ವರದಕ್ಷಿಣೆ ಕೇಳಿದ ವರನನ್ನು ಕೂಡಿ ಹಾಕಿದ ವಧು!

By Vinutha Perla  |  First Published Mar 16, 2023, 3:20 PM IST

ಅನೇಕ ಸುಶಿಕ್ಷಿತ ಮತ್ತು ಪ್ರಭಾವಿ ಜನರು ಸಹ ವರದಕ್ಷಿಣೆ ಕೇಳಲು ಹಿಂಜರಿಯುವುದಿಲ್ಲ. ವಧುವಿನ ಕಡೆಯವರು ಸಹ ಸುಮ್ನೆ ಯಾಕೆ ರಗಳೆಯೆಂದು ವರನ ಕಡೆಯವರು ಕೇಳಿದ್ದನ್ನು ಕೊಟ್ಟು ಬಿಡುತ್ತಾರೆ. ಆದ್ರೆ ಉತ್ತರಪ್ರದೇಶದಲ್ಲಿ ಟ್ರ್ಯಾಕ್ಟರ್‌ಗೆ ಬೇಡಿಕೆ ಇಟ್ಟಿದ್ದಕ್ಕೆ ವಧುವಿನ ಮನೆಯವರು ವರನನ್ನು ಒತ್ತೆಯಾಳಾಗಿ ಇಟ್ಟುಕೊಂಡು ಚೆನ್ನಾಗಿ ಪಾಠ ಕಲಿಸಿದ್ದಾರೆ.


ಮುಜಾಫರ್​ನಗರ: ಕಾಲ ಅದೆಷ್ಟೇ ಬದಲಾದರೂ, ಜನರು ಅದೆಷ್ಟೇ ವಿದ್ಯಾವಂತರಾದರೂ ತಮ್ಮ ಹಳೇ ಚಾಳಿ ಮಾತ್ರ ಬಿಡೋದಿಲ್ಲ. ಹಾಗಾಗಿಯೇ ಇವತ್ತಿಗೂ ಸಮಾಜದಲ್ಲಿ ಅದೆಷ್ಟೋ ಪಿಡುಗುಗಳು ಹಾಗೆಯೇ ಉಳಿದುಕೊಂಡಿವೆ. ಅದರಲ್ಲೊಂದು ವರದಕ್ಷಿಣೆ. ಜನರು ಅದೆಷ್ಟೇ ಶ್ರೀಮಂತರಾದರೂ, ಮದುವೆಯ ಸಂದರ್ಭದಲ್ಲಿ ವರದಕ್ಷಿಣೆ ಕೇಳೋದನ್ನು ಮಾತ್ರ ಬಿಡೋದಿಲ್ಲ. ಮನೆಯಲ್ಲಿ ಅದೆಷ್ಟೇ ಆಸ್ತಿ-ಪಾಸ್ತಿಯಿದ್ದರೂ ಹುಡುಗನ ಕಡೆಯವರು ವಧುವಿನ ಕಡೆಯಿಂದ ಸಿಗೋ ಚಿನ್ನ, ಬಂಗಲೆ, ಕಾರುಗಳು, ಇನ್ಯಾವುದೋ ವಸ್ತುವಿಗೆ ಡಿಮ್ಯಾಂಡ್ ಇಡ್ತಾರೆ. ಹೀಗೆ ದುಬಾರಿ ವರದಕ್ಷಿಣೆ ಕೇಳಿದ ವರನಿಗೆ ವಧು, ಆಕೆಯ ಕುಟುಂಬ ಮತ್ತು ಗ್ರಾಮಸ್ಥರು ಸೇರಿಕೊಂಡು ಬುದ್ಧಿ ಕಲಿಸಿರುವ ಅಪರೂಪದ ಘಟನೆ ಉತ್ತರ ಪ್ರದೇಶದ ಮುಜಾಫರ್​ನಗರದಲ್ಲಿ ನಡೆದಿದೆ.

ವರದಕ್ಷಿಣೆಯಾಗಿ ಟ್ರ್ಯಾಕ್ಟರ್​ ನೀಡುವಂತೆ ವಧುವಿನ ಕುಟುಂಬಕ್ಕೆ ಒತ್ತಾಯ
ದೇಶದಲ್ಲಿ ವರದಕ್ಷಿಣೆ (Dowry) ಕಾನೂನುಬಾಹಿರ ಮತ್ತು ಶಿಕ್ಷಾರ್ಹ ಅಪರಾಧವಾಗಿದ್ದರೂ ಸಹ, ಮದುವೆಯ (Marriage) ಸಮಯದಲ್ಲಿ ವರನ ಕುಟುಂಬವು ವಧುವಿನ (Bride) ಕುಟುಂಬದಿಂದ ನಗದು ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಪಡೆಯುವುದು ಸಾಮಾನ್ಯವಾಗಿದೆ. ಹಾಗೆಯೇ ವರ ವಾಸಿಂ ಅಹ್ಮದ್​ ಎಂಬಾತ ವರದಕ್ಷಿಣೆಯಾಗಿ ಟ್ರ್ಯಾಕ್ಟರ್​ ನೀಡುವಂತೆ ವಧುವಿನ ಕುಟುಂಬವನ್ನು ಕೇಳಿದ್ದ. ಬಳಿಕ ತಮ್ಮ ಸಂಬಂಧಿಕರೊಂದಿಗೆ ಮದುವೆ ಮಂಟಪ್ಪಕ್ಕೆ ಬಂದಿದ್ದ. ಈ ಸಂದರ್ಭದಲ್ಲಿ ವಧುವಿನ ಕಡೆಯವರು ಆತನಿಗೆ ಟ್ರ್ಯಾಕರ್ ಕೊಡದೆ, ವಾಸಿಂ ಹಾಗೂ ಅವರ ಕುಟುಂಬವನ್ನು ಒತ್ತೆಯಾಳಾಗಿರಿಸಿಕೊಂಡಿದ್ದಾರೆ. 

Latest Videos

undefined

ವರದಕ್ಷಿಣೆಯಾಗಿ ವಧುವಿನ ಪೋಷಕರು ಕೊಟ್ಟ ಬೀರು ಕಳಪೆ, ಮಂಟಪದಲ್ಲೇ ಮದುವೆ ಕ್ಯಾನ್ಸಲ್ ಮಾಡಿದ ವರ!

ಇದಾದ ಬಳಿಕ ಒಂದು ಹೊಸ ಟ್ರ್ಯಾಕ್ಟರ್​ಗೆ ವ್ಯವಸ್ಥೆ ಮಾಡಿ, ವಧುವಿನ ಬದಲಾಗಿ ಆ ಟ್ರ್ಯಾಕ್ಟರ್​ ಅನ್ನೇ ಮದುವೆ ಆಗುವಂತೆ ಒತ್ತಾಯ ಮಾಡಿದರು. ಮದುವೆಗೆ ಮಾಡಿಕೊಂಡ ಸಕಲ ವ್ಯವಸ್ಥೆಗೆ ವಧುವಿನ ಮನೆಯವರು ಮಾಡಿದ್ದ ಖರ್ಚನ್ನು ಕೊಡಲು ಒಪ್ಪಿಕೊಂಡ ಬಳಿ ವರ ಮತ್ತು ಅವನ ಜೊತೆಗಿದ್ದ ಸಂಬಂಧಿಕರನ್ನು (Relatives) ಹಲವಾರು ಗಂಟೆಗಳ ನಂತರ ಬಿಟ್ಟು ಕಳುಹಿಸಲಾಯಿತು.

ವಧುವಿನ ಚಿಕ್ಕಪ್ಪ ಮೊಹಮ್ಮದ್ ಮಾತನಾಡಿ, ನನ್ನ ಸಹೋದರ ತನ್ನ ಮಗಳಿಗಾಗಿ ಪೀಠೋಪಕರಣ, ಫ್ರಿಡ್ಜ್ ಸೇರಿದಂತೆ ಗೃಹೋಪಯೋಗಿ ವಸ್ತುಗಳನ್ನು ಖರೀದಿಸಲು ಲಕ್ಷಗಟ್ಟಲೆ ಖರ್ಚು ಮಾಡಿದ್ದಾನೆ. ನಾಲ್ಕು ದಿನಗಳ ಹಿಂದೆ ವರನ ಮನೆಗೆ ಎಲ್ಲವನ್ನೂ ತಲುಪಿಸಲಾಗಿದೆ. ಹೀಗಿದ್ದೂ ವರ ಮತ್ತೆ ಟ್ರ್ಯಾಕ್ಟರ್ ಕೊಡುವಂತೆ ಬೇಡಿಕೆಯಿಟ್ಟಿದ್ದಾನೆ ಎಂದು ತಿಳಿಸಿದ್ದಾರೆ.

ವರದಕ್ಷಿಣೆಯಾಗಿ ಫಾರ್ಚೂನರ್ ಕಾರೇ ಬೇಕಂತೆ, ಮಂಟಪದಿಂದ್ಲೇ ಎದ್ದು ಹೋದ ವರ !

ವರನನ್ನು ಒತ್ತೆಯಾಳಾಗಿಸಿ ಮದುವೆ ಕ್ಯಾನ್ಸಲ್ ಮಾಡಿದ ವಧು
ಶಾಮ್ಲಿಯ ಭೈಸಾನಿ ಇಸ್ಲಾಂಪುರ ಗ್ರಾಮದ ಯುವಕನ ವಿವಾಹವು ಚಾರ್ತಾವಾಲ್ ಪೊಲೀಸ್ ಠಾಣೆ ವ್ಯಾಪ್ತಿಯ ಕುಲ್ಹಾರಿ ಗ್ರಾಮದ ಯುವತಿಯೊಂದಿಗೆ ನಿಶ್ಚಯವಾಗಿತ್ತು. ಮಂಗಳವಾರ, ವರನು ತನ್ನ ಬಾರಾತ್ ಮೆರವಣಿಗೆಯೊಂದಿಗೆ ವಧುವಿನ ಗ್ರಾಮವನ್ನು ತಲುಪಿದನು. ಆದರೆ, ಮದುವೆಗೂ ಮುನ್ನವೇ ವರನ ಮನೆಯವರು ಟ್ರ್ಯಾಕ್ಟರ್ ಗಾಗಿ ಬೇಡಿಕೆ ಇಟ್ಟಿದ್ದರು. ವರನ ಬೇಡಿಕೆಯ ಬಗ್ಗೆ ವಧುವಿಗೆ ತಿಳಿದಾಗ, ಅವಳು ಮದುವೆಯನ್ನು ರದ್ದುಗೊಳಿಸಿದಳು. ಮಾತ್ರವಲ್ಲ, ವರದಕ್ಷಿಣೆ ಕೇಳುವವರನ್ನು ಮದುವೆಯಾಗಲು ಬಯಸುವುದಿಲ್ಲ ಎಂದು ವಧು ಹೇಳಿದ್ದಾರೆ ಎಂದು ತಿಳಿದುಬಂದಿದೆ. 

ವರದಕ್ಷಿಣೆ ಕೇವಲ ಗ್ರಾಮೀಣ ಭಾರತದ ಸಮಸ್ಯೆ ಅಲ್ಲ, ಅನೇಕ ಸುಶಿಕ್ಷಿತ ಮತ್ತು ಪ್ರಭಾವಿ ಜನರು ವರದಕ್ಷಿಣೆ ಕೇಳಲು ಹಿಂಜರಿಯುವುದಿಲ್ಲ. ಆಗಾಗ, ವಧುವಿನ ಕುಟುಂಬವು ಅವರ ಘನತೆ ಮತ್ತು ಖ್ಯಾತಿಯ ವಿಷಯವಾಗಿರುವುದರಿಂದ ವರದಕ್ಷಿಣೆಯನ್ನು ಕೊಡಲು ಸಾಧ್ಯವಿಲ್ಲವೆಂದು ಹೇಳಲು ಸಾಧ್ಯವಾಗದೆ ಮದುವೆಯ ಸಿದ್ಧತೆಗಳಲ್ಲಿ ಅವರ ಬೇಡಿಕೆಗಳನ್ನು ಈಡೇರಿಸಿ ಬಿಡುತ್ತಾರೆ. ಆದರೆ ಉತ್ತರಪ್ರದೇಶದ ಈ ವಧುವಿನ ಕುಟುಂಬ ಮಾತ್ರ ವರದಕ್ಷಿಣೆಯ ವಿರುದ್ಧ ಧ್ವನಿಯೆತ್ತಿದ್ದಾರೆ.

2.5 ಲಕ್ಷ ರೂ, ಒಂದು ಕಾರು, ವರದಕ್ಷಿಣೆ ತರದ ಸೊಸೆಗೆ ಆ್ಯಸಿಡ್ ಕುಡಿಸಿದ ಅತ್ತೆ!

click me!