಾರ ಎರಡನೇ ಮದುವೆಯಾಗಲು ಜಿಲ್ಲೆಯ ದೋಭಿ ಬ್ಲಾಕ್‌ನ ಬಜೌರಾಗೆ ತೆರಳಿದ್ದ ಎಂದು ತಿಳಿದುಬಂದಿದೆ. ಮೋಸ ಹೋಗಿರೋ ವಿಚಾರ ತಿಳಿದು ವಧು ಮಂಟಪದಲ್ಲೇ ತಲೆಸುತ್ತಿ ಬಿದ್ದಳು. ಆ ನಂತರ ಮನೆ ಮಂದಿ, ಸಂಬಂಧಿಕರು ಮೊದಲೇ ವಿಷಯ ತಿಳಿದು, ಮದುವೆ ತಪ್ಪಿದ್ದು ಒಳ್ಳೆದಾಯಿತೆಂದು ಆಕೆಗೆ ಸಮಾಧಾನ ಮಾಡಿದರು.