
ಡಿವೋರ್ಸ್ ಎನ್ನುವುದು ಎಷ್ಟೋ ಪುರುಷರಿಗೆ ನುಂಗಲಾಗದ ತುತ್ತಾಗಿದೆ. ಇದಕ್ಕೆ ಕಾರಣ, ಡಿವೋರ್ಸ್ ಕೊಡಲು ಏನೇ ಕಾರಣ ಇರಲಿ, ಅದು ಪತ್ನಿಯದ್ದೇ ತಪ್ಪಿರಲಿ ಕೋರ್ಟ್ನಿಂದ ಆದೇಶವಾಗುವ ಜೀವನಾಂಶ, ಮಾಸಿಕ ಭತ್ಯ ಕೊಡುವುದು ದೊಡ್ಡ ತಲೆನೋವಾಗಿದೆ. ಎಷ್ಟೋ ಸಂದರ್ಭದಲ್ಲಿ ಪತ್ನಿ ಚೆನ್ನಾಗಿ ದುಡಿಯುತ್ತಿದ್ದರೂ, ಕೋರ್ಟ್ಗಳು ಪತಿಗೆ ಜೀವನಾಂಶ ನೀಡುವಂತೆ ಆದೇಶಿಸುವುದು ಇದೆ. ದುಡಿಯದ ಪತ್ನಿಯರಿಗೆ, ಮಕ್ಕಳನ್ನು ಸಾಕುವುದಕ್ಕಾಗಿಯೋ ಅಥವಾ ಗಂಡನ ದೌರ್ಜನ್ಯದಿಂದ ಡಿವೋರ್ಸ್ ಪಡೆಯುವಂಥ ಸ್ಥಿತಿ ಬಂದಾಗ ಪತಿ ಜೀವನಾಂಶ ನೀಡುವಂತೆ ಕೋರ್ಟ್ಗಳು ಆದೇಶಿಸುವಲ್ಲಿ ಅರ್ಥವಿದೆ. ಆದರೆ ಹೆಣ್ಣು ಮಕ್ಕಳ ಪರವಾಗಿ ಇರುವ ಕಾನೂನಿನ ದುರುಪಯೋಗ ಆಗುತ್ತಿರುವ ಬಗ್ಗೆ ಇದಾಗಲೇ ಸಾಕಷ್ಟು ಪುರುಷ ಸಂಘಟನೆಗಳು ಬೀದಿಗಿಳಿದು ಹೋರಾಟವನ್ನೂ ಮಾಡುತ್ತಿರುವುದೂ ಇದೆ.
ಅದೇನೇ ಇದ್ದರೂ ಇಲ್ಲೊಂದು ಪ್ರಕರಣದಲ್ಲಿ ಮಾತ್ರ, ಕಿಲಾಡಿ ಗಂಡ, ತನ್ನ ಪತ್ನಿ ಡಿವೋರ್ಸ್ಗೆ ಅರ್ಜಿ ಸಲ್ಲಿಸುತ್ತಿರುವಂಮತೆಯೇ ಕಿಲಾಡಿ ಪತಿರಾಯ ಭರ್ಜರಿ ಪ್ಲ್ಯಾನ್ ಮಾಡಿದ್ದಾನೆ. ಅದರಲ್ಲಿ ಆತ ಸಕ್ಸಸ್ ಕೂಡ ಆಗಿದ್ದು, ಪತ್ನಿಗೆ ಬಿಡಿಗಾಸು ಕೂಡ ಸಿಗಲಿಲ್ಲ. ಇದರಿಂದ ರೊಚ್ಚಿಗೆದ್ದ ಪತ್ನಿ ಡಿವೋರ್ಸ್ ಬಳಿಕ ಕೋರ್ಟ್ ಆವರಣದಲ್ಲಿಯೇ ಗಂಡನನ್ನು ಹಿಗ್ಗಾಮುಗ್ಗಾ ಥಳಿಸಿದ್ದಾಳೆ. ಆದರೆ, ತನ್ನ ಪ್ಲ್ಯಾನ್ ಸಕ್ಸಸ್ ಆಯ್ತೆಂದು ಗಂಡ ಮಾತ್ರ ಹಿರಿಹಿರಿ ಹಿಗ್ಗಿ ಹೋಗಿದ್ದಾನೆ. ಇದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ.
ಈ ವೈರಲ್ ವಿಡಿಯೋದಲ್ಲಿ, ಜನಸಮೂಹದ ಮುಂದೆ ಮಹಿಳೆಯೊಬ್ಬಳು ಪುರುಷನ ಮೇಲೆ ಪದೇ ಪದೇ ಹಲ್ಲೆ ಮಾಡುವುದನ್ನು ನೋಡಬಹುದು. ಕಪಾಳಮೋಕ್ಷವನ್ನೂ ಮಾಡಿದ್ದಾಳೆ. ಮಾಜಿ ಗಂಡನಿಗೆ ಗುದ್ದಿದ್ದಾಳೆ. ಕೂದಲನ್ನು ಎಳೆದು ಜಗ್ಗಾಡಿದ್ದಾಳೆ. ಆದರೆ ಈ ಮಾಜಿ ಪತಿರಾಯ ಮಾತ್ರ ತನ್ನ ಪ್ಲ್ಯಾನ್ ಸಕ್ಸಸ್ ಆದ ಖುಷಿಯಲ್ಲಿ ಎಲ್ಲವನ್ನೂ ಸಹಿಸಿಕೊಂಡು ನಗುತ್ತಾ ಪತ್ನಿಗೆ ಇನ್ನಷ್ಟು ಕೋಪ ಹುಟ್ಟಿಸಿದ್ದಾನೆ.
ಅಷ್ಟಕ್ಕೂ ಆ ಪತಿ ಮಾಡಿದ ಪ್ಲ್ಯಾನ್ ಏನು ಗೊತ್ತಾ? ಪತ್ನಿ ಡಿವೋರ್ಸ್ಗೆ ಅರ್ಜಿ ಸಲ್ಲಿಸುತ್ತಿದ್ದಂತೆಯೇ, ಜೀವನಾಂಶ ಕೊಡಬೇಕು ಎನ್ನುವುದು ಗೊತ್ತಾಗಿದೆ. ತನ್ನ ಬಳಿ ಆಸ್ತಿ, ದುಡ್ಡು ಇದ್ದರೆ ತಾನೆ ಅವಳಿಗೆ ಕೊಡೋದು? ಅದೇ ಇಲ್ಲದಿದ್ದರೆ ಹೇಗೆ ಎಂದುಕೊಂಡು ಇದ್ದ ಬಿದ್ದ ಎಲ್ಲಾ ಆಸ್ತಿ, ಹಣವನ್ನು ತಾಯಿಯ ಹೆಸರಿಗೆ ವರ್ಗಾಯಿಸಿದ್ದಾನೆ. ಕೋರ್ಟ್ನಲ್ಲಿ ನನ್ನ ಬಳಿ ಪತ್ನಿಗೆ ಕೊಡಲು ಏನೂ ಇಲ್ಲ ಎಂದಿದ್ದಾನೆ. ಇದನ್ನು ಪರಿಗಣಿಸಿದ ಕೋರ್ಟ್ ಡಿವೋರ್ಸ್ ಕೊಟ್ಟು ಬರಿಗೈಯಲ್ಲಿ ಪತ್ನಿಗೆ ಕಳುಹಿಸಿದೆ. ಇದರಿಂದ ಆಕೆ ಅಷ್ಟು ಕೋಪಗೊಂಡಿದ್ದಾಳೆ. ಅಮಿಷ್ ಎನ್ನುವವರು ಈ ವಿಡಿಯೋ ಶೇರ್ ಮಾಡಿದ್ದಾರೆ, ನೋಡಿ:
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.