ಇಲ್ಲೊಬ್ಬಳು ಭಾರತೀಯ ಮಹಿಳೆ ಗಂಡನ ನಿರಂತರ ಕಿರುಕುಳದಿಂದ ಬೇಸತ್ತು ವಿಚ್ಛೇದನ ಪಡೆದುಕೊಂಡಿದ್ದಳು. ವಿಚ್ಛೇದನ ಪಡೆದ ನಂತರ ಆಕೆ ಖಿನ್ನತೆಗೆ ಒಳಗಾಗಿದ್ದಳು. ಈಗ 56ನೇ ವಯಸ್ಸಿನಲ್ಲಿ, ಮಹಿಳೆ ತನಗಿಂತ 20 ವರ್ಷ ಕಿರಿಯ ವ್ಯಕ್ತಿಯನ್ನು ಪ್ರೀತಿಸಿ ಮದುವೆಯಾಗಿದ್ದಾಳೆ.
ಭಾರತೀಯ ಸಂಸ್ಕೃತಿಯಲ್ಲಿ, ಮದುವೆಯನ್ನು ಜೀವನ ಪರ್ಯಂತ ಉಳಿದುಕೊಳ್ಳುವ ಬಾಂಧವ್ಯವೆಂದು ಪರಿಗಣಿಸಲಾಗುತ್ತದೆ. ಸಾಕಷ್ಟು ಸಮಸ್ಯೆಗಳು ಎದುರಾದರೂ ಗಂಡ-ಹೆಂಡತಿ ಸಂಸಾರವನ್ನು ಉಳಿಸಿಕೊಳ್ಳಲು ಎಲ್ಲಾ ರೀತಿಯಲ್ಲಿ ಪ್ರಯತ್ನ ಪಡುತ್ತಾರೆ. ಸಮಾಜದಿಂದ ಕೇಳಿ ಬರುವ ಚುಚ್ಚುಮಾತಿಗಳಿಗೆ ಹೆದರಿಯೇ ಮಹಿಳೆಯರು ಗಂಡನ ಮನೆ ಬಿಟ್ಟು ಹೊರ ಬರುವುದಿಲ್ಲ. ಕಿರುಕುಳ, ನಿಂದನೆಯನ್ನು ಸಹಿಸಿ ಅಲ್ಲೇ ನಿಲ್ಲುತ್ತಾರೆ. ಕೆಲವೇ ಕೆಲವು ಮಹಿಳೆಯರು ಮಾತ್ರ ಧೈರ್ಯ ಮಾಡಿ ಅಬ್ಯೂಸಿವ್ ಮ್ಯಾರೇಜ್‌ನಿಂದ ಹೊರ ಬಂದು ಬದುಕು ಕಟ್ಟಿಕೊಳ್ಳುತ್ತಾರೆ.
ಕೆಲವು ಜನರು ತಮ್ಮ ಸಂಬಂಧಗಳಿಂದ ಬೇರ್ಪಟ್ಟು ಉತ್ತಮ ಜೀವನಕ್ಕಾಗಿ ಮುಂದುವರಿಯಲು ಆಯ್ಕೆ ಮಾಡುತ್ತಾರೆ. ಹಾಗೆಯೇ ಇಲ್ಲೊಬ್ಬಳು ಭಾರತೀಯ ಮಹಿಳೆ ಗಂಡನ ನಿರಂತರ ಕಿರುಕುಳದಿಂದ ಬೇಸತ್ತು ವಿಚ್ಛೇದನ ಪಡೆದುಕೊಂಡಿದ್ದಳು. ವಿಚ್ಛೇದನ ಪಡೆದ ನಂತರ ಆಕೆ ಖಿನ್ನತೆಗೆ ಒಳಗಾಗಿದ್ದಳು. ಈಗ 56ನೇ ವಯಸ್ಸಿನಲ್ಲಿ, ಮಹಿಳೆ ತನಗಿಂತ 20 ವರ್ಷ ಕಿರಿಯ ವ್ಯಕ್ತಿಯನ್ನು ಪ್ರೀತಿಸಿ ಮದುವೆಯಾಗಿದ್ದಾಳೆ.
ಬ್ರೇಕ್ ಅಪ್ ನಂತ್ರ ಸಿಎ ಹುಡುಗ ಕಳುಹಿಸಿದ ಬಿಲ್ ನೋಡಿ ಗರ್ಲ್ ಫ್ರೆಂಡ್ ಕಂಗಾಲು!
ವಯಸ್ಸಿನ ವ್ಯತ್ಯಾಸದ ಹೊರತಾಗಿಯೂ, 28 ವರ್ಷಗಳ ವಿಚ್ಛೇದನ ಜೀವನದ ನಂತರ ಅವಳು ಪ್ರೀತಿಯನ್ನು ಅನುಭವಿಸಿದಳು. ಮೂರು ವರ್ಷಗಳ ಪ್ರೇಮ ಜೀವನದ ನಂತರ ದಂಪತಿಗಳು ವಿವಾಹವಾದರು. ಮಹಿಳೆಗೆ ಪ್ರಸ್ತುತ 59 ವರ್ಷ, ಆಕೆಯ ಪತಿಗೆ 39 ವರ್ಷ. ಗೀತಾ ಅವರ ಕಥೆಯನ್ನು ಪೀಪಲ್ ಆಫ್ ಇಂಡಿಯಾ ಇನ್‌ಸ್ಟಾಗ್ರಾಮ್ ಬಳಕೆದಾರರು ಹಂಚಿಕೊಂಡಿದ್ದಾರೆ. ವೀಡಿಯೊ ಗೀತಾ ಅವರ ಜೀವನ ಕಥೆ ಮತ್ತು ಹೋರಾಟದ ಬಗ್ಗೆ ಹೇಳುತ್ತದೆ. ಗೀತಾ ತನಗಿಂತ 20 ವರ್ಷ ಚಿಕ್ಕವನಾಗಿರುವ ನಿಖಿಲ್‌ನನ್ನು ಮದುವೆಯಾಗಿರುವುದಾಗಿ ವಿಡಿಯೋದಲ್ಲಿ ಬಹಿರಂಗಪಡಿಸಿದ್ದಾರೆ.
'ನನ್ನ ಪತಿಯ ವಿವಾಹೇತರ ಸಂಬಂಧದಿಂದಾಗಿ 28 ವರ್ಷಗಳ ಹಿಂದೆ ತನ್ನ ಮೊದಲ ಮದುವೆ ಕೊನೆಗೊಂಡಿತು. ಅಲ್ಲಿಂದ ನಾನು ಖಿನ್ನತೆಯಿಂದ ಬಳಲುತ್ತಿದ್ದೆ. ಎಂದು ಅವರು ಹೇಳಿದ್ದಾರೆ. ಇಂಥಾ ಸಮಯದಲ್ಲಿ ನಾನು ನಿಖಿಲ್‌ನ್ನು ಭೇಟಿಯಾದೆ. ಅವರು ಖಿನ್ನತೆಯಿಂದ ಹೊರಬರಲು ಮತ್ತು ಸಾಮಾನ್ಯರಂತೆ ಜೀವನ ನಡೆಸಲು ನನಗೆ ಸಹಾಯ ಮಾಡಿದರು' ಎಂದು ಗೀತಾ ತಿಳಿಸಿದ್ದಾರೆ.
ಸಂಗಾತಿ ನಿಮ್ಮನ್ನು ಪ್ರೀತಿಸುತ್ತಿದ್ದಾರಾ ಅನ್ನೋದನ್ನು ತಿಳಿದುಕೊಳ್ಳೋದು ಹೇಗೆ?
'ಖಿನ್ನತೆಯಿಂದ ಹೊರಬರಲು ಫೋನ್ ನಲ್ಲಿ ಗಂಟೆಗಟ್ಟಲೆ ಮಾತನಾಡುತ್ತಿದ್ದರು. ಈ ಸ್ನೇಹ ಯಾವಾಗ ಪ್ರೀತಿಗೆ ತಿರುಗಿತು ಎಂಬುದು ಇಬ್ಬರಿಗೂ ತಿಳಿಯಲ್ಲಿಲ್ಲ. ಮೂರು ವರ್ಷಗಳ ಸ್ನೇಹದ ನಂತರ ನಿಖಿಲ್ ನನಗೆ ಪ್ರಪೋಸ್ ಮಾಡಿದ. ನನ್ನ ಪೋಷಕರನ್ನು ಭೇಟಿಯಾಗಿ ಮದುವೆಯಾಗುವ ಮಾತುಕತೆ ನಡೆಸಿದ. ನಾವಿಬ್ಬರೂ ಈಗ ಖುಷಿಯಿಂದ ವಿವಾಹಿತರಾಗಿದ್ದೇವೆ' ಎಂದು ಗೀತಾ ಸಂತಸ ವ್ಯಕ್ತಪಡಿಸಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡ ತಕ್ಷಣ, ಅದು ವೈರಲ್ ಆಗಿದ್ದು, 2 ಲಕ್ಷಕ್ಕೂ ಹೆಚ್ಚು ಲೈಕ್ಸ್ ಮತ್ತು 5 ಸಾವಿರಕ್ಕೂ ಹೆಚ್ಚು ಕಾಮೆಂಟ್‌ಗಳನ್ನು ಗಳಿಸಿದೆ. ಕಾಮೆಂಟ್‌ಗಳ ವಿಭಾಗದಲ್ಲಿ ಅನೇಕ ಬಳಕೆದಾರರು ತಮ್ಮ ಶುಭಾಶಯಗಳನ್ನು ವ್ಯಕ್ತಪಡಿಸಿದ್ದಾರೆ.