ಲವರ್ ಜತೆಗಿನ ಸಂಬಂಧ ಹಳಸಲು ಶುರುವಾದರೂ ಅನೇಕರು ಎಚ್ಚೆತ್ತುಕೊಳ್ಳುವುದಿಲ್ಲ. ಸಂಬಂಧವೆನ್ನುವುದು ಹಿಂಸೆಯಾಗುತ್ತಿದ್ದರೂ ಅಸಹಾಯಕತೆಯಲ್ಲಿ ಮಿಂದಂತೆ ಮಾಡುತ್ತಾರೆ. ಅದರ ಬದಲಿಗೆ ಮೊದಲೇ ಎಚ್ಚೆತ್ತುಕೊಂಡು ಸಂಬಂಧದಿಂದ ಹೊರಬರಲು ಯತ್ನಿಸಬೇಕು. ನಿಮ್ಮತನವನ್ನು ಕಡೆಗಣಿಸುಷ್ಟು ಅತಿಯಾದ ಹೊಂದಾಣಿಕೆ ಆರಂಭವಾದ ಹಂತದಲ್ಲಿ ಎಚ್ಚರಿಕೆ ವಹಿಸುವುದು ಅಗತ್ಯ.
ಪ್ರೀತಿ-ಪ್ರೇಮದ ಹೆಸರಿನಲ್ಲಿ ಎಷ್ಟೋ ಸಂಬಂಧಗಳು ಆರಂಭವಾದರೂ ಕೊನೆಗೆ ಅವು ಉಸಿರುಗಟ್ಟಿಸುತ್ತವೆ. ಹಿಂದೊಮ್ಮೆ ಅದಮ್ಯವಾಗಿ, ಸಾಯುವಷ್ಟು ಪ್ರೀತಿಸಿದ್ದ ಅದೇ ವ್ಯಕ್ತಿ ಇಂದು ಅಸಹನೀಯವಾಗುತ್ತಾರೆ. ಇದೇಕೆ ಹೀಗೆ, ಎಲ್ಲಿ ಏನು ತಪ್ಪಾಯಿತು ಎಂದು ಗೊತ್ತೇ ಆಗದಂತೆ ಕೆಟ್ಟ ಸಂಬಂಧದಲ್ಲಿ ಸಿಲುಕುವವರು ಖಿನ್ನತೆಗೆ ತುತ್ತಾಗಬಹುದು, ದೌರ್ಜನ್ಯಕ್ಕೆ ಒಳಗಾದರೂ ಸಹಿಸಿಕೊಂಡು ಸುಮ್ಮನಿರುವ ಸ್ಥಿತಿ ತಂದುಕೊಳ್ಳಬಹುದು, ಕೊನೆಗೆ ಆತ್ಮಹತ್ಯೆಯಂತಹ ಕೃತ್ಯಕ್ಕೂ ಮುಂದಾಗಬಹುದು. ಆದರೆ, ಇವೆಲ್ಲ ಆಗುವ ಮೊದಲು ಒಂದು ಹಂತದಲ್ಲಿ ಭಿನ್ನಾಭಿಪ್ರಾಯಗಳು ಸರಿಪಡಿಸಲು ಸಾಧ್ಯವಾಗದಷ್ಟು ತಾರಕಕ್ಕೆ ಹೋಗಿರುತ್ತವೆ, ಸಂಬಂಧದಲ್ಲಿ ಎಚ್ಚರಿಕೆಯ ಗಂಟೆ ಮೊಳಗುತ್ತಿರುತ್ತದೆ. ಯಾರೋ ಒಬ್ಬರು ಉಸಿರು ಕಟ್ಟುವಷ್ಟು ಹೊಂದಾಣಿಕೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುತ್ತದೆ. ಈ ಹಂತದಲ್ಲಿ ನಿಂತು ಸಂಬಂಧವನ್ನು ಪರಾಮರ್ಶೆ ಮಾಡಿಕೊಳ್ಳಬೇಕಾಗುತ್ತದೆ.
ಅತಿಯಾಗಿ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದರೆ, ನಿಮ್ಮತನ ನಾಶವಾಗುತ್ತಿದ್ದರೆ ಎಚ್ಚೆತ್ತುಕೊಳ್ಳಬೇಕಾಗುತ್ತದೆ. ಸಂಬಂಧ ಚೆನ್ನಾಗಿರಲು ಹೊಂದಾಣಿಕೆ ಅತ್ಯಂತ ಮುಖ್ಯ ಎನ್ನುವುದು ನಿಜ. ಆದರೆ, ಅದು ಹೆಚ್ಚಾದರೂ ವ್ಯಕ್ತಿಗೆ ಹಾನಿಯಾಗುತ್ತದೆ. ಆಗ ಅದು ಮನಸ್ಸನ್ನು ಅರಳಿಸುವ ಉತ್ತಮ ಸಂಬಂಧವಾಗಿ ಉಳಿಯುವುದಿಲ್ಲ. ಹೀಗಾಗಿ, ಯಾವ ಹಂತದಲ್ಲಿ ಹೊಂದಾಣಿಕೆ ಅಥವಾ ಸಹಿಸಿಕೊಳ್ಳುವುದನ್ನು ನಿಲ್ಲಿಸಬೇಕು ಎನ್ನುವುದನ್ನು ಇಂದಿನ ಯುವಕ-ಯುವತಿಯರು ತಿಳಿದಿರಲೇಬೇಕು.
ಮೌಲ್ಯಗಳಲ್ಲಿ (Value) ಬದಲಾವಣೆ (Change) ತಂದುಕೊಳ್ಳುವ ಸ್ಥಿತಿ: ಮೊದಲ ಅತಿದೊಡ್ಡ ಎಚ್ಚರಿಕೆಯ ಗಂಟೆ ಎಂದರೆ, ನೀವು ಜೀವನದಲ್ಲಿ (Life) ಇದುವರೆಗೆ ನಂಬಿಕೊಂಡು ಬಂದಿರುವ ಮೌಲ್ಯಗಳಲ್ಲಿ ಬದಲಾವಣೆ ತಂದುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆಯಾ ಎಂದು ಚೆಕ್ ಮಾಡಿಕೊಳ್ಳಿ. ನಿಮ್ಮದೇ ನೆಗೆಟಿವ್ ಧೋರಣೆಯಾಗಿದ್ದು, ನಕಾರಾತ್ಮಕ ಮನಸ್ಥಿತಿ (Negative Mentality) ಹಾಗೂ ಮೌಲ್ಯಗಳನ್ನು ಹೊಂದಿದ್ದರೆ ಬದಲಾವಣೆ ತಂದುಕೊಳ್ಳುವುದರಲ್ಲಿ ಅರ್ಥವಿದೆ. ಆದರೆ, ನೀವು ಉತ್ತಮ ಚಿಂತನಾ ಲಹರಿ ಹೊಂದಿದ್ದರೂ ಪದೇ ಪದೆ ಅದಕ್ಕೆ ಧಕ್ಕೆಯಾಗುತ್ತಿದ್ದರೆ, ನೀವು ನಂಬಿದ ಮೌಲ್ಯಗಳ ವಿರುದ್ಧ ನಡೆಯುವಂತೆ ನಿಮ್ಮ ಸಂಗಾತಿ (Partner) ಒತ್ತಡ ಹೇರುತ್ತಿದ್ದರೆ ಎಚ್ಚೆತ್ತುಕೊಳ್ಳಬೇಕು. ಉದಾಹರಣೆ ಎಂದರೆ, ಆರೋಗ್ಯಕರ ಆಹಾರ (Healthy Food) ಸೇವನೆ, ಹಣದ ಉಳಿತಾಯ ನಿಮ್ಮ ಮೌಲ್ಯವಾಗಿದ್ದರೆ ಅವರು ಅದನ್ನು ಕಟ್ಟುನಿಟ್ಟಾಗಿ ನಿರಾಕರಿಸುವ ಗುಣ ಹೊಂದಿದ್ದರೆ ಎಚ್ಚರಿಕೆ ವಹಿಸಿ.
Relationship Tips: ಉತ್ತಮ ಸಂಗಾತಿ, ದಾಂಪತ್ಯ ನಿಮ್ಮದಾಗ್ಬೇಕೇ? ಮಹಿಳೆಯರು ಹೀಗ್ಮಾಡಿದ್ರೆ ಒಳ್ಳೇದು
ಅಭಿಪ್ರಾಯಗಳಿಗೆ (Opinions) ಸಂಪೂರ್ಣ ಬೆಲೆ ಇಲ್ಲದಿರುವುದು: ಇಬ್ಬರು ವ್ಯಕ್ತಿಗಳಲ್ಲಿ ಭಿನ್ನಾಭಿಪ್ರಾಯ ಸಹಜ. ಆದರೆ, ನಿಮ್ಮದು ಹೆಚ್ಚು ಮೌಲ್ಯಯುತವಾಗಿದ್ದು, ಅವರು ಅದನ್ನು ತಿರಸ್ಕರಿಸುತ್ತಿದ್ದರೆ, ನಿಮ್ಮ ಅಭಿಪ್ರಾಯಗಳಿಗೆ ಸ್ವಲ್ಪವೂ ಮನ್ನಣೆ ನೀಡದೆ ಹೋದರೆ, ನಿಮ್ಮನ್ನು ಯಾವ ವಿಚಾರದಲ್ಲೂ ಕನ್ಸಿಡರ್ ಮಾಡದೇ ಇದ್ದರೆ ಅವರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದು ತರವಲ್ಲ.
ಹೊಂದಾಣಿಕೆ (Compromise) ನಿಮ್ಮೊಬ್ಬರದ್ದೇನಾ?: ಸಂಬಂಧ (Relation) ಚೆನ್ನಾಗಿರಬೇಕು ಎಂದರೆ, ಇಬ್ಬರಲ್ಲೂ ಹೊಂದಾಣಿಕೆ ಇರಬೇಕಾಗುತ್ತದೆ. ಹಾಗಾಗದೇ ನೀವೊಬ್ಬರೇ ಹೊಂದಾಣಿಕೆ ಮಾಡಿಕೊಳ್ಳುವುದು ನಿಮ್ಮ ಗಮನಕ್ಕೆ ಬಂದರೆ ಇನ್ನಷ್ಟು ಪರಾಮರ್ಶೆ ಮಾಡಿಕೊಳ್ಳಿ. ಅವರೆದುರು ನಿಮ್ಮ ಇತರ ಸಮಸ್ಯೆಗಳನ್ನು ಬಚ್ಚಿಡುವ ಸ್ಥಿತಿ ಇರುವುದು, ಸ್ನೇಹಬಳಗದ ಜತೆಗೆ ನಡೆಸುವ ಮಾತುಕತೆಗಳನ್ನು ಹಂಚಿಕೊಳ್ಳುವ ವಾತಾವರಣ ಇಲ್ಲದಿರುವುದು ಇಂಥವೆಲ್ಲ ಉತ್ತಮ ಸಂಬಂಧದ ಸೂಚಕವಲ್ಲ.
ಸಂಗಾತಿ ಬಗ್ಗೆ ಮನದಲ್ಲಿ ಸಿಟ್ಟು, ದ್ವೇಷ (Resentment): ಪ್ರೀತಿಪಾತ್ರರನ್ನು ನೆನೆದಾಗ ಒಂದು ಸಕಾರಾತ್ಮಕ, ಬೆಚ್ಚಗಿನ ಭಾವನೆ ಉದಯಿಸುತ್ತದೆ. ಆದರೆ, ನೀವು ಸಂಗಾತಿಯನ್ನು ನೆನಪಿಸಿಕೊಂಡಾಗ ತೀವ್ರ ಅಸಮಾಧಾನ, ಸಿಟ್ಟು, ದ್ವೇಷ ಇತ್ಯಾದಿ ಭಾವನೆ ಮೂಡುತ್ತಿದೆ ಎಂದಾದರೆ ನೀವು ಅತಿಯಾಗಿ ಹೊಂದಾಣಿಕೆ ಮಾಡಿಕೊಳ್ಳುವುದಕ್ಕಿರಬಹುದು. ಈ ಸಿಟ್ಟು (Angry) ಸ್ವತಃ ನಿಮ್ಮ ಮೇಲೆ ಉಂಟಾಗಬಹುದು. ನಿಮ್ಮ ಅಸಹಾಯಕತೆಯ ಮೇಲಿರಬಹುದು.
ಸಂಬಂಧದಲ್ಲಿ ಡೋರ್‌ಮ್ಯಾಟ್ ಆಗಬಾರದು ಅಂದ್ರೆ ಹೇಗಿರಬೇಕು?
ನಿಮ್ಮ ಪ್ರೀತಿಯ (Love) ಕೆಲಸ ಸಾಧ್ಯವಿಲ್ಲ: ನಿಮಗೆ ಖುಷಿ ನೀಡುವ, ನೀವು ಇಷ್ಟಪಡುವ ಕೆಲಸ ಮಾಡಲು ಸಾಧ್ಯವಿಲ್ಲದ ಸ್ಥಿತಿ ಇದ್ದರೆ ಎಚ್ಚರಿಕೆ (Take Care) ವಹಿಸಬೇಕು. ನಿಮ್ಮ ಸಂಬಂಧ ಶುರುವಾಗುವುದಕ್ಕೂ ಮುನ್ನ ಇದ್ದ ಸ್ಥಿತಿ, ಸಂಬಂಧದ ಆರಂಭದ ದಿನಗಳನ್ನು ನೆನಪಿಸಿಕೊಳ್ಳಿ. ನಿಮಗೆ ಇಷ್ಟವಾಗುವ ಯಾವೆಲ್ಲ ಕೆಲಸ ಮಾಡುತ್ತಿದ್ದೀರಿ, ಇಂದಿನ ಸ್ಥಿತಿ ನೆನಪಿಸಿಕೊಳ್ಳಿ.