ಎಲ್ಲಾ ಸಂಬಂಧಗಳು ತಮ್ಮದೇ ಆದ ಪ್ರಾಮುಖ್ಯತೆಯನ್ನು ಹೊಂದಿವೆ. ಮಾತ್ರವಲ್ಲ ಪ್ರತಿಯೊಂದು ಸಂಬಂಧಕ್ಕೂ ಅದರದ್ದೇ ಆದ ಪಾವಿತ್ರ್ಯತೆಯಿದೆ. ಹೀಗಿರುವಾಗ ಇಲ್ಲೊಬ್ಬ ವ್ಯಕ್ತಿ ತನ್ನ ತಂಗಿಯನ್ನೇ ಮದ್ವೆಯಾಗಿ ಸಂಸಾರ ಮಾಡಿದ್ದಾನೆ. ಮದ್ವೆಯಾಗಿ ಆರು ವರ್ಷದ ನಂತ್ರ ಸತ್ಯಾಂಶ ತಿಳಿದಿದೆ.
ಸಂಬಂಧಗಳು ಕೆಲವೊಮ್ಮೆ ತುಂಬಾ ಸುಂದರವಾಗಿದ್ದರೆ, ಇನ್ನು ಕೆಲವೊಮ್ಮೆ ಅಷ್ಟೇ ಕೆಟ್ಟದಾಗಿರುತ್ತದೆ. ಅದರಲ್ಲೂ ಸಂಬಂಧಗಳು ಅರ್ಥವಾಗದೇ ಇದ್ದಾಗ ಅದು ಇನ್ನಷ್ಟು ಕಗ್ಗಂಟಾಗಿ ಪರಿಣಮಿಸುತ್ತದೆ. ಅದು ಅಕ್ಷರಶಃ ನಿಜವೆಂಬುದು ಇಲ್ಲೊಂದೆಡೆ ಸಾಬೀತಾಗಿದೆ. ಇಲ್ಲೊಬ್ಬ ವ್ಯಕ್ತಿ ತನ್ನ ತಂಗಿಯನ್ನೇ ಮದ್ವೆಯಾಗಿ ಸಂಸಾರ ಮಾಡಿದ್ದಾನೆ. ಮದ್ವೆಯಾಗಿ ಆರು ವರ್ಷದ ನಂತ್ರ ಸತ್ಯಾಂಶ ತಿಳಿದಿದೆ. ತಾನು ಮದುವೆಯಾಗಿರುವ ಹುಡುಗಿಯೇ ತನ್ನ ತಂಗಿಯೆಂಬ ಆಘಾತಕಾರಿ ವಿಚಾರ ಬಯಲಾಗಿದೆ. ಚಿಕ್ಕಂದಿನಲ್ಲೇ ಇಬ್ಬರೂ ಬೇರೆ ಬೇರೆಯಾಗಿದ್ದ ಕಾರಣ ತಾವಿಬ್ಬರೂ ಅಣ್ಣ-ತಂಗಿ ಎಂಬುದು ಇಬ್ಬರಿಗೂ ಗೊತ್ತಿರಲ್ಲಿಲ್ಲ.
ಹುಟ್ಟಿದ ಕೆಲವೇ ನಿಮಿಷಗಳಲ್ಲಿ ಗಂಡು ಮಗುವನ್ನು ದತ್ತು ತೆಗೆದುಕೊಳ್ಳಲಾಯಿತು. ದತ್ತು ಸ್ವೀಕಾರದ ವಿಚಾರಗಳನ್ನು ಎಲ್ಲಿಯೂ ಬಹಿರಂಗಪಡಿಸಬಾರದು ಎಂಬ ನಿಯಮವಿರುವ ಕಾರಣ ಹುಡುಗನಿಗೆ (Boy) ತನ್ನ ಪೋಷಕರ (Parents) ಬಗ್ಗೆ ಯಾವುದೇ ಮಾಹಿತಿ ಇರಲ್ಲಿಲ್ಲ. ಅದೆಷ್ಟೋ ವರ್ಷಗಳ ನಂತರ ವ್ಯಕ್ತಿ ಹುಡುಗಿಯೊಬ್ಬಳನ್ನು ಮದುವೆಯಾದ (Marriage). ಜೊತೆಯಾಗಿ ಆರು ವರ್ಷ ಸಂಸಾರವೂ ನಡೆಸಿದ. ಇತ್ತೀಚಿಗೆ ತನ್ನ ಕಿಡ್ನಿಯನ್ನು ಪತ್ನಿಗೆ ದಾನ ಮಾಡಬಹುದೇ ಎಂದು ಕೆಲವು ಪರೀಕ್ಷೆಗಳಿಗೆ ಒಳಪಡಿಸಿದಾಗ ಇಬ್ಬರೂ ಒಂದೇ ತಾಯಿಯ ಮಕ್ಕಳೆಂಬುದು ಪತ್ತೆಯಾಯಿತು. ಆರು ವರ್ಷದಿಂದ ಜೊತೆಯಾಗಿ ಸಂಸಾರ ಮಾಡುತ್ತಿದ್ದ ಹೆಂಡತಿ ಮತ್ತು ತನ್ನ ಮಕ್ಕಳ ತಾಯಿ, ನಿಜವಾಗಿಯೂ ತನ್ನ ಸಹೋದರಿ ಎಂದು ತಿಳಿದಾಗ ವ್ಯಕ್ತಿ ಆಘಾತಕ್ಕೊಳಗಾದ. ಈ ಕುರಿತಾದ ಮಾಹಿತಿಯನ್ನು ವ್ಯಕ್ತಿ ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದಾರೆ.
Relationship Tips: ಮದುವೆಯಾಗೋಕೆ ಯಾವ ವಯಸ್ಸು ಬೆಸ್ಟ್? ಇಪ್ಪತ್ತು ವರ್ಷನಾ ಮೂವತ್ತಾ?
ಮೂತ್ರಪಿಂಡ ಕಸಿಗಾಗಿ ಪರೀಕ್ಷೆ ಮಾಡಿದಾಗ ಬಯಲಾಯ್ತು ರಹಸ್ಯ
'ನಮ್ಮ ಮಗ ಜನಿಸಿದ ನಂತರ ನನ್ನ ಹೆಂಡತಿ ಅನಾರೋಗ್ಯಕ್ಕೆ ಒಳಗಾದಳು. ಆಕೆಗೆ ಮೂತ್ರಪಿಂಡ ಕಸಿ (Kidney transplant) ಅಗತ್ಯವಿತ್ತು. ನಾವು ಅವರ ಸಂಬಂಧಿಕರೊಂದಿಗೆ ಪರಿಶೀಲಿಸಿದೆವು. ಆದರೆ ಯಾರೂ ಹೊಂದಾಣಿಕೆಯಾಗಲಿಲ್ಲ. ಆದ್ದರಿಂದ ನಾನು ದೇಣಿಗೆ ನೀಡಬಹುದೇ ಎಂದು ಪರೀಕ್ಷಿಸಲು ನಿರ್ಧರಿಸಿದೆ. ಮರುದಿನ ನಾನು ಹೊಂದಾಣಿಕೆಯಾಗಿದ್ದೇನೆ ಎಂದು ಹೇಳುವ ಮೂಲಕ ನನಗೆ ಕರೆ ಬಂದಿತು. ನಂತರ ವೈದ್ಯರು ಹೆಚ್ಚುವರಿ ಪರೀಕ್ಷೆಯನ್ನು ಮಾಡಬೇಕೆಂದು ಹೇಳಿದರು. HLA (ಹ್ಯೂಮನ್ ಲ್ಯುಕೋಸೈಟ್ ಆಂಟಿಜೆನ್) ಅಂಗಾಂಶ ಪರೀಕ್ಷೆಯ ಫಲಿತಾಂಶಗಳಿಂದ ಕೆಲವು ಮಾಹಿತಿಯಿಂದಾಗಿ. ನಾನು ಅದರ ಬಗ್ಗೆ ಹೆಚ್ಚು ಯೋಚಿಸಲಿಲ್ಲ ಮತ್ತು ಒಪ್ಪಿಕೊಂಡೆ. ಪರೀಕ್ಷೆಯ ಫಲಿತಾಂಶ ಹೊರಬಂದಾಗ ಆಘಾಕಕಾರಿ ವಿಚಾರ ತಿಳಿದುಬಂತು' ಎಂದು ವ್ಯಕ್ತಿ ತಿಳಿಸಿದ್ದಾರೆ.
'ನಾನು ಆಘಾತಕ್ಕೊಳಗಾಗಿದ್ದೇನೆ ಮತ್ತು ಗೊಂದಲಕ್ಕೊಳಗಾಗಿದ್ದೇನೆ. ಡಿಎನ್‌ಎ ಮಾಹಿತಿಯನ್ನು ತಲೆಮಾರುಗಳ ಮೂಲಕ ಹೇಗೆ ರವಾನಿಸಲಾಗುತ್ತದೆ ಎಂಬ ಕಾರಣದಿಂದ ಮಗುವಿಗೆ ಪೋಷಕರು ಕನಿಷ್ಠ 50 ಪ್ರತಿಶತದಷ್ಟು ಹೊಂದಾಣಿಕೆಯನ್ನು ಹೊಂದಬಹುದು ಮತ್ತು ಒಡಹುಟ್ಟಿದವರು 0-100 ಪ್ರತಿಶತ ಹೊಂದಾಣಿಕೆಯನ್ನು ಹೊಂದಿರಬಹುದು ಎಂದು ಅವರು ವಿವರಿಸಿದರು. ಪತಿ ಮತ್ತು ಹೆಂಡತಿಯಾಗಿ ಹೆಚ್ಚಿನ ಹೊಂದಾಣಿಕೆಯನ್ನು (Matching) ಹೊಂದುವುದು ಅಪರೂಪ. ನಾನು ಅದರ ಅರ್ಥವೇನು ಎಂದು ಕೇಳಿದೆ. ಅವರು ಸಂಬಂಧದಲ್ಲಿ ಆಕೆ ನಿಮ್ಮ ಸಹೋದರಿಯಾಗಬೇಕು ಎಂದು ಹೇಳಿದರು' ಎಂದು ವ್ಯಕ್ತಿ ಮಾಹಿತಿ ನೀಡಿದರು.
ನಿಶ್ಚಿತಾರ್ಥ ಆಗಿದ್ಯಾ? ಮದ್ವೆಗೂ ಮುನ್ನ ಈ ತಪ್ಪನ್ನೆಲ್ಲ ಅಪ್ಪಿತಪ್ಪಿಯೂ ಮಾಡ್ಬೇಡಿ…
ಒಬ್ಬ ಬಳಕೆದಾರರು 'ನೀವು ಈಗಾಗಲೇ ಆಕೆಯನ್ನು ಮದುವೆಯಾಗಿ ಮಕ್ಕಳನ್ನು ಹೊಂದಿದ್ದೀರಿ. ನೀವು ಅದನ್ನು ಹಿಂದಕ್ಕೆ ತೆಗೆದುಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಹೀಗೆಯೇ ಮುಂದುವರಿಯಿರಿ' ಎಂದು ಸೂಚನೆ ನೀಡಿದ್ದಾರೆ.
ಇನ್ನೊಬ್ಬರು 'ನೀವು ಈಗಾಗಲೇ ಮಕ್ಕಳನ್ನು ಹೊಂದಿದ್ದೀರಿ ಮತ್ತು ನೀವು ಯಾವುದೇ ಅಸಾಮಾನ್ಯ ಅಸಹಜತೆಗಳನ್ನು ಉಲ್ಲೇಖಿಸದ ಕಾರಣ ಅವರು ಆರೋಗ್ಯವಾಗಿದ್ದಾರೆ ಎಂದು ಭಾವಿಸುತ್ತೇವೆ. ನೀವು ಸಂತೋಷವಾಗಿದ್ದರೆ, ಅದುವೇ ಮುಖ್ಯವಲ್ಲವೇ. ನಿಮ್ಮ ಪತ್ನಿಗೆ ಮೂತ್ರಪಿಂಡವನ್ನು ದಾನ ಮಾಡಿ ಮತ್ತು ನಿಮ್ಮ ಮಕ್ಕಳಿಗೆ ಉತ್ತಮ ಪೋಷಕರಾಗಿ ಮುಂದುವರಿಯಿರಿ.' ಎಂದು ಸಲಹೆ ನೀಡಿದ್ದಾರೆ. ಮತ್ತೊಬ್ಬರು, 'ಆಗಿ ಹೋಗಿರುವುದಕ್ಕೆ ಚಿಂತಿಸಿ ಪ್ರಯೋಜನವಿಲ್ಲ. ಇಷ್ಟು ದಿನ ಎಲ್ಲವೂ ಅದ್ಭುತವಾಗಿದೆ, ಅದನ್ನು ಬದಲಾಯಿಸುವುದರಲ್ಲಿ ಅರ್ಥವಿಲ್ಲ' ಎಂದಿದ್ದಾರೆ.