ವಾತ್ಸಾಯನ ಕಾಮಸೂತ್ರ: ಪುರುಷನ ಪ್ರೇಮವನ್ನು ಸ್ತ್ರೀ ತಿರಸ್ಕರಿಸುವುದು ಯಾಕೆ?

By Bhavani BhatFirst Published Apr 27, 2024, 11:09 AM IST
Highlights

ಎಷ್ಟೋ ಕೇಸ್‌ಗಳಲ್ಲಿ ಗಂಡು ಹೆಣ್ಣಿನ ನಡುವೆ ಕಾಮದ ಕಾರಣಕ್ಕೆ ಸಮಸ್ಯೆಯಾಗುತ್ತದೆ. ಅಷ್ಟಕ್ಕೂ ಹೆಣ್ಣು ಗಂಡಿನ ಪ್ರೇಮವನ್ನು ತಿರಸ್ಕರಿಸಲು ಏನು ಕಾರಣ? ವಾತ್ಸಾಯನ ಈ ಬಗ್ಗೆ ಏನು ಹೇಳುತ್ತಾನೆ?

ವಾತ್ಸಾಯನನನ್ನು ಭಾರತೀಯ ಇತಿಹಾಸದ ಕಾಮಶಾಸ್ತ್ರ ಪಂಡಿತನೆಂದು ವಿಶ್ಲೇಷಿಸಲಾಗುತ್ತದೆ. ಕಾಮಕ್ಕೆ ಸಂಬಂಧಿಸಿದಂತೆ ವಾತ್ಸಾಯನ ಕಾಮಸೂತ್ರವೆಂಬ ಗ್ರಂಥವನ್ನು ರಚಿಸಿದ್ದಾನೆ. ಕಾಮಸೂತ್ರದಲ್ಲಿ ಗಂಡು- ಹೆಣ್ಣಿನ ಸಂಬಂಧ, ಮೋಹ, ರಾಗಗಳ ಬಗ್ಗೆ ಪ್ರಸ್ತಾಪಿಸಲಾಗಿದೆ. ಗಂಡು ಹೆಣ್ಣಿನ ವೈವಿಧ್ಯ ವೈಖರಿಗಳು, ಗಂಡು- ಹೆಣ್ಣು ಪರಸ್ಪರರನ್ನು ಒಲಿಸಿಕೊಳ್ಳುವ ಬಗೆ ಇತ್ಯಾದಿಗಳ ಬಗ್ಗೆಯೂ ವಿಸ್ತಾರವಾಗಿ ಹೇಳಿದ್ದಾನೆ. ಆದರೆ ಪ್ರಪೋಸ್‌ ಮಾಡುವ ಎಲ್ಲ ಗಂಡಸರೂ ಸ್ತ್ರೀಯ ಒಲುಮೆಯನ್ನು ಪಡೆಯಲು ಯಶಸ್ವಿಯಾಗುವುದಿಲ್ಲ. ಹಾಗಿದ್ದರೆ ಒಬ್ಬ ಮಹಿಳೆ, ಪುರುಷನೊಬ್ಬನನ್ನು ತಿರಸ್ಕರಿಸುವುದು ಯಾಕೆ? ಮಹಿಳೆಯು ಪುರುಷನ ಪ್ರೇಮಕಾಮಗಳನ್ನು ತಿರಸ್ಕರಿಸುವ ಕಾರಣಗಳು ಈ ಕೆಳಗಿನಂತಿವೆ ಎಂದು ಕಾಮಸೂತ್ರ ಹೇಳುತ್ತದೆ:

- ಇನ್ನಷ್ಟು ಅವಕಾಶ ಬೇಕಿದೆ. ಗಂಡಸು ಅವಸರ ಮಾಡುತ್ತಾನೆ. ಹೆಂಗಸು ಕಾಲ ತೆಗೆದುಕೊಳ್ಳುತ್ತಾಳೆ. ಒಂದು ಮಗ್ನತೆ ಬರದೇ ಹೆಣ್ಣಿಗೆ ಮುಂದುವರಿಯುವುದು ಕಷ್ಟ.
- ತುಂಬಾ ಪರಿಚಿತ ವ್ಯಕ್ತಿಯಾದರೆ ನಿರ್ಲಕ್ಷ್ಯ ಕಾರಣವಾಗಬಹುದು.

Sexual Health : ಸೆಕ್ಸ್ ನಂತ್ರ ಧಮ್ ಎಳೆಯೋರಿಗೆ ಕ್ಯಾನ್ಸರ್ ಬೆನ್ನು ಹತ್ತುತ್ತೆ ಹುಷಾರ್!

- ಪುರುಷ ಹಾಗೂ ಸ್ತ್ರೀಯ ಜೀವನದ ಮಟ್ಟದಲ್ಲಿ ವ್ಯತ್ಯಾಸವಿದ್ದರೂ ಗಂಡಿನ ಪ್ರೇಮವನ್ನು ಆಕೆ ತಿರಸ್ಕರಿಸಬಹುದು.
- ಪುರುಷ ಕೇಡಿಗನಾದರೆ, ಕಳ್ಳನಾದರೆ, ಅವಮಾನ ಮಾಡುವವನಾದರೆ ಒಲ್ಲೆ ಎನ್ನಬಹುದು.
- ಈತ ತನ್ನನ್ನು ಸಾಕಲಾರ, ತನಗೆ ಬೇಕಾದುದನ್ನು ತೆಗೆಸಿ ಕೊಡಬಲ್ಲಷ್ಟು ಶ್ರೀಮಂತನಲ್ಲ ಎಂದು ತಿಳಿದರೆ ಆಕೆಗೆ ಆತನ ಸಂಗ ಬೇಡವಾಗಬಹುದು.
- ಪುರುಷ ಹೆಚ್ಚಾಗಿ ಪ್ರಯಾಣದಲ್ಲಿರುವವನಾದರೆ, ಆತ ತನಗೆ ಸಿಗುವುದಿಲ್ಲ ಎಂಬ ಆತಂಕ
- ಗಂಡಸು ಇನ್ನೊಬ್ಬ ಸ್ತ್ರೀಯೊಂದಿಗೆ ಸಲಿಗೆಯಿಂದ ಇದ್ದರೆ.
- ಈ ವ್ಯಕ್ತಿ ತನ್ನ ಉದ್ದೇಶವನ್ನು ರಹಸ್ಯವಾಗಿಡುವುದಿಲ್ಲ ಎಂಬ ಭಯ
- ಗಂಡು ತನ್ನ ಸ್ನೇಹಿತರಿಗೆ ತುಂಬಾ ನಿಷ್ಠನಾಗಿರುತ್ತಾನೆ ಮತ್ತು ಅವರ ಬಗ್ಗೆ ತುಂಬಾ ಗೌರವವನ್ನು ಹೊಂದಿದ್ದಾನೆ. ಹೀಗಾಗಿ ತನ್ನನ್ನು ಕಡೆಗಣಿಸಬಹುದು ಎಂಬ ಭಯ.
- ಅವನು ಈ ಸಂಬಂಧದಲ್ಲಿ ಗಂಭೀರವಾಗಿಲ್ಲ (Not serious in Relationship) ಎಂಬ ಆತಂಕ.
- ಅವನೊಬ್ಬ ಸುಪ್ರಸಿದ್ಧ ವ್ಯಕ್ತಿ ಎಂಬ ಕಾರಣಕ್ಕೆ ನಾಚಿಕೆ.
- ಅವನು ಸಿಕ್ಕಾಪಟ್ಟೆ ಶಕ್ತಿಯುತ, ಆಕ್ರಮಣಕಾರಿ ಅಥವಾ ತುಂಬಾ ಪ್ರಚೋದಕ ಉತ್ಸಾಹವನ್ನು ಹೊಂದಿರುವ ಕಾರಣ ಭಯ.
- ಅವನು ತುಂಬಾ ಬುದ್ಧಿವಂತನಾಗಿರುವ ಕಾರಣದಿಂದ ನಾಚಿಕೆ.

ಮಗಳಿಗೆ ಲವ್ ಮಾಡೋದ್ಹೇಗೆಂದು ಹೇಳಿ ಕೊಟ್ಟ ಬಾಲಿವುಡ್ ನಟಿ ರವೀನಾ ಟಂಡನ್

- ಅವನು ತನಗಿಂತ ಕಡಿಮೆ ಯೋಗ್ಯತೆ ಹೊಂದಿದವನಾಗಿದ್ದರೆ.
- ಅವನು ದುರ್ಬಲ, ಭಾವೋದ್ರೇಕದ ವ್ಯಕ್ತಿ ಎಂಬ ಆಲೋಚನೆ.
- ತನ್ನಿಂದಾಗಿ ಅವನಿಗೆ ಏನಾದರೂ ಸಂಭವಿಸಬಾರದು ಎಂದು ಸಹಾನುಭೂತಿ.
- ಅವಳ ಸ್ವಂತ ಅಪೂರ್ಣತೆಗಳ ಬಗ್ಗೆ ಹತಾಶೆ.
- ಅವನ ಬೂದು ಕೂದಲು ಅಥವಾ ಕಳಪೆ ನೋಟವನ್ನು ನೋಡಿದ ಭ್ರಮನಿರಸನ.

ವಾತ್ಸಾಯನನ ಪ್ರಕಾರ, ಮಹಿಳೆ ಸಾಮಾನ್ಯವಾಗಿ ಸುಂದರ ಪುರುಷನತ್ತ ಆಕರ್ಷಿತಳಾಗುತ್ತಾಳೆ. ಪುರುಷ ಸಹ ಪ್ರತಿ ಸುಂದರ ಮಹಿಳೆಯೊಂದಿಗೆ ಸುಲಭವಾಗಿ ಪ್ರೀತಿಯಲ್ಲಿ ಬೀಳುತ್ತಾರೆ. ಆದರೆ ಹಲವಾರು ನಿರ್ಬಂಧಗಳಿಂದ ಅವರು ಮುಂದಿನ ಹೆಜ್ಜೆಗಳನ್ನು ಮುಂದಿಡುವುದಿಲ್ಲ. ಮಹಿಳೆ ಯಾರನ್ನಾದರೂ ಪ್ರೀತಿಸಿದಾಗ ಕೆಲವೊಮ್ಮೆ ಸರಿ-ತಪ್ಪುಗಳನ್ನು ನೋಡದೆ ಪ್ರೀತಿಸುತ್ತಾಳೆ. ಆದರೆ ಅವಳು ಎಂದಿಗೂ ಪುರುಷನನ್ನು ಗೆಲ್ಲಲು ಮೊದಲ ಹೆಜ್ಜೆ ಇಡಲು ಪ್ರಯತ್ನಿಸುವುದಿಲ್ಲ ಅಥವಾ ಪುರುಷನು ಅದನ್ನು ಪ್ರಯತ್ನಿಸಿದಾಗ ಅವಳು ಸಮ್ಮಿಲನವನ್ನು ಬಯಸಿದರೂ ಅವನಿಂದ ದೂರ ಸರಿಯಲು ಪ್ರಯತ್ನಿಸುತ್ತಾಳೆ. ಆದರೆ ಪ್ರಕ್ರಿಯೆಯು ಮತ್ತೆ ಮತ್ತೆ ಪುನರಾವರ್ತನೆಯಾದಾಗ ಅವಳು ತನ್ನ ಒಪ್ಪಿಗೆಯನ್ನು ನೀಡುತ್ತಾಳೆ.

 

click me!