'ನನ್ನ ಗಂಡನನ್ನು ಹುಡುಕಿಕೊಟ್ರೆ 5 ಸಾವಿರ ಡಾಲರ್ ಗಿಫ್ಟ್‌..' ಸುಂದರಿಯ ಆಫರ್‌ಗೆ ಭರ್ಜರಿ ರೆಸ್ಪಾನ್ಸ್‌!

Published : Jul 11, 2023, 09:01 PM ISTUpdated : Jul 11, 2023, 10:19 PM IST
'ನನ್ನ ಗಂಡನನ್ನು ಹುಡುಕಿಕೊಟ್ರೆ 5 ಸಾವಿರ ಡಾಲರ್ ಗಿಫ್ಟ್‌..' ಸುಂದರಿಯ ಆಫರ್‌ಗೆ ಭರ್ಜರಿ ರೆಸ್ಪಾನ್ಸ್‌!

ಸಾರಾಂಶ

ಅಮೆರಿಕದಲ್ಲಿ 35 ವರ್ಷದ ಸುಂದರಿಯೊಬ್ಬಳು ಮದುವೆಯಾಗಬೇಕು ಎಂದು ತುದಿಗಾಲಲ್ಲಿ ನಿಂತಿದ್ದರೂ ಆಕೆಗೆ ಸೂಕ್ತ ವರ ಸಿಗುತ್ತಿಲ್ಲವಂತೆ. ಅದಕ್ಕಾಗಿ ಆಕೆ ರೆಫರಲ್‌ ಬೋನಸ್‌ ಎನ್ನುವ ಕಾನ್ಸೆಪ್ಟ್‌ನಲ್ಲಿ ಯಾರಾದರೂ ನನಗೆ ಒಳ್ಳೆಯ ಗಂಡನನ್ನು ರೆಫರ್‌ ಮಾಡಿದರೆ, 5 ಸಾವಿರ ಡಾಲರ್‌ ನೀಡೋದಾಗಿ ಘೋಷಿಸಿದ್ದಾಳೆ.

ನವದೆಹಲಿ (ಜು.11): ಹಣದಿಂದ ಪ್ರೀತಿಯನ್ನು ಕೊಳ್ಳೋಕೆ ಆಗೋದಿಲ್ಲ ನಿಜ..ಆದರೆ ಗಂಡನ ರೆಫರಲ್‌ಗಳನ್ನು ಪಡೆಯಬಹುದು. ಹಲವು ವರ್ಷಗಳಿಂದ ಸಿಂಗಲ್‌ ಆಗಿ ಬದುಕಿದ್ದು ಬೇಸರಗೊಂಡ ಅಮರಿಕದ ಸುಂದರಿಯೊಬ್ಬಳು ಮದುವೆಯಾಗಬೇಕು ಎಂದು ನಿರ್ಧಾರ ಮಾಡಿದ್ದಾಳೆ. ಆದರೆ, ಆಕೆಗೆ ಸೂಕ್ತ ವರ ಸಿಗುತ್ತಿಲ್ಲವಂತೆ. ಅದಕ್ಕಾಗಿ ಆಕೆ ಮಾಡಿರುವ ಉಪಾಯ ಕೇಳಿದ್ರೆ ಅಚ್ಚರಿಯಾಗೋದು ಖಂಡಿತ. ತನಗೆ ಯಾರಾದರೂ ಒಳ್ಳೆಯ ಹುಡುಗನನ್ನು 'ರೆಫರ್‌' ಮಾಡಿದಲ್ಲಿ ಅವರಿಗೆ 5 ಸಾವಿರ ಡಾಲರ್‌ ಅಂದರೆ 4.12 ಲಕ್ಷ ರೂಪಾಯಿಯನ್ನು ರೆಫರಲ್‌ ಬೋನಸ್‌ ಆಗಿ ನೀಡುವುದಾಗಿ ಘೋಷಣೆ ಮಾಡಿದ್ದಾಳೆ. ಇಲ್ಲಿಯವರೆಗೂ ಉದ್ಯೋಗಿಗಳು ರೆಫರ್‌ ಮಾಡಿ ಬೋನಸ್‌ ಪಡೆದುಕೊಳ್ತಿದ್ದ ಜನ ಈಗ ಈಕೆಗೆ ಒಳ್ಳೆಯ ಹುಡುಗನನ್ನು ರೆಫರ್‌ ಮಾಡಿ ಬೋನಸ್‌ ಕೂಡ ಪರೆಯಬಹುದು. 'ಕೆಲ ತಿಂಗಳ ಹಿಂದೆ ನಾನು ನನ್ನ ಸ್ನೇಹಿತರಿಗೆ  ಇದನ್ನೇ ಹೇಳಿದ್ದೆ. ಹಾಗೇನಾದರೂ ಒಳ್ಳೆಯ ಹುಡುಗನನ್ನು ರೆಫರ್‌ ಮಾಡಿದಲ್ಲಿ 5 ಸಾವಿರ ಡಾಲರ್‌ ನೀಡುವುದಾಗಿ ತಿಳಿಸಿದ್ದೆ ಎಂದು ಕಾರ್ಪೋರೇಟ್‌ ವಿವಾದಗಳ ಬಗೆಹರಿಸುವ ವಕೀಲೆಯಾಗಿರುವ 35 ವರ್ಷದ ಏವ್‌ ಟಿಲ್ಲಿ ಕೌಲ್ಸನ್‌ ಹೇಳಿದ್ದಾರೆ. ಆ ಬಳಿಕ ನಾನು ಇದೇ ಆಫರ್‌ಅನ್ನು ಟಿಕ್‌ಟಾಕ್‌ನಲ್ಲಿ ಘೋಷಣೆ ಮಾಡಿದರೆ ಹೇಗೆ ಅಂದುಕೊಂಡು ಆ ಕೆಲಸವನ್ನೂ ಮಾಡಿದ್ದೇನೆ ಎಂದಿದ್ದಾರೆ.

ಕಳೆದ ಜೂನ್‌ನಲ್ಲಿ ನಾನು ಸೋಶಿಯಲ್‌ ಮೀಡಿಯಾದಲ್ಲೂ ಇದೇ ಆಫರ್‌ ಘೋಷಣೆ ಮಾಡಿದೆ. 10 ಲಕ್ಷಕ್ಕಿಂತ ಅಧಿಕ ಫಾಲೋವರ್‌ಗಳನ್ನು ಹೊಂದಿರುವ ಟೌಲ್ಸನ್‌, 'ನನಗೆ ಒಳ್ಳೆಯ ಗಂಡನನ್ನು ರೆಫರ್‌ ಮಾಡಿ, ಆತನನ್ನು ನಾನು ಮದುವೆಯಾದರೆ, ಆ ವ್ಯಕ್ತಿಗೆ 5 ಸಾವಿರ ಡಾಲರ್‌ ಬೋನಸ್‌ ನೀಡುತ್ತೇನೆ' ಎಂದು ಘೋಷಿಸಿದ್ದರು. ಆದರೆ, ಈ ಪೋಸ್ಟ್‌ಗೆ ಟಿಕ್‌ಟಾಕ್‌ನಲ್ಲಿ 55 ಲಕ್ಷಕ್ಕೂ ಅಧಿಕ ವೀವ್ಸ್‌ಗಳು ಸಿಕ್ಕಿದೆ. ಇನ್ನು 20 ರಿಂದ 25 ಮ್ಯಾರೇಜ್‌ ಬ್ರೋಕರ್‌ಗಳು ಈಗಾಗಲೇ ಆಕೆಗೆ ಕೆಲವೊಂದು ಹುಡುಗರನ್ನು ತೋರಿಸಿದ್ದಾರಂತೆ!

ಈವರೆಗೂ ನಾನು ಯಾರೊಂದಿಗೂ ಡೇಟ್‌ ಮಾಡಿಲ್ಲ ಎಂದಿರುವ ಟಿಲ್ಲಿ ಕೌಲ್ಸನ್‌, ಹೆಚ್ಚಿನ ಮ್ಯಾರೇಜ್‌ ಬ್ರೋಕರ್‌ಗಳು ಸಿಕ್ಕಿದವರು ಮಹಿಳೆಯರೇ ಆಗಿದ್ದರು. ನನಗೆ ಈ ವಿಚಾರದಲ್ಲಿ ಸಹಾಯ ಮಾಡುವುದಾಗಿ ತಿಳಿಸಿದ್ದಾರೆ ಎಂದರು.

ನಾನು ಕಳೆದ ಐದು ವರ್ಷದಿಂದ ಸಿಂಗಲ್‌ ಆಗಿದ್ದೇನೆ. ಹುಡುಗರನ್ನು ನಾನು ಅಪ್ಲಿಕೇಶನ್‌ಗಳಲ್ಲಿ ಮಾತ್ರವೇ ನೋಡುತ್ತಿದ್ದೇನೆ. ಅದರಲ್ಲೂ ಕೋವಿಡ್‌ ಬಂದ ಬಳಿಕ ಡೇಟಿಂಗ್‌ ಸಂಸ್ಕೃತಿಯ ಮೇಲೆ ಪರಿಣಾಮ ಬೀರಿದೆ. ಯಾರೂ ಕೂಡ ನೇರವಾಗಿ ನನ್ನನ್ನು ಅಪ್ರೋಚ್‌ ಮಾಡುತ್ತಿಲ್ಲ. ಗಂಭೀರವಾಗಿ ಡೇಟಿಂಗ್‌ ಮಾಡಲು ಹುಡುಗರೂ ಕೂಡ ಬಯಸುತ್ತಿಲ್ಲ ಎಂದು ಟಿಲ್ಲಿ ಕೌಲ್ಸನ್‌ ಹೇಳಿದ್ದಾಳೆ.

 

ಸೆಕ್ಸ್‌ ಮಾಡುವಾಗ ಹೃದಯಾಘಾತದಿಂದ ರೋಗಿ ಸಾವು; ನರ್ಸ್‌ಗೆ ಆಸ್ಪತ್ರೆ ಶಿಕ್ಷೆ ಕೊಟ್ಟಿದ್ದೇಕೆ?

ಹಾಗಾಗಿ ನನಗೆ ಒಳ್ಳೆಯ ಗಂಡನನ್ನು ಹುಡುಕಿಕೊಟ್ಟರೆ, ಅವರಿಗೆ 5 ಸಾವಿರ ಡಾಲರ್‌ ಬೋನಸ್‌ ನೀಡುವುದಾಗಿ ಘೋಷಣೆ ಮಾಡಿದೆ. ಆತನೊಂದಿಗೆ ರಿಲೇಷನ್‌ಷಿಪ್‌ ಉತ್ತಮ ಎಂದಾದಲ್ಲಿ ಈ ಹಣವನ್ನು ಪಾವತಿ ಮಾಡುತ್ತೇನೆ ಎಂದಿದ್ದಾಳೆ. 'ಯಾವುದೇ ಅನುಮಾನ ಬೇಡ. ಮದುವೆ ಪ್ರಮಾಣಪತ್ರಕ್ಕೆ ಸಹಿ ಬಿದ್ದ ಬೆನ್ನಲ್ಲಿಯೇ ಈ ಹಣ ನಿಮ್ಮ ಅಕೌಂಟ್‌ಗೆ ಬೀಳುತ್ತದೆ. ಯಾವುದೇ ಕಾರಣಕ್ಕೂ ಆತನಿಗೆ ಇದು 2ನೇ ಮದುವೆ ಆಗಿರಬಾರದು ಎನ್ನುವುದು ಷರತ್ತು' ಎಂದು ಸ್ಪಷ್ಟವಾಗಿ ಟಿಲ್ಲಿ ಕೌಲ್ಸನ್‌ ತಿಳಿಸಿದ್ದಾಳೆ.

ತನ್ನ ಕೊನೆಗಾಲದಲ್ಲಿ ಆಸರೆಯಾಗಿದ್ದ ಗೆಳತಿಗೆ 900 ಕೋಟಿ ಆಸ್ತಿ ಬಿಟ್ಟುಹೋದ ಇಟಲಿ ಮಾಜಿ ಪ್ರಧಾನಿ!

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ವ್ಯಕ್ತಿಯ ಸ್ವಭಾವ ಅರ್ಥ ಮಾಡಿಕೊಳ್ಳಲು ಸುಲಭ ಮಾರ್ಗ ಹೇಳಿಕೊಟ್ಟ ಚಾಣಕ್ಯರು
ಅತ್ತೆ ಮನೆಯವರು ಒರಟಾಗಿ ವರ್ತಿಸಿದರು ಎಂದು ಗಂಡನ ಮನೆಗೆ ಬಂದ 20 ನಿಮಿಷದಲ್ಲಿ ಮದುವೆ ಮುರಿದ ಯುವತಿ