ಮಕ್ಕಳಿಗೆ ದಾರಿ ತೋರಬೇಕಾದ ಶಿಕ್ಷಕಿಯೇ ದಾರಿ ತಪ್ಪಿದಳು: ಗೆಳೆಯನ ಜೊತೆ ಸೇರಿ ಗಂಡನ ಮುಗಿಸಿದ ಸರ್ಕಾರಿ ಶಾಲೆ ಟೀಚರ್

Published : Mar 24, 2026, 11:16 AM IST
teacher wife killed husband with help of boyfriend

ಸಾರಾಂಶ

wife kills husband in rajasthan: ಮಕ್ಕಳಿಗೆ ದಾರಿದೀಪವಾಗಬೇಕಿದ್ದ ಶಿಕ್ಷಕಿಯೇ ಇಲ್ಲಿ ದಾರಿತಪ್ಪಿದ್ದಾಳೆ. ದಾಂಪತ್ಯ ಕಲಹದ ಹಿನ್ನೆಲೆಯಲ್ಲಿ ಸರ್ಕಾರಿ ಶಾಲಾ ಶಿಕ್ಷಕಿಯೊಬ್ಬಳು ತನ್ನ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ. ಈಕೆಗೆ ಮೂರು ವರ್ಷಗಳ ಹಿಂದೆ ಮದುವೆಯಾಗಿತ್ತು

ಸರ್ಕಾರಿ ಶಾಲೆ ಶಿಕ್ಷಕಿಯಿಂದ ಗಂಡನ ಕೊಲೆ

ಜೈಸಲ್ಮೇರ್‌: ಇತ್ತೀಚೆಗೆ ದಾಂಪತ್ಯ ಕಲಹದಿಂದಾಗಿ ಗಂಡ ಹೆಂಡತಿಯನ್ನು ಹೆಂಡತಿ ಗಂಡನನ್ನು ಕೊಲೆ ಮಾಡುವ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿವೆ. ಪ್ರತಿದಿನವೂ ಒಂದಲ್ಲ ಒಂದು ಕಡೆ ಇಂತಹ ಕೊಲೆ ಪ್ರಕರಣಗಳು ವರದಿಯಾಗುತ್ತಲೇ ಇವೆ. ಅದೇ ರೀತಿ ಈಗ ರಾಜಸ್ಥಾನದಲ್ಲಿ ಪತ್ನಿಯೊಬ್ಬಳು ಕೌಟುಂಬಿಕ ಕಲಹದ ನಂತರ ತನ್ನ ಪ್ರಿಯಕರನೊಂದಿಗೆ ಸೇರಿ ಗಂಡನನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ. ರಾಜಸ್ಥಾನದ ಬಲೋತ್ರಾ ಜಿಲ್ಲೆಯ ಖಾರಪರ್ ಗ್ರಾಮದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಹಾಸಿಗೆ ಮೇಲೆ ಮನೆ ಮಗ ಶವವಾಗಿ ಪತ್ತೆಯಾದ ನಂತರ ಮೃತನ ಸೋದರ ನೀಡಿದ ದೂರಿನ ಮೇರೆಗೆ ತನಿಖೆ ನಡೆಸಿದ ಪೊಲೀಸರು ಈಗ ಆರೋಪಿ ಪತ್ನಿ 23 ವರ್ಷದ ಅನುದೇವಿ ಹಾಗೂ ಆಕೆಯ ಪ್ರಿಯಕರ ಅಮ್ರಾರಾಮ್ ಎಂಬಾತನನ್ನು ಬಂಧಿಸಿದ್ದಾರೆ. ಕೊಲೆಯಾದ ವ್ಯಕ್ತಿಯನ್ನು 21 ವರ್ಷದ ಮಹೇಂದ್ರ ಮೇಘವಾಲ್ ಎಂದು ಗುರುತಿಸಲಾಗಿದೆ.

ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದ ಅನುದೇವಿ ಹಾಗೂ ಮಹೇಂದ್ರ:

ಮೂರು ವರ್ಷಗಳ ಹಿಂದೆ ಅನುದೇವಿ ಹಾಗೂ ಮಹೇಂದ್ರ ಮೇಘವಾಲ್ ಮದುವೆ ನಡೆದಿತ್ತು. ಆದರೆ ಅವರ ದಾಂಪತ್ಯ ಚೆನ್ನಾಗಿರಲಿಲ್ಲ, ಗಂಡ ಹೆಂಡತಿ ಮಧ್ಯೆ ಆಗಾಗ ಕೌಟುಂಬಿಕ ಕಲಹಗಳು ನಡೆಯುತ್ತಲೇ ಇದ್ದವು. ಹೀಗಾಗಿ ವೃತ್ತಿಯಲ್ಲಿ ಸರ್ಕಾರಿ ಶಾಲೆ ಶಿಕ್ಷಕಿಯೂ ಆಗಿದ್ದ ಅನುದೇವಿ ಗಂಡನ ಮನೆಯನ್ನು ಬಿಟ್ಟು ತಾಯಿ ಮನೆಯಲ್ಲಿ ವಾಸ ಮಾಡ್ತಿದ್ದಳು. ಆದರೆ ಕೆಲವು ಸಮಯದ ಹಿಂದಷ್ಟೇ ಆಕೆ ಮತ್ತೆ ಗಂಡನ ಮನೆಗೆ ಬಂದಿದ್ದಳು. ಈ ವೇಳೆ ಮತ್ತೆ ಗಂಡ ಹೆಂಡತಿ ಮಧ್ಯೆ ಗಲಾಟೆ ನಡೆದಿದೆ. ಗಲಾಟೆಯ ನಂತರ ಅನುದೇವಿ ತನ್ನ ಗೆಳೆಯನನ್ನು ಮನೆಗೆ ಕರೆಸಿ ಇಬ್ಬರು ಸೇರಿ ಪತಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಕೊಲೆ ಮಾಡಿದ ಅನುದೇವಿ ಚಿಡಿಯಾ ಪ್ರದೇಶದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಳು.. ಇತ್ತ ಗಿಡಾ ಪೊಲೀಸ್ ಠಾಣೆ ವ್ಯಾಪ್ತಿಯ ಮಾಲ್ವಾ ಗೋಯ್ಲಾನ್‌ನಲ್ಲಿ ಆಕೆಯ ಗಂಡನ ಮನೆ ಇತ್ತು.

ತವರು ಮನೆ ಸೇರಿದಾಕೆಗೆ ಊರಿನವನೊಂದಿಗೆ ಸಲುಗೆ

ಗಂಡ ಹೆಂಡತಿ ನಡುವಿನ ಜಗಳದ ನಂತರ ತವರು ಮನೆ ಸೇರಿದ್ದ ಅನುದೇವಿಗೆ ಇತ್ತೀಚೆಗೆ ತನ್ನ ಊರಿನವನೇ ಆದ ಅಮ್ರಾರಾಮ್‌ ಜೊತೆ ಸಲುಗೆ ಬೆಳೆದಿತ್ತು. ಶುಕ್ರವಾರ ರಾತ್ರಿ ದಂಪತಿ ನಡುವೆ ಜಗಳ ನಡೆದಿತ್ತು ಎಂದು ಮಹೇಂದ್ರ ಅವರ ಕುಟುಂಬದವರು ತಿಳಿಸಿದ್ದಾರೆ. ಮಹೇಂದ್ರ ಬಹಳ ಸಮಯದಿಂದ ತನ್ನ ಕೋಣೆಯಿಂದ ಹೊರಗೆ ಬಾರದೇ ಇದ್ದಾಗ, ಸಂಬಂಧಿಕರು ಅನುಮಾನಗೊಂಡು ಕೋಣೆಗೆ ಪ್ರವೇಶಿಸಿದ್ದಾರೆ ಈ ವೇಳೆ ಅವರ ಕುತ್ತಿಗೆಯ ಮೇಲೆ ಗಾಯದ ಗುರುತುಗಳು ಕಂಡು ಬಂದಿದ್ದು, ಆತ ಶವವಾಗಿರುವುದು ಗಮನಕ್ಕೆ ಬಂದಿದೆ. ಬಳಿಕ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿ: ಯುವಕರ ಪಾಲಿಗೆ ಮೃತ್ಯಪಾಶವಾಯ್ತು ಕೇಬಲ್ ವೈರ್: ಇಬ್ಬರು ಬೈಕ್ ಸವಾರರು ಸಾವು

ಗಿಡಾ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸಿಎಚ್‌ಸಿ ಶವಾಗಾರಕ್ಕೆ ಕಳುಹಿಸಿದ್ದು, ಪರೀಕ್ಷೆಯ ನಂತರ ಶವವನ್ನುಕುಟುಂಬಕ್ಕೆ ಹಸ್ತಾಂತರಿಸಿದ್ದಾರೆ. ನಂತರ ಮಹೇಂದ್ರನ ಸಹೋದರ ನೀಡಿದ ದೂರಿನ ಮೇರೆಗೆ ಪೊಲೀಸರು ಅನುದೇವಿ ಹಾಗೂ ಅಮ್ರಾರಾಮ್ ನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ತಾವಿಬ್ಬರು ಸೇರಿ ಮಹೇಂದ್ರನನ್ನು ಕತ್ತು ಹಿಸುಕಿ ಕೊಂದಿದ್ದಾಗಿ ಒಪ್ಪಿಕೊಂಡಿದ್ದಾರೆ ನಂತರ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಸ್ಟೇಷನ್ ಹೌಸ್ ಆಫೀಸರ್ ದಲ್ಪತ್ಸಿಂಗ್ ಚೌಧರಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಜೊತೆಗೆ ಸೆಲ್ಫಿ ತಗೊಂಡು ವೋಟ್ ಹಾಕಲ್ಲ ಎಂದ ಯುವಕನಿಗೆ ಮೆಲೋನಿ ಕೊಟ್ಟ ಉತ್ತರಕ್ಕೆ ನೆಟ್ಟಿಗರು ಫಿದಾ!

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

20 ವರ್ಷ ಗೊತ್ತೇ ಆಗ್ಲಿಲ್ಲ ಗಂಡನ ಸೀಕ್ರೆಟ್! ಸತ್ಯ ಬಯಲಾಗ್ತಿದ್ದಂತೆ ಸೋಡಾಚೀಟಿ ಕೊಟ್ಟ ಪತ್ನಿ
ಗಂಡ ಫಸ್ಟ್​ ನೈಟ್​ಗೆ ಒಪ್ತಿಲ್ಲ: ಪೊಲೀಸರಲ್ಲಿ ಶಾಕಿಂಗ್​ ವಿಷ್ಯ ರಿವೀಲ್​ ಮಾಡಿದ ಬೆಂಗಳೂರಿನ ಯುವತಿ