Extra Marital Affairs: ಪ್ರೀತಿಸಿ ಮದುವೆಯಾದ ಹುಡುಗ್ರು ಅಕ್ರಮ ಸಂಬಂಧ ಬೆಳೆಸೋದ್ಯಾಕೆ?

By Suvarna NewsFirst Published Jun 8, 2023, 3:11 PM IST
Highlights

ಪ್ರೀತಿಸಿ ಮದುವೆಯಾದ ಜೋಡಿ ಸದಾ ಖುಷಿಯಾಗಿರ್ತಾರೆ ಅನ್ನೋದು ಸಂಪೂರ್ಣ ಸತ್ಯವಲ್ಲ. ಅದು ಅವರ ಜೀವನವನ್ನು ಅವಲಂಭಿಸಿರುತ್ತೆ. ಹೊಡೆದಾಡಿ, ಬಡಿದಾಡಿ ಮದುವೆಯಾದ ಜೋಡಿ ಕೊನೆಯಲ್ಲಿ ಬೇರೆಯಾಗೋದಿದೆ. ಅದಕ್ಕೆ ಕಾರಣ ಇಲ್ಲಿದೆ. 
 

ಲವ್ ಮ್ಯಾರೇಜ್ ಸಂಖ್ಯೆ ಈಗಿನ ದಿನಗಳಲ್ಲಿ ಹೆಚ್ಚಾಗಿದೆಯಾದ್ರೂ ಪ್ರೀತಿಸಿ ಮದುವೆಯಾಗೋದು ಸುಲಭವಲ್ಲ. ಪ್ರೀತಿಸಿದವರನ್ನೇ ಮದುವೆ ಆಗ್ಬೇಕು ಅಂತಾ ಪ್ರತಿಯೊಬ್ಬರೂ ಬಯಸ್ತಾರೆ. ಇದಕ್ಕಾಗಿ ಮನೆ ಮಂದಿಯನ್ನೆಲ್ಲ ಎದುರು ಹಾಕಿಕೊಳ್ತಾರೆ. ಜಗಳ, ಗಲಾಟೆ ಮಧ್ಯೆ ಕೆಲವರ ಮದುವೆ ನಡೆದ್ರೆ ಮತ್ತೆ ಕೆಲವರು ಕುಟುಂಬಸ್ಥರ ಮಾತಿಗೆ ಶರಣಾಗಿ, ಪ್ರೀತಿ ತ್ಯಜಿಸಿ ಅವರು ತೋರಿಸಿದ ವ್ಯಕ್ತಿಯ ಕೈ ಹಿಡಿಯುತ್ತಾರೆ.

ಎಷ್ಟೊಂದು ವರ್ಷ ಕಾದು, ಅದೆಷ್ಟೋ ಗಲಾಟೆ ನಡೆದು, ಎಲ್ಲರನ್ನು ಎದುರು ಹಾಕಿಕೊಂಡು ತಮ್ಮಿಷ್ಟದ ಮದುವೆ (Marriage) ಯೇನೋ ಆಗ್ತಾರೆ ಜನರು. ಆದ್ರೆ ಇಷ್ಟಾದ್ರೂ ಮದುವೆ ಖುಷಿ ಅವರಲ್ಲಿ ಇರೋದಿಲ್ಲ. ಯಾಕೆ ಈ ವ್ಯಕ್ತಿಯನ್ನು ಆಯ್ಕೆ ಮಾಡಿಕೊಂಡೆ ಎಂಬ ಪ್ರಶ್ನೆ ಮೂಡಲು ಶುರುವಾಗುತ್ತದೆ. ಇದಕ್ಕೆ ಕಾರಣವಾಗೋದು ಮೂರನೇ ವ್ಯಕ್ತಿಯ ಪ್ರವೇಶ. ಸ್ವಚ್ಛಂದ ಹಕ್ಕಿಯಾಗಿ ಹಾರುತ್ತಾ, ಸುಂದರವಾಗಿದ್ದ ಸಂಸಾರ (Family) ಕ್ಕೆ ಮೂರನೇ ವ್ಯಕ್ತಿ ಪ್ರವೇಶವಾದ್ರೆ ಸಂಸಾರ ಚೆಲ್ಲಾಪಿಲ್ಲಿಯಾದಂತೆ. ವಿವಾಹೇತರ ಸಂಬಂಧ ಹಿಂದೆಯೂ ಇತ್ತು, ಈಗ್ಲೂ ಇದೆ. ಮಹಿಳೆಯರಿಗೆ ಹೋಲಿಕೆ ಮಾಡಿದ್ರೆ ವಿವಾಹೇತರ ಸಂಬಂಧವನ್ನು ಪುರುಷರು ಹೆಚ್ಚು ಹೊಂದಿರ್ತಾರೆ ಎಂದು ಸರ್ವೆಯೊಂದು ಹೇಳಿದೆ. ನಾವಿಂದು ಪ್ರೀತಿ (Love) ಸಿ ವಿವಾಹವಾದ ಪುರುಷರು ವಿವಾಹೇತರ ಸಂಬಂಧ ಬೆಳೆಸಲು ಕಾರಣವೇನು ಎಂಬುದನ್ನು ನಿಮಗೆ ಹೇಳ್ತೇವೆ.

Relationship Tips: ಪರಸ್ಪರ ಪ್ರೀತಿಸಿದ್ರೂ ಸಂತೋಷ ಯಾಕೆ ಸಿಗಲ್ಲ?

ಒತ್ತಾಯದ ಮದುವೆ : ಅರೆಂಜ್ ಮ್ಯಾರೇಜ್ ನಲ್ಲಿ ಮಾತ್ರವಲ್ಲ ಲವ್ ಮ್ಯಾರೇಜ್ ನಲ್ಲೂ ಒತ್ತಾಯದ ಮದುವೆ ನಡೆದಿರುತ್ತದೆ. ಪಾಲಕರು ಅಥವಾ ಸಂಗಾತಿ ಒತ್ತಾಯಕ್ಕೆ ಕೆಲವರು ಮದುವೆಯಾಗಿರ್ತಾರೆ. ಅವರಿಗೆ ಈಗ್ಲೇ ಮದುವೆಯಾಗುವ, ಜವಾಬ್ದಾರಿ ಹೊತ್ತುಕೊಳ್ಳುವ ಇಚ್ಛೆ ಇರೋದಿಲ್ಲ. ಒತ್ತಾಯಕ್ಕೆ ಮದುವೆಯಾದ ಇವರು ಜವಾಬ್ದಾರಿ ಕಲಿಯುವುದಕ್ಕಿಂತ ಅದ್ರಿಂದ ಓಡಲು ಹೆಚ್ಚು ಇಷ್ಟಪಡ್ತಾರೆ. ಅನೇಕ ಬಾರಿ ಇಂಥ ಮದುವೆಗಳು ವಿವಾಹೇತರ ಸಂಬಂಧದಲ್ಲಿ ಅಂತ್ಯ ಕಾಣುತ್ತದೆ.

ಮನೆಯಲ್ಲಿ ಹೆಚ್ಚಾಗುವ ಗಲಾಟೆ – ಜಗಳ : ಮನೆಯವರು ಹಾಗೂ ಪತ್ನಿ ಮಧ್ಯೆ ಹೊಂದಾಣಿಕೆ ಇಲ್ಲದೆ ಹೋಗಾದ ಪುರುಷ ಒತ್ತಡಕ್ಕೆ ಒಳಗಾಗ್ತಾನೆ. ಪ್ರೇಮ ವಿವಾಹದಲ್ಲಿ ಇದು ಹೆಚ್ಚು. ನಮ್ಮಿಷ್ಟದ ಹುಡುಗಿಯನ್ನು ಮದುವೆಯಾಗಿಲ್ಲ ಅಂತಾ ಪಾಲಕರು ಹಿಂಸೆ ನೀಡಿದ್ರೆ ಮನೆ ಬಿಟ್ಟು ಹೋಗ್ತೀನಿ ಎಂಬ ಬೆದರಿಕೆ ಪತ್ನಿಯಿಂದ ಬರ್ತಿರುತ್ತದೆ. ಇಬ್ಬರನ್ನು ಸಂಭಾಳಿಸಲಾಗದೆ ಸುಸ್ತಾಗುವ ಪುರುಷ, ನೆಮ್ಮದಿಗಾಗಿ ಬೇರೆ ದಾರಿ ನೋಡಿಕೊಳ್ತಾನೆ. ಪರಸ್ತ್ರೀ ಸಹವಾಸ ಮಾಡಿ ನೆಮ್ಮದಿ ಕಂಡುಕೊಳ್ಳುವ ಪ್ರಯತ್ನ ನಡೆಸುತ್ತಾನೆ.

ದೀರ್ಘ ಸಂಬಂಧದಿಂದ ಬೇಸರ : ಮದುವೆ ಆರಂಭದಲ್ಲಿ ಎಲ್ಲವೂ ಥ್ರಿಲ್ ಆಗಿರುತ್ತದೆ. ಒಬ್ಬರನ್ನೊಬ್ಬರು ಅರಿಯುವ ಆಸಕ್ತಿ, ಕುತೂಹಲವಿರುತ್ತದೆ. ದಿನಕಳೆದಂತೆ ಇಬ್ಬರೂ ಹಳಬರಾಗುವ ಕಾರಣ ವಿಶೇಷ ಆಸಕ್ತಿ, ಗಮನ ನೀಡುವ ಅಗತ್ಯವಿರೋದಿಲ್ಲ. ಪುರುಷರಿಗೆ ಇದು ಬೇಸರತರಿಸಲು ಶುರುವಾಗಿರುತ್ತದೆ. ಹೊಸತನ ಬಯಸುವ ಕೆಲ ಪುರುಷರು ವಿವಾಹೇತರ ಸಂಬಂಧದಲ್ಲಿ ಆಸಕ್ತಿ ತೋರಿಸುತ್ತಾರೆ. ಸಂಗಾತಿ ಜೊತೆ ಸಿಗದ ಅನುಭವವನ್ನು ಬೇರೆಯವರ ಜೊತೆ ಪಡೆಯಲು ಪ್ರಯತ್ನಿಸುತ್ತಾನೆ.

Relationship Tips: ನಿಮಗಿರುವ ವಿಶ್ವಾಸ ನಿಜವೋ, ಫೇಕೋ? ಹೀಗ್ ಪತ್ತೆ ಹಚ್ಚಿ

ಬದಲಾವಣೆ ಸ್ವೀಕರಿಸೋದು ಕಷ್ಟ : ಬಾಯ್ ಫ್ರೆಂಡ್, ಗರ್ಲ್ ಫ್ರೆಂಡ್ ಆಗಿರೋದು ಸುಲಭ. ಇಬ್ಬರು ಕೆಲವೇ ಗಂಟೆ ಒಟ್ಟಿಗೆ ಕಳೆಯುವ ಕಾರಣ ಸಾಕಷ್ಟು ಹೊಂದಾಣಿಕೆ ಅವಶ್ಯಕತೆ ಇರೋದಿಲ್ಲ. ಒಬ್ಬರಿಗೊಬ್ಬರು ಏನು ಮಾಡಲೂ ಸಿದ್ಧವಿರ್ತಾರೆ. ಆದ್ರೆ ಮದುವೆಯಾದ್ಮೇಲೆ ಒಟ್ಟಿಗೆ ಜೀವನ ನಡೆಸಬೇಕಾಗುತ್ತದೆ. ಜೀವನದಲ್ಲಿ ಅನೇಕ ಬದಲಾವಣೆಗಾಗುತ್ತವೆ. ಅದಕ್ಕೆಲ್ಲ ಹೊಂದಿಕೊಂಡು ಹೋಗಲು ಕೆಲಸವರಿಗೆ ಸಾಧ್ಯವಾಗೋದಿಲ್ಲ. ವಸ್ತು, ಕೊಠಡಿಯನ್ನು ಹಂಚಿಕೊಂಡು ಜೀವನ ನಡೆಸೋದು ಕೂಡ ಕೆಲವರಿಗೆ ಕಷ್ಟವೆನ್ನಿಸುತ್ತದೆ.  ಮೊದಲಿದ್ದ ಹುಡುಗಿ ಸ್ವಭಾವ ಈಗ ಬದಲಾಗಿದೆ ಎನ್ನಿಸಲು ಶುರುವಾಗುತ್ತದೆ. ಇದು ಇವರ ಸಂಬಂಧವನ್ನು ನಿಧಾನವಾಗಿ ಹಾಳು ಮಾಡುತ್ತದೆ. ತಲೆಕೆಟ್ಟ ಪುರುಷರು ನೆಮ್ಮದಿ ಹುಡುಕಲು ಶುರು ಮಾಡ್ತಾರೆ.   

click me!