
ಮೊದಲ ಪ್ರೀತಿ, ಭೂಮಿಯ ಮೇಲೆ ಮೊದಲ ಹನಿ ಬಿದ್ದಷ್ಟೆ ಮಧುರವಾಗಿರುತ್ತದೆ. ಅದ್ರ ಘಮ ಜೀವನ ಪರ್ಯಂತ ಇರುತ್ತದೆ. ಮೊದಲ ಬಾರಿ ಪ್ರೀತಿಸಿದ ವ್ಯಕ್ತಿಯನ್ನು ಸುಲಭವಾಗಿ ಮರೆಯಲು ಸಾಧ್ಯವೇ ಇಲ್ಲ. ಅವರ ನಂತ್ರ ಎಷ್ಟೋ ಜನ ಬಂದು ಹೋಗಿದ್ರೂ, ಎಷ್ಟೋ ಘಟನೆಗಳು ನಡೆದಿದ್ದರೂ ಮೊದಲು ಪ್ರೀತಿಸಿದ ವ್ಯಕ್ತಿ ಹಾಗೂ ಆ ಕ್ಷಣಗಳು ಸದಾ ನೆನಪಿನಲ್ಲಿರುತ್ತವೆ. ಅದೆಷ್ಟೋ ವರ್ಷಗಳ ನಂತ್ರ ಆ ವ್ಯಕ್ತಿ ಮತ್ತೆ ಸಿಕ್ಕಾದ ಸಂತೋಷ ತಡೆಯಲು ಸಾಧ್ಯವಿಲ್ಲ. ಅದೇ ವ್ಯಕ್ತಿ ನೊಂದ ಬಾಳಿಗೆ ಬೆಳಕು ತಂದ್ರೆ ಸ್ವರ್ಗಕ್ಕೆ ಮೂರೇ ಗೇಣು ಎನ್ನುವಂತಾಗುತ್ತದೆ. ಈ ಮಹಿಳೆ ಬಾಳಲ್ಲೂ ಅದೇ ಆಗಿದೆ. 27 ವರ್ಷಗಳ ನಂತ್ರ ಮತ್ತೆ ಸಿಕ್ಕ ಹಳೆ ಪ್ರೇಮಿ, ಹೊಸ ಜೀವನಕ್ಕೆ ನಾಂದಿಯಾಗಿದ್ದಾನೆ.
ಸಾಮಾಜಿಕ ಜಾಲತಾಣ (Social Media) ದಲ್ಲಿ ಮಹಿಳೆ ತನ್ನ ಜೀವನ (Life) ದ ಘಟನೆಯನ್ನು ಹೇಳಿಕೊಂಡಿದ್ದಾಳೆ.
17ನೇ ವಯಸ್ಸಿನಲ್ಲಿ ಚಿಗುರಿತ್ತು ಪ್ರೀತಿ (Love) : ಸ್ಕೂಲಿಗೆ ಹೋಗುವ ಸಮಯದಲ್ಲಿಯೇ ಹಾಸ್ಟೆಲ್ ಒಂದರಲ್ಲಿ ಆತನ ಭೇಟಿಯಾಗಿತ್ತಂತೆ. ಮೊದಲ ನೋಟದಲ್ಲಿಯೇ ಪ್ರೀತಿಗೆ ಬಿದ್ದಿದ್ದರಂತೆ. ದಿನ ಕಳೆದಂತೆ ಕ್ಯಾಂಪಸ್ ನಲ್ಲಿ ಪ್ರಸಿದ್ಧ ಜೋಡಿಯಾಗಿ ಮಿಂಚಿದ್ದರಂತೆ. ಪ್ರೀತಿ ಎಂದರೇನು ಎಂಬುದು ಸರಿಯಾಗಿ ತಿಳಿಯದ ಸಮಯ ಅದಾಗಿದ್ದರೂ ಆತನ ಜೊತೆ ಅದೇನೋ ವಿಚಿತ್ರ ನಂಟು ಬೆಳೆದಿದ್ದು ಎನ್ನುತ್ತಾಳೆ ಮಹಿಳೆ. ಇಬ್ಬರ ಮಧ್ಯ ಪ್ರೀತಿ ಜೊತೆ ಸ್ನೇಹ ಗಾಢವಾಗಿತ್ತು ಎನ್ನುವ ಆಕೆ ಬ್ರೇಕ್ ಅಪ್ ಗೆ ಮೊದಲು 6 ವರ್ಷ ಇಬ್ಬರು ಒಟ್ಟಿಗಿದ್ದರಂತೆ.
ಮಡದಿಗೆ ಪೀರಿಯೆಡ್ಸಾ ಪ್ರೀತಿಯ ಮಳೆಗರೆಯಿರಿ ಸಾಕು, ಅವಳು ಫುಲ್ ಖುಷ್
ಬ್ರೇಕ್ ಅಪ್ ನಂತ್ರ ಆಗಿದ್ದೇನು ? : ಇಬ್ಬರು ಮುಂದೇನು ಮಾಡ್ಬೇಕು ಎನ್ನುವ ತೀರ್ಮಾನಕ್ಕೆ ಬರುವ ಮೊದಲೇ ಆಕೆಗೆ ಮೊದಲ ಮದುವೆ ನಡೆದಿತ್ತಂತೆ. ತನ್ನ 24ನೇ ವಯಸ್ಸಿನಲ್ಲಿಯೇ ಮದುವೆಯಾದ ಮಹಿಳೆ 25ನೇ ವಯಸ್ಸಿನಲ್ಲಿ ತಾಯಿಯಾದಳಂತೆ. 26ನೇ ವಯಸ್ಸಿನಲ್ಲಿ ವಿಚ್ಛೇದನ ಆಗಿತ್ತಂತೆ. ಮೊದಲ ಪತಿ ನನ್ನನ್ನು ಅರ್ಧ ಮಾಡಿಕೊಳ್ಳಲಿಲ್ಲ. ನಮ್ಮಿಬ್ಬರ ಮಧ್ಯೆ ಸಾಮರಸ್ಯವಿರಲಿಲ್ಲ. ಹಾಗಾಗಿ ವಿಚ್ಛೇದನ ಪಡೆದು ಸಿಂಗಲ್ ಮದರ್ ಆಗಿ ಕಷ್ಟ ಅನುಭವಿಸಬೇಕಾಯ್ತು ಎನ್ನುತ್ತಾಳೆ ಮಹಿಳೆ.
ಎರಡನೇ ಬಾರಿ ಹಳೆ ಬಾಯ್ ಫ್ರೆಂಡ್ ಸಿಕ್ಕಿದ್ದು ಹೇಗೆ? : ಅನೇಕ ವರ್ಷಗಳ ನಂತ್ರ ಆಕೆಯ ಮೊದಲ ಬಾಯ್ ಫ್ರೆಂಡ್ ಕರೆ ಮಾಡಿದ್ದನಂತೆ. ಮತ್ತೆ ಸ್ನೇಹ ಬೆಳೆಸುವಂತೆ ಕೇಳಿದ್ದನಂತೆ. ಮಹಿಳೆಗೆ ಗೆಳೆಯನ ಅವಶ್ಯಕತೆಯಿತ್ತಂತೆ. ಹಾಗಾಗಿ ಖುಷಿಯಿಂದ ಒಪ್ಪಿಕೊಂಡಿದ್ದ ಮಹಿಳೆ, ಸ್ನೇಹ ಮುಂದುವರೆಸಿದ್ದಳಂತೆ. ಈ ಮಧ್ಯೆ ಆಕೆ ಎರಡನೇ ಮದುವೆಯಾದಳಂತೆ.
ಎರಡನೇ ಮದುವೆಯಾಗಿ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ, ಈತನ ಗೆಳೆತನ ಮುಂದುವರೆಸಿದ್ದಳಂತೆ. ಇಬ್ಬರು ಫೋನ್ ನಲ್ಲಿ ಮಾತನಾಡ್ತಿದ್ದರಂತೆ. ಇಷ್ಟರ ಮಧ್ಯೆ ಆಕೆಯ ಬಾಳಲ್ಲಿ ಮತ್ತೊಮ್ಮೆ ಬಿರುಗಾಳಿ ಎದ್ದಿತ್ತಂತೆ. ಎರಡನೇ ಮದುವೆ ಕೂಡ ಮುರಿದು ಬಿದ್ದಿತ್ತಂತೆ. ಈ ಎಲ್ಲ ಸಂದರ್ಭದಲ್ಲಿ ಆಕೆಗೆ ಧೈರ್ಯ ಹೇಳಿದ್ದು ಬಾಯ್ ಫ್ರೆಂಡ್.
ಗೊತ್ತಿರಲಿ ಮೊದಲ ರಾತ್ರಿಯ ರಹಸ್ಯ, ಸುಖಾ ಸುಮ್ಮನೆ ಅಪ್‌ಸೆಟ್ ಆಗೋದು ಬೇಡ!
ಇಬ್ಬರು ಮತ್ತೆ ಒಂದಾಗುವ ಅವಕಾಶ ಸಿಕ್ಕಿತ್ತು ಎನ್ನುತ್ತಾಳೆ ಮಹಿಳೆ. ನಾನು ಹಾಗೂ ಆತ ಇಬ್ಬರು ಪರಸ್ಪರ ಅರ್ಥ ಮಾಡಿಕೊಳ್ಳಲು ಶುರು ಮಾಡಿದ್ದೆವು. ನಮ್ಮಿಬ್ಬರದ್ದು ಪ್ರಬುದ್ಧ ಪ್ರೀತಿಯಾಗಿತ್ತು. ಮಕ್ಕಳು ಚಿಕ್ಕವರಿರುವ ಕಾರಣ ನಾವಿಬ್ಬರು ಎರಡು ವರ್ಷ ಮದುವೆ ಮುಂದೂಡಿದ್ದೆವು ಎನ್ನುತ್ತಾಳೆ ಮಹಿಳೆ. ರೇಡಿಯೋ ಒಂದರಲ್ಲಿ ಕೆಲಸ ಮಾಡ್ತಿದ್ದ ಆಕೆ ಬಾಯ್ ಫ್ರೆಂಡ್ ರೇಡಿಯೋ ಕಾರ್ಯಕ್ರಮದಲ್ಲಿಯೇ ಪ್ರಪೋಸ್ ಮಾಡಿದ್ದನಂತೆ. ಕೊರೊನಾ ಸಂದರ್ಭದಲ್ಲಿ ಎಲ್ಲರ ಮುಂದೆ ಮದುವೆ ಪ್ರಪೋಸಲ್ ಒಪ್ಪಿಕ್ಕೊಂಡಿದ್ದ ಮಹಿಳೆ 2022ರ ಮೇನಲ್ಲಿ ಆತನ ಮದುವೆಯಾದಳಂತೆ. ನಮ್ಮಿಬ್ಬರ ಮಧ್ಯೆ ಬಾಂಡಿಂಗ್ ಚೆನ್ನಾಗಿದೆ. ಇಬ್ಬರು ಅರಿತು ನಡೆಯುತ್ತೇವೆ. ನನ್ನ ಮನೆಗೆ ನಾನು ವಾಪಸ್ ಬಂದ ಅನುಭವವಾಗ್ತಿದೆ ಎನ್ನುತ್ತಾಳೆ ಮಹಿಳೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.