ಚಿ.ರಾ ಕಾಲ ಹೋಯ್ತು ಈಗ ದೈಹಿಕ ಅರ್ಹತೆ ಪಡೆದ ವರ ಸ್ಟೇಟಸ್, ಮದುವೆ ಕಾರ್ಡ್ ಭಾರಿ ವೈರಲ್

Published : Apr 30, 2025, 12:59 PM ISTUpdated : Apr 30, 2025, 01:45 PM IST
ಚಿ.ರಾ ಕಾಲ ಹೋಯ್ತು ಈಗ ದೈಹಿಕ ಅರ್ಹತೆ ಪಡೆದ ವರ ಸ್ಟೇಟಸ್, ಮದುವೆ ಕಾರ್ಡ್ ಭಾರಿ ವೈರಲ್

ಸಾರಾಂಶ

ಬಿಹಾರದ ಮಹಾವೀರ್ ಕುಮಾರ್ ಮದುವೆ ಪತ್ರಿಕೆಯಲ್ಲಿ ತನ್ನ ಹೆಸರಿನ ಜೊತೆಗೆ "ಬಿಹಾರ್ ಪೊಲೀಸ್ (ದೈಹಿಕ ಅರ್ಹತೆ)" ಎಂದು ಮುದ್ರಿಸಿ ವೈರಲ್ ಆಗಿದ್ದಾನೆ. ಪೊಲೀಸ್ ನೇಮಕಾತಿಯ ದೈಹಿಕ ಪರೀಕ್ಷೆಯಲ್ಲಿ ಉತ್ತೀರ್ಣನಾದ ಹಿನ್ನೆಲೆಯಲ್ಲಿ ಈ ರೀತಿ ಮುದ್ರಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಜನರು ಇದನ್ನು ಮದುವೆಗೆ ದೈಹಿಕವಾಗಿ ಅರ್ಹ ಎಂದು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ.

ಪಾಟ್ನಾ(ಏ.30) ವರನ ಹೆಸರು ಮಹಾವೀರ್ ಕುಮಾರ್, ಇದರ ಪಕ್ಕದಲ್ಲಿ ಈತನ ಡಿಗ್ರಿ, ಪ್ರಶಸ್ತಿ ಉಲ್ಲೇಖ ಮಾಡಿಲ್ಲ. ಬದಲಾಗಿ ವರ ಫಿಸಿಕಲ್ ಕ್ವಾಲಿಫೈಡ್ ಎಂದು ನಮೂದಿಸಿದ್ದಾರೆ. ಅಂದರೆ ವರ ದೈಹಿಕವಾಗಿ ಅರ್ಹತೆ ಪಡೆದಿದ್ದಾನೆ ಎಂದು ಲಗ್ನ ಪತ್ರಿಕೆಯಲ್ಲೇ ಹೇಳಲಾಗಿದೆ. ನಮ್ ಕಾಲದಲ್ಲಿ ಹಿಂಗೆ ಇರಲಿಲ್ಲ.ಚಿ.ರಾ ಎಂದು ವರನ ಹೆಸರಿನ ಮುಂದೆ ಉಲ್ಲೇಖಿಸಿದರೆ ಮುಗೀತು. ಮತ್ತೆ ಕುಟುಂಬಸ್ಥರು, ಪೋಷಕರು ಹೆಸರು, ವಿಳಾಸ ಮಾತ್ರ ಎಂದು ಹೇಳುವರು ಈ ಲಗ್ನ ಪತ್ರಿಕೆ ನೋಡಿ ಹೌಹಾರಿದ್ದಾರೆ. ವರ ಸ್ಟೇಟಸ್ ಹೇಳಲು ಹೋಗಿ ಮಾನ ಮೂರು ಕಾಸಿಗೆ ಹರಾಜು ಹಾಕಿದ ಘಟನೆ ಬಿಹಾರದಲ್ಲಿ ನಡೆದಿದೆ. 

ಸಾಂಪ್ರದಾಯಿಕ ಲಗ್ನ ಪತ್ರಿಕೆ ವೈರಲ್
ಪ್ರತಿಯೊಬ್ಬರ ಜೀವನದಲ್ಲಿ ಮದುವೆ ವಿಶೇಷ ಘಳಿಕೆ. ಒಂದಾದರೂ, ಮುಂದೆ ಹಲವಾದರೂ ಮದುವೆ ಯಾವತ್ತೂ ವಿಶೇಷವೆ. ಹೀಗಾಗಿ ಮದುವೆಯನ್ನು (wedding ceremony) ಮತ್ತಷ್ಟು ಸ್ಮರಣೀಯವಾಗಿಸಲು ಪ್ರತಿ ಕಾರ್ಯಕ್ರಮದಲ್ಲೂ ಭಿನ್ನತೆ, ವಿಶೇಷತೆ ತರಲು ಬಯಸುತ್ತಾರೆ. ಈ ಪೈಕಿ ಲಗ್ನ ಪತ್ರಿಕೆ ಕೂಡ ಒಂದು. ವಿಶೇಷ ವಿನ್ಯಾಸ, ಆಕರ್ಷಕ ಬರಹ, ಯಾರೂ ಮಾಡದ ರೀತಿಯ ಲಗ್ನಿ ಪತ್ರಿಕೆಗಳನ್ನು ಆಸಕ್ತಿ ವಹಿಸಿ ಮಾಡಲಾಗುತ್ತದೆ. ಬಹುತೇಕ ಲಗ್ನಿ ಪತ್ರಿಕೆಯಲ್ಲಿ (Wedding Invitation) ವರ, ವಧು,ಅವರ ಕುಟುಂಬ, ವಿಳಾಸ, ಮದುವೆ ಮುಹೂರ್ತ, ದಿನಾಂಕ (Marrage Date) ಸೇರಿದಂತೆ ಎಲ್ಲಾ ಮಾಹಿತಿಗಳನ್ನು ನಮೂದಿಸಲಾಗಿರುತ್ತದೆ. ಭಾರತೀಯ ಸಾಂಪ್ರಾದಾಯಿಕ ಲಗ್ನ ಪತ್ರಿಕೆಯ ಶೈಲಿ ಬಹುತೇಕರಿಗೆ ಗೊತ್ತೇ ಇದೆ. ಬಿಹಾರದ ಚಿರಂಜೀವಿ ಮಹಾವೀರ್ ಕುಮಾರ್ ಮದುವೆ ಆಮಂತ್ರಣ ಪತ್ರಿಕೆ ಕೂಡ ಸಾಂಪ್ರಾದಾಯಿಕವಾಗಿಯೇ ಇದೆ. 

ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಹೆಸರಿನ ಜೊತೆ ಜನ್ಮ ದಿನಾಂಕ ಕಡ್ಡಾಯ, ಸರ್ಕಾರ ಆದೇಶ

ನಮ್ದೂ ಒಂದು ಇರ್ಲಿ ಎಂದು ಎಡವಟ್ಟು
ಇಡೀ ಮದುವೆ ಆಮಂತ್ರ ಪತ್ರಿಕೆಯಲ್ಲಿ ಎಲ್ಲವೂ ಒಕೆ, ಕೇವಲ ವರನ ಹೆಸರು ಬ್ರಾಕೆಟ್‌ನಲ್ಲಿ ಸ್ಟೇಟಸ್ ತೋರಿಸಲು ಹೋಗಿ ಎಡವಟ್ಟು ಮಾಡಿದ ಪದಗಳು ಇದೀಗ ದೇಶದಲ್ಲೇ ಸದ್ದು ಮಾಡುತ್ತಿದೆ. ಮಹಾವೀರ್ ಕುಮಾರ್ ಇತರರ ಲಗ್ನ ಪತ್ರಿಕೆ ನೋಡಿದ್ದಾನೆ. ವಿಶೇಷವಾಗಿ ಆತನ ಗ್ರಾಮಸ್ಥರು, ಪರಿಚಯಸ್ಥರು, ಕುಟುಂಬಸ್ಥರ ಮದುವೆ ಆಮಂತ್ರಣ ಪತ್ರಿಕೆಯ ವರನ ಹೆಸಿನ ಜೊತೆಗೆ ಪೊಲೀಸ್, ಲಾಯರ್ ಸೇರಿದಂತೆ ತಮ್ಮ ತಮ್ಮ ಕೆಲಸದ ಡೆಸಿಗ್ನೇಶನ್ ಹಾಕಿದ್ದಾರೆ. ನಮ್ದೂ ಒಂದು ಇರ್ಲಿ ಎಂದು ಈತ ಕೂಡ ಹಾಕಿಸಿದ್ದೇ ಇದೀಗ ವೈರಲ್ ಆಗಿದೆ.

 

 

ಅಸಲಿಗೆ ಮಹಾವೀರ್ ಕುಮಾರ್ ಪೊಲೀಸ್ ಪೇದೆ ನೇಮಕಾತಿಯಲ್ಲಿ ಪಾಲ್ಗೊಂಡಿದ್ದಾನೆ. ಇಲ್ಲಿ ದೈಹಿಕ ಪರೀಕ್ಷೆಯಲ್ಲಿ ಪಾಸ್ ಆಗಿದ್ದಾನೆ. ಇನ್ನು ಲಿಖಿತ ಪರೀಕ್ಷೆ ಸೇರಿದಂತೆ ಇತರ ಪರೀಕ್ಷೆಗಳಲ್ಲಿ ಪಾಸ್ ಆಗಿದ್ದಾನೋ ಅಥವಾ ಇನ್ನು ನಡೆದಿಲ್ಲವೋ ಅನ್ನೋದು ಸ್ಪಷ್ಟವಿಲ್ಲ. ಪೊಲೀಸ್ ಫಿಸಿಕಲ್ ಟೆಸ್ಟ್ ಪಾಸ್ ಆಗಿರುವ ಕಾರಣಕ್ಕೆ ತನ್ನ ಸ್ಟೇಟಸ್‌ನ್ನು ತೋರಿಸಿಕೊಳ್ಳಲು ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಫಿಸಿಕಲ್ ಕ್ವಾಲಿಫೈಡ್ ಅಂದರೆ ದೈಹಿಕ ಅರ್ಹತೆ ಪಡೆದಿದ್ದೇನೆ ಎಂದು ಮುದ್ರಿಸಿದ್ದಾನೆ. ಇದರ ಮೇಲೆ ಬಿಹಾರ ಪೊಲೀಸ್ ಎಂದು ಉಲ್ಲೇಖಿಸಿದ್ದಾನೆ. 

ವರ ಮಹಾವೀರ್ ಕುಮಾರ್ ಹೇಳಲು ಹೊರಟಿರುವುದು ಬಿಹಾರ್ ಪೊಲೀಸ್ ವಿಭಾಗದಲ್ಲಿ ಫಿಸಿಕಲ್ ಟೆಸ್ಟ್ ಪಾಸಾಗಿದ್ದೇನೆ ಎಂದು. ಆದರೆ ಲಗ್ನ ಪತ್ರಿಕೆ ಓದಿದರು ಈತ ಮದುವೆಯಾಗಲು ಫಿಸಿಕಲ್ ಟೆಸ್ಟ್ ಪಾಸ್ ಮಾಡಿದ್ದಾನೆ ಅನ್ನೋದು ಅರ್ಥಮಾಡಿಕೊಂಡಿದ್ದಾರೆ. ಹೀಗಾಗಿ ಬಿಹಾರದಲ್ಲಿ ಈ ಲಗ್ನ ಪತ್ರಿಕೆ ಭಾರಿ ವೈರಲ್ ಆಗಿದೆ. ಹಲವರು ಈ ಲಗ್ನ ಪತ್ರಿಕೆಗೆ ಪ್ರತಿಕ್ರಿಯಿಸಿದ್ದಾರೆ. ತಾನೂ ಕೂಡ ಲಗ್ನ ಪತ್ರಿಕೆಯಲ್ಲಿ ಡಿಸಿಗ್ನೇಶನ್ ಹಾಕಲು ಬಯಸುತ್ತೇನೆ ಎಂದಿದ್ದಾರೆ. ಮತ್ತೆ ಕೆಲವರು ಬಿಹಾರ ಯಾವತ್ತೂ ಆರಂಭಿಕರಿಗಲ್ಲ, ಇದು ಅನುಭವಿಗಳಿಗೆ ಮಾತ್ರ ಎಂದು ಪ್ರತಿಕ್ರಿಯಿಸಿದ್ದಾರೆ. ಈ ರೀತಿಯ ಲಗ್ನ ಪತ್ರಿಕೆ ಸ್ವಾರಸ್ಯ ಬಿಹಾರದಲ್ಲೇ ಏಕೆ ನಡೆಯುತ್ತದೆ ಎಂದು ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಪ್ರಶ್ನಿಸಿಸಿದ್ದಾರೆ.

ವೆಡ್ಡಿಂಗ್‌ ಕಾರ್ಡ್ ಬಂತೆಂದು ಲಿಂಕ್‌ ಓಪನ್‌ ಮಾಡಿದ್ರೆ ನಿಮ್ಮ ಬ್ಯಾಂಕ್‌ ಖಾತೆ ಖಾಲಿ! ಏನಿದು ಹೊಸ ವಂಚನೆ?

 
 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Zodiac Love: ನಿಮ್ಮ ಜನ್ಮರಾಶಿಯ ಪ್ರೀತಿಯ ಭಾಷೆ ಇದು!
Karna Serial: ಆ ಒಂದು ಸತ್ಯ ತೇಜಸ್​ಗೆ ಹೇಳಲು ಬಾಯಿ ಬಿದ್ದೋಗಿತ್ತಾ? ಕರ್ಣನ ಮೇಲೆ ಕಿಡಿಕಾರ್ತಿರೋ ವೀಕ್ಷಕರು