
ಹಿಂದಿನ ಕಾಲದಲ್ಲೆಲ್ಲಾ ಮದುವೆ ಕಾರ್ಯಕ್ರಮಗಳು ಅಚ್ಚುಕಟ್ಟಾಗಿ ಶಾಸ್ತ್ರಬದ್ಧವಾಗಿ ನಡೆಯುತ್ತಿತ್ತು. ಹೆಚ್ಚು ಗದ್ದಲ-ಗೊಂದಲಗಳಿಲ್ಲದೆ ಮದುವೆ ಕಾರ್ಯಕ್ರಮ ಮುಗಿದು ಹೋಗುತ್ತಿತ್ತು. ಆದ್ರೆ ಇವತ್ತಿನ ದಿನಗಳಲ್ಲಿ ಮದ್ವೆ ಅಂದ್ರೆ ಸಂಭ್ರಮ, ಸಡಗರದ ಜೊತೆಗೆ ಮ್ಯೂಸಿಕ್, ಡ್ಯಾನ್ಸ್ ಅಬ್ಬರ ಹೆಚ್ಚಾಗಿರುತ್ತೆ. ವಧು-ವರ, ಮನೆ ಮಂದಿ, ಅತಿಥಿಗಳು ಎಲ್ಲರೂ ಮ್ಯೂಸಿಕ್, ಡ್ಯಾನ್ಸ್ ಅಂತ ಸಂಭ್ರಮಿಸ್ತಾರೆ. ಅದರಲ್ಲೂ ಡಿಜೆ, ಅಬ್ಬರ ಡ್ಯಾನ್ಸ್ ಇಲ್ಲದೆ ಅಂತೂ ಮುಗಿಯೋದೆ ಇಲ್ಲ.
ಕೇವಲ ಮನೆ ಮಂದಿ, ಫ್ರೆಂಡ್ಸ್ ಮಾತ್ರವಲ್ಲದೆ ಸ್ವತಃ ವಧು-ವರರು ಸಹ ಡ್ಯಾನ್ಸ್‌ಗೆ ಹೆಜ್ಜೆ ಹಾಕ್ತಾರೆ. ಹೀಗೆಯೇ ಇಲ್ಲೊಂದೆಡೆ ಮದುವೆ ಕಾರ್ಯಕ್ರಮದಲ್ಲಿ ಡ್ಯಾನ್ಸ್ ಮಾಡುತ್ತಿರುವಾಗ ವರ ಏಕಾಏಕಿ ಸ್ಟೇಜ್‌ನಿಂದ ಜಿಗಿಯುತ್ತಿರುವ ವೀಡಿಯೋ ವೈರಲ್ ಆಗಿದೆ. ಇನ್‌ಸ್ಟಾಗ್ರಾಂನಲ್ಲಿ ಈ ವೀಡಿಯೋ ವೈರಲ್ ಆಗಿದೆ.
ವೆಡ್ಡಿಂಗ್ ಶೂಟ್‌ನಲ್ಲಿ ನಾಚಿ ನೀರಾದ ಜೋಡಿಗೆ ನಿರ್ದೇಶಕನಾದ ಅಂಬಿಗ, ವೈರಲ್ ವಿಡಿಯೋ!
ಮದುವೆಯ ವೇದಿಕೆಯಲ್ಲಿ ವರನು ತನ್ನ ವಧುವಿನ ಪಕ್ಕದಲ್ಲಿ ಕುಳಿತುಕೊಳ್ಳುವುದರೊಂದಿಗೆ ಕ್ಲಿಪ್ ಪ್ರಾರಂಭವಾಗುತ್ತದೆ. ಈ ಸಂದರ್ಭದಲ್ಲಿ ಸ್ನೇಹಿತರು ಮತ್ತು ಕುಟುಂಬವು ಖುಷಿಯಿಂದ ನೃತ್ಯ ಮಾಡುತ್ತಿರುತ್ತಾರೆ. ಈ ಸಂದರ್ಭದಲ್ಲಿ ದಿಢೀರ್ ಆಗಿ ಸಹ ಮಂಟಪದಿಂದ ಜಿಗಿದು ಈ ಡ್ಯಾನ್ಸ್ ತಂಡದೊಂದಿಗೆ ಸೇರಿಕೊಳ್ಳುತ್ತಾನೆ.
ಸೋಷಿಯಲ್ ಮೀಡಿಯಾದಲ್ಲಿ ಈ ವೀಡಿಯೋ ವೈರಲ್ ಆಗಿದ್ದು 112,000 ಲೈಕ್ಸ್ ಪಡೆದುಕೊಂಡಿದೆ. ನೆಟ್ಟಿಗರು ನಾನಾ ರೀತಿ ಕಾಮೆಂಟ್ ಮಾಡಿದ್ದಾರೆ. ಒಬ್ಬ ಬಳಕೆದಾರರು, 'ಕೊನೆಗೂ ಜಬರ್ದಸ್ತ್ ಡ್ಯಾನ್ಸ್ ನೋಡಿ ವರನಿಗೆ ಸ್ಟೇಜ್‌ನಿಂದ ಇಳಿಯದೇ ಇರಲು ಸಾಧ್ಯವಾಗಲ್ಲಿಲ್ಲ' ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, 'ಎಲ್ಲರೂ ಸಂತಸದ ಕ್ಷಣವನ್ನು ಎಂಜಾಯ್ ಮಾಡಲು ಇಷ್ಟಪಡುತ್ತಾರೆ. ಅವನ ಹೆಂಡತಿಯೂ ಅದರ ಬಗ್ಗೆ ಸಂತೋಷವಾಗಿರುವುದನ್ನು ನೋಡಲು ಸಂತೋಷವಾಗುತ್ತುದೆ' ಎಂದಿದ್ದಾರೆ.
ಮದುವೆ ದಿನ ಬಾಸ್‌ನಿಂದ ಬಂದ ಮೆಸೇಜ್ ನೋಡಿ ಯುವತಿ ಶಾಕ್; ಆ ಕ್ಷಣ ಉಸಿರು ನಿಂತತಾಯ್ತು ಎಂದ ವಧು!
ಮತ್ತೊಬ್ಬ ವ್ಯಕ್ತಿ, 'ನನಗೆ ಭಯವಾಗುತ್ತಿದೆ, ನನ್ನ ಮದುವೆಯಲ್ಲಿ ನಾನು ಡ್ಯಾನ್ಸ್ ಮಾಡದೆ ಹೇಗೆ ನಿಯಂತ್ರಿಸಿಕೊಳ್ಳುತ್ತೇನೆ ಗೊತ್ತಾಗುತ್ತಿಲ್ಲ' ಎಂದಿದ್ದಾರೆ. ಇನ್ನೊಬ್ಬರು, 'ನಾನು ಮೊದಲು ನೃತ್ಯ ಮಾಡಬೇಕು, ಮದುವೆ ನಂತರ ಆಗಬಹುದು ಎಂಬ ಮನಸ್ಥಿತಿ ಹುಡುಗನು' ಎಂದು ತಮಾಷೆ ಮಾಡಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.