ಕುದುರೆ ಅಲ್ಲ ಬುಲ್ಡೋಜರ್‌ ಏರಿ ಮದುವೆ ಮಂಟಪಕ್ಕೆ ಬಂದ ಮದುಮಗ

By Anusha Kb  |  First Published Jun 24, 2022, 1:33 PM IST

ಮದುವೆಗೆ ಕುದುರೆ, ಕಾರು, ಹೆಲಿಕಾಪ್ಟರ್‌ನಲ್ಲಿ ಬಂದು ಇಳಿಯುವುದು ಸಾಮಾನ್ಯ. ಆದರೆ ಮಧ್ಯಪ್ರದೇಶದಲ್ಲಿ ಯುವಕನೋರ್ವ ತನ್ನ ಮದುವೆಗೆ ಬುಲ್ಡೋಜರ್‌ನಲ್ಲಿ ಬಂದು ತಲುಪಿದ್ದಾನೆ. 


ಭೋಪಾಲ್‌: ಮದುವೆಗೆ ಕುದುರೆ, ಕಾರು, ಹೆಲಿಕಾಪ್ಟರ್‌ನಲ್ಲಿ ಬಂದು ಇಳಿಯುವುದು ಸಾಮಾನ್ಯ. ಆದರೆ ಮಧ್ಯಪ್ರದೇಶದಲ್ಲಿ ಯುವಕನೋರ್ವ ತನ್ನ ಮದುವೆಗೆ ಬುಲ್ಡೋಜರ್‌ನಲ್ಲಿ ಬಂದು ತಲುಪಿದ್ದಾನೆ. ಬುಲ್ಡೋಜರ್‌ ಅನ್ನು ಮದುವಣಗಿತ್ತಿಯಂತೆ ಚೆನ್ನಾಗಿ ಅಲಂಕರಿಸಿ ಅದರ ಮೇಲೆ ಕುಳಿತು ಮದುವೆ ಮನೆಗೆ ಮದುಮಗ ಬಂದು ತಲುಪಿದ್ದಾನೆ. ಯುವಕ ಬುಲ್ಡೋಜರ್‌ನಲ್ಲಿ ಮದುವೆ ಮಂಟಪಕ್ಕೆ ಆಗಮಿಸುತ್ತಿರುವ ವಿಡಿಯೋ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಧ್ಯಪ್ರದೇಶದ ಝಲ್ಲಾರ ಗ್ರಾಮದಲ್ಲಿ ಈ ಘಟನೆ ನಡೆದಿದೆ. 

ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ವಧುವರರು ತಮ್ಮ ಮದುವೆಯನ್ನು ತುಂಬಾ ವಿಭಿನ್ನವಾಗಿ ನಡೆಸಲು ಬಯಸುತ್ತಾರೆ. ಹೀಗಾಗಿ ಮದುವೆ ದಿನ ಮದುವೆ ಮಂಟಪಕ್ಕೆ ಬರಲು ವಿಭಿನ್ನ ಮಾರ್ಗಗಳನ್ನು ಅನುಸರಿಸುತ್ತಾರೆ. ಮದುವೆಗೆ ವಧುವರರು ಬುಲೆಟ್‌ ಏರಿ ಕುದುರೆ ಏರಿ ಹೆಲಿಕಾಪ್ಟರ್ ಮೂಲಕ ಬರುವುದು ಟ್ರೆಂಡ್ ಆಗಿದೆ. ಇದರ ಜೊತೆಗೆ ಕೆಲವರು ಸಿನಿಮಾ ಸ್ಟೈಲ್‌ನಂತೆ ನೃತ್ಯ ಮಾಡುತ್ತಾ ಆಗಮಿಸುತ್ತಾರೆ. ಆದರೆ ಬುಲ್ಡೋಜರ್ ಏರಿ ಬರುವುದು ತೀರಾ ವಿರಳ. ಆದಾಗ್ಯೂ ಮಧ್ಯಪ್ರದೇಶದ ಯುವಕ ಹೊಸ ಸಾಹಸ ಮಾಡಿದ್ದಾನೆ. ಬುಲ್ಡೋಜರ್ ಏರಿ ಮದ್ವೆ ಮಂಟಪಕ್ಕೆ ಬಂದಿದ್ದಾನೆ. 

मध्यप्रदेश के बैतूल में बुलडोजर पर सवार होकर निकला दूल्हा, वीडियो सोशल मीडिया पर वायरल pic.twitter.com/mjBCd8Sh7L

— The Fact Factory. (@FactTheFactory)

मध्य प्रदेश के बैतूल में एक शादी चर्चा का विषय बनी हुई है. जहां पर सिविल इंजीनियर दूल्हा घोड़ी पर नहीं बुलडोजर पर बैठकर आया 😃😁 pic.twitter.com/9RmBuRXGcA

— शिवसैनिक एकनाथ सिंदे 🚩🚩 (@VVSingh4BJP)

Tap to resize

Latest Videos

 

ಮಧ್ಯಪ್ರದೇಶದ ಬೇತುಲ್‌ ಜಿಲ್ಲೆಯ (Betul district) ಝಲ್ಲಾರ ಗ್ರಾಮದ (Jhallar village) ಭೈಂಸೆದೆಹಿ ತೆಹ್ಸಿಲ್‌ನಲ್ಲಿ (Bhainsdehi tehsil) ಈ ಘಟನೆ ನಡೆದಿದೆ. ಮದುಮಗ ಅಂಕುಶ್‌ ಜೈಸ್ವಾಲ್‌ (Ankush Jaiswal) ಕುದುರೆ, ಕಾರ್‌ ಬದಲಾಗಿ ಬುಲ್ಡೋಜರ್‌ ಮೇಲೆ ಮದುವೆ ಮಂಟಪಕ್ಕೆ ಬಂದಿರುವ ಫೋಟೊ ವೈರಲ್‌ ಆಗಿದೆ. ಅಲಂಕರಿಸಿದ ಬುಲ್ಡೋಜರ್‌ ಬಕೆಟ್‌ ಮೇಲೆ ಕುಳಿತು ಗೆಳೆಯರ ಜೊತೆ ಮದುವೆ ಮಂಟಪಕ್ಕೆ ಬಂದಿದ್ದಾರೆ. ಅಂಕುಶ್‌ ಜೈಸ್ವಾಲ್‌ ವೃತ್ತಿಯಿಂದ ಸಿವಿಲ್‌ ಎಂಜಿನಿಯರ್‌ ಆಗಿದ್ದು,  ಕಟ್ಟಡ ಕಾಮಗಾರಿಗೆ ಬಳಸುವ ಬುಲ್ಡೋಜರ್‌, ಮಷಿನ್‌ಗಳು ಅವರ ಕೆಲಸದ ಭಾಗವಾಗಿವೆ. ಹೀಗಾಗಿ ಮದುವೆ ದಿಬ್ಬಣಕ್ಕೆ ವಿಶೇಷವಾಗಿ ಎಂಟ್ರಿಯಾಗಿದ್ದಾರೆ.

ಯೋಗಿ ಬಳಿಕ ಬ್ರಿಟನ್ ಪ್ರಧಾನಿಯಿಂದಲೂ ಬುಲ್ಡೋಜರ್ ಪಾಲಿಟಿಕ್ಸ್‌

ನನ್ನ ಮದುವೆಯನ್ನು ಸ್ಮರಣೀಯವಾಗಿಸುವ ಸಲುವಾಗಿ ನಾನು ಈ ರೀತಿ ಮದುವೆ ಮನೆಗೆ ಬರಲು ನಿರ್ಧರಿಸಿದೆ. ಬುಲ್ಡೋಜರ್‌ನ ಲೋಡರ್ ಬಕೆಟ್‌ನ್ನು ಮದುವೆ ಸಮಾರಂಭಕ್ಕೆ ತಕ್ಕಂತೆ ಅಲಂಕರಿಸಲಾಗಿತ್ತು. ನಾನು ಮದುವೆ (wedding) ಮೆರವಣಿಗೆ ವೇಳೆ ಬುಲ್ಡೋಜರ್‌ನಲ್ಲಿ (bulldozer) ಆರಾಮದಾಯಕವಾಗಿ ಕುಳಿತಿದೆ ಎಂದು ಹೇಳಿದರು. 

ಮುಗ್ಧರನ್ನ ಮುಟ್ಟಲ್ಲ..ದುಷ್ಟರನ್ನ ಬಿಡಲ್ಲ, ಗಲಭೆಕೋರರ ಮನೆಗೇ ನುಗ್ಗಿತು ಯೋಗಿ ಬುಲ್ಡೋಜರ್..!
ಪ್ರಸ್ತುತ ದೇಶದಲ್ಲಿ ಬುಲ್ಡೋಜರ್ ಕೆಲವರ ಪಾಲಿಗೆ ಹೆಮ್ಮೆ ಎನಿಸಿದರೆ ಮತ್ತೆ ಕೆಲವರ ಪಾಲಿಗೆ ಕಣ್ಣೀರು ಸುರಿಸುವಂತೆ ಮಾಡಿದೆ. ಹಿಂಸಾಚಾರದಲ್ಲಿ ಭಾಗಿಯಾದವರಿಗೆ ಸೇರಿದ ಹಲವು ಅಕ್ರಮ ಕಟ್ಟಡಗಳು ನೆಲಕ್ಕುರುಳಿವೆ. ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾದ ಪಾತಕಿಗಳ ಮನೆಗಳನ್ನು ನೆಲಸಮಗೊಳಿದೆ. ಈ ಮೂಲಕ ಅಲ್ಲಿ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗುವ ಮೊದಲು ಯುವ ಸಮುದಾಯಕ್ಕೆ ಮತ್ತೊಮ್ಮೆ ಯೋಚಿಸಿ ಎಂಬಂತೆ ಕರೆಗಂಟೆ ನೀಡುವಂತಿವೆ ಈ ಬುಲ್ಡೋಜರ್‌ಗಳು. 

click me!