ಮದುವೆ ಅನ್ನೋದು ಸುಂದರವಾದ ಅನುಬಂಧ. ಆದ್ರೆ ಇತ್ತೀಚಿನ ವರ್ಷಗಳಲ್ಲಿ ಮದ್ವೆ ಅನ್ನೋದು ಬಿಸಿನೆಸ್ ಅನ್ನುವಂತಾಗಿಬಿಟ್ಟಿದೆ. ಹುಡುಗಿ ತುಂಬಾ ಸುಂದರವಾಗಿದ್ದರೆ, ಹುಡುಗ ಲಕ್ಷ ಲಕ್ಷ ದುಡಿಯುತ್ತಿದ್ದರೆ ಮಾತ್ರ ಸಂಬಂಧ ಮಾಡುತ್ತಾರೆ. ಆದ್ರೆ ಇದೆಲ್ಲವನ್ನೂ ಮೀರಿ ನಿಜವಾದ ಪ್ರೀತಿ ಇನ್ನೂ ಜೀವಂತವಾಗಿದೆ ಅನ್ನೋದನ್ನು ಇಲ್ಲೊಂದು ಜೋಡಿ ಸಾಬೀತುಪಡಿಸಿದೆ.
ಮದುವೆ (Marriage)ಯೆಂಬುದು ಏಳೇಳು ಜನ್ಮದ ಬಂಧನ ಎಂದು ಹೇಳುತ್ತಾರೆ. ಆದ್ರೆ ಇತ್ತೀಚಿನ ಕೆಲ ವರ್ಷಗಳಿಂದ ಏಳೇಳು ಜನ್ಮ ಬಿಟ್ಟು ಒಂದು ವರ್ಷಗಳ ಕಾಲವೂ ದಾಂಪತ್ಯ ಜೀವನ ಉಳಿಯುತ್ತಿಲ್ಲ. ಮದುವೆ ಎಂಬ ಸುಂದರವಾದ ಸಂಬಂಧವೂ ವ್ಯಾವಹಾರಿಕವಾಗಿದೆ. ಆಸ್ತಿ, ಅಂತಸ್ತು, ಮನೆ, ಜಾಬ್ ಇವೆಲ್ಲಕ್ಕೆ ಮಾತ್ರ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತಿದೆ. ಹುಡುಗಿ (Girl) ಕಪ್ಪಗಿದ್ದರೆ, ಹುಡುಗ ದಪ್ಪಗಿದ್ದರೆ, ಶ್ರೀಮಂತನಲ್ಲದಿದ್ದರೆ ಅಂಥಾ ಪ್ರಪೋಸಲ್ ಯಾರಿಗೂ ಬೇಡ. ಇದೆಲ್ಲದರ ಮಧ್ಯೆ ಅಪ್ಪಟ ಪ್ರೀತಿ (Love) ಕಾಣಸಿಗುವುದು ಅಪರೂಪ. ಹೀಗಿರುವಾಗ ಅಹಮದಾಬಾದ್ನಲ್ಲೊಂದು ಜೋಡಿ ನೈಜ ಪ್ರೀತಿ ಈಗಲೂ ಜೀವಂತವಿದೆ ಅನ್ನೋದನ್ನು ಸಾಬೀತುಪಡಿಸಿದೆ.
ವಧುವನ್ನು ಎತ್ತಿಕೊಂಡೇ ಸಪ್ತಪದಿ ತುಳಿದ ವರ
ವರನೊಬ್ಬ (Bride groom) ದೇಹದ ಸ್ವಾಧೀನ ಕಳೆದುಕೊಂಡ ಹುಡುಗಿಯನ್ನು ಮದುವೆಯಾಗಿದ್ದಾನೆ. ಮೂರು ವರ್ಷಗಳ ಹಿಂದೆ ಮಹಾವೀರ್ ಸಿಂಘ್ ಮತ್ತು ಪಟಾನ್ನ ರೀನ್ಲಾಬಾ ಅವರ ನಿಶ್ಚಿತಾರ್ಥ (Engagement) ನಡೆದಿತ್ತು. ಆದರೆ ರೀನ್ಲಾಬಾ ಅಪಘಾತದಿಂದ ದೇಹದ ಸ್ವಾಧೀನ ಕಳೆದುಕೊಂಡರು. ಅವರ ದೇಹದ (Body) ಕೆಳಭಾಗ ಪಾರ್ಶ್ವವಾಯುವಿಗೆ ತುತ್ತಾಗಿ ಸಂಪೂರ್ಣ ಸ್ವಾಧೀನ ಕಳೆದುಕೊಂಡಿತು. ಹೀಗಿರುವಾಗ ಮಹಾವೀರ್ ಸಿಂಗ್ ಮನೆಯವರು ಮದುವೆಯನ್ನು ನಿರಾಕರಿಸಿದರು. ಆದರೆ ಮಹಾವೀರ್ ಮಾತ್ರ ರೀನ್ಲಾಬಾ ಅವರೊಂದಿಗೇ ಮದುವೆಯಾಗಬೇಕೆಂದು ಹಠ ಹಿಡಿದರು. ಇದೀಗ ಅವರ ಮದುವೆ ಅದ್ಧೂರಿಯಾಗಿ ನಡೆದಿದೆ. ಮದುವೆಯಲ್ಲಿ ವರ, ವಧುವನ್ನು ಎತ್ತಿಕೊಂಡೇ ಸಪ್ತಪದಿ ತುಳಿದಿದ್ದಾನೆ.
ಅವಳಿ ಸಹೋದರಿಯರನ್ನು ಮದುವೆಯಾಗಿದ್ದ ಯುವಕನ ವಿರುದ್ಧ ಕೇಸ್
ಇವರಿಬ್ಬರ ನಿಶ್ಚಿತಾರ್ಥ ಪರಸ್ಪರ ಕುಟುಂಬದ ಒಪ್ಪಿಗೆಯ ಮೇರೆಗೆ ಗುಜರಾತ್ನ ಪಟಾನ್ನಲ್ಲಿ ಮೂರು ವರ್ಷಗಳ ಹಿಂದೆ ನಡೆದಿತ್ತು. ನಿಶ್ವಿತಾರ್ಥದ ನಂತರ ಎರಡೂ ಕುಟುಂಬದ ನಡುವಿನ ಬಾಂಧವ್ಯವೂ ವೃದ್ಧಿಸಿತ್ತು. ಹೀಗಿದ್ದೂ ವರನ ಕಡೆಯವರು ವಧು ಅನಾರೋಗ್ಯಕ್ಕೆ ತುತ್ತಾದಾಗ ಮದುವೆಯನ್ನು ನಡೆಸಲು ಹಿಂಜರಿದರು. ರೀನ್ಲಾಬಾ ಸ್ನೇಹಿತರೊಂದಿಗೆ ಆಟವಾಡುತ್ತಿದ್ಧಾಗ ಅಕಸ್ಮಾತ್ ಆಗಿ ಬಿದ್ದರು. ಆಗ ಬೆನ್ನುಹುರಿಗೆ ತೀವ್ರ ಗಾಯವಾಯಿತು. ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದರೂ ದೇಹದ ಕೆಳಭಾಗ ನಿಷ್ಕ್ರಿಯವಾಗಿಯೇ ಉಳಿಯಿತು.
ಮಹಾವೀರ್ನ ಕುಟುಂಬದವರು ಮದುವೆ ನಿಲ್ಲಿಸುವುದಾಗಿ ಹೇಳಿದಾಗ ರೀನ್ಲಾಬಾನ ಪೋಷಕರು ಚಿಂತೆಗೀಡಾದರು. ಆದರೆ ಮಹಾವೀರ್ ತನ್ನ ಹುಟ್ಟುಹಬ್ಬದ ದಿನ ಅಂದರೆ ಅಕ್ಟೋಬರ್ 31ರಂದು, ತಾನು ಮದುವೆಯಾಗುವುದಾದರೆ ರೀನ್ಲಾಬಾರನ್ನೇ ಎಂದು ಹೇಳಿದನು. ನಂತರ ಡಿಸೆಂಬರ್ 1ರಂದು ತನ್ನ ಕುಟುಂಬದವರ ವಿರೋಧದ ಮಧ್ಯೆಯೇ ಅಹಮದಾಬಾದ್ನಲ್ಲಿ ಮದುವೆಯಾದರು. ರೀನ್ಲಾಬಾರನ್ನು ಎತ್ತಿಕೊಂಡೇ ಮಹಾವೀರ್ ಸಪ್ತಪದಿ ತುಳಿದರು.
11 ಲಕ್ಷ ರೂ. ವರದಕ್ಷಿಣೆಯನ್ನು ವಧುವಿನ ಪೋಷಕರಿಗೇ ಹಿಂತಿರುಗಿಸಿದ ವರ !
ಬೆಳ್ತಂಗಡಿಯಲ್ಲಿ ಕಾಲನ್ನು ಕಳೆದುಕೊಂಡ ಯುವಕನನ್ನು ಮದುವೆಯಾಗಿದ್ದ ಯುವತಿ
ಎರಡು ವರ್ಷಗಳ ಹಿಂದೆ ಮಂಗಳೂರಿನ ಬೆಳ್ತಂಗಡಿಯಲ್ಲೊಬ್ಬ ಯುವತಿ ಹೀಗೆಯೇ ಅಂಗವಿಕಲ ಯುವಕನನ್ನು ಮದುವೆಯಾಗಿ ಎಲ್ಲರಿಗೂ ಮಾದರಿಯಾಗಿದ್ದರು. ಬೆಳ್ತಂಗಡಿಯ ಹುಡುಗಿ ಸಂಜೀವಿನಿ ಅಂಗವಿಕಲ ಹುಡುಗನನ್ನು ವರಿಸಲು ಒಪ್ಪಿದ್ದರು. ಸಂಜೀವಿನಿ ಅವರ ಮಾನವೀಯ ನಡೆಯನ್ನು ಮೆಚ್ಚಿದ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ನಾಯಕರು ತಾವೇ ಮುಂದೆ ನಿಂತು ಅದ್ದೂರಿಯಾಗಿ ಮದುವೆ ನೆರವೇರಿಸಿದ್ದರು. ಬೆಳ್ತಂಗಡಿ ತಾಲೂಕಿನ ಕಾಯರ್ತಡ್ಕ ಬಳಿಯ ಕಳೆಂಜ ಗ್ರಾಮದ ಯುವಕ ಚಂದ್ರಶೇಖರ್ ಅವರಿಗೆ ಕಾರ್ಕಳ ತಾಲೂಕಿನ ಮಾಳ ಗ್ರಾಮದ ಸಂಜೀವಿನಿ ಅವರ ಜೊತೆ ವರ್ಷದ ಹಿಂದೆ ಮದುವೆ ಮಾತುಕತೆ ನಡೆದಿತ್ತು. ಮದುವೆ ಮಾಡಲು ದಿನಾಂಕ ಸಹ ನಿಗದಿಪಡಿಸಲಾಗಿತ್ತು.
ಆದರೆ ಟ್ಯಾಂಕರ್ ಕ್ಲೀನರ್ ಆಗಿದ್ದ ಚಂದ್ರಶೇಖರ್ ಅಂಕೋಲಾದಲ್ಲಿ ನಡೆದ ಅಪಘಾತದಲ್ಲಿ ತೀವ್ರ ಗಾಯಗೊಂಡು ಒಂದು ಕಾಲನ್ನೇ ಕಳೆದುಕೊಂಡಿದ್ದರು. ಇದರಿಂದ ಹುಡುಗಿ ಮನೆಯವರು ಮದುವೆಗೆ ನಿರಾಕರಿಸಿದರೆ, ಇತ್ತ ತೀರಾ ಬಡತನದಲ್ಲಿದ್ದ ಹುಡುಗ ಮತ್ತು ವೃದ್ಧೆ ತಾಯಿ ನೊಂದು ಕೊಂಡಿದ್ದರು. ಆದರೆ ಅಚ್ಚರಿಯೆಂಬಂತೆ ಯುವತಿ ಸಂಜೀವಿನಿ ಮದುವೆಗೆ ಒಪ್ಪಿಗೆ ಸೂಚಿಸಿದ್ದರು. ಹಿಂದೂ ಪರಿಷತ್ ಮತ್ತು ಬಜರಂಗದಳದ ನಾಯಕರು ಸ್ವಾಮೀಜಿಗಳು, ಧಾರ್ಮಿಕ ಮುಖಂಡರನ್ನು ಸೇರಿಸಿ ಸಮಾಜೋತ್ಸವ ರೂಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೂರು ಸಾವಿರಕ್ಕೂ ಹೆಚ್ಚು ಜನರಿಗೆ ಊಟ ಹಾಕಿಸಿದ್ದರು. ಯುವತಿಯ ಈ ದಿಟ್ಟ ನಿರ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಪ್ರಶಂಸೆ ವ್ಯಕ್ತಪಡಿಸಿದ್ದರು.