ಕೊಟ್ನಲ್ಲಾ ಚಮಕ್‌..ಮದ್ವೆ ಮಂಟಪದಲ್ಲೇ ವಧುವಿನ ಅನೈತಿಕ ಸಂಬಂಧ ಬಹಿರಂಗಪಡಿಸಿದ ವರ!

Published : May 25, 2023, 08:34 AM ISTUpdated : May 25, 2023, 08:35 AM IST
ಕೊಟ್ನಲ್ಲಾ ಚಮಕ್‌..ಮದ್ವೆ ಮಂಟಪದಲ್ಲೇ ವಧುವಿನ  ಅನೈತಿಕ ಸಂಬಂಧ ಬಹಿರಂಗಪಡಿಸಿದ ವರ!

ಸಾರಾಂಶ

ದಾಂಪತ್ಯದಲ್ಲಿ ಮೋಸವಾದ್ರೆ ಸಹಿಸೋದು ಕಷ್ಟ. ನಿಜವಾದ ಪ್ರೀತಿಯನ್ನು, ಪ್ರಾಮಾಣಿಕ ಸಂಗಾತಿಯನ್ನು ಎಲ್ಲರೂ ಬಯಸ್ತಾರೆ. ಆದ್ರೆ ಇತ್ತೀಚಿಗೆ ಅನೈತಿಕ ಸಂಬಂಧ ಅನ್ನೋದು ತುಂಬಾ ಸಾಮಾನ್ಯವಾಗಿದೆ. ಮದುವೆಯ ಮೊದಲೂ, ನಂತರ ಸಹ ಸಂಗಾತಿಗೆ ಮೋಸ ಮಾಡ್ತಾರೆ. ಹಾಗೆ ಮೋಸ ಮಾಡುತ್ತಿದ್ದ ವಧುವಿಗೆ ಮದುವೆ ಮನೆಯಲ್ಲೇ ವರ ತಕ್ಕ ಪಾಠ ಕಲಿಸಿದ್ದಾನೆ.

ಇತ್ತೀಚಿನ ವರ್ಷಗಳಲ್ಲಿ ಸಂಬಂಧಗಳಿಗೆ ಬೆಲೆಯೇ ಇಲ್ಲದಂತಾಗಿದೆ. ಮದುವೆಯ ಮೊದಲು, ನಂತರ ಪರಸ್ಪರ ಹುಡುಗ-ಹುಡುಗಿ ಮೋಸ ಮಾಡುತ್ತಾರೆ. ಒಬ್ಬರನ್ನು ಪ್ರೀತಿಸುತ್ತಿರುವಾಗಲೇ ಕದ್ದುಮುಚ್ಚಿ ಇನ್ನೊಬ್ಬರ ಜೊತೆ ಸಂಬಂಧ ಇಟ್ಟುಕೊಳ್ಳುತ್ತಾರೆ. ಇಂಥಾ ವಿಷಯ ಮದುವೆ ಮೊದಲೇ ತಿಳಿದರೆ ಇಬ್ಬರ ಜೀವನ ಹಾಳಾಗುವುದು ತಪ್ಪುತ್ತದೆ. ಆದರೆ ಮದುವೆಯ ನಂತರ ತಿಳಿದುಬಂದರೆ ಏನೂ ಮಾಡಲು ಸಾಧ್ಯವಾಗುವುದಿಲ್ಲ. ಆದ್ರೆ ಅದೃಷ್ಟವಶಾತ್‌ ಇಲ್ಲೊಬ್ಬ ಗಂಡಿಗೆ ಮದುವೆಯ ಮೊದಲೇ ವಧುವಿನ ಅನೈತಿಕ ಸಂಬಂಧದ ಬಗ್ಗೆ ತಿಳಿದುಬಂದಿದ್ದು, ಮದುವೆಗೆ ಆಗಮಿಸಿದ ಅತಿಥಿಗಳ ಮುಂದೆಯೇ ಆಕೆಯ ಮೋಸವನ್ನು ಬಹಿರಂಗಪಡಿಸಿದ್ದಾನೆ. 

ಈತನ ಪಾಲಿಗೆ ಸಂತೋಷದ ದಿನವಾಗಿರುವ ಮದುವೆಯ ದಿನ ಯಾರೂ ಊಹಿಸದ ಕಷ್ಟದ ದಿನವಾಗಿತ್ತು. ಮದುವೆ ಸಂಭ್ರಮಕ್ಕೆ ಟ್ವಿಸ್ಟ್ ದೊರಕಿತ್ತು. ಮದುವೆಗೆ ಬಂದ ಸಂಬಂಧಿಕರಿಗೆ ಶಾಕ್ ಆದರು. ಯಾಕೆಂದರೆ ವರ, ವಧುವಿನ ಅನೈತಿಕ ಸಂಬಂಧ ತಿಳಿದ ನಂತರ ಮದುವೆಯನ್ನು ಮುರಿಯುವ ಬದಲು ತಮ್ಮ ವಿಶೇಷ ದಿನದಂದು ಎಲ್ಲರ ಮುಂದೆ ಸತ್ಯವನ್ನು ಬಹಿರಂಗಪಡಿಸಿದ್ದಾನೆ.

Extra Marital Relationship; ಸಂಗಾತಿ ವಂಚನೆ ಮಾಡ್ತಿದಾರಾ? ಗುರುತಿಸುವುದು ಹೇಗೆ?

ಸಾಮಾನ್ಯವಾಗಿ ವಧು, ಇನ್ನೊಬ್ಬನ ಜೊತೆ ಸಂಬಂಧ ಇಟ್ಟುಕೊಂಡಿರುವುದು ಗೊತ್ತಾದರೆ ವರ ಸಂಬಂಧವನ್ನು ಮುರಿದುಕೊಂಡು, ಮದುವೆ ಕ್ಯಾನ್ಸಲ್ ಮಾಡಿಕೊಂಡು ಹೋಗಿಬಿಡುತ್ತಾನೆ. ಆದ್ರೆ ಇಲ್ಲಿ ವರ ತನ್ನನ್ನು ವಂಚಿಸಿದ ವಧುವಿನ ಮೇಲೆ ವಿಭಿನ್ನ ರೀತಿಯಲ್ಲಿ ಸೇಡು ತೀರಿಸಿಕೊಂಡಿದ್ದಾನೆ.  ವಧುವಿನ ಅನೈತಿಕ ಸಂಬಂಧ ತಿಳಿದ ನಂತರ ಮದುವೆಯನ್ನು ಮುರಿಯುವ ಬದಲು ಮದುವೆಗೆ ಆಗಮಿಸಿದ ಅತಿಥಿಗಳ ಮುಂದೆಯೇ ಆಕೆಯ ಅಸಲೀಯತ್ತನ್ನು ಬಹಿರಂಗ ಮಾಡಿದ್ದಾನೆ. ವಧು, ವರನ ಸ್ನೇಹಿತನ ಜೊತೆ ಸಂಬಂಧ ಹೊಂದಿದ್ದ ವಿಷಯವನ್ನು ಮದುವೆ ಮನೆಯಲ್ಲಿ ಎಲ್ಲರ ಮುಂದೆ ಬಹಿರಂಗಪಡಿಸಲಾಯಿತು.

ಈ ವಿಡಿಯೋ ದಿ ಅನ್‌ಫಿಲ್ಟರ್ಡ್ ಬ್ರೈಡ್‌ನ ನಿರೂಪಕ ಜಾರ್ಜಿ ಅವರು ಇತ್ತೀಚೆಗೆ ಬೆತ್‌ ಜೊತೆಗೆ ಹೋಸ್ಟ್ ಮಾಡಿದ ಪಾಡ್‌ಕ್ಯಾಸ್ಟ್ ಕ್ಲಿಪ್‌ ಟಿಕ್‌ಟಾಕ್‌ನಲ್ಲಿ ಸಖತ್ ವೈರಲ್ ಆಗಿದೆ. ಇದು ಯಾರ ಮದುವೆ ಎಂದು ತಿಳಿದುಬಂದಿಲ್ಲ. ವಧು-ವರರ ಹೆಸರು ಸಹ ಬಹಿರಂಗಪಡಿಸಿಲ್ಲ. ಆದರೆ ವರ, ವಧುವಿಗೆ ಬುದ್ಧಿ ಕಲಿಸಿರುವ ರೀತಿ ಎಲ್ಲರ ಮೆಚ್ಚುಗೆಗೆ ಮಾತ್ರವಾಗಿದೆ. 

Bengaluru: ಮ್ಯಾಟ್ರಿಮೋನಿ ಸೈಟ್‌ ನಲ್ಲಿ ಪರಿಚಯವಾಗಿ ಯುವತಿಗೆ 43.51 ಲಕ್ಷ ವಂಚಿಸಿದ ಆನ್‌ಲೈನ್ ಮದುವೆ ಗಂಡು!

ಜಾರ್ಜಿಯವರು ಹೇಳಿರುವಂತೆ, ವಿವಾಹ ಬಹಳ ಅದ್ಧೂರಿಯಾಗಿ ನಡೆಯುತ್ತಿತ್ತು. ಮದುವೆಗೆ ಆಗಮಿಸಿದ ಅತಿಥಿಗಳು ಊಟ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ವಧುವಿನ ತಂದೆ ತನ್ನ ಮಗಳನ್ನು ಸ್ಟೇಜ್ ಮೇಲೆ ಕರೆತಂದರು. ಈ ಸಂದರ್ಭದಲ್ಲಿ ವರ ಮಾತನಾಡಬೇಕಿತ್ತು. ಆದರೆ ವರ ಎದ್ದು ನಿಂತು, 'ನಾನು ಮಾತನಾಡಲು ಪ್ರಾರಂಭಿಸುವ ಮೊದಲು, ನಿಮಗೆ ನೀಡಲಾದ ಲಕೋಟೆಯನ್ನು ತೆರೆದು ನೋಡಿ, ಅದರಲ್ಲಿ ಫೋಟೋಗಳಿವೆ, ಬೇರೆ ಯಾರದ್ದು ಅಲ್ಲ ವಧು ಮತ್ತು ನನ್ನ ಸ್ನೇಹಿತನ ಅನೈತಿಕ ಸಂಬಂಧದ ಸಾಕ್ಷಿ, ಅಷ್ಟೇ.. ಇನ್ನೇನು ಹೇಳಲು ಉಳಿದಿಲ್ಲ' ಎಂದು ಅಲ್ಲಿಂದ ಹೊರ ನಡೆಯುತ್ತಾನೆ.

ಆ ನಂತರ ವರನ ಕುಟುಂಬದವರು ಮದುವೆ ಮನೆಯಿಂದ ಹೊರಟು ಹೋದರು. ಅವರು ದ್ರೋಹದ ಬಗ್ಗೆ ತಿಳಿದಿದ್ದರು. ಮದುವಿನ ಕುಟುಂಬವು ಎಲ್ಲಾ ಸಿದ್ಧತೆಗೆ ಸಾಕಷ್ಟು ಖರ್ಚು ಮಾಡಿದ್ದರಿಂದ ಶಾಕ್‌ಗೆ ಒಳಗಾದರು. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ಸ್ಟೋರಿಗೆ ಜನರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಹಲವರು ಈ ಘಟನೆ ಕೇಳಿ ಶಾಕ್ ಆಗಿದ್ದಾರೆ. ಇನ್ನು ಕೆಲವರು ವರನ ನಡೆಯನ್ನು ಶ್ಲಾಘಿಸಿದರು ಹಲವರು ಈ ಘಟನೆ ಕೇಳಿ ಶಾಕ್ ಆಗಿದ್ದಾರೆ. ಇನ್ನು ಕೆಲವರು ನಾವು ಅವನ ಸ್ಥಿತಿಯಲ್ಲಿದ್ದರು ಅದನ್ನೇ ಮಾಡುತ್ತಿದ್ದೆವು ಎಂದು ಒಪ್ಪಿಕೊಂಡರು. ಈ ಮದುವೆಗೆ ಬಂದರು ಯಾರು ಈ ಘಟನೆಯನ್ನು ಇಂದಿಗೂ ಮರೆಯಲು ಸಾಧ್ಯವಿಲ್ಲ, ಸಂತೋಷದ ಸಂದರ್ಭಗಳಲ್ಲಿಯೂ ಸಹ ಈ ಘಟನೆಯ ನೆನಪು ಮರುಕಳಿಸುವಲ್ಲಿ ಸಂಶಯವೇ ಇಲ್ಲ ಎಂದು ತಿಳಿಸಿದ್ದಾರೆ.

ಅದೇನೆ ಇರ್ಲಿ, ಮದುವೆಯಾಗಲು ಮೋಸ ಮಾಡಲು ಯತ್ನಿಸುವವರಿಗೆ ಇದು ತಕ್ಕ ಪಾಠದಂತಿದೆ. ಸಂಬಂಧ ಅನ್ನೋದೆ ನಂಬಿಕೆ, ವಿಶ್ವಾಸದ ಮೇಲೆ ನಿಂತಿರುವಂತದ್ದು, ಇಲ್ಲಿ ಮೋಸಕ್ಕೆ ಅವಕಾಶವಿಲ್ಲ ಎಂಬ ಸಂದೇಶವನ್ನು ನೀಡುತ್ತದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನನಗೆ ಈಗಾಗಲೇ 120ಕ್ಕೂ ಹೆಚ್ಚು ಬಾರಿ ಮದುವೆಯಾಗಿದೆ; ನಟ ಸಿಂಬು ಉತ್ತರಕ್ಕೆ ಆಂಕರ್ ಏನಂದ್ರು?
ಚಾಣಕ್ಯ ನೀತಿಯ ಪ್ರಕಾರ ಇಂಥ ಸಂಗಾತಿ ಸಿಕ್ಕರೆ ಜೀವನಪೂರ್ತಿ ಕಷ್ಟ ತಪ್ಪಿದ್ದಲ್ಲ!