ಪೊಲೀಸರು ಆತನನ್ನು ಬಂಧಿಸುತ್ತಿದ್ದಂತೆಯೇ ತನ್ನಿಂದ ವಿಚ್ಛೇದನ ಪಡೆದು ಬೇರೊಬ್ಬನೊಂದಿಗೆ ಮರುಮದುವೆಯಾಗುವಂತೆ ಪತ್ನಿಗೆ ಹೇಳುತ್ತಿರುವ ವಿಡಿಯೋ ವೈರಲ್ ಆಗಿದೆ.
ಬೀಜಿಂಗ್ (ಜುಲೈ 11, 2023): 30 ವರ್ಷಗಳ ಹಿಂದಿನ ಪ್ರಕರಣವೊಂದರಲ್ಲಿ ಕೊಲೆಗಾರನ ಬಂಧನವು ಚೀನಾದಲ್ಲಿ ಚರ್ಚೆಯ ವಿಷಯವಾಗಿದೆ. ಇದಕ್ಕೆ ಕಾರಣ ಹಂತಕ ತನ್ನ ಹೆಂಡತಿಗೆ ಭಾವನಾತ್ಮಕ ಸಂದೇಶವೊಂದನ್ನು ಕಳಿಸಿದ್ದಾನೆ. ಸ್ವಯಂ-ತಪ್ಪೊಪ್ಪಿಕೊಂಡ ಕೊಲೆಗಾರ ಝೌ 1993 ರಲ್ಲಿ ಮಧ್ಯ ಹುಬೈ ಪ್ರಾಂತ್ಯದಲ್ಲಿ ಇತರ ಮೂವರು ಪುರುಷರೊಂದಿಗೆ ವ್ಯಕ್ತಿಯನ್ನು ಇರಿದು ಕೊಂದಿದ್ದನು ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.
ಅವನ ಸಹಚರರು ಅಪರಾಧದ ನಂತರ ಶೀಘ್ರದಲ್ಲೇ ಸಿಕ್ಕಿಬಿದ್ದಿದ್ದರು. ಆದರೆ, ಝೌ ಕಳೆದ ತಿಂಗಳ ಅಂತ್ಯದವರೆಗೂ ತಲೆಮರೆಸಿಕೊಂಡಿದ್ದ. ಆದರೆ, ಹುಬೈ ಪೊಲೀಸರು ದಕ್ಷಿಣ ನಗರವಾದ ಗುವಾಂಗ್‌ಝೌನಲ್ಲಿ ಅಡಗಿಕೊಂಡಿದ್ದ ಆತನನ್ನು ಬಂಧಿಸಿದರು ಎಂದು ಬೀಜಿಂಗ್ ಯೂತ್ ಡೈಲಿಯನ್ನು ಉಲ್ಲೇಖಿಸಿ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ (SCMP) ವರದಿ ಮಾಡಿದೆ.
ಇದನ್ನು ಓದಿ: ಸತ್ತರೂ ಹೊತ್ತುಕೊಂಡು ರಕ್ಷಿಸಿದ್ದ ಮರಿ ಕೋತಿಯನ್ನೇ ತಿಂದ ಹೆತ್ತ ತಾಯಿ: ಕಾರಣ ಕಂಡುಕೊಂಡ ಸಂಶೋಧಕರೇ ಶಾಕ್!
ಪೊಲೀಸರು ಆತನನ್ನು ಬಂಧಿಸುತ್ತಿದ್ದಂತೆಯೇ ತನ್ನಿಂದ ವಿಚ್ಛೇದನ ಪಡೆದು ಬೇರೊಬ್ಬನೊಂದಿಗೆ ಮರುಮದುವೆಯಾಗುವಂತೆ ಪತ್ನಿಗೆ ಹೇಳುತ್ತಿರುವ ವಿಡಿಯೋ ವೈರಲ್ ಆಗಿದೆ. ಜೈಲಿಗೆ ಹೊರಡುವಾಗ, ಝೌ ವಿದಾಯ ಹೇಳಲು ತನ್ನ ಹೆಂಡತಿಯನ್ನು ಅಪ್ಪಿಕೊಂಡು ಅಳುತ್ತಾನೆ. ಅದಾದ ನಂತರ ಆತ ಅತ್ತಿಗೆಯನ್ನು ಭೇಟಿಯಾಗಿ "ವಿಚ್ಛೇದನದ ಒಪ್ಪಂದ ಅಲ್ಲೇ ಇದೆ; ಅದಕ್ಕೆ ನಿಮ್ಮ ತಂಗಿಗೆ ಸಹಿ ಮಾಡಲು ಹೇಳಿ. ಆಕೆ ಮರುಮದುವೆಯಾಗುವಂತೆ ಅವಳನ್ನು ಮನವೊಲಿಸಬೇಕು ಮತ್ತು ನನಗಾಗಿ ಕಾಯಬೇಡಿ ಎಂದು ಹೇಳಿ. ನಾನು ಜೈಲು ಬಿಟ್ಟು ಬರುವುದಿಲ್ಲ" ಎಂದು ಹಂತಕ ಹೇಳಿದ್ದಾನೆ.
ಇದನ್ನು ಕೇಳಿಸಿಕೊಂಡ ಪತ್ನಿ ಕಣ್ಣೀರಿನೊಂದಿಗೆ ಉತ್ತರಿಸಿದ್ದು, "ನಾನು ನಿಮಗೆ ಬೇಡವೇ ಎಂದು ನನಗೆ ಆಶ್ಚರ್ಯವಾಗುತ್ತಿದೆ. ನಾನು ಒಪ್ಪುವುದಿಲ್ಲ, ನಾನು ಒಪ್ಪುವುದಿಲ್ಲ." ಎಂದಿದ್ದಾರೆ. "ನನಗಾಗಿ ಕಾಯಬೇಡ" ಎಂದು ಝೌ ಮತ್ತೆ ಹೇಳಿದಾಗ, ಅವನ ಹೆಂಡತಿ ತನ್ನ ಕೈಯಿಂದ ಹಂತಕನ ಬಾಯಿಯನ್ನು ಮುಚ್ಚಿದಳು ಮತ್ತು ಮರುಮದುವೆಯಾಗಲ್ಲ ಎನ್ನುವಂತೆ ತಲೆ ಅಲ್ಲಾಡಿಸಿದ್ದಾಳೆ.
ಇದನ್ನೂ ಓದಿ: ಸಮ್ಮತಿ ಸೆಕ್ಸ್‌ಗೆ ಒಪ್ಪಿಗೆ ವಯಸ್ಸು 16 ಆಗಿರ್ಬೇಕು: 17 ವರ್ಷದ ಹುಡುಗನ ವಿರುದ್ಧ ಎಫ್‌ಐಆರ್ ರದ್ದು ಮಾಡಿದ ಹೈಕೋರ್ಟ್
ನಂತರ, ಝೌ ತಾನು 30 ವರ್ಷಗಳ ಹಿಂದೆ ಮಾಡಿದ ಅಪರಾಧದ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ ಎಂದು ಬೀಜಿಂಗ್ ಯೂತ್ ಡೈಲಿಗೆ ಹೇಳಿದ್ದಾರೆ. "ನಾನು ಪಶ್ಚಾತ್ತಾಪಪಡುತ್ತೇನೆ. ನಾನು ಇಷ್ಟು ವರ್ಷಗಳಿಂದ ನನ್ನ ಹೆತ್ತವರನ್ನು ನೋಡಿಲ್ಲ ಮತ್ತು ಅವರ ಬಗ್ಗೆ ನನ್ನ ಸಂತಾಪವನ್ನು ವ್ಯಕ್ತಪಡಿಸಿಲ್ಲ. ನಾನು ಚಿಕ್ಕವನಿದ್ದಾಗ ತಪ್ಪು ಮಾಡಿದ್ದೇನೆ. ನಾನು ಆ ವ್ಯಕ್ತಿಯನ್ನು ಹೊಡೆದು ಕೊಲ್ಲಬಾರದಿತ್ತು" ಎಂದೂ ಕೊಲೆಗಾರ ಝೌ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: 5 ವರ್ಷದ ನಿರಂತರ ಸಮ್ಮತಿ ಲೈಂಗಿಕ ಕ್ರಿಯೆ ಅತ್ಯಾಚಾರವಲ್ಲ: ಕರ್ನಾಟಕ ಹೈಕೋರ್ಟ್