ಇಲ್ಲೊಬ್ಬ ಯುವಕ ತನ್ನದೇ ಮದ್ವೆ ದಿನವೂ ಮೊಬೈಲ್‌ನೊಳಗೆ ಮುಳುಗಿ ಹೋಗಿದ್ದಾನೆ. ಆತ ಎಷ್ಟು ಮೊಬೈಲ್‌ಗೆ ದಾಸನಾಗಿದ್ದಾನೆ ಎಂದರೆ ಪಕ್ಕದಲ್ಲಿ ನಿಂತಿರುವ ಸುಂದರ ವಧುವನ್ನು ಕಣ್ತುಂಬಿಕೊಳ್ಳುವ ತಾಳ್ಮೆ ಪ್ರೀತಿಯೂ ಆತನಿಗಿಲ್ಲ. ಈ ವಿಡಿಯೋ ನೋಡಿದ ನೆಟ್ಟಿಗರು ಇದು ಸಂಬಂಧಕ್ಕೆ ಅಪಾಯದ ಮುನ್ಸೂಚನೆ ಎಂದು ಕಾಮೆಂಟ್ ಮಾಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಅನೇಕರು ಮೊಬೈಲ್‌ಗೆ ದಾಸರಾಗಿದ್ದು, ಮೊಬೈಲ್ ಇಲ್ಲದೇ ಬದುಕೇ ಇಲ್ಲ ಎಂಬ ಹಂತಕ್ಕೆ ಹೋಗಿರುತ್ತಾರೆ. ಮಲಗಲು ಊಟ ಮಾಡಲು, ನಿದ್ದೆ ಮಾಡಲು ಕಡೆಗೆ ಟಾಯ್ಲೆಟ್‌ನಲ್ಲಿ ಕೂರುವ ಸಮಯದಲ್ಲೂ ಕೆಲವರಿಗೆ ಮೊಬೈಲ್ ಬೇಕೆ ಬೇಕು, ಒಂದು ಕ್ಷಣ ಮೊಬೈಲ್ ಇಲ್ಲದಿದ್ದರೆ ಏನೋ ಕಳೆದುಕೊಂಡಂತೆ ಮಂದ ಮಂದರಂತೆ ವರ್ತಿಸಲು ಶುರು ಮಾಡುತ್ತಾರೆ. ಈ ಮೊಬೈಲ್ ಚಟ ಅನೇಕರನ್ನು ಹಾಳು ಮಾಡಿದೆ. ಅನೇಕ ಸಂಸಾರಗಳನ್ನು ಸಂಬಂಧಗಳನ್ನು ತಿಂದು ಹಾಕಿದೆ ಎಂದರೆ ತಪ್ಪಾಗಲಾರದು, ಪತ್ನಿ ಮಾತನಾಡುವಾಗ ಅಥವಾ ಪತಿ ಏನೋ ಹೇಳಿಕೊಳ್ಳಬೇಕೆಂದು ಬಂದಾಗ ಪತ್ನಿ ಅಥವಾ ಪತಿ ಮೊಬೈಲ್‌ನಲ್ಲಿಯೇ ಮುಳುಗಿ ಕೇವಲ ಹಾ ಹಾ ಎಂದಷ್ಟೇ ಉತ್ತರಿಸಿ ಸರಿಯಾಗಿ ಉಗಿಸಿಕೊಳ್ಳುವ ಪ್ರಕರಣಗಳು ಇತ್ತೀಚೆಗೆ ಪ್ರತಿ ಮನೆಯಲ್ಲೂ ನಡೆಯುತ್ತಿದ್ದು, ಸಂಬಂಧದ ಮಧ್ಯೆ ಬಿರುಕಿಗೆ ಕಾರಣವಾಗುತ್ತಿದೆ. ಅದೇ ರೀತಿ ಇಲ್ಲೊಬ್ಬ ಯುವಕ ತನ್ನದೇ ಮದ್ವೆ ದಿನವೂ ಮೊಬೈಲ್‌ನೊಳಗೆ ಮುಳುಗಿ ಹೋಗಿದ್ದಾನೆ. ಆತ ಎಷ್ಟು ಮೊಬೈಲ್‌ಗೆ ದಾಸನಾಗಿದ್ದಾನೆ ಎಂದರೆ ಪಕ್ಕದಲ್ಲಿ ನಿಂತಿರುವ ಸುಂದರ ವಧುವನ್ನು ಕಣ್ತುಂಬಿಕೊಳ್ಳುವ ತಾಳ್ಮೆ ಪ್ರೀತಿಯೂ ಆತನಿಗಿಲ್ಲ. ಈ ವಿಡಿಯೋ ನೋಡಿದ ನೆಟ್ಟಿಗರು ಇದು ಸಂಬಂಧಕ್ಕೆ ಅಪಾಯದ ಮುನ್ಸೂಚನೆ ಎಂದು ಕಾಮೆಂಟ್ ಮಾಡಿದ್ದಾರೆ.
Mahuntsu (@Mahuntsu) ಎಂಬುವವರು ಈ ವೀಡಯೋವನ್ನು ಪೋಸ್ಟ್ ಮಾಡಿದ್ದು, ನನ್ನ ದೇಹ ಇಲ್ಲಿದೆ ಮನಸ್ಸು ಇನ್ನೆಲ್ಲೋ ನಗರದ ಹೊರಗಿದೆ ಎಂದು ವೀಡಿಯೋಗೆ ಶೀರ್ಷಿಕೆ ನೀಡಲಾಗಿದ್ದು, 4 ಮಿಲಿಯನ್‌ಗೂ ಅಧಿಕ ಜನ ಈ ವೀಡಿಯೋವನ್ನು ವೀಕ್ಷಿಸಿದ್ದಾರೆ. ವೀಡಿಯೋದಲ್ಲಿ ತನ್ನ ವಿಶೇಷ ದಿನಕ್ಕೆಂದು ಸುಂದರವಾಗಿ ಅಲಂಕರಿಸಿಕೊಂಡಿರುವ ವಧು ಬಿಳಿಯ ಮದ್ವೆ ಗವನ್ ಧರಿಸಿ ಹೂಗುಚ್ಛವನ್ನು ಹಿಡಿದು ನಗು ನಗುತ್ತಾ ಮದ್ವೆ ಮಂಟಪಕ್ಕೆ ನಡೆದು ಬರುತ್ತಿದ್ದಾಳೆ. ಇತ್ತ ವರ ಅದಕ್ಕೆ ತದ್ವಿರುದ್ಧ ಎಂಬಂತೆ ಆಕೆಯ ಕಡೆ ತಲೆ ಎತ್ತಿಯೂ ನೋಡದೇ ಕೇವಲ ಮೊಬೈಲ್ ಅನ್ನೇ ನೋಡುತ್ತಾ ತನ್ನಷ್ಟಕ್ಕೆ ತಾನು ನಗುತ್ತಾ ಮಂಟಪಕ್ಕೆ ಬರುತ್ತಿದ್ದಾನೆ. ಆತನ ವರ್ತನೆ ಹೇಗಿದೆ ಎಂದರೆ ವಧುವೇ ಆತನನ್ನು ಒತ್ತಾಯಪೂರ್ವಕವಾಗಿ ಮದ್ವೆಮನೆಗೆ ಕರೆತಂದಳೇನೋ ಎಂದು ನೋಡುಗರಿಗೆ ಭಾಸವಾಗುವಂತಿದೆ.
ಆಹಾರ ಎದುರಿಗಿದ್ದರೂ ತಿನ್ನದೇ ಮೊಬೈಲ್ ಒತ್ತುವ ಗ್ರಾಹಕರು: ಸ್ಮಾರ್ಟ್‌ಫೋನ್ ನಿಷೇಧಿಸಿದ ಹೊಟೇಲ್
ಇತ್ತ ವಧುವಿಗೂ ಈತನ ವರ್ತನೆಯಿಂದ ಇರಿಸುಮುರಿಸಾಗಿದ್ದರೂ ಆಕೆ ತೋರಿಸಿಕೊಳ್ಳದೇ ಆತನ ಕೈ ಹಿಡಿದುಕೊಂಡು ನಗುವಿನ ಮುಖವಾಡದೊಂದಿಗೆ ವೇದಿಕೆಗೆ ಬರುತ್ತಾಳೆ. ಈ ವಧುವಿನ ಭವಿಷ್ಯವನ್ನು ನೆನೆದೆ ಅನೇಕರು ಭಾವುಕರಾಗಿ ಕಾಮೆಂಟ್ ಮಾಡಿದ್ದಾರೆ. ಈತನನ್ನು ಮದ್ವೆಯಾಗುವ ಬದಲು ಪಾಳುವಿಗೆ ಬೀಳಬಹುದಿತ್ತು ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ವಧುವಿನ ಸ್ಥಿತಿ ನೆನೆದು ಅನೇಕರು ಮರುಗಿದ್ದು, ಈತನನ್ನು ಮದುವೆಯಾಗುವ ಮೂಲಕ ಆಕೆ ತನ್ನ ಬದುಕನ್ನು ಸಂಕಷ್ಟಕ್ಕೀಡು ಮಾಡುತ್ತಿದ್ದಾಳೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಅನೇಕರು ಈ ಮದ್ವೆ ಸಂಬಂಧ ಈಗಾಗಲೇ ಮುಗಿದಂತಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಸಂಸಾರ ಆರಂಭಕ್ಕೂ ಮೊದಲೇ ಈತನ ಅವತಾರ ನೋಡಲಾಗುತ್ತಿಲ್ಲ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಬಹುಶಃ ಆತ ಒತ್ತಾಯಪೂರ್ವಕವಾಗಿ ಈ ವಿವಾಹಕ್ಕೆ ಒಪ್ಪಿರಬೇಕು ಎಂದು ಮಗದೊಬ್ಬರು ಕಾಮೆಂಟ್ ಮಾಡಿದ್ದಾರೆ. ಇವರು ಕಾರು ಹತ್ತುವ ಮೊದಲೇ ಡಿವೋರ್ಸ್ ಆಗುವಂತೆ ಕಾಣುತ್ತಿದೆ ಎಂದು ಇನ್ನೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಹೀಗೆ ವರನ (Groom) ವರ್ತನೆ ನೋಡಿದ ಪ್ರತಿಯೊಬ್ಬರಿಗೂ ಸಹಿಸಲಾಗದಂತೆ ಕಾಣುತ್ತಿದ್ದು, ಅನೇಕರು ಆತ ಮದ್ವೆ ಯಾಕಾದ ಎಂದು ಕೇಳುತ್ತಿದ್ದಾರೆ. ಒಟ್ಟಿನಲ್ಲಿ ಈ ವೀಡಿಯೋ ಮೊಬೈಲ್ ಚಟ ಎಷ್ಟೊಂದು ದುಷ್ಪರಿಣಾಮಕಾರಿ ಎಂಬುದನ್ನು ತೋರಿಸುವುದರ ಜೊತೆ ಇದು ಹಲವು ಸಂಬಂಧಗಳ ಅಂತ್ಯಕ್ಕೆ ಕಾರಣವಾಗುತ್ತಿದೆ ಎಂದರೆ ತಪ್ಪಾಗಲಾರದು.
ವೀಡಿಯೋ ಗೇಮ್ ಆಡುವ ವೇಳೆ ಸಿಕ್ಕಿಬಿದ್ದ ಮಗ: ಅಪ್ಪ ಕೊಟ್ಟ ಶಿಕ್ಷೆಗೆ ದಂಗಾದ
ಮದ್ವೆ ಜೀವನದ ಸುಂದರ ಕ್ಷಣ, ಅದು ಬದುಕಿಗೆ ವಿಭಿನ್ನ ತಿರುವು ನೀಡುತ್ತದೆ. ಮದ್ವೆ ಎಂದಾಕ್ಷಣ ವಿಶೇಷವಾಗಿ ಹೆಣ್ಣು ಮಕ್ಕಳು ನೂರಾರು ಕನಸು ಕಾಣುತ್ತ ಹೊಸ ಬದುಕಿನ ನಿರೀಕ್ಷೆಯಲ್ಲಿರುತ್ತಾರೆ. ಹೀಗಿರುವಾಗ ದಂಪತಿಗಳಲ್ಲಿ ಒಬ್ಬರು ವಿಚಿತ್ರವಾಗಿ ವರ್ತಿಸಿದರೂ ಬದುಕು ಸಾಮರಸ್ಯದಿಂದ ಹೋಗಲು ಸಾಧ್ಯವಿಲ್ಲ. ಇತ್ತೀಚೆಗಂತೂ ಹೆಚ್ಚು ಹೆಚ್ಚು ವಿಚ್ಛೇದನ ಪ್ರಕರಣಗಳು ನಡೆಯುತ್ತಿದ್ದು, ಇದಕ್ಕೆ ಮೊಬೈಲ್ ಫೋನ್ ಕೂಡ ಕಾರಣವಾಗಿರುವುದು ಸುಳ್ಳಲ್ಲ.
My body is here with you, but my mind is outside of town pic.twitter.com/IcC6jh4FWT
— Mahuntsu (@Mahuntsu)