37ರ ಪತ್ನಿಯ ಜೊತೆ 92ರ ಹರೆಯದಲ್ಲಿ ಮಗುವಿಗೆ ತಂದೆಯಾದ ವೈದ್ಯ

Published : Dec 31, 2025, 07:06 PM IST
Australian doctor becomes father at 92

ಸಾರಾಂಶ

ಆಸ್ಟ್ರೇಲಿಯಾದ ವ್ಯಕ್ತಿಯೊಬ್ಬರು ತಮ್ಮ 92ನೇ ವಯಸ್ಸಿನಲ್ಲಿ ತಂದೆಯಾಗಿ ಅಚ್ಚರಿ ಮೂಡಿಸಿದ್ದಾರೆ. ಆಸ್ಟ್ರೇಲಿಯಾದ 92 ವರ್ಷದ ವೈದ್ಯ ಡಾ. ಜಾನ್ ಲೆವಿನ್ ಅವರು ತಮ್ಮ 37 ವರ್ಷದ ಪತ್ನಿ ಡಾ ಯಾನ್ಯಿಂಗ್ ಲು ಅವರ ಜೊತೆ ತಮ್ಮ ಮಗನನ್ನು ಬರ ಮಾಡಿಕೊಂಡಿದ್ದಾರೆ.

ಆಸ್ಟ್ರೇಲಿಯಾದ ವ್ಯಕ್ತಿಯೊಬ್ಬರು ತಮ್ಮ 92ನೇ ವಯಸ್ಸಿನಲ್ಲಿ ತಂದೆಯಾಗಿ ಅಚ್ಚರಿ ಮೂಡಿಸಿದ್ದಾರೆ. ಆಸ್ಟ್ರೇಲಿಯಾದ 92 ವರ್ಷದ ವೈದ್ಯ ಡಾ. ಜಾನ್ ಲೆವಿನ್ ಅವರು ತಮ್ಮ 37 ವರ್ಷದ ಪತ್ನಿ ಡಾ ಯಾನ್ಯಿಂಗ್ ಲು ಅವರ ಜೊತೆ ತಮ್ಮ ಮಗನನ್ನು ಬರ ಮಾಡಿಕೊಂಡಿದ್ದಾರೆ. ವರದಿಯ ಪ್ರಕಾರ ಡಾ ಲೆವಿನ್ ಅವರಿಗೆ ಇದು 3ನೇ ಮಗು. ಲೆವಿನ್ ಅವರ ಹಿರಿಯ ಮಗ 65 ವರ್ಷದ ಗ್ರೆಗ್ ಮೋಟಾರ್ ನ್ಯೂರಾನ್ ಕಾಯಿಲೆಯಿಂದ ಸಾಯುವ ಕೇವಲ ಐದು ತಿಂಗಳ ಮೊದಲು ಈ ಮೂರನೇ ಮಗು ಜನಿಸಿದೆ.

ಡಾ ಲೆವಿನ್ ಅವರು ಜನರಲ್ ಮೆಡಿಸಿನ್ ಪ್ರಾಕ್ಟಿಷನರ್ ಆಗಿದ್ದು, ವಯಸ್ಸಾಗುವಿಕೆ ವಿರೋಧಿ ಔಷಧದಲ್ಲಿ ವಿಶೇಷ ತಜ್ಞರಾಗಿದ್ದಾರೆ. ಅರು ತಮ್ಮ 57 ವರ್ಷದ ಪತ್ನಿ ತೀರಿಕೊಂಡ ನಂತರ ಈ ವೈದ್ಯೆ 37 ವರ್ಷದ ಡಾ ಯಾನ್ಯಿಂಗ್ ಲು ಅವರನ್ನು ಭೇಟಿ ಮಾಡಿದ್ದಾರೆ. ಪತ್ನಿ ಸಾವಿನ ನಂತರ ಒಂಟಿತನ ವಿರುದ್ಧ ಹೋರಾಡುತ್ತಿದ್ದ ಲೆವಿನ್ ಅವರು ಹೊಸ ಭಾಷೆಯನ್ನು ಕಲಿಯಲು ಆರಂಭಿಸಿ ಚೀನಾದಲ್ಲಿ ಬಳಕೆಯಲ್ಲಿರುವ ಮ್ಯಾಂಡರಿನ್ ಭಾಷೆಯನ್ನು ಕಲಿಯುವುದಕ್ಕೆ ಶುರು ಮಾಡಿದರು. ಆಗ ಅವರಿಗೆ ಶಿಕ್ಷಕಿಯಾಗಿ ಸಿಕ್ಕವರೇ 2ನೇ ಪತ್ನಿ ಡಾ ಯಾನ್ಯಿಂಗ್ ಲು.

ಅವನು ಭಯಂಕರ ವಿದ್ಯಾರ್ಥಿಯಾಗಿದ್ದನು. ಮೂರನೇ ಪಾಠದ ನಂತರ, ನಾನು ಅವನಿಗೆ ನಿಲ್ಲಿಸಲು ಹೇಳಿದೆ. ಅವನನ್ನು ಮೋಸಗೊಳಿಸಲು ನಾನು ಬಯಸಲಿಲ್ಲ ಎಂದು ಡಾ.ಲು ಹೇಳಿದರು ಎಂದು ಅಲ್ಲಿನ ಮಾಧ್ಯಮ ವರದಿ ಮಾಡಿದೆ. ಆದರೆ ಈ ಜೋಡಿ ನಿರಂತರ ಸಂಪರ್ಕದಲ್ಲಿತ್ತು, ಮತ್ತು ಕೆಲವು ಭೇಟಿಗಳ ನಂತರ ಡಾ. ಲೆವಿನ್ ತನ್ನ ಭಾಷಾ ಗುರು ಡಾ ಯಾನ್ಯಿಂಗ್ ಲು ಅವರನ್ನು ಊಟಕ್ಕೆ ಆಹ್ವಾನಿಸಿದರು. ಹಾಗೂ ಈ ಸಂಬಂಧವು ಬೇಗನೆ ಪ್ರೀತಿಗೆ ತಿರುಗಿ 2014 ರಲ್ಲಿ ಅವರು ಲಾಸ್ ವೇಗಾಸ್‌ನಲ್ಲಿ ಮದುವೆಯಾದರು..

ಇದನ್ನೂ ಓದಿ:  ದೇವರೇ.. 2025ರಲ್ಲಿ ಅಡಲ್ಟ್ ವೀಡಿಯೋ ನೋಡುವುದಕ್ಕೆ ಭಾರತೀಯರು ಖರ್ಚು ಮಾಡಿದ್ದು, ಇಷ್ಟೊಂದು ಕೋಟಿ ನಾ?

ಕೋವಿಡ್ ಲಾಕ್‌ಡೌನ್‌ಗಳವರೆಗೂ ಅವರು ಮಕ್ಕಳನ್ನು ಹೊಂದುವ ಬಗ್ಗೆ ಚರ್ಚಿಸಿರಲಿಲ್ಲ. ಆದರೆ ನಂತರ ಅವರಿಗೆ ಏನೂ ಖಾಲಿತನ ಅನಿಸುವುದಕ್ಕೆ ಶುರುವಾಗಿ ಒಂದು ವೇಳೆ ತಾನು ಗಂಡನನ್ನು ಕಳೆದುಕೊಂಡರೆ ಒಂಟಿಯಾಗುತ್ತೇನೆ. ಮಗು ಮಾಡಿಕೊಂಡರೆ ಮಗುವಿನ ರೂಪದಲ್ಲಿ ಅವರ ಒಂದು ಭಾಗ ನನ್ನ ಜೊತೆಗೆ ಇರುವುದು ಎಂದು ಭಾವಿಸಿ ಮಗು ಮಾಡಿಕೊಂಡರು ಎಂದು ವರದಿಯಾಗಿದೆ. ಈ ದಂಪತಿಗೆ ಮಗುವಾದ ವಿಚಾರ ಜಗತ್ತಿನಲ್ಲೆಡೆ ದೊಡ್ಡ ಸುದ್ದಿಯಾಗಿತ್ತು. ಇವರು ಮದುವೆಯಾದಾಗ ಲೆವಿನ್ ಅವರಿಗೆ 82 ವರ್ಷವಾಗಿದ್ದರೆ ಯಾನ್ಯಿಂಗ್ ಲು ಅವರಿಗೆ ಕೇವಲ 26 ವರ್ಷ ವಯಸ್ಸಾಗಿತ್ತು. ಈ ವಯಸ್ಸಿನ ಅಂತರವೇ ಅನೇಕರನ್ನು ಅಚ್ಚರಿಗೀಡು ಮಾಡಿತ್ತು. ಆದರೆ ಈಗ 93ರ ಹರೆಯದಲ್ಲಿ ಅವರು ತಂದೆಯಾಗಿದ್ದಾರೆ.

ಇದನ್ನೂ ಓದಿ: ಅಮ್ಮ ಹೊಲಿದ ಸ್ವೆಟರ್‌: ಹಾಸಿಗೆ ಹಿಡಿದಿದ್ದರೂ ಮಗನಿಗಾಗಿ ಸ್ವೆಟರ್ ಹೊಲಿದ 91 ವರ್ಷದ ತಾಯಿ

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಡಿವೋರ್ಸ್​ಗೆ ಪತ್ನಿ ಅರ್ಜಿ: ಜೀವನಾಂಶ ತಪ್ಪಿಸಿಕೊಳ್ಳಲು ಕಿಲಾಡಿ ಪತಿ ಭರ್ಜರಿ ಪ್ಲ್ಯಾನ್​! ಹೆಂಡ್ತಿ ಹೊಡೆದರೂ ನಕ್ಕ ಗಂಡ!
ಈ 9 ಗುಣ ಹೊಂದಿರುವ ಜನರನ್ನು ನಿಮ್ಮ ಜೀವನದಿಂದಲೇ ದೂರವಿಡುವುದು ಉತ್ತಮ