ಸೆಲಬ್ರೇಷನ್ ಅಂದಾಗ ಅಲ್ಲಿ ಪಾರ್ಟಿ ಪಾಪ್ಪರ್ಸ್, ಕೇಕ್, ಪಟಾಕಿ ಎಲ್ಲಾ ಇರೋದು ಸಾಮಾನ್ಯ. ಇದು ಪ್ರೋಗ್ರಾಂನ ಖುಷಿಯನ್ನು ಇನ್ನಷ್ಟು ಹೆಚ್ಚು ಮಾಡುತ್ತೆ. ಆದ್ರೆ ಇಲ್ಲೊಂದು ಮದ್ವೆ ಕಾರ್ಯಕ್ರಮದಲ್ಲಿ ವರ ಈ ಪಾಪ್ಪರ್ಸ್ ಸದ್ದಿಗೇ ಬೆಚ್ಚಿಬಿದ್ದಿದ್ದಾನೆ.
ಮದುವೆ ಅನ್ನೋದು ಎಲ್ಲರ ಜೀವನದಲ್ಲೂ ತುಂಬಾ ಖುಷಿಯಾಗಿರುವ ಕ್ಷಣ. ಹೀಗಾಗಿಯೇ ಇದನ್ನು ಸ್ಪೆಷಲ್ ಆಗಿಸಲು ಎಲ್ಲಾ ರೀತಿಯಲ್ಲೂ ಪ್ರಯತ್ನಿಸ್ತಾರೆ. ಸಾಂಗ್, ಡ್ಯಾನ್ಸ್, ಕೇಕ್ ಕಟ್ಟಿಂಗ್, ಪಾಪ್ಪರ್ಸ್, ಪಟಾಕಿ ತಂದು ಸಂಭ್ರಮಿಸುತ್ತಾರೆ. ಇಂಥಾ ಸಂಭ್ರಮಗಳಿಲ್ಲದೆ ಮದುವೆ ಮನೆ ಕಳೆಗಟ್ಟುವುದೇ ಇಲ್ಲ. ಫ್ರೆಂಡ್ಸ್ ಬಳಗ, ರಿಲೇಟಿವ್ಸ್ ಎಲ್ಲರೂ ಸೇರಿದಾಗ ಇಂಥಾ ಪಾಪ್ಪರ್ಸ್ ಸೆಲಬ್ರೇಶನ್‌ನ್ನು ಹೈಲೈಟ್ ಮಾಡುತ್ತದೆ. ಆದ್ರೆ ಇಲ್ಲೊಂದು ಮದುವೆ ಮನೆಯಲ್ಲಿ ವರ ಈ ಪಾಪ್ಪರ್ಸ್ ಸದ್ದಿಗೇ ಬೆಚ್ಚಿಬಿದ್ದಿದ್ದಾನೆ. ವೈರಲ್ ವಿಡಿಯೋದಲ್ಲಿ ಮದುವೆ ಸಂದರ್ಭದಲ್ಲಿ ಮದುಮಗ ವಧುವಿಗೆ ಮಾಲೆ ಹಾಕುತ್ತಿದ್ದಾಗ ಇದ್ದಕ್ಕಿದ್ದಂತೆ ಯಾರೋ ಪಾಪ್ಪರ್ಸ್ ಸಿಡಿಸಿದ್ದು ಗಲಾಟೆಗೆ ಕಾರಣವಾಗಿದೆ. ಇದಾದ ಬಳಿಕ ನಡೆದ ಘಟನೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪಾಪ್ಪರ್ಸ್ ಸದ್ದಿಗೆ ಬೆಚ್ಚಿಬೀಳುವ ವರ, ವೀಡಿಯೋ ವೈರಲ್
ಈಗ ಮದುವೆ ಸೀಸನ್ ನಡೆಯುತ್ತಿದೆ. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಇದಕ್ಕೆ ಸಂಬಂಧಿಸಿದ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಮದುವೆ ಮನೆಯಲ್ಲಿ ನಡೆದ ಎಡವಟ್ಟು, ವಧುವಿನ ಅಲಂಕಾರ, ಊಟದ ವೀಡಿಯೋಗಳು ವೈರಲ್ ಆಗುತ್ತಿರುತ್ತವೆ. ಹಾಗೆಯೇ ಸದ್ಯ ವರನೊಬ್ಬ ಪಾಪ್ಪರ್ಸ್ ಸದ್ದಿಗೇ ಬೆಚ್ಚಿಬೀಳುವ ವೀಡಿಯೋ ವೈರಲ್ ಆಗಿದೆ. ಪಾಪ್ಪರ್ಸ್ ಭಯಂಕರ ಸದ್ದಿನ ಪಟಾಕಿಯೇನಲ್ಲ. ಸಣ್ಣದಾದ ಸದ್ದಿನ ಜೊತೆ ವಿವಿಧ ಬಗೆಯ ಬಣ್ಣದ ಕಾಗದಗಳು ಹೊರಬರುತ್ತದೆ. ಇದು ವೇದಿಕೆಯನ್ನು ಕಲರ್‌ಫುಲ್ ಆಗಿಸುತ್ತದೆ ಅನ್ನೋ ಕಾರಣಕ್ಕೆ ಬರ್ತ್‌ಡೇ ಪಾರ್ಟಿ, ಮದುವೆ ಮನೆಗಳಲ್ಲಿ ಇದನ್ನು ಬಳಸುತ್ತಾರೆ. ಇದರ ಸದ್ದನ್ನು ಕೇಳಿಯೇ ವರ ಬೆಚ್ಚಿಬಿದ್ದಿದ್ದಾನೆ.
ಆ ಹುಡುಗನಲ್ಲಿ ಈ ಗುಣಗಳಿವೆಯಾ? ಮದ್ವೆಯಾಗಲು ಓಕೆ ಹೇಳ್ಬಹುದು ನೋಡಿ!
ವರ ಹೆದರಿದ್ದನ್ನು ನೋಡಿ ಬಿದ್ದೂ ಬಿದ್ದೂ ನಕ್ಕ ಮಂದಿ
ಮಾಲೆ ಹಾಕುವಾಗ ಸಿಡಿದ ಪಟಾಕಿ ವಧು-ವರರು ವೇದಿಕೆಯಲ್ಲಿ ಹಾರ ಬದಲಾಯಿಸಿಕೊಳ್ಳುವ ವಿಧಿ ನಡೆಯುತ್ತಿತ್ತು. ಈ ವೇಳೆ ಯಾರೋ ಗುಂಪಿನಲ್ಲಿ ಪಟಾಕಿ ಸಿಡಿಸಿದ್ದಾರೆ. ಈ ವೇಳೆ ವರ ಬೆಚ್ಚಿಬಿದ್ದಿದ್ದಾನೆ. ವರನಿಗೆ ಗಾಬರಿಯಾಗುವಷ್ಟು ಸದ್ದು ಜೋರಾಗಿರುವುದನ್ನು ವೈರಲ್ ಆಗಿರುವ ವಿಡಿಯೋದಲ್ಲಿ ನೀವು ನೋಡಬಹುದು. ವರ ಹೆದರುವುದನ್ನು ಕಂಡು ಅಲ್ಲಿದ್ದವರು ಜೋರಾಗಿ ನಕ್ಕಿದ್ದಾರೆ.
ಮದುವೆಯಲ್ಲಿ ಪಾಪ್ಪರ್ಸ್ ಹಾರಿಸಲಾಗಿದ್ದು ವಧುವಿಗೆ ಮಾಲೆ ಹಾಕುವಾಗ ವರ ಬೆಚ್ಚಿ ಬಿದ್ದಿದ್ದಾನೆ. ವರ ಪಾಪ್ಪರ್ಸ್ ಸದ್ದಿಗೆ ಹೆದರಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಈ ವಿಡಿಯೋ 90 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ. ಈ ವಿಡಿಯೋ ಯಾವಾಗ ಮತ್ತು ಎಲ್ಲಿಂದ ಬಂದಿದೆ ಎಂಬುದರ ಕುರಿತು ಮಾಹಿತಿ ತಿಳಿದಿಲ್ಲ. ಆದರೆ ಜನರು ಇದನ್ನು ಸಾಮಾಜಿಕ ಮಾಧ್ಯಮದಲ್ಲಿ ತೀವ್ರವಾಗಿ ಆನಂದಿಸುತ್ತಿದ್ದಾರೆ.
ಸ್ವರ್ಗದಲ್ಲೇ ನಿಶ್ಚಯವಾದ ವಿವಾಹ..! 3 ಅಡಿ ಎತ್ತರದ ವಧುವನ್ನು ವರಿಸಿದ 3 ಅಡಿ ಎತ್ತರದ ವರ
ನಾಚಿಕೆಯಾಗುತ್ತೆ ಅಂತ ಹನಿಮೂನ್ ರಾತ್ರಿ ಪಕ್ಕದ ಮನೆಯಲ್ಲಿ ಬಚ್ಚಿಟ್ಟುಕೊಂಡ ವರ!
ವಧು ವರರಿಗೆ ಹನಿಮೂನ್ ಅನ್ನೋದು ಸುಂದರ ಕ್ಷಣವಾಗಿರುತ್ತದೆ. ಈ ಸಂದರ್ಭ ಪರಸ್ಪರ ಜೊತೆಯಲ್ಲೇ ಸಮಯ ಕಳೆದು ಅರ್ಥ ಮಾಡಿಕೊಳ್ಳುತ್ತಾರೆ. ಆದ್ರೆ ಇಲ್ಲೊಂದೆಡೆ ಆಶ್ಚರ್ಯ ಪಡುವಂತ ಘಟನೆ ನಡೆದಿದೆ. ಹನಿಮೂನ್ ರಾತ್ರಿಯಂದು ವಧು (Bride) ಕಾಯುತ್ತಾ ಕುಳಿತಿದ್ದರೆ, ವರ ಫೋನ್ ಸ್ವಿಚ್ ಆಫ್ ಮಾಡಿಕೊಂಡು ಪಕ್ಕದ ಮನೆಯಲ್ಲಿ ಬಚ್ಚಿಟ್ಟುಕೊಂಡಿದ್ದಾನೆ. ಎಲ್ಲರೂ ಸ್ನೇಹಿತರಿಗೆ, ಕುಟುಂಬಸ್ಥರಿಗೆ ಕರೆ ಮಾಡಿ ಹೈರಾಣಾಗಿದ್ದಾರೆ. ಕೊನೆಗೆ ವರ ಪಕ್ಕದ ಮನೆಯಲ್ಲಿ (Neightbour) ಬಚ್ಚಿಟ್ಟುಕೊಂಡಿದ್ದಾನೆ ಅನ್ನೋ ವಿಷಯ ತಿಳಿದುಬಂತು.
ಹುಡುಗಿ ಸಹ ಗಂಟೆಗಟ್ಟಲೆ ಕಾದು ಸುಸ್ತಾಗಿದ್ದಳು. ಮನೆ ಮಂದಿ ಸಹ ವರನನ್ನು ಹುಡುಕಿ ಹುಡುಕಿ ಹೈರಾಣಾಗಿದ್ದರು. ಕೊನೆಗೂ ವರ ಸಿಕ್ಕಿದ ಕಾರಣ ಸಮಾಧಾನವಾಗಿದೆ. ಜೊತೆಗೆ ಯಾಕೆ ಆತ ಹಾಗೆ ಮಾಡಿದ ಎಂಬುದು ಎಲ್ಲರಲ್ಲೂ ಗೊಂದಲ ಮೂಡಿಸಿದೆ. ಈ ವೇಳೆ ಪೋಷಕರು (Parents) ಹುಡುಗನ ಬಳಿಕ ಯಾಕೆ ಹೀಗೆ ಹನಿಮೂನ್ ದಿನ ಓಡಿ ಹೋಗಿದ್ದೆಂದು ಪ್ರಶ್ನಿಸಿದ್ದಾರೆ. ಅದಕ್ಕೆ ವರ ನನಗೆ ತುಂಬಾ ನಾಚಿಕೆ (Shy)ಯಾಯಿತು. ಮುಜುಗರದಿಂದ ತಪ್ಪಿಸಿಕೊಳ್ಳಲು ಈ ರೀತಿ ಮಾಡಿದೆ ಎಂದಿದ್ದಾನೆ.