Parent Love : 17ನೇ ವರ್ಷಕ್ಕೇ ಲವ್ವಲ್ಲಿ ಬಿದ್ದ ಬಾಲೆ, ಏನ್ಮಾಡ್ಲಿ ಅಂತ ತಲೆ ಬಿಸಿಯಂತೆ!

By Suvarna NewsFirst Published Jun 24, 2022, 10:42 AM IST
Highlights

ಮಕ್ಕಳು ಅತ್ಯುತ್ತಮ ಜೀವನ ನಡೆಸಲಿ ಎಂದು ಪಾಲಕರು ಬಯಸ್ತಾರೆ. ಇದೇ ಕಾರಣಕ್ಕೆ ಮಕ್ಕಳಿಗೊಂದಿಷ್ಟು ನಿಯಮ ಹಾಕ್ತಾರೆ. ಆದ್ರೆ ಪಾಲಕರ ಕಣ್ಣು ತಪ್ಪಿಸಿ ಅಡ್ಡದಾರಿ ಹಿಡಿಯುವ ಮಕ್ಕಳು ಮಧ್ಯ ದಾರಿಯಲ್ಲಿ ಎಡವಿ ಬೀಳ್ತಾರೆ. ಪಾಲಕರು, ಹುಡುಗ್ರ ಜೊತೆ ಮಾತನಾಡಲು ಬಿಡ್ತಿಲ್ಲ ಎಂದು ದೂರುತ್ತಿರುವ ಹುಡುಗಿ ಚಿಕ್ಕ ವಯಸ್ಸಲ್ಲೇ ಪ್ರೀತಿ ಬಲೆಗೆ ಬಿದ್ದಿದ್ದಾಳೆ. 
 

ಪ್ರೀತಿ (Love) ಗೆ ವಯಸ್ಸಿ(Age) ನ ಗಡಿಯಿಲ್ಲ. ಪ್ರಾಥಮಿಕ ಶಾಲೆಗೆ ಹೋಗುವ ಮಕ್ಕಳೂ ಪ್ರೀತಿ – ಪ್ರೇಮದ ಹೆಸರು ಹೇಳ್ತಿದ್ದಾರೆ. ಸಾಮಾಜಿಕ ಜಾಲತಾಣ, ಸಿನಿಮಾ (Cinema), ಟಿವಿ (TV) ಗಳ ಪ್ರಭಾವಕ್ಕೆ ಒಳಗಾದ ಮಕ್ಕಳು (Children), ಯಾವುದು ಪ್ರೀತಿ ಎಂಬುದನ್ನು ಅರಿಯುವ ಮೊದಲೇ ಜೀವನ ಹಾಳು ಮಾಡಿಕೊಳ್ತಿದ್ದಾರೆ. ಈ ಹುಡುಗಿ ಕೂಡ ಪ್ರೀತಿ ಎಂಬ ತೊಳಲಾಟದಲ್ಲಿ ಬಿದ್ದಿದ್ದಾಳೆ. ಇನ್ನೂ ಪಿಯುಸಿ ಓದುತ್ತಿರುವ ಹುಡುಗಿಗೆ ಅಪ್ಪ- ಅಮ್ಮ ಹಾಗೂ ಪ್ರೀತಿ ಮಧ್ಯೆ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ಗೊಂದಲ ಶುರುವಾಗಿದೆಯಂತೆ.

ಪಿಯುಸಿ ಹುಡುಗಿಯ ಪ್ರೇಮ ಕಥೆ : ಆಕೆಗೆ ಇನ್ನೂ 17 ವರ್ಷ. ಪಿಯುಸಿ ಓದುತ್ತಿದ್ದಾಳೆ. ಓದಿನಲ್ಲಿ ಸದಾ ಮುಂದಿರುವ ಹುಡುಗಿ ಅವಳು. ಇದೇ ಕಾರಣಕ್ಕೆ ಅಪ್ಪ – ಅಮ್ಮನಿಗೆ ಮಗಳನ್ನು ಕಂಡ್ರೆ ಸ್ವಲ್ಪ ಹೆಚ್ಚಿಗೆ ಪ್ರೀತಿ, ಗೌರವ. ಮಗಳನ್ನು ಒಳ್ಳೆ ಸ್ಥಾನದಲ್ಲಿ ನೋಡಬೇಕೆಂಬ ಆಸೆ ಅವರದ್ದು. ಮಗಳಿಗೆ ಐಎಎಸ್ ಮಾಡಿಸುವ ಆಸೆಯನ್ನು ಅವರು ಹೊಂದಿದ್ದಾರೆ. ಮಗಳಿಗೂ ಓದಿನಲ್ಲಿ ಆಸಕ್ತಿ ಹೆಚ್ಚಿದೆ. ಸಾಧಿಸುವ ಛಲವಿದೆ. ಆದ್ರೆ ಇದ್ರ ಮಧ್ಯೆ ಆಕೆಗೆ ಪ್ರೀತಿ ಹುಟ್ಕೊಂಡಿದೆ. ಇಂಜಿನಿಯರಿಂಗ್ ಮುಗಿಸಿರುವ ಹುಡುಗನನ್ನು ಈಕೆ ಪ್ರೀತಿಸ್ತಿದ್ದಾಳೆ. ಆತ ಓದಿನಲ್ಲಿ ಮುಂದಿಲ್ಲ. ಇಂಜಿನಿಯರಿಂಗ್ ಮುಗಿದಿದ್ದು, ಕೆಲಸದ ಹುಡುಕಾಟದಲ್ಲಿದ್ದಾನೆ. ಮುಂದೊಂದು ದಿನ ನಾನೂ ಉನ್ನತ ಸ್ಥಾನದಲ್ಲಿ ಇರ್ತೇನೆಂದು ಭರವಸೆ ನೀಡಿದ್ದಾನೆ. ಆತನನ್ನು ಈಕೆ ಸಂಪೂರ್ಣವಾಗಿ ನಂಬ್ತಾಳಂತೆ. ಆತ ಸಾಧಿಸಬಲ್ಲ, ಹಣಗಳಿಸಬಲ್ಲ ಎಂಬ ಭರವಸೆ ನನಗಿದೆ ಎನ್ನುತ್ತಾಳೆ ಹುಡುಗಿ. ಆದ್ರೆ ಪಾಲಕರಿಗೆ ಹೆಚ್ಚು ಸಂಬಳ ತರುವ ವ್ಯಕ್ತಿಗಿಂತ ಉನ್ನತ ಹುದ್ದೆಯಲ್ಲಿರುವ ಅಳಿಯಬೇಕಂತೆ. ಎಂದಿಗೂ ಈತ ಐಎಎಸ್ ಮಾಡುವುದು ಸಾಧ್ಯವಿಲ್ಲ ಎನ್ನಿಸುತ್ತದೆ. ಹಾಗಿರುವಾಗ ಪಾಲಕರು ಈತನನ್ನು ಒಪ್ಪಿಕೊಳ್ಳೋದಿಲ್ಲ. ನನ್ನ ಹುಡುಗನ ಜೊತೆ ಮದುವೆ ಸಾಧ್ಯವಿಲ್ಲ. ಅನೇಕ ದಿನಗಳಿಂದ ಈ ವಿಷ್ಯ ನನ್ನನ್ನೇ ತಿನ್ನುತ್ತಿದೆ. ನಾನೇನು ಮಾಡ್ಲಿ ಎನ್ನುತ್ತಿದ್ದಾಳೆ ಹುಡುಗಿ. ಹಾಗೆ ಪಾಲಕರು ಯಾವ ಹುಡುಗನ ಜೊತೆಯೂ ಮಾತನಾಡಲು ಕೊಡ್ತಿಲ್ಲ. ಇದು ನನಗೆ ಉಸಿರುಗಟ್ಟಿಸಿದಂತಾಗ್ತಿದೆ ಎನ್ನುತ್ತಾಳೆ ಹುಡುಗಿ.

ವಯಸ್ಸಾದ ಪುರುಷರಿಗೆ ಹೆಣ್ಮಕ್ಕಳು ಅಟ್ರಾಕ್ಟ್ ಆಗೋದೇಕೆ? ಇದು ಸಮಸ್ಯೆಯೇ?

ತಜ್ಞರ ಸಲಹೆ : ವಿದ್ಯಾರ್ಥಿನಿ ಸಮಸ್ಯೆಗೆ ತಜ್ಞರು ಪರಿಹಾರ ನೀಡುವ ಪ್ರಯತ್ನ ನಡೆಸಿದ್ದಾರೆ. ಮೊದಲನೇಯದಾಗಿ ಇದು ಮದುವೆ ವಯಸ್ಸಲ್ಲ. ಈಗಿನ್ನೂ 17 ವರ್ಷ. ಈ ಸಮಯದಲ್ಲಿ ವಿದ್ಯಾಭ್ಯಾಸದ ಕಡೆ ಗಮನ ಹರಿಸಬೇಕು. ಉತ್ತಮ ಭವಿಷ್ಯ ರೂಪಿಸಿಕೊಳ್ಳುವ ಕಡೆ ನಿಮ್ಮ ಗುರಿಯಿರಬೇಕು ಎನ್ನುತ್ತಾರೆ ತಜ್ಞರು.

ಸಮಸ್ಯೆಗೆ ಪರಿಹಾರ : ಮೊದಲು ನಿಮ್ಮ ಪ್ರೇಮಿ ಜೊತೆ ಕುಳಿತು ಮಾತನಾಡಿ. ಆತನಿಗೆ ನಿಮ್ಮ ಪಾಲಕರ ವಿಷ್ಯವನ್ನು ತಿಳಿಸಿ. ಒಳ್ಳೆಯ ಭವಿಷ್ಯ ರೂಪಿಸಿಕೊಳ್ಳುವಂತೆ ಸಲಹೆ ನೀಡಿ. ಇಬ್ಬರೂ ನಿಮ್ಮ ಗುರಿ ತಲುಪಿದ ಮೇಲೆ ಮದುವೆ ವಿಷ್ಯ ಮಾತನಾಡಬಹುದು. ನೀವೊಂದು ಒಳ್ಳೆ ಸ್ಥಾನದಲ್ಲಿದ್ದರೆ ಪಾಲಕರು ನಿಮ್ಮ ಪ್ರೀತಿಯನ್ನು ಒಪ್ಪಬಹುದು. ಇಬ್ಬರಿಗೂ ಮದುವೆ ವಯಸ್ಸಾಗಿಲ್ಲ. ಅಲ್ಲದೆ ಈ ಚಿಕ್ಕ ವಯಸ್ಸಿನಲ್ಲಿ ಮದುವೆ ಬಗ್ಗೆ ಯೋಚಿಸುವ ಹಾಗೂ ನಿರ್ಣಯ ತೆಗೆದುಕೊಳ್ಳಲು ನಿಮಗೆ ಸಾಧ್ಯವಿಲ್ಲ. ಓದು ಮುಗಿದು ಒಂದು ಕೆಲಸ ಸಿಕ್ಕ ಮೇಲೆಯೂ ಆತನ ಮೇಲೆ ಇಷ್ಟೇ ಪ್ರೀತಿಯಿದ್ದರೆ ಪಾಲಕರ ಜೊತೆ ಮಾತನಾಡಬಹುದು. ಪಾಲಕರು ಎಂದಿಗೂ ಕೆಟ್ಟದ್ದನ್ನು ಬಯಸುವುದಿಲ್ಲ. ಮಕ್ಕಳ ಉತ್ತಮ ಭವಿಷ್ಯ ಅವರಿಗೆ ಮುಖ್ಯವಾಗಿರುತ್ತದೆ. ಹಾಗಾಗಿ ಅನವಶ್ಯಕ ಆಲೋಚನೆ ಮೂಲಕ ಸಮಯ ಹಾಳು ಮಾಡುವ ಬದಲು ಓದಿನ ಬಗ್ಗೆ ಗಮನ ನೀಡಿ ಎಂದು ತಜ್ಞರು ಸಲಹೆ ನೀಡಿದ್ದಾರೆ. ಹಾಗೆಯೇ ಪ್ರೀತಿ, ಪ್ರೀತಿಸುವ ವ್ಯಕ್ತಿಯಿಂದ ಸ್ವಲ್ಪ ದೂರವಿರಿ. ಆತನಿಗೂ ಭವಿಷ್ಯ ಕಟ್ಟಿಕೊಳ್ಳಲು ಸಲಹೆ ನೀಡಿ ಎನ್ನುತ್ತಾರೆ ತಜ್ಞರು. ಯಾವುದೇ ಕಾರಣಕ್ಕೂ ದುಡುಕಿ ನಿರ್ಧಾರ (Decision) ತೆಗೆದುಕೊಳ್ಳಬೇಡಿ. ಹಾಗೆಯೇ ಒತ್ತಾಯಕ್ಕೆ ಮಣಿಯಬೇಡಿ ಎಂದಿದ್ದಾರೆ ತಜ್ಞರು.  

Adventurous Sexನಿಂದ ದಾಂಪತ್ಯ ರೊಮ್ಯಾಂಟಿಕ್ ಆಗಿರುತ್ತೆ!

click me!