ಮೊದಲ ರಾತ್ರಿ ಎಂದ ತಕ್ಷಣ ಮನಸ್ಸು ಸಿನಿಮಾದಲ್ಲಿ ಕಾಣಿಸುವ ಸುಂದರ ದೃಶ್ಯಗಳನ್ನು ನೆನಪು ಮಾಡಿಕೊಳ್ಳುತ್ತದೆ. ಆದ್ರೆ ಸಿನಿಮಾ ಹಾಗೂ ವಾಸ್ತವಕ್ಕೆ ಅಜಗಜಾಂತರ ವ್ಯತ್ಯಾಸವಿದೆ. ಅಲ್ಲಿ ತೋರಿಸಿದ್ದೆಲ್ಲ ವಾಸ್ತವದಲ್ಲಿ ನಡೆಯೋದಿಲ್ಲ.
ಮದುವೆಯ ಮೊದಲ ರಾತ್ರಿ ಪ್ರತಿಯೊಬ್ಬರಿಗೂ ವಿಶೇಷವಾಗಿರುತ್ತದೆ. ನೀವು ಸಂಗಾತಿ ಬಗ್ಗೆ ಮೊದಲೇ ತಿಳಿದಿದ್ದು ಲವ್ ಮ್ಯಾರೇಜ್ ಮಾಡಿಕೊಳ್ಳಿ ಇಲ್ಲ ಸಂಗಾತಿ ಬಗ್ಗೆ ಸ್ವಲ್ಪವೂ ಅರಿವಿಲ್ಲದ ಅರೇಂಜ್ ಮ್ಯಾರೇಜ್ ಮಾಡಿಕೊಳ್ಳಿ, ಇಲ್ಲಿ ಇದು ಮುಖ್ಯವಾಗುವುದಿಲ್ಲ. ಮೊದಲ ರಾತ್ರಿಗೆ ಪ್ರತಿಯೊಬ್ಬರೂ ಕಾಯ್ತಾರೆ. ಫಸ್ಟ್ ನೈಟ್ ನಲ್ಲಿ ಏನೆಲ್ಲ ಮಾಡ್ಬೇಕು ಎನ್ನುವ ಬಗ್ಗೆ ಮೊದಲೇ ಪ್ಲಾನ್ ಮಾಡಿರ್ತಾರೆ. ಜೀವನ ಪರ್ಯಂತ ನೆನಪಿರುವಂತೆ ಈ ದಿನವನ್ನು ಕಳೆಯಬೇಕು ಎಂದು ಎಲ್ಲರೂ ಬಯಸ್ತಾರೆ.
ಮೊದಲ ರಾತ್ರಿ (Night) ಅವಿಸ್ಮರಣೀಯವಾಗಿರಬೇಕು, ಸಂಗಾತಿ ತನ್ನ ಸೌಂದರ್ಯಕ್ಕೆ ಮನಸೋಲಬೇಕು, ಇಬ್ಬರು ರಾತ್ರಿ ಪೂರ್ತಿ ರೋಮ್ಯಾನ್ಸ್ (Romance) ಮಾಡ್ಬೇಕು ಹೀಗೆ ಅನೇಕಾನೇಕ ಕನಸುಗಳನ್ನು ಮದುವೆಗೆ ಮುನ್ನ ಕಟ್ಟಿರುತ್ತಾರೆ. ಯಾವಾಗ್ಲೂ ಅಂದುಕೊಂಡಿದ್ದೆಲ್ಲ ಆಗಲು ಸಾಧ್ಯವಿಲ್ಲ. ಸಿನಿಮಾದಲ್ಲಿ ತೋರಿಸಿದಂತೆ ಮೊದಲ ರಾತ್ರಿ ಇರೋದಿಲ್ಲ. ನಮ್ಮ ಕನಸು (Dream) ಒಂದೇ ಭಾರಿ ಕುಸಿದು ಬೀಳಬಹುದು. ಹಾಗಾಗಿ ಮದುವೆಗೆ ಮೊದಲೇ ಕೆಲವೊಂದು ವಿಷ್ಯಗಳನ್ನು ತಿಳಿದಿರಬೇಕು. ಮದುವೆಯ ಮೊದಲ ರಾತ್ರಿ ಹೀಗೂ ಆಗಬಹುದು ಎಂಬುದನ್ನು ನೀವು ಮೊದಲೇ ಊಹಿಸಿದ್ರೆ ಒಳ್ಳೆಯದು. ಇದ್ರಿಂದ ನಿರಾಶೆ ಕಡಿಮೆಯಾಗುವ ಜೊತೆಗೆ ಇರುವ ಸಮಯವನ್ನೇ ನೀವು ಎಂಜಾಯ್ ಮಾಡಬಹುದು.
ವಯಸ್ಸಾಗ್ತಾ ಬಂತು ಇನ್ಯಾವಾಗ ಮದ್ವೆ ಆಗೋದು… ಮದುವೆ ಒತ್ತಡದಿಂದ ಹೀಗೆ ಹೊರ ಬನ್ನಿ
ಸುಸ್ತಿನಲ್ಲಿ ಎಲ್ಲವೂ ಮರೆಯೋದು ಸಹಜ : ಮದುವೆಗೆ ಒಂದು ತಿಂಗಳಿಂದ ತಯಾರಿ ನಡೆದಿರುತ್ತದೆ. ಮದುವೆಗೆ ಮೂರ್ನಾಲ್ಕು ದಿನ ಮೊದಲೇ ನಿದ್ರೆ ಸಮಸ್ಯೆ ಶುರುವಾಗುತ್ತೆ. ಅನೇಕ ಪದ್ಧತಿ, ಆಚರಣೆಯಿಂದಾಗಿ ಮದುವೆ ದಿನ ವಧು – ವರ ಇಬ್ಬರೂ ಸುಸ್ತಾಗಿರುತ್ತಾರೆ. ಸಂಗಾತಿ ಜೊತೆ ಸಮಯ ಕಳೆಯಬೇಕೆಂದುಕೊಂಡ್ರೂ ನಿದ್ರೆ ನಿಮ್ಮನ್ನು ಬಿಡೋದಿಲ್ಲ. ವಾಸ್ತವವಾಗಿ ನಿಮಗೆ ಮಾತ್ರವಲ್ಲ ನಿಮ್ಮ ಸಂಗಾತಿಗೂ ನಿದ್ರೆ ಬರ್ತಿರುತ್ತದೆ. ಹಾಗಾಗಿ ಮೊದಲ ರಾತ್ರಿ ನಿದ್ರೆಯಲ್ಲಿ ಹಾಳಾದ್ರೆ ಬೇಸರಪಟ್ಟುಕೊಳ್ಳುವ ಅಗತ್ಯವಿಲ್ಲ. ಇಬ್ಬರು ಒಟ್ಟಿಗೆ ಕಳೆಯಲು ಸಾಕಷ್ಟು ರಾತ್ರಿಗಳಿವೆ ಎಂಬುದನ್ನು ನೆನಪಿಲ್ಲಿಟ್ಟುಕೊಳ್ಳಿ.
ಈ ಭಾವನೆ (Emotions) ನಿಮ್ಮನ್ನು ಕುಗ್ಗಿಬಹುದು : ಮದುವೆಯಲ್ಲಿ ಸುಂದರ ಬಟ್ಟೆ ಧರಿಸಿದ ಮಿಂಚಿದ ಹುಡುಗಿಯ ಹೊಟ್ಟೆಯ ಮೇಲೊಂದು ಕಲೆ ಇರುತ್ತದೆ. ಅದನ್ನು ಪತಿ ಮುಂದೆ ಮುಚ್ಚಿಡಲು ಸಾಧ್ಯವಿಲ್ಲ. ಆತನ ಕಣ್ಣಿಗೆ ಇದು ಬಿದ್ದಾಗ ಆತನ ಪ್ರತಿಕ್ರಿಯೆ ಹೇಗಿರಬಹುದು ಎಂಬ ಆತಂಕ ಅನೇಕ ಹುಡುಗಿಯರನ್ನು ಕಾಡುತ್ತದೆ. ಆದ್ರೆ ಈ ಭಯ ಬಿಡಬೇಕು. ನಿಮ್ಮ ದೇಹದ ಬಗ್ಗೆ ನಿಮಗೆ ಹೆಮ್ಮೆಯಿರಲಿ. ಅಭದ್ರತೆಯಲ್ಲಿ ಶುರುವಾದ ಸಂಬಂಧ ದೀರ್ಘಕಾಲ ಇರುವುದಿಲ್ಲ.
ಸೆಕ್ಸಿ ಡ್ರೆಸ್ (Sexy Dress) : ಮೊದಲ ರಾತ್ರಿ ಎಂದಾಗ ಬಹುತೇಕರು ಸೆಕ್ಸಿ ಡ್ರೆಸ್ ಖರೀದಿ ಮಾಡುವಂತೆ ಸಲಹೆ ನೀಡ್ತಾರೆ. ವಾಸ್ತವವಾಗಿ ಈ ಡ್ರೆಸ್ ಯಾವುದೇ ಪ್ರಯೋಜನಕ್ಕೆ ಬರುವುದಿಲ್ಲ. ಆರಾಮದಾಯಕ ಹಾಗೂ ಸುಂದರವಾಗಿ ಕಾಣುವ ಡ್ರೆಸ್ ಗೆ ಆದ್ಯತೆ ನೀಡಿ. ಮಾರುಕಟ್ಟೆಯಲ್ಲಿ ಸಾಕಷ್ಟು ಬಟ್ಟೆಗಳು ಲಭ್ಯವಿದೆ. ಅದ್ರಲ್ಲಿ ನಿಮಗೆ ಸೂಕ್ತವೆನಿಸುವ ಬಟ್ಟೆ ಖರೀದಿ ಮಾಡಿ. ನೀವು ತೊಟ್ಟ ಡ್ರೆಸ್ ಸೆಕ್ಸಿಯಾಗಿರಬೇಕೆಂದೇನೂ ಇಲ್ಲ.
ಒಂದೇ ಬಾರಿ ಇಬ್ರು ಹುಡುಗ್ರ ಪ್ರೀತಿಗೆ ಬಿದ್ರೆ ಏನಪ್ಪಾ ಮಾಡೋದು?
ಅಪ್ಪಿ ಮಲಗುವುದ್ರಲ್ಲಿದೆ ಸುಖ : ಮೊದಲ ರಾತ್ರಿ ಎನ್ನುವುದು ಸಂಭೋಗಕ್ಕೆ ಸೀಮಿತವಾಗಿಲ್ಲ. ಇಬ್ಬರು ದಣಿದಿರುವ ಕಾರಣ ಮನಸ್ಸು ಅದಕ್ಕೆ ಒಪ್ಪುವುದಿಲ್ಲ. ಹಾಗಾಗಿ ನೀವು ಇರುವ ಸಮಯವನ್ನು, ಸುಸ್ತಾದ ವೇಳೆಯೂ ಒಬ್ಬರಿಗೊಬ್ಬರು ಅಪ್ಪಿ ಮಲಗಬಹುದು. ಇದು ಸಂಭೋಗಕ್ಕಿಂತ ಹೆಚ್ಚಿನ ಸುಖವನ್ನು, ನೆಮ್ಮದಿಯನ್ನು ನಿಮಗೆ ನೀಡುತ್ತದೆ.
ಬ್ಯಾಗ್ ನಲ್ಲಿ ಹತ್ತಿ ಇರಲಿ : ಅರೇ ಮೊದಲ ರಾತ್ರಿ ಹತ್ತಿ ಅಥವಾ ಇಯರ್ ಪ್ಲಗ್ ಏಕೆ ಎಂದು ನೀವು ಪ್ರಶ್ನೆ ಕೇಳಬಹುದು. ಅತಿಯಾಗಿ ಸುಸ್ತಾದ ಕಾರಣ ಸಂಗಾತಿ ನಿದ್ರೆಯಲ್ಲಿ ಗೊರಕೆ ಹೊಡೆಯಬಹುದು. ಅಭ್ಯಾಸವಿಲ್ಲದ ನಿಮಗೆ ಇದ್ರಿಂದ ನಿದ್ರೆ ಹಾಳಾಗುತ್ತದೆ. ಜೊತೆಗೆ ತಲೆನೋವು ಕೂಡ ಬರುವ ಸಾಧ್ಯತೆಯಿರುತ್ತದೆ. ಇಂಥ ಸಂದರ್ಭದಲ್ಲಿ ಇಯರ್ ಪ್ಲಗ್ ಜೊತೆಗಿದ್ರೆ ಯಾವುದೇ ಸಮಸ್ಯೆ ನಿಮ್ಮನ್ನು ಕಾಡುವುದಿಲ್ಲ.