ಕೆಲವೊಂದು ವಿಡಿಯೋಗಳು ಮನಸ್ಸಿಗೆ ಮುದನೀಡಿ, ಕಣ್ಣಲ್ಲಿ ನೀರು ಬರುವಂತೆ ಮಾಡುತ್ತದೆ. ಮುಗ್ದ ಮನಸ್ಸುಗಳು, ಸಹಾಯ ಮಾಡುವ ಜನರು ನಮ್ಮಲ್ಲಿ ಇನ್ನೂ ಇದ್ದಾರೆ ಎನ್ನುವುದಕ್ಕೆ ಸಾಮಾಜಿಕ ಜಾಲತಾಣದ ಕೆಲ ವಿಡಿಯೋ ಸಾಕ್ಷ್ಯವಾಗ್ತಿದೆ. ಈಗ ಅಂತಹದ್ದೇ ಒಂದು ವಿಡಿಯೋ ವೈರಲ್ ಆಗಿದೆ.
ಸಾಮಾಜಿಕ ಜಾಲತಾಣದಲ್ಲಿ ಪ್ರತಿ ದಿನ ನೂರಾರು ವಿಡಿಯೋಗಳು ಪೋಸ್ಟ್ ಆಗ್ತಿರುತ್ತವೆ. ಮೋಜಿನಿಂದ ಕೂಡಿದ ವಿಡಿಯೋಗಳು, ಸಂದೇಶ ಸಾರುವ ವಿಡಿಯೋಗಳು, ಜಾಗೃತಿ ಮೂಡಿಸುವ ವಿಡಿಯೋಗಳು, ಅಡುಗೆ, ಆಹಾರ, ಆರೋಗ್ಯ ಸೇರಿದಂತೆ ಅನೇಕ ವಿಡಿಯೋಗಳಲ್ಲಿ ಕೆಲ ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್ ಆಗ್ತವೆ. ಇನ್ನು ಕೆಲವು ನೇರವಾಗಿ ಹೃದಯವನ್ನು ಸ್ಪರ್ಶಿಸುತ್ತವೆ. ಮತ್ತೆ ಮತ್ತೆ ನೋಡುವಂತೆ ಮಾಡುತ್ತದೆ. ಈಗ ಸಾಮಾಜಿಕ ಜಾಲತಾಣದಲ್ಲಿ ಅಂತಹ ಒಂದು ವಿಡಿಯೋ ವೈರಲ್ ಆಗಿದೆ. ಆ ವಿಡಿಯೋ ಕೊನೆಯಲ್ಲಿ ನಿಮ್ಮ ಮುಖದಲ್ಲೂ ಒಂದು ನಗು ಮೂಡುವ ಜೊತೆಗೆ ಮನಸ್ಸಿಗೆ ಹಿತವೆನ್ನಿಸುತ್ತದೆ. ಏನೋ ನಿರಾಳತೆ ನಿಮ್ಮಲ್ಲಿ ಮೂಡುತ್ತದೆ. ನಿಮ್ಮನ್ನು ಕೂಡ ಇಂಥ ಕೆಲಸ ಮಾಡಲು ಪ್ರೇರೇಪಿಸುತ್ತದೆ. ಅಷ್ಟಕ್ಕೂ ವೈರಲ್ ಆಗಿರುವ ಆ ವಿಡಿಯೋ ಯಾವುದು ಎಂಬುದನ್ನು ನಾವಿಂದು ಹೇಳ್ತೇವೆ.
ಪಾಕಿಸ್ತಾನಿ (Pakistani) ಹುಡುಗಿಯೊಬ್ಬಳ ವಿಡಿಯೋ (Video) ಇದು. ಆ ವಿಡಿಯೋದಲ್ಲಿ ಪಾಕಿಸ್ತಾನದ ಹುಡುಗಿ ವಿಕಲಾಂಗನಿಗೆ ಸಹಾಯ ಮಾಡೋದನ್ನು ನಾವು ನೋಡಬಹುದು. ಆಕೆ ಮಾತನಾಡುವ ಶೈಲಿ ಹಾಗೂ ಆಕೆಯ ಪ್ರತಿಕ್ರಿಯೆ ಸಾಮಾಜಿಕ ಜಾಲತಾಣ ಬಳಕೆದಾರರಿಗೆ ಇಷ್ಟವಾಗಿದೆ.
Viral Video : ವಾವ್..! ಅನಾನಸ್ ಕತ್ತರಿಸೋದು ಇಷ್ಟು ಸುಲಭ ಅಂತ ಗೊತ್ತಿರ್ಲಿಲ್ಲ
ವಿಡಿಯೋದಲ್ಲಿ ಏನಿದೆ? : ಫೈಜಾ ನಯೀಮ್ (naeem.faiza) ಹೆಸರಿನ ಇನ್ಸ್ಟಾಗ್ರಾಮ್ (Instagram) ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಫೈಜಾ ನಯೀಮ್ ಈ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾಳೆ. ಕಾರಿನಲ್ಲಿ ಕುಳಿತಿದ್ದ ಪಾಕಿಸ್ತಾನಿ ಹುಡುಗಿಯೊಬ್ಬಳು ದಿವ್ಯಾಂಗ ಬಲೂನ್ ಮಾರುವ ಹುಡುಗನನ್ನು ಕರೆಯುತ್ತಾಳೆ. ನಂತ್ರ ಆತನಿಗೆ ಬಿರಿಯಾನಿ ಪ್ಯಾಕೆಟ್ ನೀಡುತ್ತಾಳೆ. ಕೈನಲ್ಲಿ ಬಲೂನ್ ಇರುವ ಕಾರಣ ಹುಡುಗನಿಗೆ ಬಿರಿಯಾನಿ ತೆಗೆದುಕೊಳ್ಳುವುದು ಕಷ್ಟವಾಗುತ್ತದೆ. ಆಗ ಹುಡುಗಿ ಬಿರಿಯಾನಿಯನ್ನು ಕವರ್ ಗೆ ಹಾಕಿ ಆತನಿಗೆ ಸಹಾಯ ಮಾಡ್ತಾಳೆ. ಇದ್ರ ಜೊತೆ ಬಲೂನ್ ಮಾರಾಟಗಾರನೊಂದಿಗೆ ಮಾತನಾಡುತ್ತಾಳೆ. ನಂತ್ರ ಆತನ ಕೈನಲ್ಲಿರುವ ಎಲ್ಲ ಬಲೂನ್‌ಗಳನ್ನು ಪಡೆಯುತ್ತಾ, ಒಂದಕ್ಕೆ ಎಷ್ಟು ಎಂದು ಕೇಳ್ತಾಳೆ. ಹುಡುಗ ಒಂದಕ್ಕೆ 10 ಎನ್ನುತ್ತಾನೆ. ಆಗ ಹುಡುಗಿ ಎಲ್ಲ ಬಲೂನ್ ನೀಡುವಂತೆ ಕೇಳ್ತಾಳೆ. ಎಲ್ಲವನ್ನೂ ತೆಗೆದುಕೊಳ್ಳಿ ಎನ್ನುವ ಮೂಲಕ ಉಚಿತವಾಗಿ ಬಲೂನ್ ನೀಡಲು ಹುಡುಗ ಮುಂದಾಗ್ತಾನೆ. ಆದ್ರೆ ಹುಡುಗಿ ಬಲೂನ್ ಪಡೆದು ಹಣವನ್ನು ನೀಡ್ತಾಳೆ. ನಂತ್ರ ನಡೆದ ಘಟನೆ ಮತ್ತಷ್ಟು ಆಸಕ್ತಿಕರವಾಗಿದೆ.
ಫೈಜಾಗೆ ಮುತ್ತಿಟ್ಟ ವಿಕಲಾಂಗ : ಬಲೂನ್ ಪಡೆದು, ಹಣ ನೀಡಿದ ಫೈಜಾ ಕೆಲಸಕ್ಕೆ ವಿಕಲಾಂಗ ಖುಷಿಗೊಳ್ತಾನೆ. ಆಕೆ ಕೆನ್ನೆ ಮುಟ್ಟಿ ಚುಂಬಿಸುತ್ತಾನೆ. ಇದ್ರಿಂದ ಫೈಜಾ ಕೂಡ ಖುಷಿಯಾಗ್ತಾಳೆ. ಇದು ನನ್ನ ಜೀವನದ ಅತ್ಯಂತ ಶುಭ ಸಮಯವೆಂದು ಫೈಜಾ ಶೀರ್ಷಿಕೆ ಹಾಕಿ ವಿಡಿಯೋ ಹಂಚಿಕೊಂಡಿದ್ದಾಳೆ.
ಬಳಕೆದಾರರಿಂದ ಉತ್ತಮ ಪ್ರತಿಕ್ರಿಯೆ : ಇಲ್ಲಿಯವರೆಗೆ 12 ಮಿಲಿಯನ್‌ಗಿಂತಲೂ ಹೆಚ್ಚು ಬಾರಿ ಈ ವಿಡಿಯೋವನ್ನು ವೀಕ್ಷಿಸಲಾಗಿದೆ. ವಿಡಿಯೋ ನೋಡಿದ ಜನರು ಹುಡುಗಿಯ ಮೇಲೆ ಪ್ರೀತಿಯ ಸುರಿಮಳೆಗೈದಿದ್ದಾರೆ. ಫೈಜಾ ಮಾಡಿದ ಕೆಲಸವನ್ನು ಜನರು ಮೆಚ್ಚಿಕೊಂಡಿದ್ದಾರೆ. ಈ ವಿಡಿಯೋವನ್ನು ಮತ್ತೆ ಮತ್ತೆ ನೋಡಿದ್ದು, ಕಣ್ಣಲ್ಲಿ ನೀರು ಬಂದಿದೆ ಎಂದು ಒಬ್ಬರು ಬರೆದಿದ್ದಾರೆ. ಇದು ಇಷ್ಟಕ್ಕೆ ನಿಲ್ಲಲಿಲ್ಲ. ಮುಂದೇಯಾಯ್ತು ಗೊತ್ತಾ?
ನ್ಯಾಯಾಲಯದ ಆವರಣದಲ್ಲೇ ವಕೀಲರ ಡಿಶ್ಯೂಂ ಡಿಶ್ಯುಂ... ವಿಡಿಯೋ ವೈರಲ್
ಕ್ರಿಶ್ ಜೊತೆ ಲಂಚ್ ಗೆ ಹೋದ ಫೈಜಾ : ಫೈಜಾ ಇನ್ಸ್ಟಾಗ್ರಾಮ್ ನಲ್ಲಿ ಇನ್ನೊಂದು ವಿಡಿಯೋವನ್ನು ಕೂಡ ಹಂಚಿಕೊಂಡಿದ್ದಾಳೆ. ಆ ವಿಡಿಯೋದಲ್ಲಿ ಹಿಂದೆ ಸಹಾಯ ಮಾಡಿದ್ದ ವಿಕಲಾಂಗ ಹುಡುಗನಿದ್ದಾನೆ. ಆ ಹುಡುಗನ ಜೊತೆ ಫೈಜಾ ಲಂಚ್ ಗೆ ಹೋಗಿದ್ದಾಳೆ. ನಾನು ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋ ಹಾಕ್ತಿದ್ದಂತೆ ಎಲ್ಲರೂ ಕ್ರಶ್ ಬಗ್ಗೆ ಕೇಳಿದ್ದರು. ಹಾಗಾಗಿ ಒಂದು ದಿನ ಅವನನ್ನು ಪತ್ತೆ ಮಾಡಿ ಅವನ ಜೊತೆ ಲಂಚ್ ಗೆ ಹೋಗಿದ್ದೆ. ಸಾಮಾಜಿಕ ಜಾಲತಾಣ ಬಳಕೆದಾರರು ಆತನಿಗೆ ನೀಡಿದ ಪ್ರೀತಿಯ ಬಗ್ಗೆ ತಿಳಿಸಿದ್ದೇನೆ. ನಾವಿಬ್ಬರು ಒಟ್ಟಿಗೆ ಊಟ ಮಾಡಿದ್ವಿ. ಆತನಿಗೆ ಇದ್ರಿಂದ ತುಂಬಾ ಸಂತೋಷವಾಯ್ತು ಎಂದು ಬರೆದಿದ್ದಾಳೆ. ಈ ವಿಡಿಯೋ ಕೂಡ ಹಿಂದಿನ ವಿಡಿಯೋದಷ್ಟೇ ವೇಗವಾಗಿ ವೈರಲ್ ಆಗಿದೆ.