
ಪ್ರೀತಿಸುವಾಗ ಜನರು ಜಗತ್ತು ಮರೆಯುತ್ತಾರೆ. ಒಬ್ಬರಿಗೊಬ್ಬರು ಎಷ್ಟು ಹಣ ಖರ್ಚು ಮಾಡಿದ್ದೇವೆ ಎಂಬ ಲೆಕ್ಕ ಇರೋದಿಲ್ಲ. ಹೊಟೇಲ್, ಪಾರ್ಕ್, ಸಿನಿಮಾ ಅಂತ ಸುತ್ತಾಡುವ ಜೋಡಿ, ಪರಸ್ಪರ ಗಿಫ್ಟ್ ನೀಡಿ ತಮ್ಮ ಪ್ರೀತಿಯನ್ನು ಹಂಚಿಕೊಳ್ತಾರೆ. ಈಗ ಹುಡುಗಿಯರೂ ಇಂಡಿಪೆಂಡೆಂಟ್ ಆಗಿರುವ ಕಾರಣ ಕೆಲವೊಮ್ಮೆ ಅವರೂ ಕಾಫಿ, ಟೀ ಬಿಲ್ ನೀಡೋದಲ್ಲದೆ ಬಾಯ್ ಫ್ರೆಂಡ್ ಗೆ ದುಬಾರಿ ಗಿಫ್ಟ್ ನೀಡ್ತಾರೆ. ಪ್ರೀತಿಯಲ್ಲಿದ್ದಾಗ ಎಲ್ಲವನ್ನೂ ಮನ್ನಾ ಮಾಡುವ ಜೋಡಿ ಬ್ರೇಕ್ ಅಪ್ ಆಗ್ತಿದ್ದಂತೆ ಬದಲಾಗ್ತಾರೆ. ಸಂಗಾತಿಗೆ ಇಷ್ಟು ಹಣ ಖರ್ಚು ಮಾಡಿದ್ದೇನೆ, ಅಷ್ಟು ಹಣ ಖರ್ಚು ಮಾಡಿದ್ದೇನೆ ಎಂತ ಆರೋಪ ಮಾಡ್ತಾ ಸುತ್ತಾಡುತ್ತಿರುತ್ತಾರೆ. ಬ್ರೇಕ್ ಅಪ್ ನಂತ್ರ ಕೆಲ ಜೋಡಿ ತಮಗೆ ಸಿಕ್ಕ ಉಡುಗೊರೆಯನ್ನು ವಾಪಸ್ ನೀಡ್ತಾರೆ. ಆದ್ರೆ ಕೆಲವೇ ಕೆಲವು ಮಂದಿ ಈ ಹಿಂದೆ ಮಾಡಿದ ಖರ್ಚನ್ನು ಹಂಚಿಕೊಳ್ಳುವ ಸಾಹಸಕ್ಕೆ ಕೈ ಹಾಕ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಅಂಥ ವ್ಯಕ್ತಿಯೊಬ್ಬನ ಬಿಲ್ ವೈರಲ್ ಆಗಿದೆ.
ವೃತ್ತಿಯಲ್ಲಿ ಚಾರ್ಟರ್ಡ್ ಅಕೌಂಟೆಂಟ್ (Chartered Accountant) ಆಗಿದ್ದ ಗೆಳೆಯ ಬ್ರೇಕ್ ಅಪ್ (Break Up) ನಂತ್ರ ಖರ್ಚಿನ ಪಟ್ಟಿ ನೀಡಿದ್ದಾನೆ. ಗರ್ಲ್ ಫ್ರೆಂಡ್ (Girlfriend )ಬಿಟ್ಟು ಹೋದ್ಲು ಎನ್ನುವುದಕ್ಕಿಂತ ಆಕೆಗೆ ಮಾಡಿದ ಖರ್ಚು ಆತನ ಚಿಂತೆಯನ್ನು ಹೆಚ್ಚಿಸಿದೆ. ಹಾಗಾಗಿಯೇ ಕಾಫಿ, ಟೀ, ಸಿಗರೇಟ್ ಸೇರಿದಂತೆ ಗರ್ಲ್ ಫ್ರೆಂಡ್ ಗೆ ಮಾಡಿದ ಎಲ್ಲ ಖರ್ಚನ್ನು ಬರೆದು ಅದನ್ನು ಗರ್ಲ್ ಫ್ರೆಂಡ್ ಗೆ ಕಳುಹಿಸಿದ್ದಾನೆ. ಜಿಎಸ್ಟಿ ಕೂಡ ಅದಕ್ಕೆ ಸೇರಿಸಿದ್ದು ಎಲ್ಲರ ಗಮನ ಸೆಳೆದಿದೆ.
ಜಪಾನಿನ ಟ್ರೆಂಡ್ ಭಾರತಕ್ಕೂ ಬಂತು, ಸಿಂಗಲ್ ಅನ್ನೋ ಚಿಂತೆ ಬೇಡ, ಬಾಡಿಗೆಗೆ ಸಿಗ್ತಾಳೆ ಗರ್ಲ್‌ಫ್ರೆಂಡ್!
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ @sehahaj ಹೆಸರಿನ ಖಾತೆದಾರಳು ತನ್ನ ರೂಮ್ ಮೇಟ್ ಗೆ ಬಂದ ಬಿಲ್ ಫೋಟೋವನ್ನು ಹಂಚಿಕೊಂಡಿದ್ದಾಳೆ. ರೂಮ್ ಮೇಟ್ ಆದಿತ್ಯ ಎಂಬ ಸಿಎ ಹುಡುಗನ ಜೊತೆ ಡೇಟ್ ಮಾಡ್ತಿದ್ದಳು. ಬ್ರೇಕ್ ಅಪ್ ಆದ್ಮೇಲೆ ಆದಿತ್ಯ ಎಕ್ಸೆಲ್ ಶೀಟ್‌ನಲ್ಲಿ ಎಲ್ಲಾ ಖರ್ಚನ್ನು ಪಟ್ಟಿ ಮಾಡಿ ಅವಳಿಗೆ ಕಳುಹಿಸಿದ್ದಾನೆ. ಆದಿತ್ಯ ಬಿಲ್ ವಿಭಜಿಸಿದ್ದಲ್ಲದೆ ಕ್ಯಾಶ್ ಆನ್ ಡಿಲೆವರಿಯಲ್ಲಿ ಉಡುಗೊರೆಯನ್ನು ಕಳುಹಿಸುತ್ತಿದ್ದ ಎಂದು ಸಾಕ್ಷಿ, ಪೋಸ್ಟ್ ಗೆ ಶೀರ್ಷಿಕೆ ಹಾಕಿದ್ದಾಳೆ.
ಆದಿತ್ಯ ಜೊತೆ ಸಾಕ್ಷಿ ರೂಮ್ ಮೇಟ್ ಏಳು ತಿಂಗಳು ಡೇಟ್ ಮಾಡಿದ್ದಳು. ಈ ಸಮಯದಲ್ಲಿ ಅವರಿಬ್ಬರು ಎಷ್ಟು ಖರ್ಚು ಮಾಡಿದ್ದಾರೆ ಎಂಬುದನ್ನು ಆದಿತ್ಯ ಬಿಲ್ ಮಾಡಿದ್ದಾನೆ. ಸಿಗರೇಟ್, ಕಾಫಿ, ಹೊಟೇಲ್, ಶಾಪಿಂಗ್, ಸ್ಟೇಷನರಿ, ಸಿನಿಮಾ, ಪಾರ್ಟಿ ಸೇರಿದಂತೆ ಎಲ್ಲ ಖರ್ಚನ್ನು ಪಟ್ಟಿಯಲ್ಲಿ ಸೇರಿಸಿದ್ದಾನೆ. ಮಾರ್ಟಿನ್ ಕಾಯಿಲ್ ಕೂಡ ಆತ ಸೇರಿಸಿದ್ದಾನೆ. ಇಬ್ಬರು ಏಳು ತಿಂಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಹಣವನ್ನು ಖರ್ಚು ಮಾಡಿದ್ದಾರೆ. ಅದ್ರಲ್ಲಿ ಸಾಕ್ಷಿ ರೂಮ್ ಮೇಟ್ ಪಾಲು 51 ಸಾವಿರವಾಗಿದೆ. ಅದಕ್ಕೆ ಆದಿತ್ಯ ಶೇಕಡಾ 18ರಷ್ಟು ಜಿಎಸ್ಟಿ ಸೇರಿಸಿದ್ದಾನೆ. ಹಾಗಾಗಿ ಗರ್ಲ್ ಫ್ರೆಂಡ್ ಖರ್ಚು 60 ಸಾವಿರವಾಗಿದೆ. ಆದಿತ್ಯ ಇಷ್ಟಕ್ಕೆ ಬಿಟ್ಟಿಲ್ಲ, ಮಾಜಿ ಗರ್ಲ್ ಫ್ರೆಂಡ್ ಗೆ ಹಣ ಪಾವತಿಸಲು ಇಎಂಐ ಆಯ್ಕೆ ನೀಡಿದ್ದಾನೆ. ಆದ್ರೆ ಆಕೆ ಈ ಆಯ್ಕೆ ಆಯ್ದುಕೊಂಡ್ರೆ ಶೇಕಡಾ 4ರಷ್ಟು ಬಡ್ಡಿಯನ್ನು ಪಾವತಿ ಮಾಡ್ಬೇಕು ಎಂದು ಆದಿತ್ಯ ಹೇಳಿದ್ದಾನೆ.
ಯಶ್ ಜೊತೆ ಜಗಳ, ವಾದ ಆಗುತ್ತೆ… ಆದ್ರೆ ಕೊನೆಗೆ; ತಮ್ಮ ದಾಂಪತ್ಯದ ಸೀಕ್ರೆಟ್ ಬಿಚ್ಚಿಟ್ಟ ರಾಧಿಕಾ ಪಂಡಿತ್
ಎಕ್ಸ್ ನಲ್ಲಿ ಸಾಕ್ಷಿ ಪೋಸ್ಟ್ ವೈರಲ್ ಆಗಿದೆ. ಈವರೆಗೆ 13 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ. ಅನೇಕರು ಸಾಕ್ಷಿ ಪೋಸ್ಟ್ ಗೆ ಕಮೆಂಟ್ ಮಾಡಿದ್ದಾರೆ. ಇಂಥ ಹುಡುಗನನ್ನು ಆಕೆ ಹೇಗೆ ಡೇಟ್ ಮಾಡಿದ್ಲು ಎಂದು ಒಬ್ಬರು ಕಮೆಂಟ್ ಮಾಡಿದ್ರೆ ಮತ್ತೊಬ್ಬರು ಎಕ್ಸೆಲ್ ಶೀಟ್ ಹಾಗೂ ಐಎಂಐ ಆಯ್ಕೆ ನೋಡಿದ್ರೆ ಕಣ್ಣಲ್ಲಿ ನೀರು ಬರುತ್ತೆ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.