ಅಪ್ಪನೇ ಬಾಯ್ ಫ್ರೆಂಡ್ ಆದಾಗ, ಹಳೇ ಕಥೆ ನೆನಪಾಯ್ತು ಹುಡುಗಿಗೆ

Published : Apr 07, 2025, 04:30 PM ISTUpdated : Apr 07, 2025, 04:58 PM IST
ಅಪ್ಪನೇ ಬಾಯ್ ಫ್ರೆಂಡ್ ಆದಾಗ, ಹಳೇ ಕಥೆ ನೆನಪಾಯ್ತು ಹುಡುಗಿಗೆ

ಸಾರಾಂಶ

ಹುಡುಗಿಯೊಬ್ಬಳು ಪ್ರೀತಿಯಲ್ಲಿ ಬಿದ್ದು, ತನ್ನ ಗೆಳೆಯನ ಪೋಷಕರನ್ನು ಭೇಟಿಯಾದಾಗ ಆಘಾತಕ್ಕೊಳಗಾಗಿದ್ದಾಳೆ. ಆಕೆಯ ಗೆಳೆಯನ ತಂದೆಯೊಂದಿಗೆ ಈ ಹಿಂದೆ ಆಕೆಗೆ ಸಂಬಂಧವಿತ್ತು. ಇದರಿಂದಾಗಿ ಪ್ರಸ್ತುತ ಸಂಬಂಧವನ್ನು ಮುಂದುವರೆಸುವುದು ಕಷ್ಟಕರವಾಗಿದೆ. ತನ್ನ ಗೆಳೆಯನನ್ನು ಪ್ರೀತಿಸುತ್ತಿದ್ದರೂ, ಆತನ ತಂದೆಯಿಂದಾಗಿ ಸಂಬಂಧವನ್ನು ಮುರಿಯುವ ಪರಿಸ್ಥಿತಿ ಎದುರಾಗಿದೆ. 

ಆಕೆ ಪ್ರೀತಿ (Love)ಯಲ್ಲಿ ಬಿದ್ದಿದ್ದಳು. ಬಾಯ್ ಫ್ರೆಂಡ್ (boyfriend) ಜೊತೆ ಸಂಬಂಧ ಮುಂದುವರೆಸುವ ಆಸೆ ಹೊಂದಿದ್ದಳು. ಇದೇ ಕಾರಣಕ್ಕೆ ಬಾಯ್ ಫ್ರೆಂಡ್ ಪಾಲಕರನ್ನು ಭೇಟಿಯಾಗುವ ನಿರ್ಧಾರಕ್ಕೆ ಬಂದ್ಲು. ತನ್ನ ಪ್ರೇಮಿ ಜೊತೆ ಹತ್ತಿರದ ಬಾರ್ ನಲ್ಲಿ ಪ್ರೇಮಿ ಅಪ್ಪ – ಅಮ್ಮ ಎದುರಾದ್ರು. ಅಪ್ಪನನ್ನು ನೋಡ್ತಿದ್ದಂತೆ ಹುಡುಗಿ ಮುಖ ಬೆವರಿತ್ತು. ಅಲ್ಲಿಂದ ಹೇಗೋ ತಪ್ಪಿಸಿಕೊಂಡು ಬಂದ ಹುಡುಗಿಗೆ ಈಗ ಏನ್ ಮಾಡ್ಬೇಕು ಗೊತ್ತಾಗ್ತಿಲ್ಲ. ಬಾಯ್ ಫ್ರೆಂಡ್ ಮೇಲೆ ಜೀವ ಇಟ್ಟಿದ್ದಾಳೆ. ಆದ್ರೆ ಸಂಬಂಧ ಮುಂದುವರೆಸುವ ಧೈರ್ಯ ಆಕೆಗಿಲ್ಲ. ಕಾರಣ ಆತನ ಅಪ್ಪ. ಇದು ಯಾವ್ದೋ ಸೀರಿಯಲ್ ಕಥೆ ಅಲ್ಲ. ನಿಜ ಜೀವನದಲ್ಲಿ ನಡೆದ ಕಥೆ. ಹುಡುಗಿ ಮುಂದೇನು ಮಾಡ್ಬೇಕು ಅಂತ ಸೋಶಿಯಲ್ ಮೀಡಿಯಾದಲ್ಲಿ ಜನರ ಅಭಿಪ್ರಾಯ ಕೇಳಿದ್ದಾಳೆ.

ಪೋಡ್ ಕಾಸ್ಟ್ (Podcast) ಒಂದರಲ್ಲಿ ಹುಡುಗಿ ತನ್ನ ಕಥೆ ಬರೆದಿದ್ದಾಳೆ. ಡೇಟಿಂಗ್ ಅಪ್ಲಿಕೇಷನ್ ಟಿಂಡರ್ ನಲ್ಲಿ ಹುಡುಗಿಗೆ ಒಬ್ಬ ಹುಡುಗನ ಪರಿಚಯ ಆಗಿತ್ತು. ಕೆಲವೇ ಕೆಲವು ತಿಂಗಳಲ್ಲಿ ಇಬ್ಬರು ಸಾಕಷ್ಟು ಹತ್ತಿರವಾಗಿದ್ದರು. ಸ್ಕಾಟ್ಲ್ಯಾಂಡ್ ನಲ್ಲಿ ನೆಲೆಸಿರುವ ಹುಡುಗಿ, ತನ್ನ ಬಾಯ್ ಫ್ರೆಂಡ್ ಜೊತೆ ವಾಸ ಶುರು ಮಾಡಿದ್ದರು. ಇಬ್ಬರ ಜೀವನ ಖುಷಿಯಿಂದ ಕೂಡಿತ್ತು. ಪರಸ್ಪರ ಇಬ್ಬರೂ ಒಬ್ಬರನ್ನೊಬ್ಬರು ಅರಿತುಕೊಂಡಿದ್ದರು. ಜನರಿಗೆ ಅವರ ಸೋಲ್ ಮೇಟ್ ಸಿಗೋದು ಸುಲಭ ಅಲ್ಲ. ಕೆಲವರಿಗೆ ಇದಕ್ಕೆ ದೀಘ್ರ  ಸಮಯ ಹಿಡಿಯುತ್ತದೆ. ಮತ್ತೆ ಕೆಲವರಿಗೆ ಅವರನ್ನು ಅರ್ಥ ಮಾಡಿಕೊಳ್ಳುವ ಸಂಗಾತಿ ಬಹಳ ಬೇಗ ಸಿಗ್ತಾರೆ. ಈ ಹುಡುಗಿಗೆ ಕೂಡ ಡೇಟಿಂಗ್ ಆಪ್ (Dating App) ಮೂಲಕ ಸಂಗಾತಿ ಸಿಕ್ಕಿದ್ದ. ಆತನನ್ನು ಹುಡುಗಿ ಮನಸ್ಪೂರ್ವಕವಾಗಿ ಪ್ರೀತಿ ಮಾಡ್ತಿದ್ದಳು. ಎಲ್ಲವೂ ಸರಿಯಾಗಿಯೇ ನಡೆಯುತ್ತಿತ್ತು. ಆದ್ರೆ ಹುಡುಗನ ಅಪ್ಪನನ್ನು ನೋಡಿದ ಹುಡುಗಿ ಜೀವನ ಬದಲಾಗಿದೆ. ಮುಂದೇನು ಎಂಬ ಚಿಂತೆ ಆಕೆಯನ್ನು ಕಾಡ್ತಿದೆ. ಸಂಗಾತಿಯನ್ನು ಬಿಡಲೂ ಆಗದೆ, ಆತನ ಜೊತೆ ಜೀವನ ನಡೆಸುವ ನಿರ್ಧಾರಕ್ಕೂ ಬರಲಾಗದೆ ಪರಿತಪಿಸುತ್ತಿದ್ದಾಳೆ.

ಚಪ್ಪಲಿ ಕದ್ದು 50 ಸಾವಿರ ಕೇಳಿದ ನಾದಿನಿ, ನಿರಾಕರಿಸ್ತಿದ್ದಂತೆ ಹೊರ

ಅಷ್ಟಕ್ಕೂ ಹುಡುಗನ ತಂದೆ ಯಾರು? : ಹುಡುಗಿ ಬಾಯ್ ಫ್ರೆಂಡ್ ಒಂದು ದಿನ ತನ್ನ ಪಾಲಕರನ್ನು ಭೇಟಿಯಾಗುವಂತೆ ಹುಡುಗಿಗೆ ಕೇಳಿದ್ದಾನೆ. ಆಕೆ ಒಪ್ಪಿಕೊಂಡಿದ್ದಾಳೆ. ಹತ್ತಿರದ ಬಾರ್ ಗೆ ಜೋಡಿ ಹೋಗಿದೆ. ಅಲ್ಲಿಯೇ ಇದ್ದ ಪಾಲಕರನ್ನು ಭೇಟಿಯಾಗಿದೆ. ಆದ್ರೆ ಹುಡುಗನ ತಂದೆಯನ್ನು ಎಲ್ಲಿಯೋ ನೋಡಿದ ನೆನಪು ಆಕೆಯನ್ನು ಕಾಡಿದೆ. ಆದ್ರೆ ಹುಡುಗನ ತಂದೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮೊದಲ ಬಾರಿ ಹುಡುಗಿಯನ್ನು ನೋಡ್ತಿರುವಂತೆ ನೋಡಿದ್ದಾನೆ. ಕೆಲ ಸಮಯ ಆಲೋಚನೆ ಮಾಡಿದ ಹುಡುಗಿಗೆ ಕೊನೆಗೂ ಆತ ಯಾರು ಎಂಬುದು ನೆನಪಾಗಿದೆ. ಕ್ರಿಸ್ಮಸ್ ಸಮಯದಲ್ಲಿ ಇದೇ ಬಾರ್ ನಲ್ಲಿ ಬಾಯ್ ಫ್ರೆಂಡ್ ಅಪ್ಪನನ್ನು ಹುಡುಗಿ ಭೇಟಿಯಾಗಿದ್ದಳು. ಬಾಯ್ ಫ್ರೆಂಡ್ ಅಪ್ಪ ಸಖತ್ ಯಂಗ್ ಆಗಿ ಕಾಣ್ತಾನೆ. ಕ್ರಿಸ್ ಮಸ್ ಟೈಂನಲ್ಲಿ ಆತನಿಗೆ ಆಕರ್ಷಿತವಾಗಿದ್ದ ಹುಡುಗಿ, ಆತನ ಜೊತೆ ಡೇಟ್ ಮಾಡಿದ್ದಳು. ಈ ವಿಷ್ಯ ನೆನಪಿಗೆ ಬರ್ತಿದ್ದಂತೆ ಹುಡುಗಿ ಬೆವರಿದ್ದಾಳೆ. ನಾಚಿಕೆಯಾಗಿ, ಮುಖ ಎತ್ತಲು ಆಕೆಗೆ ಸಾಧ್ಯವಾಗ್ಲಿಲ್ಲ. 

ವಧುವಿನ ಸೊಂಟಕ್ಕೆ ಕೈ ಹಾಕಿ ಕಾರ್‌ನಲ್ಲಿಯೇ ರೊಚ್ಚಿಗೆದ್ದ ವರ;

ಈಗ ಹುಡುಗಿ ಗೊಂದಲದಲ್ಲಿದ್ದಾಳೆ. ಹೇಗೆ ಈ ಸಂಬಂಧದಿಂದ ಹೊರಗೆ ಬರೋದು ಎಂಬುದು ಆಕೆಗೆ ಗೊತ್ತಾಗ್ತಿಲ್ಲ. ಹಿಂದೆ ಮಾಡಿದ ತಪ್ಪು ಆಕೆಯ ಹೊಸ ಸಂಬಂಧಕ್ಕೆ ಅಡ್ಡಿಯಾಗ್ತಿದೆ. ಹುಡುಗನನ್ನು ಮನಸ್ಪೂರ್ವಕವಾಗಿ ಪ್ರೀತಿ ಮಾಡಿದ್ರೂ ತಂದೆ ಕಾರಣಕ್ಕೆ ಸಂಬಂಧ ಮುರಿದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಳಗೆದ್ದು .. ನಾಚುತ್ತಲೇ ಮಲಗುವ ಕೋಣೆಯ ರಹಸ್ಯ ಬಹಿರಂಗಪಡಿಸಿದ ಪಿಗ್ಗಿ
ಫೋಟೋ ಹಂಚಿಕೊಂಡು 'ಡಾರ್ಲಿಂಗ್‌..' ಎಂದು ಬರೆದ ಸಾರಾ ತೆಂಡುಲ್ಕರ್‌